Jio new prepaid plan: ದಿನಕ್ಕೆ 2 ಜಿಬಿ ಡೇಟಾ ದೊರೆಯುವ ರಿಲಯನ್ಸ್ ಜಿಯೋದ ಹೊಸ ಪ್ರೀಪೇಯ್ಡ್ ಪ್ಲಾನ್; ದರ, ಇತರ ಬೆನಿಫಿಟ್​ಗಳ ವಿವರ

ದಿನವೂ 2 ಜಿಬಿ ಡೇಟಾ, ಅನಿಯಮಿತ ವಾಯ್ಸ್ ಕಾಲಿಂಗ್, 100 ಎಸ್ಸೆಮ್ಮೆಸ್ ಸೇರಿದಂತೆ ಇತರ ಅನುಕೂಲಗಳನ್ನು ಒಳಗೊಂಡ ರಿಲಯನ್ಸ್ ಜಿಯೋ ಪ್ರೀಪೇಯ್ಡ್ ಹೊಸ ಪ್ಲಾನ್ ಬಗ್ಗೆ ವಿವರ ಇಲ್ಲಿದೆ.

Jio new prepaid plan: ದಿನಕ್ಕೆ 2 ಜಿಬಿ ಡೇಟಾ ದೊರೆಯುವ ರಿಲಯನ್ಸ್ ಜಿಯೋದ ಹೊಸ ಪ್ರೀಪೇಯ್ಡ್ ಪ್ಲಾನ್; ದರ, ಇತರ ಬೆನಿಫಿಟ್​ಗಳ ವಿವರ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jan 06, 2022 | 5:19 PM

ರಿಲಯನ್ಸ್ ಜಿಯೋದಿಂದ ಹೊಸದಾಗಿ ತಿಂಗಳ ರೀಚಾರ್ಜ್ ಪ್ಲಾನ್​ ಅನ್ನು ಪ್ರೀಪೇಯ್ಡ್ ಗ್ರಾಹಕರಿಗಾಗಿ ಪರಿಚಯಿಸಲಾಗಿದೆ. 499 ರೂಪಾಯಿಯ ಈ ಪ್ಲಾನ್ ಅಡಿಯಲ್ಲಿ ದಿನಕ್ಕೆ ಎರಡು ಜಿಬಿ ಡೇಟಾ ಒದಗಿಸಲಾಗುತ್ತದೆ. ಇನ್ನು ಈ 499 ರೂಪಾಯಿಯ ಪ್ಲಾನ್​ನಲ್ಲಿ ಅನಿಯಮಿತ ಧ್ವನಿ ಕರೆ, ದಿನಕ್ಕೆ 100 ಎಸ್ಸೆಮ್ಮೆಸ್ ಕೂಡ ದೊರೆಯುತ್ತದೆ. ಮೈಜಿಯೋ ಆ್ಯಪ್ ಹಾಗೂ ಜಿಯೋ.ಕಾಮ್ ವೆಬ್​ಸೈಟ್ ಎರಡರಲ್ಲೂ ಈ ಪ್ಲಾನ್ ಲಭ್ಯ ಇದೆ. ಮೊದಲೇ ಹೇಳಿದ ಹಾಗೆ 499 ರೂಪಾಯಿಯ ಪ್ಲಾನ್​ಗೆ 28 ದಿನಗಳ ವ್ಯಾಲಿಡಿಟಿ ಇದೆ. ಗ್ರಾಹಕರಿಗೆ ದಿನಕ್ಕೆ 2 ಜಿಬಿಯಂತೆ 56 ಜಿಬಿ ಹೈ ಸ್ಪೀಡ್ ಡೇಟಾ ಸಿಗುತ್ತದೆ. ಒಂದು ಸಲ ಎರಡು ಜಿಬಿ ಡೇಟಾ ಮುಗಿದ ಮೇಲೆ ಇಂಟರ್​ನೆಟ್ ವೇಗ 64 ಕೆಬಿಪಿಎಸ್​ಗೆ ಇಳಿಯುತ್ತದೆ.

ಈ ಪ್ಲಾನ್​ನಲ್ಲಿ ಅನಿಯಮಿತ ಧ್ವನಿ ಕರೆ, 100 ಎಸ್ಸೆಮ್ಮೆಸ್ ಕೂಡ ಸಿಗುತ್ತದೆ. ಹೆಚ್ಚುವರಿ ಬೆನಿಫಿಟ್ ಆಗಿ ಜಿಯೋ ಆ್ಯಪ್​ಗಳಿಗೆ ಸಂಪರ್ಕ ಕೂಡ ಸಿಗುತ್ತದೆ. ಹೊಸ ಬಳಕೆದಾರರಿಗೆ ಹೊಸ ಪ್ಲಾನ್ ಜತೆಗೆ ಪ್ರೈಮ್ ಸಬ್​ಸ್ಕ್ರಿಪ್ಷನ್ ದೊರೆಯುತ್ತದೆ. ಕಾಂಪ್ಲಿಮೆಂಟರಿಯಾಗಿ ಡಿಸ್ನಿ+ ಹಾಟ್​ಸ್ಟಾರ್ ಮೊಬೈಲ್ ವಾರ್ಷಿಕ ಸಬ್​ಸ್ಕ್ರಿಪ್ಷನ್ ಲಭ್ಯ ಇದೆ. ಇನ್ನು ಏರ್​ಟೆಲ್​ನ 359 ರೂಪಾಯಿಯ ಪ್ಲಾನ್​ನೊಂದಿಗೆ ರಿಲಯನ್ಸ್ ಜಿಯೋದ 499 ರೂಪಾಯಿ ಪ್ಲಾನ್ ಸ್ಪರ್ಧಿಸುತ್ತಿದೆ. ಏರ್​ಟೆಲ್​ನಲ್ಲಿ ಕೂಡ ವ್ಯಾಲಿಡಿಟಿ 28 ದಿನವೇ ಇದೆ. ಜಿಯೋದ ಹೊಸ ಪ್ಲಾನ್​ನಂತೆ ಏರ್​ಟೆಲ್​ನ 359ರ ಪ್ಲಾನ್​ನಲ್ಲಿ ಪ್ರತಿ ದಿನ 2 ಜಿಬಿ ಡೇಟಾ, ದಿನಕ್ಕೆ ನೂರು ಎಸ್ಸೆಮ್ಮೆಸ್ ಒದಗಿಸುತ್ತದೆ.

ಏರ್​ಟೆಲ್​ನ ಗ್ರಾಹಕರಿಗೆ 28 ದಿನಗಳ ಕಾಲ Xstream ಆ್ಯಪ್​ನಲ್ಲಿ ಒಂದು Xstream ಚಾನೆಲ್​ಗೆ ಉಚಿತ ಸಂಪರ್ಕ ಸಿಗುತ್ತದೆ. ಅನಿಯಮಿತವಾದ ಧ್ವನಿ ಕರೆ ಸೌಲಭ್ಯ ಇದೆ. 28 ದಿನಗಳಿಗ ಪ್ರೈಮ್ ವಿಡಿತೋ ಮೊಬೈಲ್ ಎಡಿಷನ್ ಜತೆಗೆ ಇತರ ಬೆನಿಫಿಟ್​ಗಳಿವೆ.

ವೊಡಾಫೋನ್ ಐಡಿಯಾದಲ್ಲೂ 359 ರೂಪಾಯಿ ಪ್ರೀಪೇಯ್ಡ್ ಪ್ಲಾನ್ ಇದ್ದು, ದಿನಕ್ಕೆ 2 ಜಿಬಿ ಡೇಟಾದೊಂದಿಗೆ ಬರುತ್ತದೆ. ಅನಿಯಮಿತ ವಾಯ್ಸ್ ಕಾಲಿಂಗ್, ದಿನಕ್ಕೆ 100 ಎಸ್ಸೆಮ್ಮೆಸ್ 28 ದಿನಗಳ ಅವಧಿಗೆ ದೊರೆಯುತ್ತದೆ. ವಾರಾಂತ್ಯದ ಡೇಟಾ ರೋಲ್ ಓವರ್ ಜತೆಗೆ Vi ಮೂವೀಸ್ ಮತ್ತು ಟೀವಿಗೆ ಸಂಪರ್ಕ ಸಿಗುತ್ತದೆ.

ಇದನ್ನೂ ಓದಿ: Jio Recharge Plans: ರಿಲಯನ್ಸ್ ಜಿಯೋ ಪ್ರಿಪೇಯ್ಡ್​ನ ವಿವಿಧ ರೀಚಾರ್ಜ್​ ಯೋಜನೆಗಳು, ಅದರ ಬೆನಿಫಿಟ್​ಗಳು

ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ