ಅಂತೂ ಅಧಿಕೃತವಾಗಿ ಸುದ್ದಿ ಹೊರಬಿದ್ದಿದೆ! ಭಾರತದ ಅತ್ಯಂತ ಯಶಸ್ವಿ ಹೂಡಿಕೆದಾರರಾದ ರಾಕೇಶ್ ಜುಂಜುನ್‌ವಾಲಾ ಬೆಂಬಲಿತ ಹೊಸ ವಿಮಾನಯಾನ ಸಂಸ್ಥೆ “ಆಕಾಶ”ವು ಗಗನಕ್ಕೆ ಏರಲು ಸರ್ಕಾರದಿಂದ ನಿರಾಕ್ಷೇಪಣೆ ಪ್ರಮಾಣಪತ್ರ (NOC) ಪಡೆದಿದೆ ಎಂದು SNV ಏವಿಯೇಷನ್ ಪ್ರೈವೇಟ್ ಲಿಮಿಟೆಡ್ ಸೋಮವಾರ ಪ್ರಕಟಿಸಿದೆ. ಇದರೊಂದಿಗೆ ‘ಆಕಾಶ ಏರ್’ (Akasa Air) ಬ್ರ್ಯಾಂಡ್ ಹೆಸರಿನಲ್ಲಿ ಹಾರಲಿದೆ. ಜೆಟ್ ಏರ್‌ವೇಸ್‌ನ ಮಾಜಿ ಸಿಇಒ ವಿನಯ್ ದುಬೆ ಅವರ ಬೆಂಬಲವನ್ನು ಪಡೆದಿರುವ ಏರ್‌ಲೈನ್ ಈಗ 2022ರ ಬೇಸಿಗೆಯಿಂದ ಕಾರ್ಯ ನಿರ್ವಹಿಸಲು ಡೈರಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ)ಯಿಂದ ಪರವಾನಗಿ ಪಡೆಯುತ್ತದೆ. ಇದರಲ್ಲಿ ಸಿಇಒ ಆಗಿ ವಿನಯ್ ದುಬೆ ಇರುತ್ತಾರೆ. ಆಕಾಶ ಮಂಡಳಿಯಲ್ಲಿ ಇರುವ ಇಂಡಿಗೋದ ಮಾಜಿ ಅಧ್ಯಕ್ಷ ಆದಿತ್ಯ ಘೋಷ್, ಎನ್ಒಸಿ ಸ್ವೀಕರಿಸಿದ ವಿನಯ್ ದುಬೆ ಮತ್ತು ತಂಡವನ್ನು ಅಭಿನಂದಿಸಿದ್ದಾರೆ. “MOCAಯಿಂದ NOC ಸ್ವೀಕರಿಸಿದ #VinayDube ಮತ್ತು ತಂಡ #AKASAಕ್ಕೆ ಅನೇಕ ಅಭಿನಂದನೆಗಳು. ಭಾರತೀಯ ಫ್ಲೈಯರ್‌ಗಳಿಗೆ ಬೆಚ್ಚಗಿನ, ದಕ್ಷ, ವಿಶ್ವಾಸಾರ್ಹ ಮತ್ತು ಒಳ್ಳೆ ಪ್ರಯಾಣದ ಅನುಭವವನ್ನು ನೀಡುವ ಮೂಲಕ ದೇಶದ ಅತ್ಯಂತ ವಿಶ್ವಾಸಾರ್ಹ, ಕೈಗೆಟುಕುವ ಮತ್ತು ಹಸಿರು ವಿಮಾನಯಾನ ಸಂಸ್ಥೆಯಾಗಲಿದೆ,” ಘೋಷ್ ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗೆ, ಪ್ರಧಾನಿ ನರೇಂದ್ರ ಮೋದಿಯವರನ್ನು ರಾಕೇಶ್ ಜುಂಜುನ್‌ವಾಲಾ ಮತ್ತು ಅವರ ಪತ್ನಿ ರೇಖಾ ಭೇಟಿ ಮಾಡಿದ್ದರು. “ಭಾರತದ ಏಕೈಕ ರಾಕೇಶ್ ಜುಂಜುನ್‌ವಾಲಾ ಅವರಂಥ ಉತ್ಸಾಹಭರಿತ, ಒಳನೋಟವುಳ್ಳ ಮತ್ತು ಅತ್ಯಂತ ಬಲಿಷ್ಠರನ್ನು ಭೇಟಿಯಾಗಲು ಸಂತೋಷವಾಗಿದೆ,” ಎಂದು ಪ್ರಧಾನಿ ಮೋದಿ ಟ್ವಿಟ್ಟರ್ ನಲ್ಲಿ ಜುಂಜುನ್‌ವಾಲಾ ಅವರನ್ನು ಭೇಟಿಯಾದ ನಂತರ ಪೋಸ್ಟ್ ಮಾಡಿದ್ದರು. ಜುಂಜುನ್‌ವಾಲಾ ಅವರನ್ನು ಭಾರತದ ವಾರೆನ್ ಬಫೆಟ್ ಎಂದು ಕರೆಯಲಾಗುತ್ತದೆ. ದಲಾಲ್ ಸ್ಟ್ರೀಟ್‌ನಲ್ಲಿ ಜುಂಜುನ್ವಾಲ್ ಅವರು ತೆಗೆದುಕೊಳ್ಳುವ ಪ್ರತಿ ಸ್ಟಾಕ್ ಕುರಿತಾದ ನಡೆಯನ್ನು ಮತ್ತು ಹೂಡಿಕೆ ತಂತ್ರವನ್ನು ಹೂಡಿಕೆದಾರರು ಸೂಕ್ಷ್ಮವಾಗಿ ಗಮನಿಸುತ್ತಾರೆ.
ಈ ಮಧ್ಯೆ, ಏರ್‌ಬಸ್ ಮುಖ್ಯ ವಾಣಿಜ್ಯ ಅಧಿಕಾರಿ ಕ್ರಿಶ್ಚಿಯನ್ ಶೆರೆರ್ ಇತ್ತೀಚೆಗೆ ಸುದ್ದಿ ಸಂಸ್ಥೆ ಪಿಟಿಐಗೆ ಹೇಳಿದ್ದು, ವಿಮಾನ ಖರೀದಿ ಒಪ್ಪಂದಕ್ಕಾಗಿ ಕಂಪೆನಿಯು ಆಕಾಶದೊಂದಿಗೆ ಮಾತುಕತೆ ನಡೆಸುತ್ತಿದೆ. ಆಕಾಶ ತನ್ನ B737 ಮ್ಯಾಕ್ಸ್ ವಿಮಾನಗಳನ್ನು ಖರೀದಿಸಲು ಯುಎಸ್ ವಿಮಾನ ತಯಾರಕ ಬೋಯಿಂಗ್ ಜೊತೆ ಚರ್ಚಿಸುತ್ತಿದೆ. ಬಹು ಮಾಧ್ಯಮ ವರದಿಗಳು ಎರಡು ತಿಂಗಳ ಹಿಂದೆ ಈ ಬಗ್ಗೆ ಹೇಳಿದ್ದವು. ಏರ್‌ಬಸ್‌ನ A320 ಸರಣಿಯ ವಿಮಾನವು ವಿಮಾನಯಾನ ಮಾರುಕಟ್ಟೆಯಲ್ಲಿ ಬೋಯಿಂಗ್‌ನ B737 ಸರಣಿಯ ವಿಮಾನಗಳೊಂದಿಗೆ ಸ್ಪರ್ಧಿಸುತ್ತದೆ. ಮುಂದಿನ ನಾಲ್ಕು ವರ್ಷಗಳಲ್ಲಿ ಸುಮಾರು 70 ವಿಮಾನಗಳನ್ನು ನಿರ್ವಹಿಸಲು 2022ರ ಬೇಸಿಗೆಯ ವೇಳೆಗೆ ಕಾರ್ಯಾಚರಣೆಗಳನ್ನು ಆರಂಭಿಸುವ ಗುರಿ ಹೊಂದಲಾಗಿದೆ.
ಜುಂಜುನ್‌ವಾಲಾ ಒಬ್ಬ ಭಾರತೀಯ ವ್ಯಾಪಾರಿ ಮತ್ತು ಷೇರು ಹೂಡಿಕೆದಾರ. ಅವರು ತಮ್ಮ ಸ್ವತ್ತು ನಿರ್ವಹಣಾ ಸಂಸ್ಥೆಯ ಮೂಲಕವಾಗಿ ಅಪರೂಪದ ಉದ್ಯಮಗಳಲ್ಲಿ ಪಾಲುದಾರರಾಗಿ ತಮ್ಮದೇ ಆದ ಬಂಡವಾಳವನ್ನು ನಿರ್ವಹಿಸುತ್ತಾರೆ. ಅವರ ಆರಂಭಿಕ ಜೀವನದಲ್ಲಿ ರಾಕೇಶ್ ಬಾಂಬೆಯ ಅಗರ್ವಾಲ್ ಕುಟುಂಬದಲ್ಲಿ ಬೆಳೆದರು. ಅಲ್ಲಿ ಅವರ ತಂದೆ ಬಾಂಬೆಯ ಆದಾಯ ತೆರಿಗೆ ಆಯುಕ್ತರಾಗಿ ಕೆಲಸ ಮಾಡಿದ್ದರು. ಅವರ ಅಂದಾಜು ನಿವ್ವಳ ಮೌಲ್ಯ 570 ಕೋಟಿ ಅಮೆರಿಕನ್ ಡಾಲರ್ (ಅಕ್ಟೋಬರ್ 2021ರಂತೆ). ಅವರು ವಿಮಾನಯಾನ ಸಂಸ್ಥೆಯಲ್ಲಿ 247.50 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ. ಇಂಡಿಗೊ – ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆಯು ಭಾರತೀಯ ದೇಶೀಯ ವಾಯುಯಾನ ಮಾರುಕಟ್ಟೆಯ ಶೇಕಡಾ 50ರಷ್ಟು ಪಾಲನ್ನು ಹೊಂದಿದೆ – ಏರ್‌ಬಸ್‌ನ ಕಿರಿದಾದ ವಿಮಾನವನ್ನು ಮಾತ್ರ ನಿರ್ವಹಿಸುತ್ತದೆ. ಎಲ್ಲ ಭಾರತೀಯ ವಿಮಾನ ಯಾನ ಸಂಸ್ಥೆಗಳಲ್ಲಿ ಸ್ಪೈಸ್ ಜೆಟ್ ಮತ್ತು ಏರ್ ಇಂಡಿಯಾ ಎಕ್ಸ್ ಪ್ರೆಸ್ ಮಾತ್ರ ಬೋಯಿಂಗ್‌ನ ಕಿರಿದಾದ ವಿಮಾನವನ್ನು ನಿರ್ವಹಿಸುತ್ತವೆ. A320 ಮತ್ತು B737ನಂತಹ ಕಿರಿದಾದ ವಿಮಾನವು ಸಣ್ಣ ಇಂಧನ ಟ್ಯಾಂಕ್ ಅನ್ನು ಹೊಂದಿದೆ ಮತ್ತು ಆದ್ದರಿಂದ ಇದು ಕಡಿಮೆ ದೂರಕ್ಕೆ ಹಾರಬಲ್ಲದು.
DGCA ಆಗಸ್ಟ್‌ನಲ್ಲಿ ಬೋಯಿಂಗ್ ಕಂಪೆನಿಯ 737 MAX ವಿಮಾನವನ್ನು ತಕ್ಷಣದಿಂದ ಜಾರಿಗೆ ಬರುವಂತೆ ತೆರವುಗೊಳಿಸಿತು. ವಿಮಾನ ತಯಾರಕರ ಪ್ರಮುಖ ಪ್ರಯಾಣ ಮಾರುಕಟ್ಟೆಯಲ್ಲಿ ಸುಮಾರು ಎರಡೂವರೆ ವರ್ಷಗಳ ನಿಯಂತ್ರಣವನ್ನು ಕೊನೆಗೊಳಿಸಿತು. 737 MAXನ ಜಾಗತಿಕ ಅನ್-ಗ್ರೌಂಡಿಂಗ್ ಪ್ರವೃತ್ತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಿರುವುದಾಗಿ ಅದು ತನ್ನ ಆದೇಶದಲ್ಲಿ ಹೇಳಿತ್ತು, ಮತ್ತು ಪ್ರಸ್ತುತ 345 MAX ವಿಮಾನಗಳನ್ನು ನಿರ್ವಹಿಸುತ್ತಿರುವ 34 ವಿಮಾನಯಾನ ಸಂಸ್ಥೆಗಳೊಂದಿಗೆ “ಯಾವುದೇ ಅಹಿತಕರ ವರದಿ” ಕಂಡುಬಂದಿಲ್ಲ. 737 MAX ಅನ್ನು 2019ರ ಮಾರ್ಚ್‌ನಲ್ಲಿ ವಿಶ್ವಾದ್ಯಂತ ನಾಶ ಮಾಡಲಾಯಿತು, ಅದಕ್ಕೆ ಕಾರಣ ಆಗಿದ್ದು ಐದು ತಿಂಗಳಲ್ಲಿ ಎರಡು ಮಾರಣಾಂತಿಕ ಅಪಘಾತಗಳು 346 ಜನರನ್ನು ಕೊಂದದ್ದು. ಕೊರೊನಾ ಬಿಕ್ಕಟ್ಟಿನಿಂದಾಗಿ ಬೋಯಿಂಗ್ ಅನ್ನು ಆರ್ಥಿಕ ಬಿಕ್ಕಟ್ಟಿಗೆ ತಳ್ಳಿತು.
ಇದನ್ನೂ ಓದಿ: Rakesh Jhunjhunwala: ಒಂದೇ ತಿಂಗಳಲ್ಲಿ ರಾಕೇಶ್ ಜುಂಜುನ್ವಾಲಾಗೆ ಈ ಷೇರಿನಿಂದ 145 ಕೋಟಿ ರೂಪಾಯಿ ಗಳಿಕೆ