Credit Card: ಕ್ರೆಡಿಟ್ ಕಾರ್ಡ್​ಗಳು ನಿಮಗೆ ವಿಷ ವರ್ತುಲವಾಗಿ ಪರಿಣಮಿಸಿವೆಯಾ? ಸಿಕ್ಕುಗಳನ್ನು ಬಿಡಿಸಿ ಹೊರಬರುವ ಟಿಪ್ಸ್ ಇಲ್ಲಿದೆ…

Tips To Get Out Of Credit Card Debts: ಕ್ರೆಡಿಟ್ ಕಾರ್ಡ್ ಸಿಕ್ಕಿತೆಂದು ಹಲವನ್ನು ಪಡೆದು ಶಾಪಿಂಗ್ ಮಾಡಿ ಸಾಲದ ಕೂಪಕ್ಕೆ ಸಿಲುಕುವವರು ಹಲವರಿದ್ದಾರೆ. ವಿಪರೀತಿ ಬಡ್ಡಿ, ಚಕ್ರಬಡ್ಡಿ, ಆ ಶುಲ್ಕ, ಈ ಶುಲ್ಕ ಇತ್ಯಾದಿಯಿಂದ ನೋಡನೋಡುತ್ತಿದ್ದಂತೆ ಸಾಲ ಹೆಚ್ಚಿರುತ್ತದೆ. ಇಂಥ ಸಂದರ್ಭದಲ್ಲಿ ಏನು ಮಾಡಬೇಕು?

Credit Card: ಕ್ರೆಡಿಟ್ ಕಾರ್ಡ್​ಗಳು ನಿಮಗೆ ವಿಷ ವರ್ತುಲವಾಗಿ ಪರಿಣಮಿಸಿವೆಯಾ? ಸಿಕ್ಕುಗಳನ್ನು ಬಿಡಿಸಿ ಹೊರಬರುವ ಟಿಪ್ಸ್ ಇಲ್ಲಿದೆ...
ಕ್ರೆಡಿಟ್ ಕಾರ್ಡ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 22, 2023 | 11:59 AM

ಕ್ರೆಡಿಟ್ ಕಾರ್ಡ್ ಎಂದರೆ ಹಲವು ಮಂದಿ ಸ್ವಪ್ನದಲ್ಲಿ ಸಿಂಹ ಕಂಡಂತೆ ಬೆಚ್ಚಿಬೀಳುತ್ತಾರೆ. ಅದಕ್ಕೆ ಕಾರಣ, ಕ್ರೆಡಿಟ್ ಕಾರ್ಡ್ (Credit Card) ವಿಚಾರದಲ್ಲಿ ಅವರಿಗಾಗಿರುವ ಅನುಭವಗಳು. ಕ್ರೆಡಿಟ್ ಕಾರ್ಡ್ ಎಂದರೆ ನಮ್ಮ ವೆಚ್ಚಗಳಿಗೆ ಅಲ್ಪಾವಧಿಗೆ ಒದಗಿಸಲಾಗುವ ಬಡ್ಡಿರಹಿತ ಸಾಲದ ವ್ಯವಸ್ಥೆ. ನೀವು ನಿಗದಿತ ಅವಧಿಯೊಳಗೆ ಸಾಲ ಕಟ್ಟಲಿಲ್ಲ ಎಂದಾಗ ಮಾತ್ರ ಸಾಲದ ಶೂಲಕ್ಕೆ ಬೀಳುತ್ತಾ ಹೋಗುತ್ತೀರಿ. ಬಡ್ಡಿಯ ಮೇಲೆ ಚಕ್ರಬಡ್ಡಿ ಕಟ್ಟುತ್ತಾ ಅಕ್ಷರಶಃ ಸಾಲದ ಕೂಪಕ್ಕೆ ಬೀಳುತ್ತೀರಿ.

ಹಿರಿಯರು ಹಾಸಿಗೆ ಇದ್ದಷ್ಟು ಕಾಲು ಚಾಚು ಎಂದು ಹೇಳಿದ್ದು ಸುಮ್ಮನೆ ಅಲ್ಲ. ಹಣಕಾಸು ವಿಚಾರದಲ್ಲಿ ಇದು ಬಹಳ ಅನ್ವಯ ಆಗುತ್ತದೆ. ನಮ್ಮ ಅದಾಯಕ್ಕೆ ತಕ್ಕಂತೆ ಮಿತಿಯಲ್ಲಿ ಸಾಲ ಮಾಡಿದರೆ ಏನೂ ಸಮಸ್ಯೆ ಇರುವುದಿಲ್ಲ. ಈ ಮಿತಿ ದಾಟಿ ಹೋದಾಗ ಗೋಜಲುಗಳು, ಸಿಕ್ಕುಗಳಿಗೆ ಸಿಕ್ಕಿಬೀಳುತ್ತೇವೆ. ಸಾಲದ ಶೂಲಕ್ಕೆ ಸಿಲುಕುವುದು ಮಾತ್ರವಲ್ಲ ನಿಮ್ಮ ಕ್ರೆಡಿಟ್ ಸ್ಕೋರ್ ಕೂಡ ಕುಸಿದುಬೀಳುತ್ತದೆ. ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೆ ಸುಲಭಕ್ಕೆ ಸಾಲವೂ ಸಿಗುವುದಿಲ್ಲ. ಹೀಗಾಗಿ ಕ್ರೆಡಿಟ್ ಕಾರ್ಡ್ ವಿಚಾರದಲ್ಲಿ ಬಹಳ ಹುಷಾರಾಗಿ, ಜಾಗೃತರಾಗಿರುವುದು ಬಹಳ ಮುಖ್ಯ. ಅದರಲ್ಲೂ ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ ಉಪಯೋಗಿಸುತ್ತಿದ್ದರೆ ಇನ್ನೂ ಹುಷಾರಾಗಿರಬೇಕು.

ಕ್ರೆಡಿಟ್ ಕಾರ್ಡ್ ಟಿಪ್ಸ್: ಎಲ್ಲವನ್ನೂ ಬರೆದಿಡಿ, ಆದ್ಯತೆಗಳ ಪಟ್ಟಿ ಮಾಡಿ

ನೀವು ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್​ಗಳನ್ನು ಉಪಯೋಗಿಸುತ್ತಿದ್ದು, ಅದರ ಬಿಲ್ ಕಟ್ಟಲು ಪರದಾಡುತ್ತಿದ್ದರೆ ಈ ಉಪಾಯವನ್ನು ಮೊದಲು ಮಾಡಿ. ನಿಮ್ಮ ಎಲ್ಲಾ ಕ್ರೆಡಿಟ್ ಕಾರ್ಡ್​​ಗಳಲ್ಲಿ ಎಷ್ಟೆಷ್ಟು ಸಾಲ ಉಳಿದಿದೆ ಎಂದು ಪಟ್ಟಿ ಮಾಡಿಕೊಳ್ಳಿ. ಬಳಿಕ ಅದಕ್ಕೆ ವಿಧಿಸುವ ಬಡ್ಡಿ ದರ ಎಷ್ಟೆಂದು ತಿಳಿಯಿರಿ. ಪ್ರತೀ ಕಾರ್ಡ್​ನಲ್ಲಿರುವ ನಿಮ್ಮ ಸಾಲಕ್ಕೆ ಕಟ್ಟಬೇಕಾದ ಕನಿಷ್ಠ ಮೊತ್ತ, ಪಾವತಿ ದಿನಾಂಕ ಇತ್ಯಾದಿ ಎಲ್ಲಾ ವಿವರ ಬರೆಯಿರಿ. ಸಾಧ್ಯವಾದರೆ ಎಕ್ಸೆಲ್ ಅಪ್ಲಿಕೇಶನ್ ಬಳಸಿ ಈ ಮಾಹಿತಿ ಸಂಯೋಜಿಸಿ. ಈಗ ನಿಮಗೆ ನಿಮ್ಮ ಕ್ರೆಡಿಟ್ ಕಾರ್ಡ್​ಗಳ ನಿರ್ವಹಣೆ ತುಸು ಸುಲಭ ಎನಿಸುತ್ತದೆ.

ಇದನ್ನೂ ಓದಿCredit Card: ಕ್ರೆಡಿಟ್ ಕಾರ್ಡ್​ನಲ್ಲಿ ನಾವು ನೀವು ಹೆಚ್ಚು ಗಮನಿಸದ ಶುಲ್ಕಗಳು ಹಲವಿವೆ; ಮುಂದಿನ ಬಾರಿ ಬಿಲ್ ನೋಡುವಾಗ ಜೋಪಾನ

ಇದಾದ ಬಳಿಕ ನೀವು ಮಾಡಬೇಕಾದ ಕೆಲಸ ಎಂದರೆ ಯಾವ ಕ್ರೆಡಿಟ್ ಕಾರ್ಡ್​ನ ಸಾಲವನ್ನು ಮೊದಲು ಕಟ್ಟಬೇಕು ಎಂಬುದನ್ನು ನಿರ್ಧರಿಸುವುದು. ಸಾಮಾನ್ಯವಾಗಿ ನೀವು ಕ್ರೆಡಿಟ್ ಕಾರ್ಡ್ ಮೂಲಕ ಶಾಪಿಂಗ್ ಮಾಡಿದಾಗ ಮುಂದಿನ ಬಿಲ್ ಬರುವವರೆಗೂ ಆ ಹಣಕ್ಕೆ ಬಡ್ಡಿ ಇರುವುದಿಲ್ಲ. ಆ ಬಳಿಕ ನೀವು ಬಾಕಿ ಉಳಿಸಿಕೊಂಡರೆ ತಿಂಗಳಿಗೆ 3-4ರಷ್ಟು ಬಡ್ಡಿ ಬೆಳೆಯುತ್ತಾ ಹೋಗುತ್ತದೆ. ಎಲ್ಲಾ ಕ್ರೆಡಿಟ್ ಕಾರ್ಡ್​ಗಳಿಗೂ ಸಮಾನವಾಗಿ ಹಣ ಹಂಚಿಕೆ ಮಾಡಿ ಪಾವತಿಸುವ ಬದಲು ಅತಿ ಹೆಚ್ಚು ಬಡ್ಡಿ ವಿಧಿಸುವ ಕ್ರೆಡಿಟ್ ಕಾರ್ಡ್​ನ ಸಾಲವನ್ನು ಮೊದಲು ತೀರಿಸುವತ್ತ ಗಮನ ಕೊಡಿ.

ಕ್ರೆಡಿಟ್ ಕಾರ್ಡ್ ಟಿಪ್ಸ್: ಕನಿಷ್ಠ ಬಿಲ್ ಮೊತ್ತವನ್ನಾದರೂ ಕಟ್ಟಿ

ನಿಮಗೆ ಒಂದು ವೇಳೆ ಕ್ರೆಡಿಟ್ ಕಾರ್ಡ್ ಬಿಲ್​ನ ಇಡೀ ಮೊತ್ತ ಕಟ್ಟಲು ಹಣ ಇಲ್ಲದಿದ್ದಲ್ಲಿ ಕೊನೆಯ ಪಕ್ಷ ಕನಿಷ್ಠ ಮೊತ್ತವನ್ನಾದರೂ ಕಟ್ಟಿರಿ. ನಿಮ್ಮ ಬಿಲ್​ನಲ್ಲಿ ಈ ಕನಿಷ್ಠ ಮೊತ್ತ ಎಷ್ಟೆಂದು ದಾಖಲಾಗಿರುತ್ತದೆ. ಅದನ್ನಾದರೂ ಕಟ್ಟಿದರೆ ಕ್ರೆಡಿಟ್ ಸ್ಕೋರ್ ಕುಸಿಯುವುದನ್ನು ತಡೆಯಬಹುದು. ಅಧಿಕ ಬಡ್ಡಿಯ ಹೊರೆ ಬೀಳುವುದನ್ನು ತಪ್ಪಿಸಬಹುದು.

ಬಿಲ್ ಅವಧಿಯೊಳಗೆ ನೀವು ಹಣ ಪಾವತಿಸುವುದು ಬಹಳ ಮುಖ್ಯ. ತಡವಾಗಿ ಬಿಲ್ ಕಟ್ಟಿದರೆ ಕ್ರೆಡಿಟ್ ಸ್ಕೋರ್ ಕುಸಿಯುತ್ತದೆ. ಬಡ್ಡಿಯೂ ಅನ್ವಯ ಆಗುತ್ತದೆ.

ಇದನ್ನೂ ಓದಿCredit Cards: ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ ಹೊಂದಿದ್ದೀರಾ? ಸಾಧಕ-ಬಾಧಕಗಳು ಹೀಗಿವೆ ನೋಡಿ

ಕ್ರೆಡಿಟ್ ಕಾರ್ಡ್ ಟಿಪ್ಸ್: ಬ್ಯಾಂಕ್ ಜೊತೆ ಮಾತನಾಡಿ ಬಡ್ಡಿ ದರ ಕಡಿಮೆ ಮಾಡಲು ಮನವಿ ಮಾಡಿಕೊಳ್ಳಿ

ಕೆಲವಾರು ಕಾರಣಗಳಿಂದ ನೀವು ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಸರಿಯಾಗಿ ಕಟ್ಟಲು ಸಾಧ್ಯವಾಗಿರುವುದಿಲ್ಲ. ಬಡ್ಡಿಯ ಮೇಲೆ ಬಡ್ಡಿ ಬೆಳೆದು ನಿಮ್ಮ ಮೂಲ ಮೊತ್ತಕ್ಕಿಂತ ಬಹಳ ಹೆಚ್ಚು ಸಾಲ ಸೃಷ್ಟಿಯಾಗಿಬಿಟ್ಟಿರಬಹುದು. ಇಂಥ ಸಂದರ್ಭದಲ್ಲಿ ನೀವು ಕ್ರೆಡಿಟ್ ಕಾರ್ಡ್ ಕಂಪನಿ ಜೊತೆ ಮಾತನಾಡಿ ಬಡ್ಡಿ ದರ ಕಡಿಮೆ ಮಾಡುವಂತೆ ಮನವಿ ಮಾಡಬಹುದು. ನಿಮ್ಮ ಕ್ರೆಡಿಟ್ ಕಾರ್ಡ್ ಪಾವತಿ ಹಿಂದೆಲ್ಲಾ ಉತ್ತಮ ಇತಿಹಾಸ ಹೊಂದಿದ್ದರೆ, ಬ್ಯಾಂಕುಗಳು ಬಡ್ಡಿ ದರ ಕಡಿಮೆ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ.

ಕ್ರೆಡಿಟ್ ಕಾರ್ಡ್ ಟಿಪ್ಸ್: ಅಧಿಕ ಬಡ್ಡಿಯ ಕ್ರೆಡಿಟ್ ಕಾರ್ಡ್​ಗೆ ಸಾಲ ವರ್ಗಾವಣೆ

ಕೆಲವೊಂದು ಕ್ರೆಡಿಟ್ ಕಾರ್ಡ್​ಗಳು ಬಹಳ ಹೆಚ್ಚಿನ ಬಡ್ಡಿ ವಿಧಿಸುತ್ತವೆ. ನೀವು ಅಂಥ ಕ್ರೆಡಿಟ್ ಕಾರ್ಡ್​ನಲ್ಲಿ ಸಾಲಕ್ಕೆ ಸಿಕ್ಕಿಕೊಂಡು ತೀರಿಸಲಾಗದೇ ಪರದಾಡುತ್ತಿದ್ದರೆ ಕಡಿಮೆ ಬಡ್ಡಿ ವಿಧಿಸುವ ಕ್ರೆಡಿಟ್ ಕಾರ್ಡ್​ಗೆ ಆ ಸಾಲ ವರ್ಗಾವಣೆ ಮಾಡುವ ಅವಕಾಶ ಇದೆ. ಶೇ. 1ರಷ್ಟು ಬಡ್ಡಿ ಕಡಿಮೆ ಆದರೂ ಬಹಳ ಉಳಿತಾಯವಾಗುತ್ತದೆ.

ಕ್ರೆಡಿಟ್ ಕಾರ್ಡ್ ಟಿಪ್ಸ್: ಸಾಲ ಪಡೆದು ಕ್ರೆಡಿಟ್ ಕಾರ್ಡ್ ಬಿಲ್ ಕಟ್ಟಿರಿ

ಕ್ರೆಡಿಟ್ ಕಾರ್ಡ್​ನಲ್ಲಿ ಸಾಲಕ್ಕೆ ತಿಂಗಳಿಗೆ ಶೇ. 3ರಿಂದ ಶೇ. 4ರಷ್ಟು ಬಡ್ಡಿ ಹಾಕಲಾಗುತ್ತದೆ. 50,000 ರೂ ಬಾಕಿ ಉಳಿಸಿಕೊಂಡಿದ್ದರೆ ಬಡ್ಡಿಯೇ ತಿಂಗಳಿಗೆ 1,500 ರೂನಿಂದ 2,000 ರವರೆಗೂ ಇರುತ್ತದೆ. ಇಂಥ ಪರಿಸ್ಥಿತಿಯಲ್ಲಿ ನೀವು ಶೇ. 2 ಅಥವಾ ಅದಕ್ಕಿಂತ ಕಡಿಮೆ ಬಡ್ಡಿಗೆ ಸಾಲ ಸಿಗುತ್ತದೆ ಎಂದರೆ ಪಡೆದು ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸಿರಿ. ಮನೆಯಲ್ಲಿ ಒಡವೆ ಇದ್ದರೆ ಅದನ್ನು ಅಡವಿಟ್ಟರೆ ತಿಂಗಳಿಗೆ ಶೇ. 1ರ ಬಡ್ಡಿಗೆ ಸಾಲ ಸಿಗುತ್ತದೆ. ಅದನ್ನು ಬಳಸಬಹುದು.

ಇದನ್ನೂ ಓದಿಯಾವುದೇ ಗ್ಯಾರಂಟಿ ಇಲ್ಲದೆ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಪ್ರಯೋಜನ ಪಡೆಯಬೇಕಾ? ನೋಂದಣಿ ಪ್ರಕ್ರಿಯೆ ವಿವರಗಳು ಇಲ್ಲಿವೆ ಓದಿ

ಕ್ರೆಡಿಟ್ ಕಾರ್ಡ್ ಟಿಪ್ಸ್: ವೆಚ್ಚ ಕಡಿಮೆ ಮಾಡಿ, ಆದಾಯ ಹೆಚ್ಚಿಸಿ

ಎವೆರಿ ಮನಿ ಸೇವ್ಡ್ ಈಸ್ ಎವೆರಿ ಮನಿ ಅರ್ನ್ಡ್ ಎನ್ನುತ್ತಾರೆ. ನೀವು ಉಳಿಸುವ ಪ್ರತೀ ಹಣವೂ ಗಳಿಕೆಗೆ ಸಮಾನವಾಗಿರುತ್ತದೆ. ನೀವು ಹಣ ಉಳಿತಾಯ ಮಾಡದಿದ್ದರೆ ಆದಾಯದಿಂದ ಯಾವ ಲಾಭವೂ ಇರುವುದಿಲ್ಲ. ಪ್ರತೀ ದಿನವೂ ನೀವು ಮಾಡುವ ವೆಚ್ಚಗಳ ಪಟ್ಟಿ ಮಾಡಿಟ್ಟುಕೊಳ್ಳಿ. ಅನವಶ್ಯಕ ವೆಚ್ಚ ಎನಿಸುವುದನ್ನು ಮೊದಲು ಕಡಿಮೆ ಮಾಡಿ. ಒಂದು ತಿಂಗಳಲ್ಲಿ ನಿಮಗೆ ಎಷ್ಟು ಸಾಧ್ಯವೋ ಅಷ್ಟು ಹಣ ಉಳಿಸಿ, ಅದನ್ನು ಸಾಲ ತೀರಿಸಲು ಬಳಸಿ.

ಹಾಗೆಯೇ, ನೀವು ಆದಾಯ ಹೆಚ್ಚಿಸಿಕೊಳ್ಳದಿದ್ದರೆ ಇವತ್ತಿನ ಹಣದುಬ್ಬರ ಪರಿಸ್ಥಿತಿಯಲ್ಲಿ ಏನೇ ಪ್ರಯತ್ನಿಸಿದರೂ ಉಳಿತಾಯ ಕಷ್ಟಸಾಧ್ಯವಾಗುತ್ತದೆ. ನಿಮಗಿರುವ ಆಸಕ್ತಿ, ಪ್ರತಿಭೆ, ಕೌಶಲ್ಯಕ್ಕೆ ಅನುಗುಣವಾಗಿ ಹೆಚ್ಚುವರಿ ಆದಾಯ ಎಲ್ಲೆಲ್ಲಿಂದ ಸಾಧ್ಯ ಎಂಬುದನ್ನು ಕಂಡುಕೊಂಡು ಆ ನಿಟ್ಟಿನಲ್ಲಿ ಪ್ರಯತ್ನಿಸಿ.

ಕ್ರೆಡಿಟ್ ಕಾರ್ಡ್ ಟಿಪ್ಸ್: ಸಾಲ ಇದ್ದಾಗ ಹೂಡಿಕೆ ಬೇಡ

ನೀವು ಇವತ್ತು ಸಾಲದಲ್ಲಿದ್ದೀರಿ ಎಂದರೆ ವರ್ಷಕ್ಕೆ ಶೇ. 12ರಿಂದ ಶೇ. 45ರಷ್ಟು ಬಡ್ಡಿ ಕಟ್ಟುತ್ತಿರುತ್ತೀರಿ. ಇಷ್ಟು ಪ್ರಮಾಣದಲ್ಲಿ ಇವತ್ತು ಯಾವ ಹೂಡಿಕೆಯಿಂದ ಹಣ ಬೆಳೆಯುವುದಿಲ್ಲ. ಇದು ಗಮನದಲ್ಲಿರಲಿ. ಷೇರು ಮಾರುಕಟ್ಟೆಯಲ್ಲೂ ಇಷ್ಟು ದರದಲ್ಲಿ ಲಾಭ ಬರುವುದು ಕಷ್ಟ. ಆದ್ದರಿಂದ ಸಾಲ ತೀರಿಸುವುದು ನಿಮ್ಮ ಮೊದಲ ಆದ್ಯತೆ ಆಗಿರಲಿ. ನೀವು ಸಾಲಮುಕ್ತರಾದಾಗ ಉಳಿತಾಯ ಹಣದಿಂದ ಹೂಡಿಕೆ ಮಾಡುವುದು ಜಾಣತನ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್