AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Closing bell: ಷೇರುಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ 329 ಪಾಯಿಂಟ್ಸ್, ನಿಫ್ಟಿ 103 ಪಾಯಿಂಟ್ಸ್ ಕುಸಿತ

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಡಿಸೆಂಬರ್ 15ನೇ ತಾರೀಕಿನ ಬುಧವಾರ ಇಳಿಕೆ ಕಂಡಿದೆ. ನಿಫ್ಟಿಯಲ್ಲಿ ಪ್ರಮುಖವಾಗಿ ಏರಿಕೆ, ಇಳಿಕೆ ಕಂಡ ಪ್ರಮುಖ ಕಂಪೆನಿ ಷೇರುಗಳ ವಿವರ ಇಲ್ಲಿದೆ.

Closing bell: ಷೇರುಪೇಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ 329 ಪಾಯಿಂಟ್ಸ್, ನಿಫ್ಟಿ 103 ಪಾಯಿಂಟ್ಸ್ ಕುಸಿತ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Dec 15, 2021 | 5:08 PM

Share

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಡಿಸೆಂಬರ್ 15ನೇ ತಾರೀಕಿನ ಬುಧವಾರ ಇಳಿಕೆ ದಾಖಲಿಸಿದೆ. ನಿಫ್ಟಿ-50 ಸೂಚ್ಯಂಕವು 17,300 ಪಾಯಿಂಟ್ಸ್​​ಗಿಂತ ಕೆಳಗೆ ಇಳಿದಿದೆ. ಬುಧವಾರದ ದಿನಾಂತ್ಯಕ್ಕೆ ಸೆನ್ಸೆಕ್ಸ್ 329.06 ಪಾಯಿಂಟ್ಸ್ ಅಥವಾ ಶೇ 0.57ರಷ್ಟು ಇಳಿಕೆಯಾಗಿ 57,788.03 ಪಾಯಿಂಟ್ಸ್​ನೊಂದಿಗೆ ವ್ಯವಹಾರ ಮುಗಿಸಿದೆ. ಇನ್ನು ನಿಫ್ಟಿ 103.50 ಪಾಯಿಂಟ್ಸ್ ಅಥವಾ ಶೇ 0.60ರಷ್ಟು ಕುಸಿತವಾಗಿ 17,221.40 ಪಾಯಿಂಟ್ಸ್​ನೊಂದಿಗೆ ವಹಿವಾಟು ಚುಕ್ತಾ ಆಗಿದೆ. ಇಂದಿನ ವಹಿವಾಟಿನಲ್ಲಿ 1546 ಕಂಪೆನಿಗಳ ಷೇರು ಏರಿಕೆಯನ್ನು ದಾಖಲಿಸಿದರೆ, 1574 ಕಂಪೆನಿಗಳ ಷೇರು ಇಳಿಕೆಯನ್ನು ಕಂಡವು. ಮತ್ತು 90 ಕಂಪೆನಿಗಳ ಷೇರಿನ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ.

ಇನ್ನು ವಾಹನ ವಲಯವೊಂದನ್ನು ಹೊರತುಪಡಿಸಿದರೆ ಉಳಿದ ವಲಯಗಳು ಇಳಿಯಲ್ಲೇ ದಿನದ ವ್ಯವಹಾರವನ್ನು ಮುಗಿಸಿದವು. ಮಾಹಿತಿ ತಂತ್ರಜ್ಞಾನ, ಲೋಹ, ರಿಯಾಲ್ಟಿ ಮತ್ತು ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಸೂಚ್ಯಂಕಗಳು ತಲಾ ಶೇ 1ರಷ್ಟು ಕುಸಿತ ಕಂಡವು. ಬಿಎಸ್​ಇ ಮಿಡ್​ಕ್ಯಾಪ್​ ಸೂಚ್ಯಂಕ ಶೇ 0.6ರಷ್ಟು ಇಳಿದರೆ, ಸ್ಮಾಲ್​ಕ್ಯಾಪ್ ಸೂಚ್ಯಂಕವು ಶೇ 0.35ರಷ್ಟು ಕುಸಿಯಿತು.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ ಸನ್​ ಫಾರ್ಮಾ ಶೇ 2.52 ಕೊಟಕ್ ಮಹೀಂದ್ರಾ ಶೇ 1.47 ಮಹೀಂದ್ರಾ ಅಂಡ್ ಮಹೀಂದ್ರಾ ಶೇ 1.12 ಮಾರುತಿ ಸುಜುಕಿ ಶೇ 1.00 ಹೀರೋ ಮೋಟೋಕಾರ್ಪ್ ಶೇ 0.94

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ ಬಜಾಜ್ ಫೈನಾನ್ಸ್ ಶೇ -3.09 ಬಜಾಜ್ ಫಿನ್​ಸರ್ವ್ ಶೇ -2.70 ಅದಾನಿ ಪೋರ್ಟ್ಸ್ ಶೇ -2.38 ಒಎನ್​ಜಿಸಿ ಶೇ -2.01 ಐಟಿಸಿ ಶೇ -1.99

ಇದನ್ನೂ ಓದಿ: Multibagger Stocks: ಈ ಕಂಪೆನಿ ಷೇರುಗಳ ಮೇಲೆ ಮಾಡಿದ ರೂ. 1 ಲಕ್ಷದ ಹೂಡಿಕೆ 3 ವರ್ಷದಲ್ಲಿ 5.67 ಕೋಟಿ ರೂಪಾಯಿ

ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..