
ನವದೆಹಲಿ, ಅಕ್ಟೋಬರ್ 4: ಕಷ್ಟದ ಕಾಲ ಬರುತ್ತಿದೆ. ಮೂರು ವರ್ಷದ ವೆಚ್ಚಕ್ಕೆ ಆಗುವಷ್ಟು ಎಮರ್ಜೆನ್ಸಿ ಫಂಡ್ ನಿರ್ಮಿಸಿ. ಯಾವ ಹೊಸ ಸಾಲ ಮಾಡಬೇಡಿ ಎಂದು ಹೂಡಿಕೆದಾರ ಮತ್ತು ಹಣಕಾಸು ಸಲಹೆಗಾರ ಮುತ್ತುಕೃಷ್ಣನ್ ದಂಡಪಾಣಿ ಅವರು ನೀಡಿರುವ ಸಲಹೆ ಈಗ ಟ್ರೆಂಡಿಂಗ್ನಲ್ಲಿದೆ. ದಂಡಪಾಣಿ ಅವರು ಕಳೆದ 13 ವರ್ಷಗಳಿಂದ ರಾಹುಲ್ ಗಾಂಧಿ ಅವರ ಹೂಡಿಕೆಗಳನ್ನು ನಿರ್ವಹಿಸುತ್ತಾ ಬಂದಿರುವರಾಗಿದ್ದಾರೆ. ಹೀಗಾಗಿ, ಅವರ ಅಭಿಪ್ರಾಯಗಳು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ.
ಕೆಲವರು ಎಂ ದಂಡಪಾಣಿ ಅವರ ಅಭಿಪ್ರಾಯವನ್ನು ಅಲ್ಲಗಳೆದಿದ್ದಾರೆ. ಕೆಲವರು ಟ್ರೋಲ್ ಮಾಡಿದ್ದಾರೆ. ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿರುವವರಲ್ಲಿ ಆತಂಕ ಸೃಷ್ಟಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿರುವಂತಿದೆ ಎಂದು ಒಬ್ಬರು ಟೀಕಿಸಿದ್ದಾರೆ.
“I urge Indian families not to take on any fresh loans. Difficult times are coming, so build an emergency fund that can cover three years of expenses.”
— M. Dhandapani, Investor https://t.co/bbjFsXVON1
— 🚨Indian Gems (@IndianGems_) October 3, 2026
Foolish, I would say take loan and buy assets. Fiat currencies are about to crash
— AA (@daksh666) October 3, 2026
ದೇಶದ ಜಿಡಿಪಿ ಶೇ. 7ರಷ್ಟು ಬೆಳವಣಿಗೆ ಹೊಂದುತ್ತಿರುವಾಗಲೇ ಈ ಮಾತುಗಳನ್ನಾಡುತ್ತಿರುವ ಆಶ್ಚರ್ಯ ಎಂದು ಮಗದೊಬ್ಬರು ಲೇವಡಿ ಮಾಡಿದ್ದಾರೆ.
ಇದನ್ನೂ ಓದಿ:
ಇದು ಮೂರ್ಖತನ. ನಾನು ಸಾಲ ಪಡೆದು ಆಸ್ತಿಗಳನ್ನು ಖರೀದಿಸುತ್ತೇನೆ. ಸರ್ಕಾರದ ಕರೆನ್ಸಿಗಳು ನಶಿಸಲಿವೆ ಎಂದು ಇನ್ನೊಬ್ಬರು ಪ್ರತಿವಾದ ಮಾಡಿದ್ದಾರೆ.
CONgress seems to be wanting to create panic among retail investors who are holding market with grit & therefore it’s ecosystem is desperately trying to package standard personal finance advice as a neutral “investor warning” to manufacture political panic.
The only problem? Their independent “expert” is Muthukrishnan Dhandapani, who has managed Rahul Ghandy’s mutual fund investments since 2013.
According to 2024 election affidavit, Rahul Ghandy holds a massive portfolio of Indian equities and mutual funds worth over ₹8 Crore.
The hypocrisy is staggering: the CONgress leader stays heavily invested in Dalal Street to compound his own wealth, while his IT cell uses his personal fund manager to scare middle-class retail investors into panic-selling their assets.
Using your own boss’s fund manager to trigger a fake retail panic while your boss’s multi-crore equity portfolio quietly rides the multi-year bull run is the exact reason nobody takes Rahul Ghandy’s and his cronies’ financial analysis seriously.
— BhikuMhatre (@MumbaichaDon) October 3, 2026
ತಮ್ಮ ಟೀಕಾಕಾರರಿಗೆ ದಂಡಪಾಣಿ ಪ್ರತ್ಯುತ್ತರ ನೀಡಿದ್ದಾರೆ. ಕೆಲ ದಿನಗಳ ಹಿಂದೆ ಮಾಡಿದ್ದ ಟ್ವೀಟ್ ಅನ್ನು ಈಗ ಟ್ರೆಂಡ್ ಮಾಡಲಾಗುತ್ತಿದೆ. ತಾನು ಈ ವಿಚಾರದ ಬಗ್ಗೆ ವರ್ಷಗಳಿಂದ ಹೇಳುತ್ತಲೇ ಬಂದಿದ್ದೇನೆ. ಹೊಸದೇನು ಹೇಳಿಲ್ಲ ಎಂದು ತಮ್ಮ ಹೇಳಿಕೆಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ.
What I posted a few days ago has been trending across regional media, national media and social media. It is now a trending topic on Twitter as well.
Each outlet is wording it to make it more sensational.
The idea is not to scare, but to prepare.
I have been saying this for the last two years. It is not something I said only a few days ago.
With so many uncertainties around the global and Indian economy, being cautious rather than aggressive is wise.
The world has faced such crises in the past. It will face them in the future too. That is the nature of cycles.
As much as our circumstances allow, we need to be prepared both financially and emotionally.
If nothing negative happens, so much the better. The preparation still gives us a sense of relief.
If something goes wrong, we will be adequately prepared.
— Muthukrishnan Dhandapani (@dmuthuk) October 3, 2026
ದಂಡಪಾಣಿ ಅವರು ಸೆಪ್ಟೆಂಬರ್ 29ರಂದು ಹಾಕಿದ ಪೋಸ್ಟ್ ಹೀಗಿದೆ: ‘ನಾನೇನು ನಾಸ್ಟ್ರಾಡಾಮಸ್ ಅಲ್ಲ. ಜರುಗಲಿರುವ ಸಂಭನೀಯತೆ ಬಗ್ಗೆ ಕಳೆದ ಎರಡು ವರ್ಷದಿಂದ ಎಚ್ಚರಿಸುತ್ತಲೇ ಬಂದಿದ್ದೇನೆ. ಅಗಣಿತ ಬಾರಿಯೂ ಅದನ್ನು ಪುನರುಚ್ಚರಿಸುತ್ತೇನೆ.
ಇದನ್ನೂ ಓದಿ:
‘ನಿಮ್ಮ ಕುಟುಂಬಕ್ಕೆ ಮೂರು ವರ್ಷಗಳಿಗಾಗುವಷ್ಟು ವೆಚ್ಚದ ಹಣವನ್ನು ಎಮರ್ಜೆನ್ಸಿ ಕಾರ್ಪಸ್ ಆಗಿ ಇಡಲು ಯತ್ನಿಸಿ. ಹೊಸ ಸಾಲಗಳನ್ನು ಮಾಡಬೇಡಿ. ದೀರ್ಘಾವಧಿ ಸಾಲಕ್ಕೆ ಕಾರಣವಾಗುವ ರಿಯಲ್ ಎಸ್ಟೇಟ್ ಅಥವಾ ಮನೆ ಖರೀದಿ ಬೇಡ. ಕೆಲಸ ಮತ್ತು ಹುದ್ದೆಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಆದಾಯ ಖಚಿತಪಡಿಸಿಕೊಳ್ಳಲಷ್ಟೇ ಗಮನ ಇರಲಿ.
‘ಆಕಾಶವೇನೂ ಕಳಚಿ ಬೀಳುತ್ತೆ ಅಂತಲ್ಲ. ಈ ಪ್ರಪಂಚ ಈ ಹಿಂದೆಯೂ ಇಂಥ ಬಿಕ್ಕಟ್ಟುಗಳನ್ನು ಎದುರಿಸಿದೆ. ಮುಂದೆಯೂ ಎದುರಿಸುತ್ತದೆ. ಈ ಕೆಲಸಗಳನ್ನು ಮಾಡುವುದರಿಂದ ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಕಷ್ಟದ ಸಮಯವನ್ನು ನಿರ್ವಹಿಸಲು ನೆರವಾಗಬಹುದು. ಮುಂದಿನ ದಿನಗಳಲ್ಲಿ ಒಳ್ಳೆಯ ದಿನಗಳು ಖಂಡಿತ ಬರುತ್ತದೆ. ಪ್ರಕೃತಿಯ ಚಕ್ರಗಳೇ ಹೀಗೆ ಎಂದು ಮುತ್ತುಕೃಷ್ಣನ್ ದಂಡಪಾಣಿ ತಮ್ಮ ಟ್ವೀಟ್ನಲ್ಲಿ ತಿಳಿಸಿದ್ದಾರೆ.
I’m no Nostradamus.
I’ve been cautioning for the last two years about some of the possibilities I saw coming.
I’ll repeat it for the nth time.
Try your level best to create a safe reserve or emergency corpus that can cover three years of your family’s complete expenses.
Don’t borrow. No fresh loans.
Don’t take on long term commitments like real estate or a house purchase.
Don’t be too specific about jobs and roles. Now is the time to focus on ensuring income.
It’s not that the sky is going to fall.
The world has faced such crises in the past. It will see them in future too.
Doing these things would help you manage tough times financially and emotionally.
And good times will definitely be back in the future.
Such is the nature of cycles.
— Muthukrishnan Dhandapani (@dmuthuk) September 29, 2026
ಚೆನ್ನೈನವರಾದ ದಂಡಪಾಣಿ ಅವರು ಮ್ಯೂಚುವಲ್ ಫಂಡ್ ಡಿಸ್ಟ್ರಿಬ್ಯೂಟರ್ ಆಗಿದ್ದಾರೆ. 2013ರಿಂದ ಅವರು ರಾಹುಲ್ ಗಾಂಧಿ ಅವರ ಹೂಡಿಕೆಗಳನ್ನು ನಿರ್ವಹಿಸುತ್ತಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ