SBI FD Schemes: ಎಸ್​ಬಿಐನ ಎರಡು ಜನಪ್ರಿಯ ಎಫ್​ಡಿ ಸ್ಕೀಮ್​ಗಳ ಗಡುವು ಮತ್ತೆ ವಿಸ್ತರಣೆ; ಇಲ್ಲಿದೆ ಡೀಟೇಲ್ಸ್

WeCare and Amrit Kalash FD Scheme Date Extension: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವೀ ಕೇರ್ ಮತ್ತು ಅಮೃತ್ ಕಳಶ್ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್​ಗಳನ್ನು ಪಡೆಯಲು ಕಾಲಾವಕಾಶ ಮತ್ತೆ ಹೆಚ್ಚಳಗೊಂಡಿದೆ. ವೀಕೇರ್ ಸೆ. 30ರವರೆಗೂ ವಿಸ್ತರಣೆಯಾದರೆ, ಅಮೃತ್ ಕಳಶ್ ಯೋಜನೆ ಆಗಸ್ಟ್ 15ರವರೆಗೂ ಲಭ್ಯ ಇದೆ.

SBI FD Schemes: ಎಸ್​ಬಿಐನ ಎರಡು ಜನಪ್ರಿಯ ಎಫ್​ಡಿ ಸ್ಕೀಮ್​ಗಳ ಗಡುವು ಮತ್ತೆ ವಿಸ್ತರಣೆ; ಇಲ್ಲಿದೆ ಡೀಟೇಲ್ಸ್
ಎಸ್​ಬಿಐ
Follow us
|

Updated on: Jun 23, 2023 | 7:06 AM

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್​ಗಳು (FD Schemes) ತೀರಾ ಹೆಚ್ಚು ಬಡ್ಡಿ ಒದಗಿಸದೇ ಹೋದರೂ ವಿಶ್ವಾಸಾರ್ಹತೆ ಹೊಂದಿವೆ. ಬಹಳ ಗಮನ ಸೆಳೆದಿರುವ ಅದರ ಇತ್ತೀಚಿನ ಎರಡು ಎಫ್​ಡಿ ಸ್ಕೀಮ್​ಗಳು ಹೆಚ್ಚು ಬೇಡಿಕೆ ಹಿನ್ನೆಲೆಯಲ್ಲಿ ಅವಧಿ ವಿಸ್ತರಣೆ ಮಾಡಲಾಗಿದೆ. ಹಿರಿಯ ನಾಗರಿಕರಿಗೆಂದು ರೂಪಿಸಲಾಗಿರುವ ಎಸ್​ಬಿಐ ವೀಕೇರ್ (SBI WeCare) ಹಾಗೂ ಎಸ್​ಬಿಐ ಅಮೃತ್ ಕಳಶ್ (SBI Amrit Kalash FD Scheme) ಡೆಪಾಸಿಟ್ ಸ್ಕೀಮ್​ಗಳಲ್ಲಿ ಹಣ ತೊಡಗಿಸಲು ಈಗ ಹೆಚ್ಚಿನ ಕಾಲಾವಕಾಶ ಕೊಡಲಾಗಿದೆ. ವೀ ಕೇರ್ ಸ್ಕೀಮ್ ಪಡೆಯಲು ಕಾಲಾವಕಾಶವನ್ನು ಸೆಪ್ಟಂಬರ್ 30ವರೆಗೂ ವಿಸ್ತರಿಸಲಾಗಿದೆ. ಇನ್ನು ಎಸ್​ಬಿಐ ಅಮೃತ್ ಕಳಶ್ ಎಫ್​ಡಿ ಯೋಜನೆಯ ಪಡೆಯುವ ಕಾಲಾವಕಾಶವನ್ನು ಆಗಸ್ಟ್ 15ರವರೆಗೂ ಹೆಚ್ಚಿಸಲಾಗಿದೆ. ಅಮೃತ್ ಕಲಶ್ ಸ್ಕೀಮ್​ನ ಅವಧಿ ಎರಡು ಬಾರಿ ವಿಸ್ತರಣೆ ಆದಂತಾಗಿದೆ. ಮೊದಲಿಗೆ ಮಾರ್ಚ್ 31ರವರೆಗೂ ಇತ್ತು. ಅದನ್ನು ಜೂನ್ 30ಕ್ಕೆ ವಿಸ್ತರಿಸಲಾಗಿತ್ತು. ಈಗ ಆಗಸ್ಟ್ 15ರವರೆಗೂ ಕಾಲಾವಕಾಶ ಕೊಡಲಾಗಿದೆ.

ಎಸ್​ಬಿಐ ವೀಕೇರ್ ಸ್ಕೀಮ್ ವಿವರ:

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವೀಕೇರ್ ಸ್ಕೀಮ್ ಹಿರಿಯ ನಾಗರಿಕರಿಗೆಂದು ರೂಪಿಸಲಾಗಿದೆ. ಇದಕ್ಕೆ ನೀಡಲಾಗುವ ಬಡ್ಡಿ ದರ ಶೇ. 7.50ರಷ್ಟಿದೆ. 5ರಿಂದ 10 ವರ್ಷ ಅವಧಿಯ ನಿಶ್ಚಿತ ಠೇವಣಿಯ ಈ ವೀಕೇರ್ ಸ್ಕೀಮ್ ಅನ್ನು ಪಡೆಯಲು 2023 ಸೆಪ್ಟಂಬರ್ 30ರವರೆಗೂ ಅವಕಾಶ ಕೊಡಲಾಗಿದೆ. ಈ ಮುಂಚೆ ಜುಲೈ 7ರವರೆಗೆ ಗಡುವು ಕೊಡಲಾಗಿತ್ತು. ಹೆಚ್ಚಿನ ಜನಕ್ಕೆ ಅವಕಾಶ ಸಿಗಲೆಂದು ಇನ್ನೆರಡು ತಿಂಗಳು ಹೆಚ್ಚು ಕಾಲಾವಕಾಶ ಕೊಡಲಾಗಿದೆ.

ಇದನ್ನೂ ಓದಿNPS Rule Change: ಪಿಂಚಣಿ ಯೋಜನೆಯಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ; ನ್ಯಾಷನಲ್ ಪೆನ್ಷನ್ ಸ್ಕೀಮ್ ಸದಸ್ಯರಿಗೆ ಖುಷಿ ಸುದ್ದಿಯಾ?

ಎಸ್​ಬಿಐ ಅಮೃತ್ ಕಲಶ್ ಸ್ಪೆಷಲ್ ಎಫ್​ಡಿ ಸ್ಕೀಮ್

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಜನಪ್ರಿಯವಾಗಿರುವ ಅಮೃತ್ ಕಲಶ್ ಸ್ಪೆಷಲ್ ಫಿಕ್ಸೆಡ್ ಸ್ಕೀಮ್ 2023ರ ಫೆಬ್ರುವರಿ 15ಕ್ಕೆ ಘೋಷಣೆ ಆಗಿತ್ತು. ಮಾರ್ಚ್ 31ರವರೆಗೂ ಸಮಯ ಕೊಡಲಾಗಿತ್ತು. ಬಳಿಕ ಜೂನ್ 30ಕ್ಕೆ ಅದು ವಿಸ್ತರಣೆಗೊಂಡು, ಈಗ ಆಗಸ್ಟ್ 15ಕ್ಕೆ ಹೋಗಿದೆ.

ಈ ಸ್ಪೆಷಲ್ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್​ನಲ್ಲಿ ವಾರ್ಷಿಕ ಬಡ್ಡಿ ದರ ಶೇ. 7.1ರಷ್ಟಿದೆ. ಹಿರಿಯ ನಾಗರಿಕರಿಗೆ ಶೇ. 7.6 ಬಡ್ಡಿ ಸಿಗುತ್ತದೆ. ಇದು 400 ದಿನಗಳ ಡೆಪಾಸಿಟ್ ಸ್ಕೀಮ್ ಆಗಿದ್ದು, ಬೇರೆ ಅವಧಿಗೆ ಅನ್ವಯ ಆಗುವುದಿಲ್ಲ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ