ಮುಂಬೈ, ನವೆಂಬರ್ 25: ಮಹಾರಾಷ್ಟ್ರ ಮೂಲದ ಅಭ್ಯುದಯ ಕೋ ಆಪರೇಟಿವ್ ಬ್ಯಾಂಕ್ನ (Abhyudaya Co-operative Bank) ಆಡಳಿತದ ಬಗ್ಗೆ ಅಸಮಾಧಾನಗೊಂಡಿರುವ ಆರ್ಬಿಐ ಈ ಬ್ಯಾಂಕ್ನ ಬೋರ್ಡ್ ಅನ್ನು ಸೂಪರ್ಸೀಡ್ (supersede) ಮಾಡಿದೆ. ಒಂದು ವರ್ಷ ಕಾಲ ಆರ್ಬಿಐ ಹೊಸ ಮಂಡಳಿಯನ್ನು ಈ ಬ್ಯಾಂಕ್ ನಿರ್ವಹಣೆಗೆಂದು (bank administration) ನೇಮಿಸಿದೆ. ವರದಿಯ ಪ್ರಕಾರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಮುಖ್ಯ ಜನರಲ್ ಮ್ಯಾನೇಜರ್ ಸತ್ಯಪ್ರಕಾಶ್ ಪಾಠಕ್ ಅವರು ಒಂದು ವರ್ಷ ಕಾಲ ಅಭ್ಯುದಯ ಸಹಕಾರಿ ಬ್ಯಾಂಕ್ನ ಆಡಳಿತಗಾರರಾಗಿರಲಿದ್ದಾರೆ. ಇವರಿಗೆ ಸಹಾಯವಾಗಿ ಸಲಹೆಗಾರರ ಸಮಿತಿಯೊಂದನ್ನೂ ಆರ್ಬಿಐ ರೂಪಿಸಿದೆ.
ಅಡ್ಮಿನಿಸ್ಟ್ರೇಟರ್: ಸತ್ಯಪ್ರಕಾಶ್ ಪಾಠಕ್, ಎಸ್ಬಿಐನ ಮಾಜಿ ಜನರಲ್ ಮ್ಯಾನೇಜರ್
ಸಲಹೆಗಾರರ ಸಮಿತಿ ಸದಸ್ಯರು
ಇದನ್ನೂ ಓದಿ: 19 ಫಾರೆಕ್ಸ್ ಟ್ರೇಡಿಂಗ್ ಸಂಸ್ಥೆಗಳು ಆರ್ಬಿಐನ ಅಲರ್ಟ್ ಪಟ್ಟಿಗೆ; ಒಟ್ಟು ಸಂಖ್ಯೆ 75ಕ್ಕೆ ಏರಿಕೆ
ಸರಿಯಾದ ಆಡಳಿತ ನಿರ್ವಹಣೆ ಇರಲಿಲ್ಲದ ಕಾರಣ ಅಭ್ಯುದಯ ಸಹಕಾರಿ ಬ್ಯಾಂಕ್ನ ಆಡಳಿತ ಮಂಡಳಿಯನ್ನು ಆರ್ಬಿಐ ಬದಲಿಸಿದೆ. ಅದು ಬಿಟ್ಟರೆ ಬೇರೆ ಬ್ಯಾಂಕಿಂಗ್ ಚಟುವಟಿಕೆಗಳು ಯಥಾಪ್ರಕಾರ ಇರಲಿವೆ. ಆರ್ಬಿಐ ಯಾವ ನಿರ್ಬಂಧಗಳನ್ನೂ ವಿಧಿಸಿಲ್ಲ. ಹೊಸ ಆಡಳಿತ ತಂಡ ಒಂದು ವರ್ಷದವರೆಗೆ ಸಹಕಾರಿ ಬ್ಯಾಂಕ್ನ ಉಸ್ತುವಾರಿ ನೋಡಿಕೊಳ್ಳುತ್ತದೆ. ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ.
ಮುಂಬೈನಲ್ಲಿ ಪ್ರಧಾನ ಕಛೇರಿ ಹೊಂದಿರುವ ಅಭ್ಯುದಯ ಸಹಕಾರಿ ಬ್ಯಾಂಕ್ ಮಹಾರಾಷ್ಟ್ರ, ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳಲ್ಲಿ 50ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ಮುಂಬೈನಲ್ಲೇ 30ಕ್ಕೂ ಹೆಚ್ಚು ಶಾಖೆಗಳಿವೆ. ಕರ್ನಾಟಕದಲ್ಲಿ ಉಡುಪಿ ಮತ್ತು ಮಂಗಳೂರಿನಲ್ಲಿ ಐದಾರು ಶಾಖೆಗಳಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ