RBI: ಆರ್​ಬಿಐನಿಂದ ಕೇಂದ್ರಕ್ಕೆ 87,416 ಕೋಟಿ ಡಿವಿಡೆಂಡ್; ರಿಸರ್ವ್ ಬ್ಯಾಂಕ್​ಗೆ ಆದಾಯ ಎಲ್ಲಿಂದ? ಇಲ್ಲಿದೆ ಡೀಟೇಲ್ಸ್

Income Source Of Reserve Bank of India: 2022-23ರ ಸಾಲಿಗೆ ಕೇಂದ್ರ ಸರ್ಕಾರಕ್ಕೆ ಆರ್​ಬಿಐ 87,416 ಕೋಟಿ ರೂ ಡಿವಿಡೆಂಡ್ ಕೊಡಲು ನಿರ್ಧರಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಎಲ್ಲಿಂದ ಆದಾಯ ಗಳಿಸಉತ್ತದೆ, ಈ ವಿವರ ಇಲ್ಲಿದೆ....

RBI: ಆರ್​ಬಿಐನಿಂದ ಕೇಂದ್ರಕ್ಕೆ 87,416 ಕೋಟಿ ಡಿವಿಡೆಂಡ್; ರಿಸರ್ವ್ ಬ್ಯಾಂಕ್​ಗೆ ಆದಾಯ ಎಲ್ಲಿಂದ? ಇಲ್ಲಿದೆ ಡೀಟೇಲ್ಸ್
ಭಾರತೀಯ ರಿಸರ್ವ್ ಬ್ಯಾಂಕ್

Updated on: May 19, 2023 | 6:27 PM

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2022-23ರ ಹಣಕಾಸು ವರ್ಷದ ಹೆಚ್ಚುವರಿ ಹಣವಾಗಿ ಕೇಂದ್ರ ಸರ್ಕಾರಕ್ಕೆ 87,416 ಕೋಟಿ ರೂ ಹಣ ರವಾನಿಸಲಿದೆ. ಆರ್​ಬಿಐನ ಕೇಂದ್ರೀಯ ನಿರ್ದೇಶಕರ ಮಂಡಳಿ (RBI Central Board of Directors) ಇದಕ್ಕೆ ಅನುಮೋದನೆ ನೀಡಿದೆ. ಈ ಹೆಚ್ಚುವರಿ ಹಣವು ಆರ್​ಬಿಐನ ಲಾಭಾಂಶವಾಗಿದ್ದು ಕೇಂದ್ರ ಸರ್ಕಾರ ನಿರೀಕ್ಷಿಸಿದ್ದಕ್ಕಿಂತ ಬಹಳ ಹೆಚ್ಚಿದೆ. ಇತ್ತೀಚಿನ ಕೆಲ ವರ್ಷಗಳಿಂದ ಆರ್​ಬಿಐನ ಡಿವಿಡೆಂಡ್​ಗಳು ಸರ್ಕಾರಕ್ಕೆ ಒಳ್ಳೆಯ ಅದಾಯ ಮೂಲಗಲಾಗೇ ಪರಿಣಮಿಸಿವೆ.

ಕೇಂದ್ರ ಸರ್ಕಾರ ಕಳೆದ ಬಾರಿಯ ಬಜೆಟ್​ನಲ್ಲಿ ಆರ್​ಬಿಐನಿಂದ 48,000 ಕೋಟಿ ರೂ ಆಸುಪಾಸಿನ ಮೊತ್ತದಷ್ಟು ಲಾಭಾಂಶ ಬರಬಹುದು ಎಂದು ನಿರೀಕ್ಷಿಸಿತ್ತು. ಆದರೆ, ಈ ಎಣಿಕೆಗಿಂತಲೂ ಬಹಳ ಹೆಚ್ಚು, ಅಂದರೆ 87,416 ಕೋಟಿ ರೂ ಮೊತ್ತದಷ್ಟು ಡಿವಿಡೆಂಡ್ ಅನ್ನು ಆರ್​ಬಿಐ ಕೇಂದ್ರಕ್ಕೆ ದಯಪಾಲಿಸುತ್ತಿದೆ. ಈ ವರ್ಷ ನಿರೀಕ್ಷೆಮೀರಿ ಆರ್​ಬಿಐ ಲಾಭ ಗಳಿಸಲು ಸಾಧ್ಯವಾಗಿದ್ದು ವಿದೇಶೀ ಕರೆನ್ಸಿಗಳ ಮಾರಾಟದಿಂದ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿClean Chit: ಅದಾನಿ ಗ್ರೂಪ್​ಗೆ ಕ್ಲೀನ್ ಚಿಟ್ ಕೊಟ್ಟ ಸುಪ್ರೀಂ ಕೋರ್ಟ್ ಸಮಿತಿ; ಕೃತಕವಾಗಿ ಷೇರು ಬೆಲೆ ಹೆಚ್ಚಿಸಿದ್ದಕ್ಕೆ ಪುರಾವೆ ಇಲ್ಲ ಎಂದ ತಜ್ಞರು

ಹಿಂದಿನ ವರ್ಷಗಳಲ್ಲಿ ಕೇಂದ್ರಕ್ಕೆ ಆರ್​ಬಿಐ ನೀಡಿದ ಡಿವಿಡೆಂಡ್ ಹಣ ಎಷ್ಟು?

  • 2022-23: 87,416 ಕೋಟಿ ರೂ (ಈಗ ಘೋಷಣೆ ಆಗಿದ್ದು)
  • 2021-22: 30,307 ಕೋಟಿ ರೂ
  • 2020-21: 99,122 ಕೋಟಿ ರೂ
  • 2019-20: 57,128 ಕೋಟಿ ರೂ
  • 2018-19: 1,23,414 ಕೋಟಿ ರೂ
  • 2017-18: 50,000 ಕೋಟಿ ರೂ
  • 2016-17: 30,569 ಕೋಟಿ ರೂ

ಇದನ್ನೂ ಓದಿShein Comeback: ರಿಲಾಯನ್ಸ್ ಗವಾಕ್ಷಿಲಿ ಶೀನ್; ಬ್ಯಾನ್ ಆಗಿದ್ದ ಚೀನಾದ ಫ್ಯಾಷನ್ ದೈತ್ಯ ಮತ್ತೆ ಅಖಾಡಕ್ಕೆ; ಶೀನ್​ಗೆ ವೇದಿಕೆಯಾಗಲಿದೆ ರಿಲಾಯನ್ಸ್ ರೀಟೇಲ್

ಭಾರತೀಯ ರಿಸರ್ವ್ ಬ್ಯಾಂಕ್​ಗೆ ಎಲ್ಲಿಂದ ಆದಾಯ ಬರುತ್ತದೆ?

  • ಕಮರ್ಷಿಯಲ್ ಬ್ಯಾಂಕು, ಹಣಕಾಸು ಸಂಸ್ಥೆಗಳಿಗೆ ಆರ್​ಬಿಐ ರೆಪೋ ದರದಲ್ಲಿ ಸಾಲ ಒದಗಿಸುತ್ತದೆ. ಅದರಿಂದ ಬರುವ ಬಡ್ಡಿ ಒಂದು ಆದಾಯ ಮೂಲ.
  • ಫಾರೀನ್ ಕರೆನ್ಸಿ ಅಸೆಟ್ಸ್ ಅಥವಾ ವಿದೇಶೀ ಕರೆನ್ಸಿಗಳಿಂದ ಆರ್​ಬಿಐ ಬಡ್ಡಿ ಗಳಿಸುತ್ತದೆ.
  • ಫಾರೀನ್ ಕರೆನ್ಸಿಗಳ ಮಾರಾಟದಿಂದ ಈ ಬಾರಿ 68,000 ಕೋಟಿಗೂ ಹೆಚ್ಚು ಲಾಭ ಮಾಡಿಕೊಂಡಿತು ಆರ್​ಬಿಐ
  • ರುಪೀ ಸೆಕ್ಯೂರಿಟೀಸ್​ಗಳ ಮೂಲಕ ಬಡ್ಡಿಯಿಂದ ಆದಾಯ
  • ಎಲ್​ಎಎಫ್ ಮತ್ತು ಎಂಎಸ್​ಎಫ್ ಮೂಲಕ ಬಡ್ಡಿ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us