AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bank Holidays in January 2023: ಜನವರಿ ತಿಂಗಳಲ್ಲಿ ಬ್ಯಾಂಕ್​ಗಳಿಗೆ 11 ದಿನ ರಜೆ; ಇಲ್ಲಿದೆ ಪಟ್ಟಿ

2023 January Bank Holiday List; ಜನವರಿತಿಂಗಳಲ್ಲಿ ಬ್ಯಾಂಕ್​ಗಳಿಗೆ 11 ದಿನ ರಜೆ ಇರಲಿದೆ. ಇದರಲ್ಲಿ ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರ ಕೂಡ ಸೇರಿದೆ.

Bank Holidays in January 2023: ಜನವರಿ ತಿಂಗಳಲ್ಲಿ ಬ್ಯಾಂಕ್​ಗಳಿಗೆ 11 ದಿನ ರಜೆ; ಇಲ್ಲಿದೆ ಪಟ್ಟಿ
ಬ್ಯಾಂಕ್ ರಜೆ ಪಟ್ಟಿ
TV9 Web
| Edited By: |

Updated on:Dec 26, 2022 | 6:29 PM

Share

ನವದೆಹಲಿ: ಜನವರಿ (January) ತಿಂಗಳಲ್ಲಿ ಬ್ಯಾಂಕ್​ಗಳಿಗೆ (Bank Holidays) 11 ದಿನ ರಜೆ ಇರಲಿದೆ. ಇದರಲ್ಲಿ ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರ ಕೂಡ ಸೇರಿದೆ. ಕೆಲವೊಂದು ಹಬ್ಬಗಳ ರಜೆ ಆಯಾ ಪ್ರದೇಶಕ್ಕೆ ಮಾತ್ರ ಸೀಮಿತವಾಗಿರುವುದರಿಂದ ಅಂಥ ಸಂದರ್ಭದಲ್ಲಿ ದೇಶದ ಎಲ್ಲ ಬ್ಯಾಂಕ್​ಗಳಿಗೂ ರಜೆ ಇರುವುದಿಲ್ಲ. ಆರ್​ಬಿಐ (RBI) ಪ್ರತಿ ತಿಂಗಳು ಬ್ಯಾಂಕ್​ಗಳ ರಜೆ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ನೆಗೊಷಿಯೇಬಲ್ ಇನ್​ಸ್ಟ್ರುಮೆಂಟ್ಸ್ ಆ್ಯಕ್ಟ್, ಹಾಲಿಡೇ, ರಿಯಲ್​ ಟೈಂ ಗ್ರೋಸ್ ಸೆಟಲ್​ಮೆಂಟ್ ಹಾಲಿಡೇ, ಬ್ಯಾಂಕ್ಸ್​ ಕ್ಲೋಸಿಂಗ್ ಆಫ್ ಅಕೌಂಟ್ಸ್ ನಿಯಮದಡಿ ಬ್ಯಾಂಕ್​ಗಳ ರಜೆ ಪಟ್ಟಿ ಪ್ರಕಟಿಸಲಾಗುತ್ತದೆ. ಆರ್​ಬಿಐ ವೇಳಾ ಪಟ್ಟಿ ಪ್ರಕಾರ ಜನವರಿಯಲ್ಲಿ ಬ್ಯಾಂಕ್​ಗಳಿಗೆ 11 ದಿನ ರಜೆ ಇರಲಿದ್ದು ಇದು ಖಾಸಗಿ, ಸರ್ಕಾರಿ ಸ್ವಾಮ್ಯದ, ವಿದೇಶಿ, ಸಹಕಾರಿ ಹಾಗೂ ಪ್ರದೇಶಿಕ ಬ್ಯಾಂಕ್​ಗಳಿಗೂ ಅನ್ವಯವಾಗಲಿದೆ. ನಾಲ್ಕು ಪ್ರಾದೇಶಿಕ ಹಾಗೂ ರಾಷ್ಟ್ರೀಯ ರಜೆಗಳು ಇರಲಿವೆ. ಇದಕ್ಕನುಗುಣವಾಗಿ ಗ್ರಾಹಕರು ಬ್ಯಾಂಕಿಂಗ್ ಕೆಲಸಗಳ ಯೋಜನೆ ರೂಪಿಸಿಕೊಳ್ಳಬೇಕು ಎಂದು ಆರ್​ಬಿಐ ಮನವಿ ಮಾಡಿದೆ. ಆದಾಗ್ಯೂ, ಯುಪಿಐ, ನೆಟ್ ಬ್ಯಾಂಕಿಂಗ್, ಎಟಿಎಂ ಸೇವೆ ಲಭ್ಯವಿರಲಿದೆ ಎಂದು ತಿಳಿಸಿದೆ.

ಜನವರಿ ತಿಂಗಳ ಬ್ಯಾಂಕ್​ ರಜೆ ಪಟ್ಟಿ

  • ಜನವರಿ 1 – ಮೊದಲ ಭಾನುವಾರ
  • ಜನವರಿ 8 – ಎರಡನೇ ಭಾನುವಾರ
  • ಜನವರಿ 14 – ಎರಡನೇ ಶನಿವಾರ
  • ಜನವರಿ 15 – ಮೂರನೇ ಭಾನುವಾರ
  • ಜನವರಿ 22 – ನಾಲ್ಕನೇ ಭಾನುವಾರ
  • ಜನವರಿ 28 – ನಾಲ್ಕನೇ ಶನಿವಾರ
  • ಜನವರಿ 29 – ಐದನೇ ಭಾನುವಾರ

ರಾಷ್ಟ್ರೀಯ ಮತ್ತು ಪ್ರಾದೇಶಿಕ ರಜೆಗಳು

  • ಜನವರಿ 2 – ಐಜ್ವಾಲ್​ನಲ್ಲಿ ಹೊಸ ವರ್ಷಾಚರಣೆ
  • ಜನವರಿ 3 – ಇಂಫಾಲ್​ನಲ್ಲಿ ಧಾರ್ಮಿಕ ಹಬ್ಬದ ಪ್ರಯುಕ್ತ ರಜೆ
  • ಜನವರಿ 4 – ಇಂಫಾಲ್​ನಲ್ಲಿ ಸ್ಥಳೀಯ ಹಬ್ಬದ ಪ್ರಯುಕ್ತ ರಜೆ
  • ಜನವರಿ 26 – ಗಣರಾಜ್ಯೋತ್ಸವ ಪ್ರಯುಕ್ತ ರಜೆ
  • ಫೆಬ್ರವರಿಯಲ್ಲಿ ಶಿವರಾತ್ರಿ ಸೇರಿದಂತೆ ನಾಲ್ಕು ದಿನಗಳ ಕಾಲ ಬ್ಯಾಂಕ್​ಗಳಿಗೆ ರಜೆ ಇರಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:56 pm, Mon, 26 December 22

ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ
ಕುಡಿದು ಟೈಟ್ ಆದವರಿಗೆ ಉಚಿತವಾಗಿ ಮನೆಗೆ ತಲುಪಿಸುವ ವ್ಯವಸ್ಥೆ
ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
ಮಾಧ್ಯಮದ ಕ್ಯಾಮೆರಾ​​​ ನೋಡುತ್ತಿದ್ದಂತೆ ಮುಖ ಮುಚ್ಚಿಕೊಂಡ ಯುವತಿ
New Year 2026 Live: ನ್ಯೂ ಇಯರ್; ರಾಜ್ಯದ ಉದ್ದಗಲಕ್ಕೂ ಸಂಭ್ರಮ ಜೋರು
New Year 2026 Live: ನ್ಯೂ ಇಯರ್; ರಾಜ್ಯದ ಉದ್ದಗಲಕ್ಕೂ ಸಂಭ್ರಮ ಜೋರು
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಪುಟಿನ್ ನಿವಾಸದ ಮೇಲೆ ದಾಳಿ ಮಾಡಿದ ಉಕ್ರೇನ್; ರಷ್ಯಾದಿಂದ ವಿಡಿಯೋ ಬಿಡುಗಡೆ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?