Shein Comeback: ರಿಲಾಯನ್ಸ್ ಗವಾಕ್ಷಿಲಿ ಶೀನ್; ಬ್ಯಾನ್ ಆಗಿದ್ದ ಚೀನಾದ ಫ್ಯಾಷನ್ ದೈತ್ಯ ಮತ್ತೆ ಅಖಾಡಕ್ಕೆ; ಶೀನ್​ಗೆ ವೇದಿಕೆಯಾಗಲಿದೆ ರಿಲಾಯನ್ಸ್ ರೀಟೇಲ್

Banned Chinese Shein Partnership with Reliance Retail: ಎರಡು ವರ್ಷದ ಹಿಂದೆ ಕೇಂದ್ರ ಸರ್ಕಾರ ನಿಷೇಧ ಮಾಡಿದ್ದ ಚೀನಾದ ಫ್ಯಾಷನ್ ಕಂಪನಿ ಶೀನ್ ಈಗ ರಿಲಾಯನ್ಸ್ ರೀಟೇಲ್ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಕೇಂದ್ರದಿಂದಲೂ ಅನುಮೋದನೆ ಸಿಕ್ಕಿರುವುದು ತಿಳಿದುಬಂದಿದೆ.

Shein Comeback: ರಿಲಾಯನ್ಸ್ ಗವಾಕ್ಷಿಲಿ ಶೀನ್; ಬ್ಯಾನ್ ಆಗಿದ್ದ ಚೀನಾದ ಫ್ಯಾಷನ್ ದೈತ್ಯ ಮತ್ತೆ ಅಖಾಡಕ್ಕೆ; ಶೀನ್​ಗೆ ವೇದಿಕೆಯಾಗಲಿದೆ ರಿಲಾಯನ್ಸ್ ರೀಟೇಲ್
ಶೀನ್ ಫ್ಯಾಷನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 19, 2023 | 5:10 PM

ನವದೆಹಲಿ: ಚೀನಾದ ಶೀನ್ (Shein) ವಿಶ್ವದ ಅತಿದೊಡ್ಡ ಫ್ಯಾಷನ್ ಸಂಸ್ಥೆಗಳಲ್ಲೊಂದಾಗಿದ್ದು, ರಿಲಾಯನ್ಸ್ ರೀಟೇಲ್ ಜೊತೆ ಸಹಭಾಗಿತ್ವ (Partnership) ಒಪ್ಪಂದ ಮಾಡಿಕೊಂಡಿದೆ. ಎರಡು ವರ್ಷದ ಹಿಂದೆ ಕೇಂದ್ರ ಸರ್ಕಾರ ನಿಷೇಧಿಸಿದ ವಿವಿಧ ಚೀನಾ ಆ್ಯಪ್​ಗಳಲ್ಲಿ ಶೀನ್​ನದ್ದೂ ಒಂದು. ಆದರೆ, ರಿಲಾಯನ್ಸ್ ರೀಟೇಲ್ (Reliance Retail) ಮೂಲಕ ಪರೋಕ್ಷವಾಗಿ ಶೀನ್ ಭಾರತದ ಅಖಾಡಕ್ಕೆ ಧುಮುಕಲು ಸಿದ್ಧವಾಗಿದೆ. ಅಮೆರಿಕದಲ್ಲೂ ಸಮಸ್ಯೆಗಳನ್ನು ಎದುರಿಸುತ್ತಿರುವ ಈ ಫ್ಯಾಷನ್ ದೈತ್ಯ ಸಂಸ್ಥೆಗೆ ಈಗ ರಿಲಾಯನ್ಸ್ ರೀಟೇಲ್ ಒಳ್ಳೆಯ ವಾಹಕವಾಗಿ ಪರಿಣಮಿಸುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ, ರಿಲಾಯನ್ಸ್ ರೀಟೇಲ್ ಮೂಲಕ ಶೀನ್ ಭಾರತದಿಂದ ತನ್ನ ವಸ್ತುಗಳನ್ನು ಇತರ ದೇಶಗಳಿಗೆ ಸರಬರಾಜು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಭಾರತದಲ್ಲಿ ತನ್ನ ಆ್ಯಪ್ ಮೂಲಕ ಉತ್ಪನ್ನಗಳನ್ನು ಮಾರಾಟ ಮಾಡದಂತೆ ಎರಡು ವರ್ಷದ ಹಿಂದೆ ಭಾರತ ಸರ್ಕಾರ ಶೀನ್​ಗೆ ನಿಷೇಧ ಹೇರಿತ್ತು. ಸದ್ಯ ತಿಳಿದುಬಂದಿರುವ ಮಾಹಿತಿ ಪ್ರಕಾರ, ರಿಲಾಯನ್ಸ್ ರೀಟೇಲ್ ಮತ್ತು ಶೀನ್ ನಡುವಿನ ಒಪ್ಪಂದಕ್ಕೆ ಸರ್ಕಾರವೇ ಒಪ್ಪಿಗೆ ಮುದ್ರೆ ಹಾಕಿದೆ.

ಇದನ್ನೂ ಓದಿClean Chit: ಅದಾನಿ ಗ್ರೂಪ್​ಗೆ ಕ್ಲೀನ್ ಚಿಟ್ ಕೊಟ್ಟ ಸುಪ್ರೀಂ ಕೋರ್ಟ್ ಸಮಿತಿ; ಕೃತಕವಾಗಿ ಷೇರು ಬೆಲೆ ಹೆಚ್ಚಿಸಿದ್ದಕ್ಕೆ ಪುರಾವೆ ಇಲ್ಲ ಎಂದ ತಜ್ಞರು

ಭಾರತದ ಮಾರುಕಟ್ಟೆ ಮತ್ತು ರಿಲಾಯನ್ಸ್ ರೀಟೇಲ್ ವೇದಿಕೆಯನ್ನು ಶೀನ್ ಹೇಗೆ ಉಪಯೋಗಿಸುತ್ತದೆ?

ಚೀನಾದ ಶೀನ್ ಸಂಸ್ಥೆ ಬಹಳ ಟ್ರೆಂಡಿಯಾಗಿರುವ ಮತ್ತು ಕಡಿಮೆ ಬೆಲೆಯಲ್ಲಿರುವ ಉಡುಪುಗಳಿಗೆ ಹೆಸರುವಾಸಿಯಾಗಿದೆ. ವಿಶ್ವದ ಅಗ್ರ ಫ್ಯಾಷನ್ ಸಂಸ್ಥೆಗಳಲ್ಲಿ ಅದೂ ಒಂದು. ರಿಲಾಯನ್ಸ್ ರೀಟೇಲ್ ಜೊತೆ ಒಪ್ಪಂದ ಮಾಡಿಕೊಂಡಿರುವ ಶೀನ್ ಭಾರತದ ವಿವಿಧೆಡೆ ಮಳಿಗೆಗಳನ್ನು ಸ್ಥಾಪಿಸಬಹುದು. ರಿಲಾಯನ್ಸ್​ನ ಆಜಿಯೋದ ಆನ್​ಲೈನ್ ಪ್ಲಾಟ್​ಫಾರ್ಮ್​ನಲ್ಲೂ ಶೀನ್ ಉಡುಪುಗಳು ಪ್ರದರ್ಶನಗೊಳ್ಳಬಹುದು.

ಇದಕ್ಕಿಂತ ಹೆಚ್ಚಾಗಿ, ಜಾಗತಿಕವಾಗಿ ಉಡುಪುಗಳ ಸರಬರಾಜಿಗಾಗಿ ಶೀನ್ ಕಂಪನಿ ಭಾರತದಿಂದ ಬಟ್ಟೆಯನ್ನು ಪಡೆಯಬಹುದು. ಶೀನ್ ಕಂಪನಿ ತನ್ನ ಫ್ಯಾಷನ್ ಉಡುಪುಗಳನ್ನು ಭಾರತದಲ್ಲೇ ತಯಾರಿಸಬಹುದು. ಇಲ್ಲಿ ತಯಾರಾಗುವ ಉಡುಪುಗಳನ್ನು ಭಾರತ ಹಾಗೂ ಬೇರೆ ದೇಶಗಳ ಮಾರುಕಟ್ಟೆಗೆ ಸರಬರಾಜು ಮಾಡಬಹುದು.

ಇದನ್ನೂ ಓದಿGreen Card: ಅಮೆರಿಕದ ಗ್ರೀನ್ ಕಾರ್ಡ್ ಪಡೆಯಲು ದಶಕದಿಂದ ಕಾಯುತ್ತಿರುವ ಭಾರತೀಯರು; ಯಾಕಿಷ್ಟು ವಿಳಂಬ? ಬಯಲಾಯ್ತು ಕಾರಣ

ಚೀನಾದ ಶೀನ್ ಸಂಸ್ಥೆ ಕಳೆದ ಬಾರಿಯ ಹಣಕಾಸು ವರ್ಷದಲ್ಲಿ 23 ಬಿಲಿಯನ್ ಡಾಲರ್​ನಷ್ಟು (ಸುಮಾರು 1.9 ಲಕ್ಷ ಕೋಟಿ ರೂ) ಆದಾಯ ಗಳಿಸಿತ್ತು ಎಂದು ವರದಿಗಳು ಹೇಳುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್