Bank Holidays: ಫೆಬ್ರವರಿಯಲ್ಲಿ ಬರೋಬ್ಬರಿ 10 ದಿನ ಬ್ಯಾಂಕ್ ರಜೆ; ಕರ್ನಾಟಕದಲ್ಲೆಷ್ಟಿದೆ ರಜೆ?

|

Updated on: Jan 31, 2023 | 11:11 AM

ಫೆಬ್ರವರಿ ತಿಂಗಳಿನಲ್ಲಿ ಕರ್ನಾಟಕದಲ್ಲಿ ಎರಡನೇ ಶನಿವಾರ,  ಭಾನುವಾರದ ರಜೆ ಸೇರಿದಂತೆ ಒಟ್ಟು 7 ರಜೆಗಳು ಇರಲಿವೆ. ರಜೆಗಳ ವಿವರ ಇಲ್ಲಿದೆ.

Bank Holidays: ಫೆಬ್ರವರಿಯಲ್ಲಿ ಬರೋಬ್ಬರಿ 10 ದಿನ ಬ್ಯಾಂಕ್ ರಜೆ; ಕರ್ನಾಟಕದಲ್ಲೆಷ್ಟಿದೆ ರಜೆ?
ಬ್ಯಾಂಕ್ ರಜೆ ಪಟ್ಟಿ
Follow us on

ನವದೆಹಲಿ: ಫೆಬ್ರವರಿ ತಿಂಗಳಿನ ಬ್ಯಾಂಕ್ ರಜೆ (Bank Holidays) ವಿವರವನ್ನು ಆರ್​ಬಿಐ (RBI) ಬಿಡುಗಡೆ ಮಾಡಿದೆ. ಆರ್​ಬಿಐ ಬಿಡುಗಡೆ ಮಾಡಿರುವ ಪಟ್ಟಿಯ ಪ್ರಕಾರ ಫೆಬ್ರವರಿಯಲ್ಲಿ ಬ್ಯಾಂಕ್​ಗಳು ಒಟ್ಟು 10 ದಿನ ರಜೆ ಇರಲಿವೆ. ಆದರೆ, ಕೆಲವು ರಜೆಗಳು ಕೆಲವು ರಾಜ್ಯಗಳ ವ್ಯಾಪ್ತಿಯಲ್ಲಿ ಮಾತ್ರ ಇರುವುದರಿಂದ ದೇಶದಾದ್ಯಂತ ಎಲ್ಲ ಬ್ಯಾಂಕ್​ಗಳಿಗೂ ಅನ್ವಯವಾಗುವುದಿಲ್ಲ. ರಾಷ್ಟ್ರೀಕೃತ ಬ್ಯಾಂಕ್​ ರಜೆ ಮಾತ್ರ ದೇಶದ ಎಲ್ಲ ಬ್ಯಾಂಕ್​ಗಳಿಗೆ ಅನ್ವಯವಾಗುತ್ತದೆ. ಫೆಬ್ರವರಿ ತಿಂಗಳಿನ ಬ್ಯಾಂಕ್ ರಜೆ ವಿವರ ಇಲ್ಲಿದೆ.

ಫೆಬ್ರವರಿ 5 ಭಾನುವಾರ ಬ್ಯಾಂಕ್​ಗಳು ರಜೆ ಇರಲಿವೆ. 11ನೇ ತಾರೀಖಿನಂದು ಎರಡನೇ ಶನಿವಾರ ಆಗಿದ್ದು ರಜೆ ಇರಲಿವೆ. 12ರಂದು ಭಾನುವಾರ ಆಗಿದ್ದು, ಬ್ಯಾಂಕ್​ ರಜೆ ಇರಲಿದೆ. ಫೆಬ್ರವರಿ 15ರ ಬುಧವಾರ ಮಣಿಪುರದಲ್ಲಿ ಲುಯಿ ನಗಾಯ್ ನಿ ಹಬ್ಬದ ಪ್ರಯುಕ್ತ ಬ್ಯಾಂಕ್ ರಜೆ ಇರಲಿದೆ. ಫೆಬ್ರವರಿ 18ರ ಶನಿವಾರ ಮಹಾಶಿವರಾತ್ರಿ ಪ್ರಯುಕ್ತ ಬ್ಯಾಂಕ್​ಗಳು ರಜೆ ಇರಲಿವೆ. 19ರಂದು ಭಾನುವಾರ ಮತ್ತು ಮಹಾರಾಷ್ಟ್ರದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಿಸಲಾಗುತ್ತದೆ. ಹೀಗಾಗಿ ಬ್ಯಾಂಕ್​ಗಳು ರಜೆ ಇರಲಿವೆ.

ಇದನ್ನೂ ಓದಿ: Hindenburg Research: ಹಿಂಡನ್​​ಬರ್ಗ್​ ವರದಿಗೆ ಕಿಮ್ಮತ್ತೇ ನೀಡಿರಲಿಲ್ಲ ಅಮೆರಿಕದ ನ್ಯಾಯಾಲಯ; ಕಾರಣ ಇಲ್ಲಿದೆ ನೋಡಿ

ಫೆಬ್ರವರಿ 20ರಂದು ಸೋಮವಾರ ಅರುಣಾಚಲ ಪ್ರದೇಶ ಮತ್ತು ಮಿಜೋರಾಂ ರಾಜ್ಯ ದಿನದ ಪ್ರಯುಕ್ತ ಬ್ಯಾಂಕ್ ರಜೆ ಇರಲಿದೆ. 21ರಂದು ಸಿಕ್ಕಿಂನಲ್ಲಿ ಲೋಸರ್ ಹಬ್ಬದ ಪ್ರಯುಕ್ತ ರಜೆ ಇದೆ. ಫೆಬ್ರವರಿ 25 ನಾಲ್ಕನೇ ಶನಿವಾರ ಆಗಿದ್ದು ದೇಶದಾದ್ಯಂತ ಬ್ಯಾಂಕ್​ಗಳು ರಜೆ ಇರಲಿವೆ. 26ರಂದು ಭಾನುವಾರ ಆಗಿದ್ದು ಬ್ಯಾಂಕ್​ಗಳು ರಜೆ ಇರಲಿವೆ.

ಕರ್ನಾಟಕದಲ್ಲೆಷ್ಟಿದೆ ಬ್ಯಾಂಕ್ ರಜೆ?

ಫೆಬ್ರವರಿ ತಿಂಗಳಿನಲ್ಲಿ ಕರ್ನಾಟಕದಲ್ಲಿ ಎರಡನೇ ಶನಿವಾರ,  ಭಾನುವಾರದ ರಜೆ ಸೇರಿದಂತೆ ಒಟ್ಟು 7 ರಜೆಗಳು ಇರಲಿವೆ. ಫೆಬ್ರವರಿ 5 ಭಾನುವಾರ ಆಗಿದ್ದು, ಬ್ಯಾಂಕ್ ರಜೆ ಇರಲಿದೆ. 11ನೇ ತಾರೀಖಿನಂದು ಎರಡನೇ ಶನಿವಾರ, 12ರಂದು ಭಾನುವಾರದ​ ರಜೆ ಇರಲಿದೆ. 18ರ ಶನಿವಾರ ಮಹಾಶಿವರಾತ್ರಿ ಪ್ರಯುಕ್ತ ರಾಜ್ಯದಲ್ಲಿಯೂ ಬ್ಯಾಂಕ್ ರಜೆ ಇರಲಿದೆ. 19ರಂದು ಭಾನುವಾರವಾಗಿದ್ದು ಅಂದೂ ರಜೆ. ಫೆಬ್ರವರಿ 25 ನಾಲ್ಕನೇ ಶನಿವಾರ ಹಾಗೂ 26 ಭಾನುವಾರದ ರಜೆ ಇರಲಿದ್ದು, ಒಟ್ಟು ಏಳು ದಿನಗಳ ರಜೆ ಇರಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:49 pm, Mon, 30 January 23