ರಿಲಯನ್ಸ್ ಇಂಡಸ್ಟ್ರೀಸ್ನ ಮುಕೇಶ್ ಅಂಬಾನಿ ಅವರು ತಮ್ಮ ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋ ಐಪಿಒ ಸುಮಾರು 100 ಶತಕೋಟಿ ಡಾಲರ್ ಉದ್ಯಮ ಮೌಲ್ಯಕ್ಕೆ ಈ ವರ್ಷ ಬಿಡುಗಡೆ ಮಾಡಬಹುದು ಎಂದು ಬ್ರೋಕರೇಜ್ ಸಂಸ್ಥೆ CLSA ಸಂಶೋಧನಾ ಟಿಪ್ಪಣಿಯಲ್ಲಿ ತಿಳಿಸಿದೆ. 2020ನೇ ಇಸವಿಯಲ್ಲಿ ಸುಮಾರು ಶೇ 10ರಷ್ಟು ಫೇಸ್‌ಬುಕ್ ಮತ್ತು ಶೇ 8ರಷ್ಟು ಗೂಗಲ್‌ಗೆ ಸೇರಿ ಒಟ್ಟು 13 ಹೂಡಿಕೆದಾರರಿಗೆ ಶೇ 33ರಷ್ಟು ಪಾಲನ್ನು ರಿಲಯನ್ಸ್ನ ಟೆಲಿಕಾಂ ಅಂಗಸಂಸ್ಥೆ ರಿಲಯನ್ಸ್ ಜಿಯೋದಿಂದ ಮಾರಾಟ ಮಾಡಿದ ನಂತರ IPO/ಪ್ರತ್ಯೇಕ ಲಿಸ್ಟಿಂಗ್ ನೋಡಬಹುದು ಎಂದು CLSA ವಿಶ್ಲೇಷಕರು ಹೇಳಿದ್ದಾರೆ. ರಿಲಯನ್ಸ್ ಜಿಯೋ 2021ರ ಅಕ್ಟೋಬರ್ ಅಂತ್ಯದ ವೇಳೆಗೆ 426.5 ಮಿಲಿಯನ್ ಮೊಬೈಲ್ ಚಂದಾದಾರರನ್ನು ಹೊಂದಿರುವ ದೇಶದ ಅತಿದೊಡ್ಡ ಟೆಲಿಕಾಂ ಸೇವಾ ಪೂರೈಕೆದಾರರಾಗಿದ್ದು, TRAI ಬಿಡುಗಡೆ ಮಾಡಿದ ಮಾಹಿತಿಯು ಈ ಅಂಕಿ- ಅಂಶವನ್ನು ತೋರಿಸಿದೆ.
ರಿಲಯನ್ಸ್ ಜಿಯೋವನ್ನು ಪ್ರತ್ಯೇಕವಾಗಿ ಲಿಸ್ಟಿಂಗ್ ಮಾಡುವುದರಿಂದ ಭಾರತದಲ್ಲಿ ಟೆಲಿಕಾಂ ವಲಯಕ್ಕೆ ವೇಗ ತರಬಹುದು ಎಂದು CLSA ಹೇಳಿದೆ. ವಿಶ್ಲೇಷಕರು ಹೇಳುವಂತೆ, ರಿಲಯನ್ಸ್ ಜಿಯೋ 11.5x EV/Ebitdaನಲ್ಲಿ 99 ಶತಕೋಟಿ ಡಾಲರ್ ಉದ್ಯಮ ಮೌಲ್ಯವನ್ನು ಹೊಂದಿದೆ. ಇದರಲ್ಲಿ ಜಿಯೋ ಫೈಬರ್ನ (JioFiber) 5 ಶತಕೋಟಿ ಡಾಲರ್ ಉದ್ಯಮ ಮೌಲ್ಯವನ್ನು ಒಳಗೊಂಡಿದೆ. ಬ್ರೋಕರೇಜ್ ಸಂಸ್ಥೆಗಳ ಪ್ರಕಾರ, ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದ ಅಂತ್ಯದ ವೇಳೆಗೆ ರಿಲಯನ್ಸ್ ಜಿಯೋ ಒಟ್ಟು 435-438 ಮಿಲಿಯನ್ (43.5 ಕೋಟಿಯಿಂದ 43.8 ಕೋಟಿ) ಚಂದಾದಾರರ ನೆಲೆಯನ್ನು ತಲುಪುವ ನಿರೀಕ್ಷೆಯಿದೆ.
ಆದರೆ, ಎರಡನೇ ಅತಿದೊಡ್ಡ ಟೆಲಿಕಾಂ ಕಂಪನಿ ಭಾರ್ತಿ ಏರ್‌ಟೆಲ್ ಒಟ್ಟು 318-323 ಮಿಲಿಯನ್ (31.8 ಕೋಟಿಯಿಂದ 32.3 ಕೋಟಿ) ಚಂದಾದಾರರನ್ನು ಹೊಂದಿದ ವರದಿ ಮಾಡುವ ನಿರೀಕ್ಷೆಯಿದೆ. ಆದರೂ ARPU ವಿಷಯದಲ್ಲಿ ಮುಕೇಶ್ ಅಂಬಾನಿಯವರ ಜಿಯೋವನ್ನು ಮೀರಿ ಭಾರ್ತಿ ಏರ್‌ಟೆಲ್ ಮುನ್ನಡೆಯುತ್ತಿದೆ. ಐಸಿಐಸಿಐ ಡೈರೆಕ್ಟ್ ಜಿಯೋಗಾಗಿ ಮೂರನೇ ತ್ರೈಮಾಸಿಕ APRU ಅನ್ನು ಪ್ರತಿ ಬಳಕೆದಾರರಿಗೆ ಸುಮಾರು 151 ರೂಪಾಯಿ ಎಂದು ನಿಗದಿಪಡಿಸಿದೆ. ತ್ರೈಮಾಸಿಕ ಆಧಾರದ ಮೇಲೆ ಶೇ 5ರಷ್ಟು ಹೆಚ್ಚಳವಾದರೆ ಭಾರ್ತಿ ಏರ್‌ಟೆಲ್‌ನ ARPU ರೂ. 164 ಆಗುವ ನಿರೀಕ್ಷೆಯಿದೆ. ಇದು ಹಿಂದಿನ ತ್ರೈಮಾಸಿಕಕ್ಕಿಂತ ಶೇ 6.6ರಷ್ಟು ಹೆಚ್ಚಳವಾಗಿದೆ.
ಹಿಂದಿನ ವರ್ಷ 2021ರಲ್ಲಿ ರಿಲಯನ್ಸ್ ಜಿಯೋ ಟೆಲಿಕಾಂ ಮಾರುಕಟ್ಟೆ ಪಾಲನ್ನು ಶೇ 39ರಷ್ಟು ನಿಯಂತ್ರಿಸಿತ್ತು. ಆದರೆ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕೊರೊನಾ ಕಾರಣದಿಂದಾಗಿ ಪಾವತಿ ಮಾಡದ ಚಂದಾದಾರಿಂದ ಜಿಯೋ 11 ಮಿಲಿಯನ್ (1.1 ಕೋಟಿ) ಚಂದಾದಾರರನ್ನು ಕಳೆದುಕೊಂಡಿತು. “ಹೆಚ್ಚಿನ ನಿಷ್ಕ್ರಿಯ ಚಂದಾದಾರರು ಮತ್ತು ಪೋಸ್ಟ್-ಪೇಯ್ಡ್ ಸಬ್‌ಗಳ ಕೊರತೆಯು ಮಾರುಕಟ್ಟೆ ಮುಂಚೂಣಿಯಲ್ಲಿ ಇರುವ ಜಿಯೋಗೆ ಸವಾಲುಗಳಾಗಿವೆ,” ಎಂದು CLSA ಹೇಳಿದೆ. 2022ರಲ್ಲಿ ಗೂಗಲ್ನೊಂದಿಗೆ ಜಂಟಿಯಾಗಿ ಅಭಿವೃದ್ಧಿಪಡಿಸಲಾದ ರಿಲಯನ್ಸ್ ಜಿಯೋ ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್ ‘JioPhone Next’ ಅನ್ನು ಬಿಡುಗಡೆ ಮಾಡಿದ್ದು, ಪ್ರಸ್ತುತ 2G ಚಂದಾದಾರರ ಬದಲಾವಣೆ/ಪರಿವರ್ತನೆಗೆ ಮಿತಿಗೊಳಿಸಬಹುದು ಎಂದು ಬ್ರೋಕರೇಜ್ ಸಂಸ್ಥೆ ಸೇರಿಸಿದೆ.
ರಿಲಯನ್ಸ್ ಜಿಯೋ ಕಳೆದ ವರ್ಷ ನವೆಂಬರ್‌ನಲ್ಲಿ ಜಿಯೋಫೋನ್ ನೆಕ್ಸ್ಟ್ ಮತ್ತು ಜಿಯೋಗೆ ಸುಂಕ ದರವನ್ನು ಘೋಷಿಸಿತು. “ಆದರೂ R-Jio ಪ್ರಿಪೇಯ್ಡ್ ದರಗಳೊಂದಿಗೆ ಭಾರ್ತಿ ಮತ್ತು VIಗೆ ಇನ್ನೂ ಶೇ 7ರಿಂದ 20ರ ರಿಯಾಯಿತಿಯಲ್ಲಿದೆ. 2024ರ ಆರ್ಥಿಕ ವರ್ಷದ ಹೊತ್ತಿಗೆ ಶೇ 44ರ ಆದಾಯದ ಪಾಲಿನೊಂದಿಗೆ ARPU 193ರ ಜತೆಗೆ 486 ಮಿಲಿಯನ್ (48.6 ಕೋಟಿ) 4G ಚಂದಾದಾರರನ್ನು ನಾವು ಅಂದಾಜಿಸುತ್ತಿದ್ದೇವೆ,” ಎಂದು CLSA ಹೇಳಿದೆ. ಸಂಸ್ಥೆಯು ಟೆಲಿಕಾಂ ವಲಯದಲ್ಲಿ ಪಾಸಿಟಿವ್ ಆಗಿದೆ. ಆದಾಯವು ಬೆಳೆಯುವ ನಿರೀಕ್ಷೆಯಿದೆ, ದರದ ಹೆಚ್ಚಳ, ಹೆಚ್ಚಿದ 4G ಬಳಕೆ ಮತ್ತು 2022ರಲ್ಲಿ 5Gಗೆ ಪರಿವರ್ತನೆ ಸಹಾಯ ಮಾಡುತ್ತದೆ. AGR ಬಾಕಿ ಪಾವತಿಯಲ್ಲಿನ ಯಾವುದೇ ಪರಿಹಾರವು ವಲಯದ ಪಾಸಿಟಿವ್ ಬೆಳವಣಿಗೆಗೆ ಅನುಕೂಲವಾಗಿರುತ್ತದೆ ಎಂದು ವಿಶ್ಲೇಷಕರು ನಂಬಿದ್ದಾರೆ.