ಸರ್ಕಾರದ ವ್ಯವಹಾರಗಳನ್ನು ನಡೆಸಲು ಪೇಮೆಂಟ್ಸ್ ಬ್ಯಾಂಕ್​ಗಳು, ಸಣ್ಣ ಹಣಕಾಸು ಬ್ಯಾಂಕ್​ಗಳಿಗೆ ಆರ್​ಬಿಐ ಅವಕಾಶ

| Updated By: Srinivas Mata

Updated on: Dec 15, 2021 | 6:21 PM

ಡಿಜಿಟಲ್ ಪೇಮೆಂಟ್ ಬ್ಯಾಂಕ್​ಗಳು ಸರ್ಕಾರದ ಪರವಾಗಿ ವ್ಯವಹಾರ ನಡೆಸುವುದಕ್ಕೆ ಅನುಮತಿ ನೀಡಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅನುಮತಿ ನೀಡಿದೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

ಸರ್ಕಾರದ ವ್ಯವಹಾರಗಳನ್ನು ನಡೆಸಲು ಪೇಮೆಂಟ್ಸ್ ಬ್ಯಾಂಕ್​ಗಳು, ಸಣ್ಣ ಹಣಕಾಸು ಬ್ಯಾಂಕ್​ಗಳಿಗೆ ಆರ್​ಬಿಐ ಅವಕಾಶ
ಆರ್​ಬಿಐ (ಸಾಂದರ್ಭಿಕ ಚಿತ್ರ)
Follow us on

ಸರ್ಕಾರಿ ವ್ಯವಹಾರ ನಡೆಸಲು ಶೆಡ್ಯೂಲ್ಡ್ ಪಾವತಿ ಬ್ಯಾಂಕ್‌ಗಳು ಮತ್ತು ಸಣ್ಣ ಹಣಕಾಸು ಬ್ಯಾಂಕ್​ಗಳಿಗೆ (ಎಸ್‌ಎಫ್‌ಬಿ) ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು (ಆರ್‌ಬಿಐ) ಡಿಸೆಂಬರ್ 15ರಂದು ಅವಕಾಶ ನೀಡಿದೆ ಎಂದು ಹೇಳಿದೆ. “ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯೊಂದಿಗೆ ಸಮಾಲೋಚಿಸಿ, ಶೆಡ್ಯೂಲ್ಡ್ ಪಾವತಿ ಬ್ಯಾಂಕ್‌ಗಳು ಮತ್ತು ಶೆಡ್ಯೂಲ್ಡ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ಗಳನ್ನು ಸರ್ಕಾರಿ ಏಜೆನ್ಸಿ ವ್ಯವಹಾರ ನಡೆಸಲು ಅರ್ಹವಾಗುವಂತೆ ಮಾಡಲು ನಿರ್ಧರಿಸಲಾಗಿದೆ,” ಎಂದು ಆರ್‌ಬಿಐ ಅಧಿಸೂಚನೆಯಲ್ಲಿ ತಿಳಿಸಿದೆ. “ಸರ್ಕಾರಿ ಏಜೆನ್ಸಿ ವ್ಯವಹಾರವನ್ನು ಕೈಗೊಳ್ಳಲು ಉದ್ದೇಶಿಸಿರುವ ಯಾವುದೇ ಪೇಮೆಂಟ್ಸ್ ಬ್ಯಾಂಕ್ ಅಥವಾ ಸಣ್ಣ ಹಣಕಾಸು ಬ್ಯಾಂಕ್​ನಿಂದ ಆರ್​ಬಿಐ ಜತೆಗಿನ ಒಪ್ಪಂದವನ್ನು ಕಾರ್ಯಗತಗೊಳಿಸಿದ ನಂತರ ಈ ಬ್ಯಾಂಕ್​ಗಳಿಗೆ ಸೂಚಿಸಲಾದ ನಿಯಂತ್ರಣ ಚೌಕಟ್ಟನ್ನು ಅನುಸರಿಸಿದರೆ ಆರ್​ಬಿಐ ಏಜೆಂಟ್ ಆಗಿ ನೇಮಿಸಬಹುದು,” ಎಂದು ಹೇಳಿದೆ.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ ಲಿಮಿಟೆಡ್​ ಅನ್ನು (Paytm Payments Bank Limited) ಡಿಸೆಂಬರ್ 9ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆ, 1934ರ ಎರಡನೇ ಶೆಡ್ಯೂಲ್​ನಲ್ಲಿ ಸೇರಿಸಲಾಗಿದೆ ಎಂದು ಹೇಳಲಾಗಿತ್ತು. ಶೆಡ್ಯೂಲ್ಡ್ ಪೇಮೆಂಟ್ಸ್ ಬ್ಯಾಂಕ್ ಆಗಿರುವುದರಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಈಗ ಹೊಸ ವ್ಯಾಪಾರ ಅವಕಾಶಗಳನ್ನು ಅನ್ವೇಷಿಸಬಹುದು ಎಂದು ಕಂಪೆನಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. “ಸರ್ಕಾರ ಮತ್ತು ಇತರ ದೊಡ್ಡ ನಿಗಮಗಳು ನೀಡಲಾದ ಪ್ರಸ್ತಾವನೆಗಳಿಗಾಗಿ ವಿನಂತಿ (RFP), ಪ್ರಾಥಮಿಕ ಹರಾಜುಗಳು, ಸ್ಥಿರ ದರ ಮತ್ತು ವೇರಿಯಬಲ್ ದರದ ರೆಪೋಗಳು ಮತ್ತು ರಿವರ್ಸ್ ರೆಪೋಗಳಲ್ಲಿ ಬ್ಯಾಂಕ್ ಭಾಗವಹಿಸಬಹುದು. ಜತೆಗೆ ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿಯಲ್ಲಿ ಭಾಗವಹಿಸಬಹುದು,” ಎಂದು ಅದು ಹೇಳಿದೆ.

ಅಲ್ಲದೆ, ಬ್ಯಾಂಕ್ ಈಗ ಸರ್ಕಾರ ನಡೆಸುವ ಹಣಕಾಸು ಸೇರ್ಪಡೆ ಯೋಜನೆಗಳಲ್ಲಿ ಪಾಲುದಾರರಾಗಲು ಅರ್ಹವಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಆರ್‌ಬಿಐ ಕಾಯ್ದೆ 1934ರ ಪ್ರಕಾರ, ತನ್ನ ವ್ಯವಹಾರಗಳನ್ನು ಠೇವಣಿದಾರರ ಹಿತಾಸಕ್ತಿಗಳಿಗೆ ಹಾನಿಕರ ರೀತಿಯಲ್ಲಿ ನಡೆಸುತ್ತಿಲ್ಲ ಎಂದು ಆರ್‌ಬಿಐಗೆ ತೃಪ್ತಿಪಡಿಸುವ ಬ್ಯಾಂಕ್‌ಗಳನ್ನು ಎರಡನೇ ಶೆಡ್ಯೂಲ್​ನಲ್ಲಿ ಸೇರಿಸಲಾಗಿದೆ. 2017ರ ಜನವರಿಯಲ್ಲಿ ಪೇಟಿಎಂ ತನ್ನ ಪಾವತಿ ಬ್ಯಾಂಕ್ ಅನ್ನು ಪ್ರಾರಂಭಿಸಲು ಆರ್​ಬಿಐ ಅನುಮೋದನೆಯನ್ನು ಪಡೆದುಕೊಂಡಿತು. ಕಂಪೆನಿಯ ಹೇಳಿಕೆಯ ಪ್ರಕಾರ, ಮಾರ್ಚ್ 31, 2021ರ ಹೊತ್ತಿಗೆ, ಪಾವತಿಗಳ ಬ್ಯಾಂಕ್ 6.4 ಕೋಟಿ ಉಳಿತಾಯ ಖಾತೆಗಳನ್ನು ಹೊಂದಿದೆ ಮತ್ತು ಉಳಿತಾಯ ಖಾತೆಗಳು, ಚಾಲ್ತಿ ಖಾತೆಗಳು, ಪಾಲುದಾರ ಬ್ಯಾಂಕ್‌ಗಳಲ್ಲಿನ ಸ್ಥಿರ ಠೇವಣಿಗಳು ಮತ್ತು ವ್ಯಾಲೆಟ್‌ಗಳಲ್ಲಿನ ಬ್ಯಾಲೆನ್ಸ್ ಸೇರಿದಂತೆ 5,200 ಕೋಟಿ ರೂ. ಇರಿಸಿಕೊಂಡಿದೆ.

ಇದನ್ನೂ ಓದಿ: Paytm Payments Bank: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ ಆರ್​ಬಿಐನಿಂದ ಷೆಡ್ಯೂಲ್ಡ್ ಬ್ಯಾಂಕ್​ ಸ್ಥಾನಮಾನ