NPA: ಮಾರ್ಚ್​ನಲ್ಲಿ ಬ್ಯಾಂಕುಗಳ ಕೆಟ್ಟ ಸಾಲ ಶೇ. 4ಕ್ಕಿಂತಲೂ ಕಡಿಮೆ; ಸರ್ಕಾರಿ ಬ್ಯಾಂಕುಗಳಿಗೆ ಕ್ರೆಡಿಟ್ ಕಾರ್ಡ್​ಗಳದ್ದೇ ತಲೆನೋವು

RBI's Financial Stability Report: ಆಭಾರತೀಯ ಬ್ಯಾಂಕುಗಳ ಕೆಟ್ಟ ಸಾಲದ (NPA-Non Performing Assets) ಪ್ರಮಾಣ ಇಳಿಮುಖವಾಗುವುದು ಮುಂದುವರಿದಿದೆ. 2023ರ ಮಾರ್ಚ್ ತಿಂಗಳಲ್ಲಿ ಒಟ್ಟು ಅನುತ್ಪಾದಕ ಸಾಲ ಕಡಿಮೆ ಆಗಿದೆ. ಭಾರತೀಯ ಬ್ಯಾಂಕುಗಳಲ್ಲಿ ಈ ಕೆಟ್ಟ ಸಾಲಗಳ ಪ್ರಮಾಣ ಶೇ. 3.9ರಷ್ಟು ಇದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಜೂನ್ 28ರಂದು ಬಿಡುಗಡೆ ಮಾಡಿದ ಫೈನಾನ್ಷಿಯಲ್ ಸ್ಟೆಬಿಲಿಟಿ ವರದಿಯಲ್ಲಿ (Financial Stability Report) ಈ ಅಂಶ ಹೈಲೈಟ್ ಎನಿಸಿದೆ.

NPA: ಮಾರ್ಚ್​ನಲ್ಲಿ ಬ್ಯಾಂಕುಗಳ ಕೆಟ್ಟ ಸಾಲ ಶೇ. 4ಕ್ಕಿಂತಲೂ ಕಡಿಮೆ; ಸರ್ಕಾರಿ ಬ್ಯಾಂಕುಗಳಿಗೆ ಕ್ರೆಡಿಟ್ ಕಾರ್ಡ್​ಗಳದ್ದೇ ತಲೆನೋವು
ಆರ್​ಬಿಐ
Edited By:

Updated on: Oct 08, 2026 | 12:12 PM

ನವದೆಹಲಿ: ಭಾರತೀಯ ಬ್ಯಾಂಕುಗಳ ಕೆಟ್ಟ ಸಾಲದ (NPA-Non Performing Assets) ಪ್ರಮಾಣ ಇಳಿಮುಖವಾಗುವುದು ಮುಂದುವರಿದಿದೆ. 2023ರ ಮಾರ್ಚ್ ತಿಂಗಳಲ್ಲಿ ಒಟ್ಟು ಅನುತ್ಪಾದಕ ಸಾಲ ಕಡಿಮೆ ಆಗಿದೆ. ಭಾರತೀಯ ಬ್ಯಾಂಕುಗಳಲ್ಲಿ ಈ ಕೆಟ್ಟ ಸಾಲಗಳ ಪ್ರಮಾಣ ಶೇ. 3.9ರಷ್ಟು ಇದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಜೂನ್ 28ರಂದು ಬಿಡುಗಡೆ ಮಾಡಿದ ಫೈನಾನ್ಷಿಯಲ್ ಸ್ಟೆಬಿಲಿಟಿ ವರದಿಯಲ್ಲಿ (Financial Stability Report) ಈ ಅಂಶ ಹೈಲೈಟ್ ಎನಿಸಿದೆ. ಕಳೆದ 10 ವರ್ಷಗಳಲ್ಲಿ ಇದು ಅತ್ಯಂತ ಕಡಿಮೆ ಕೆಟ್ಟ ಸಾಲ ಪ್ರಮಾಣ ಎಂದು ಹೇಳಲಾಗಿದೆ. ಇನ್ನು, ನಿವ್ವಳ ಅನುತ್ಪಾದಕ ಸಾಲದ ಪ್ರಮಾಣವೂ ಶೇ. 1ಕ್ಕೆ ಇಳಿದಿದೆ.

ಅನುತ್ಪಾದಕ ಸಾಲದ ಪ್ರಮಾಣ ಇಳಿದಿರುವುದು ಭಾರತೀಯ ಬ್ಯಾಂಕಿಂಗ್ ಕ್ಷೇತ್ರದ ಆರೋಗ್ಯದ ಸೂಚಕವಾಗಿದೆ. ಈಗ ಭಾರತದ ಕಮರ್ಷಿಯಲ್ ಬ್ಯಾಂಕುಗಳು ಆರ್​ಬಿಐ ನಿಗದಿಪಡಿಸಿದ ಕನಿಷ್ಠ ಬಂಡವಾಳ ಮಟ್ಟದ ಅವಶ್ಯಕತೆಯನ್ನು ಸುಲಭವಾಗಿ ಮುಟ್ಟಬಹುದು. ಯಾವುದೇ ಹೊಸ ಬಂಡವಾಳ ಒಳಹರಿವು ಇಲ್ಲದೆಯೇ ಒಂದು ವರ್ಷದವರೆಗೂ ಬ್ಯಾಂಕುಗಳು ಎನ್​ಪಿಎಗಳ ಒತ್ತಡ ತಡೆದುಕೊಳ್ಳುವಷ್ಟು ಸುದೃಢಗೊಂಡಿವೆ ಎಂದು ಆರ್​ಬಿಐನ ವರದಿ ಹೇಳುತ್ತದೆ.

 

ಕ್ರೆಡಿಟ್ ಕಾರ್ಡ್ ಸಾಲಗಳ ತಲೆನೋವು

ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಕ್ರೆಡಿಟ್ ಕಾರ್ಡ್ ವಿಭಾಗಗಳಲ್ಲಿ ಅನುತ್ಪಾದಕ ಸಾಲದ ಪ್ರಮಾಣ ಹೆಚ್ಚಿನ ಮಟ್ಟದಲ್ಲೇ ಇದೆ. ಆರ್​ಬಿಐ ಬಿಡುಗಡೆ ಮಾಡಿದ ಫೈನಾನ್ಷಿಯಲ್ ಸ್ಟೆಬಿಲಿಟಿ ರಿಪೋರ್ಟ್ ಪ್ರಕಾರ 2023 ಮಾರ್ಚ್ ತಿಂಗಳಲ್ಲಿ ಸರ್ಕಾರಿ ಬ್ಯಾಂಕುಗಳ ಕ್ರೆಡಿಟ್ ಕಾರ್ಡ್​ನ ಅನುತ್ಪಾದಕ ಸಾಲದ ಪ್ರಮಾಣ ಶೇ. 18ರಷ್ಟು ಇದೆ. ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ಇದು ಶೇ. 9ರಷ್ಟು ಮಾತ್ರ ಇತ್ತು. ಅಂದರೆ ಈ ಎನ್​ಪಿಎ ಬಹುತೇಕ ದ್ವಿಗುಣಗೊಂಡಿದೆ.

 

ಸರ್ಕಾರಿ ಬ್ಯಾಂಕುಗಳಲ್ಲಿ ಪರ್ಸನಲ್ ಲೋನ್ ಅಥವಾ ವೈಯಕ್ತಿಕ ಸಾಲದಲ್ಲಿ ಹೆಚ್ಚಿನ ಸಮಸ್ಯೆಯಾಗಿಲ್ಲ. ಈ ಸಾಲಗಳು ಬ್ಯಾಂಕುಗಳಿಗೆ ಒಳ್ಳೆಯ ಆದಾಯ ತಂದುಕೊಟ್ಟಿದೆ. ಆದರೆ ಕ್ರೆಡಿಟ್ ಕಾರ್ಡ್ ಸಾಲಗಳೇ ಈಗ ಈ ಸರ್ಕಾರಿ ಬ್ಯಾಂಕುಗಳಿಗೆ ತಲೆನೋವಾಗಿರುವುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:07 am, Thu, 29 June 23

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us