ಮುಂಬೈ: ಬ್ಯಾಂಕುಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಹಲವು ಸಂಸ್ಥೆಗಳು ತಮ್ಮ ಗ್ರಾಹಕರ ದೂರು ಇತ್ಯಾದಿಯನ್ನು ಅಲಿಸಿ ಪರಿಹಾರ ಕೊಡುವ ಕೆಲಸವನ್ನು ಹೊರಗುತ್ತಿಗೆ ಕೊಡುತ್ತವೆ. ಅಂತೆಯೇ ಕಾಲ್ ಸೆಂಟರ್ನಂತಹ ಬಿಪಿಒಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ. ಬಹಳ ಸಂದರ್ಭಗಳಲ್ಲಿ ಗ್ರಾಹಕರ ಕರೆ ಸ್ವೀಕರಿಸುವ ಕಾಲ್ ಸೆಂಟರ್ ಸಿಬ್ಬಂದಿ ಅಸಮರ್ಪಕ ಸೇವೆ ನೀಡುವ ಬಗ್ಗೆ ಬಹಳಷ್ಟು ತಗಾದೆಗಳಂತೂ ಇವೆ. ಈ ವಿಚಾರದ ಬಗ್ಗೆ ಆರ್ಬಿಐ ಗಮನ ಹರಿಸಿದೆ. ಬ್ಯಾಂಕುಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು (NBFCs) ಹಾಗೂ ನಿಯಂತ್ರಿಕ ಹಣಕಾಸು ವಲಯದ ಸಂಸ್ಥೆಗಳು ಐಟಿ ಸೇವೆಗಳನ್ನು ಔಟ್ಸೋರ್ಸ್ (Outsource) ಮಾಡುವ ವಿಚಾರದಲ್ಲಿ ಅರ್ಬಿಐ ಹೊಸ ನಿಯಮಾವಳಿಗಳನ್ನು ರೂಪಿಸಿದೆ. ಹೊರಗುತ್ತಿಗೆ ನೀಡಿ ಬ್ಯಾಂಕು ಮತ್ತಿತರ ನಿಯಂತ್ರಿತ ಹಣಕಾಸು ವಲಯ ಸಂಸ್ಥೆಗಳು (RE- Regulated Entity) ತಮ್ಮ ಗ್ರಾಹಕರಿಗೆ ಸಮರ್ಪಕ ಸೇವೆ ನೀಡುವ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.
ಬ್ಯಾಂಕು ಸೇರಿದಂತೆ ನಿಯಂತ್ರಿತ ಸಂಸ್ಥೆಗಳು (ಆರ್ಇ) ತಮ್ಮ ಗ್ರಾಹಕರಿಗೆ ಒದಗಿಸುವ ಬ್ಯುಸಿನೆಸ್ ಮಾಡಲ್, ಉತ್ಪನ್ನ ಮತ್ತು ಸೇವೆಗಳ ನಿರ್ವಹಣೆಗೆ ವ್ಯಾಪಕವಾಗಿ ಐಟಿ ಸೇವೆಗಳನ್ನು ಬಳಸಿಕೊಳ್ಳುತ್ತವೆ. ಈ ರೀತಿ ಹೊರಗುತ್ತಿಗೆ ಕೊಡುವ ಮೂಲಕ ಬ್ಯಾಂಕುಗಳು ತಮ್ಮ ಗ್ರಾಹಕ ಸೇವೆ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಆರ್ಬಿಐನ ನಿಯಮಗಳಿಂದಲೂ ತಪ್ಪಿಸಿಕೊಳ್ಳುವಂತಿಲ್ಲ ಎಂದು ‘ಮಾಸ್ಟರ್ ಡೈರೆಕ್ಷನ್ ಆನ್ ಔಟ್ಸೋರ್ಸಿಂಗ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿ ಸರ್ವಿಸಸ್’ (ಮಾಹಿತಿ ತಂತ್ರಜ್ಞಾನದ ಹೊರಗುತ್ತಿಗೆಗೆ ನಿರ್ದೇಶನ) ಎಂಬ ತನ್ನ ಹೊಸ ನಿಯಮಾವಳಿಯಲ್ಲಿ ಹೇಳಿದೆ.
ಇದನ್ನೂ ಓದಿ: Google Pay: ಗೂಗಲ್ ಪೇ ಸರ್ವರ್ ಗ್ಲಿಚ್ನಿಂದಾಗಿ ಕೆಲವು ಬಳಕೆದಾರರ ಖಾತೆಗೆ ರೂ.80,000 ಜಮೆ; ನಿಮಗೂ ಬಂದಿದೆಯೇ?
Published On - 12:20 pm, Tue, 11 April 23