Redmi Note 17 Pro: 10,000mAh ಬ್ಯಾಟರಿಯ ರೆಡ್ಮಿ ನೋಟ್ 17 ಪ್ರೊ ಮ್ಯಾಕ್ಸ್ ಭಾರತದಲ್ಲಿ ಬಿಡುಗಡೆ: ಬೆಲೆ, ವೈಶಿಷ್ಟ್ಯಗಳೇನು?

ರೆಡ್ಮಿ ನೋಟ್ 17 ಪ್ರೊ ಮತ್ತು ರೆಡ್ಮಿ ನೋಟ್ 17 ಪ್ರೊ ಮ್ಯಾಕ್ಸ್ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಬಿಡುಗಡೆಯಾಗಿವೆ. ಈ ಪೈಕಿ ರೆಡ್ಮಿ ನೋಟ್ 17 ಪ್ರೊ ಮ್ಯಾಕ್ಸ್ 10,000mAh ಬ್ಯಾಟರಿ, 100W ವೇಗದ ಚಾರ್ಜಿಂಗ್, 1.5ಕೆ ಅಮೋಲೆಡ್ ಡಿಸ್‌ಪ್ಲೇ ಮತ್ತು 50 ಮೆಗಾಪಿಕ್ಸೆಲ್ ಕ್ಯಾಮೆರಾ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಬೆಲೆ ಮತ್ತು ಮಾರಾಟದ ವಿವರ ಇಲ್ಲಿದೆ.

Redmi Note 17 Pro: 10,000mAh ಬ್ಯಾಟರಿಯ ರೆಡ್ಮಿ ನೋಟ್ 17 ಪ್ರೊ ಮ್ಯಾಕ್ಸ್ ಭಾರತದಲ್ಲಿ ಬಿಡುಗಡೆ: ಬೆಲೆ, ವೈಶಿಷ್ಟ್ಯಗಳೇನು?
Redmi Note 17 Pro And Redmi Note 17 Pro Max
Edited By:

Updated on: Sep 15, 2026 | 3:10 PM

ಮುಖ್ಯಾಂಶಗಳು

  • 10,000mAh ಬ್ಯಾಟರಿಯ ರೆಡ್ಮಿ ಫೋನ್‌ ಬೆಲೆ ಎಷ್ಟು?
  • ರೆಡ್ಮಿ ನೋಟ್ 17 ಪ್ರೊ ಮ್ಯಾಕ್ಸ್‌ನಲ್ಲಿ ಏನೆಲ್ಲ ವಿಶೇಷತೆ?
  • 100W ಚಾರ್ಜಿಂಗ್ ಹೊಂದಿರುವ ಹೊಸ ರೆಡ್ಮಿ ಫೋನ್‌ ಯಾವುದು?

ಶಿಯೋಮಿಯ (Xiaomi) ಉಪಬ್ರ್ಯಾಂಡ್‌ ಆಗಿರುವ ರೆಡ್ಮಿ ಭಾರತದಲ್ಲಿ ತನ್ನ ಹೊಸ ನೋಟ್ 17 ಸರಣಿಯ ಎರಡು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ರೆಡ್ಮಿ ನೋಟ್ 17 ಪ್ರೊ ಮತ್ತು ರೆಡ್ಮಿ ನೋಟ್ 17 ಪ್ರೊ ಮ್ಯಾಕ್ಸ್‌ ಮಾದರಿಗಳು ಈ ಸರಣಿಗೆ ಸೇರ್ಪಡೆಯಾಗಿವೆ. ಈ ಪೈಕಿ ರೆಡ್ಮಿ ನೋಟ್ 17 ಪ್ರೊ ಮ್ಯಾಕ್ಸ್‌ 10,000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಹೊಂದಿರುವುದು ಪ್ರಮುಖ ವಿಶೇಷತೆಯಾಗಿದೆ. ಎರಡೂ ಫೋನ್‌ಗಳ ಫೀಚರ್ಸ್, ಬೆಲೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಲೆ ಎಷ್ಟು?

ಭಾರತದಲ್ಲಿ ರೆಡ್ಮಿ ನೋಟ್ 17 ಪ್ರೊ ಬೆಲೆ 8GB RAM ಮತ್ತು 128GB ಸಂಗ್ರಹ ಸಾಮರ್ಥ್ಯದ ಮೂಲ ಮಾದರಿಗೆ ₹36,999ರಿಂದ ಆರಂಭವಾಗುತ್ತದೆ. 8GB RAM ಮತ್ತು 256GB ಸಂಗ್ರಹ ಸಾಮರ್ಥ್ಯದ ಮತ್ತೊಂದು ಮಾದರಿಯ ಬೆಲೆ ₹39,999. ಇನ್ನು ರೆಡ್ಮಿ ನೋಟ್ 17 ಪ್ರೊ ಮ್ಯಾಕ್ಸ್‌ನ 8GB RAM ಮತ್ತು 256GB ಸಂಗ್ರಹ ಸಾಮರ್ಥ್ಯದ ಮಾದರಿಗೆ ₹49,999 ಬೆಲೆ ನಿಗದಿಪಡಿಸಲಾಗಿದೆ. 12GB RAM ಮತ್ತು 256GB ಸಂಗ್ರಹ ಸಾಮರ್ಥ್ಯದ ಉನ್ನತ ಮಾದರಿಯ ಬೆಲೆ ₹55,999.

ರೆಡ್ಮಿ ನೋಟ್ 17 ಪ್ರೊ ಸೆಪ್ಟೆಂಬರ್ 17ರಿಂದ ಅಮೆಜಾನ್ ಮೂಲಕ ಮಾರಾಟವಾಗಲಿದೆ. ರೆಡ್ಮಿ ನೋಟ್ 17 ಪ್ರೊ ಮ್ಯಾಕ್ಸ್‌ ಸೆಪ್ಟೆಂಬರ್ 23ರಿಂದ ಮಾರಾಟಕ್ಕೆ ಬರಲಿದೆ.

ರೆಡ್ಮಿ ನೋಟ್ 17 ಪ್ರೊ ಮ್ಯಾಕ್ಸ್‌ ವೈಶಿಷ್ಟ್ಯಗಳು

ರೆಡ್ಮಿ ನೋಟ್ 17 ಪ್ರೊ ಮ್ಯಾಕ್ಸ್‌ 6.83 ಇಂಚಿನ 1.5ಕೆ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ದರ, ಎಚ್‌ಡಿಆರ್10+ ಮತ್ತು ಡಾಲ್ಬಿ ವಿಷನ್ ಬೆಂಬಲವನ್ನು ಹೊಂದಿದೆ. ಪರದೆಯನ್ನು ಒದ್ದೆಯಾದ ಬೆರಳುಗಳಿಂದ ಬಳಸಲು ಸಹಾಯ ಮಾಡುವ ವೆಟ್ ಟಚ್ 2.0 ವೈಶಿಷ್ಟ್ಯವೂ ಇದೆ.

ಕಾರ್ಯಕ್ಷಮತೆಗಾಗಿ ಕ್ವಾಲ್‌ಕಾಮ್‌ನ 4 ನ್ಯಾನೋಮೀಟರ್ ಆಧಾರಿತ ಸ್ನ್ಯಾಪ್‌ಡ್ರ್ಯಾಗನ್ 6 ಜೆನ್ 5 ಪ್ರೊಸೆಸರ್ ನೀಡಲಾಗಿದೆ. ಆಂಡ್ರಾಯ್ಡ್ 16 ಆಧಾರಿತ ಹೈಪರ್‌ಓಎಸ್ 3ನಲ್ಲಿ ಕಾರ್ಯನಿರ್ವಹಿಸಲಿದ್ದು, ನಾಲ್ಕು ವರ್ಷಗಳ ಆಪರೇಟಿಂಗ್ ಸಿಸ್ಟಂ ನವೀಕರಣ ಮತ್ತು ಆರು ವರ್ಷಗಳ ಭದ್ರತಾ ನವೀಕರಣ ನೀಡುವುದಾಗಿ ಕಂಪನಿ ಹೇಳಿದೆ.

iPhone Offer: ಐಫೋನ್ 18 ರಿಲೀಸ್ ಬೆನ್ನಲ್ಲೇ ಐಫೋನ್ 17 ಪ್ರೊ, ಪ್ರೊ ಮ್ಯಾಕ್ಸ್ ಬೆಲೆಯಲ್ಲಿ ಭಾರಿ ಇಳಿಕೆ

ಕ್ಯಾಮೆರಾ ಮತ್ತು ಬ್ಯಾಟರಿ

ರೆಡ್ಮಿ ನೋಟ್ 17 ಪ್ರೊ ಮ್ಯಾಕ್ಸ್‌ನ ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಇದೆ. ಮುಖ್ಯ ಕ್ಯಾಮೆರಾದಲ್ಲಿ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಸೌಲಭ್ಯವಿದೆ. ಮುಂಭಾಗದಲ್ಲಿ 32 ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ಈ ಫೋನ್‌ನಲ್ಲಿ 4ಕೆ ಗುಣಮಟ್ಟದಲ್ಲಿ ಸೆಕೆಂಡ್‌ಗೆ 30 ಫ್ರೇಮ್‌ಗಳವರೆಗೆ ವಿಡಿಯೊ ರೆಕಾರ್ಡ್ ಮಾಡಬಹುದು.

ಫೋನ್‌ನ ದೊಡ್ಡ ಆಕರ್ಷಣೆ 10,000mAh ಸಾಮರ್ಥ್ಯದ ಬ್ಯಾಟರಿ. ಇದು 100W ವೈರ್ಡ್ ಫಾಸ್ಟ್ ಚಾರ್ಜಿಂಗ್ ಮತ್ತು 27W ವೈರ್ಡ್ ರಿವರ್ಸ್ ಚಾರ್ಜಿಂಗ್ ಬೆಂಬಲಿಸುತ್ತದೆ. ಜೊತೆಗೆ 5ಜಿ, 4ಜಿ ಎಲ್‌ಟಿಇ, ವೈ-ಫೈ, ಬ್ಲೂಟೂತ್ 6.0 ಮತ್ತು ಯುಎಸ್‌ಬಿ ಟೈಪ್-ಸಿ ಸಂಪರ್ಕ ಸೌಲಭ್ಯಗಳಿವೆ.

ಇನ್ನು ರೆಡ್ಮಿ ನೋಟ್ 17 ಪ್ರೊ ಮಾದರಿಯಲ್ಲೂ 6.83 ಇಂಚಿನ ಡಿಸ್‌ಪ್ಲೇ ಮತ್ತು ಇದೇ ರೀತಿಯ ಸಾಫ್ಟ್‌ವೇರ್ ಸೌಲಭ್ಯಗಳಿವೆ. ಆದರೆ ಇದರಲ್ಲಿ ಸ್ನ್ಯಾಪ್‌ಡ್ರ್ಯಾಗನ್ 6ಎಸ್ ಜೆನ್ 4 ಪ್ರೊಸೆಸರ್, 16 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಮತ್ತು 9,000mAh ಬ್ಯಾಟರಿ ನೀಡಲಾಗಿದೆ. ಇದು 67W ಫಾಸ್ಟ್ ಚಾರ್ಜಿಂಗ್ ಬೆಂಬಲಿಸುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us