Sign In

By signing in or creating an account, you agree with Associated Broadcasting Company's Terms & Conditions and Privacy Policy.

Jio Recharge Plans: ರಿಲಯನ್ಸ್ ಜಿಯೋ ಪ್ರಿಪೇಯ್ಡ್​ನ ವಿವಿಧ ರೀಚಾರ್ಜ್​ ಯೋಜನೆಗಳು, ಅದರ ಬೆನಿಫಿಟ್​ಗಳು

2021ರ ಡಿಸೆಂಬರ್ ತಿಂಗಳಲ್ಲಿ ರಿಲಯನ್ಸ್ ಜಿಯೋದ ಪ್ರೀಪೇಯ್ಡ್ ಪ್ಲಾನ್, ದರ, ವ್ಯಾಲಿಡಿಟಿ, ಡೇಟಾ, ಎಸ್ಸೆಮ್ಮೆಸ್ ಮತ್ತಿತರ ಮಾಹಿತಿ ಇಲ್ಲಿದೆ.

Jio Recharge Plans: ರಿಲಯನ್ಸ್ ಜಿಯೋ ಪ್ರಿಪೇಯ್ಡ್​ನ ವಿವಿಧ ರೀಚಾರ್ಜ್​ ಯೋಜನೆಗಳು, ಅದರ ಬೆನಿಫಿಟ್​ಗಳು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Dec 22, 2021 | 5:21 PM

ರಿಲಯನ್ಸ್ ಜಿಯೋ ಈ ತಿಂಗಳ ಆರಂಭದಲ್ಲಿ ತನ್ನ ಪ್ರಿಪೇಯ್ಡ್ ಯೋಜನೆಗಳನ್ನು ಪರಿಷ್ಕರಿಸಿತು. ಈ ಮೂಲಕ ಕೆಲವು ಬದಲಾವಣೆಗಳನ್ನು ತಂದಿದ್ದು, ಕೆಲವು ಪ್ರಿಪೇಯ್ಡ್ ಯೋಜನೆಗಳೊಂದಿಗೆ ಎಸ್ಸೆಮ್ಮೆಸ್ ಮತ್ತು ಸ್ಟ್ರೀಮಿಂಗ್ ಪ್ರಯೋಜನಗಳನ್ನು ಒಳಗೊಂಡಿದೆ. ಈ ವಾರದ ಆರಂಭದಲ್ಲಿ, ಜಿಯೋ ಆಯ್ದ ಅವಧಿಗೆ 1 ರೂಪಾಯಿಯ ಅಗ್ಗದ ಪ್ರಿಪೇಯ್ಡ್ ಯೋಜನೆಯನ್ನು ಪರಿಚಯಿಸಿತು, ಅದು ಸಂಕ್ಷಿಪ್ತ ಅವಧಿಗೆ 30 ದಿನಗಳ ಮಾನ್ಯತೆಯನ್ನು ನೀಡಿತು. ಅಂದಹಾಗೆ ಮೂಲಭೂತವಾದ ದೈನಂದಿನ ಡೇಟಾ ಪ್ರಿಪೇಯ್ಡ್ ರೀಚಾರ್ಜ್ ಜಿಯೋ ಯೋಜನೆಯು ರೂ. 119 ದರದ್ದಾಗಿದೆ. ಈ ಯೋಜನೆಯಲ್ಲಿ 1.5 GB ದೈನಂದಿನ ಡೇಟಾವನ್ನು ನೀಡುತ್ತದೆ ಹಾಗೂ 14 ದಿನಗಳ ಮಾನ್ಯತೆಯನ್ನು ಹೊಂದಿದೆ. ಈ ಯೋಜನೆಯು ಅನಿಯಮಿತ ವಾಯ್ಸ್​ ಕರೆಗಳು ಮತ್ತು ಜಿಯೋ ಅಪ್ಲಿಕೇಷನ್‌ಗಳಿಗೆ ಸಂಪರ್ಕವನ್ನು ನೀಡುತ್ತದೆ. ರೀಚಾರ್ಜ್ ಅವಧಿಯ ಉದ್ದಕ್ಕೂ 300 ಎಸ್ಸೆಮ್ಮೆಸ್​ ಆಫರ್ ನೀಡುತ್ತದೆ. ಎಸ್ಸೆಮ್ಮೆಸ್ ಅನ್ನು ಇತ್ತೀಚೆಗೆ ಸೇರಿಸಲಾಗಿದೆ

1GB ಮತ್ತು 1.5GB ದೈನಂದಿನ ಡೇಟಾ ಯೋಜನೆಗಳು ಜಿಯೋ 149 ಮತ್ತು 179 ರೂಪಾಯಿ ದರದ 1 GB ದೈನಂದಿನ ಡೇಟಾ ಪ್ಲಾನ್‌ಗಳನ್ನು ಹೊಂದಿದ್ದು, ಅದು ಕ್ರಮವಾಗಿ 20 ದಿನಗಳು ಮತ್ತು 24 ದಿನಗಳ ಮಾನ್ಯತೆಯನ್ನು ಹೊಂದಿದೆ. ಯೋಜನೆಗಳು ಅನ್​ ಲಿಮಿಟೆಡ್ ಧ್ವನಿ ಕರೆಗಳು, ದಿನಕ್ಕೆ 100 ಎಸ್ಸೆಮ್ಮೆಸ್ ಮತ್ತು ಜಿಯೋ ಅಪ್ಲಿಕೇಷನ್‌ಗಳ ಬಳಕೆಗೆ ಅವಕಾಶ ನೀಡುತ್ತದೆ. ಜಿಯೋ 1.5 GB ದೈನಂದಿನ ಡೇಟಾ ಪ್ಲಾನ್‌ಗಳನ್ನು ರೂ.119, ರೂ.199, ರೂ.239, ರೂ.479, ರೂ.666 ಮತ್ತು ರೂ. 2545 ದರಗಳನ್ನು ಹೊಂದಿದೆ. ಈ ಯೋಜನೆಗಳು ಕ್ರಮವಾಗಿ 14 ದಿನ, 23 ದಿನ, 28 ದಿನ, 56 ದಿನ, 84 ದಿನ ಮತ್ತು 336 ದಿನಗಳ ಮಾನ್ಯತೆಯನ್ನು ಹೊಂದಿವೆ. ಎಲ್ಲ ಯೋಜನೆಗಳು ಅನ್​ಲಿಮಿಟೆಡ್ ಕರೆಗಳು ಮತ್ತು ಜಿಯೋ ಅಪ್ಲಿಕೇಷನ್‌ಗಳಿಗೆ ಸಂಪರ್ಕವನ್ನು ಒದಗಿಸುತ್ತವೆ.

2GB ದೈನಂದಿನ ಡೇಟಾ ಯೋಜನೆಗಳು 2GB ದೈನಂದಿನ ಡೇಟಾದೊಂದಿಗೆ ಜಿಯೋ ಯೋಜನೆಗಳು ರೂ. 249, ರೂ. 299, ರೂ. 533, ರೂ. 719 ಮತ್ತು ರೂ. 2879 ದರದೊಂದಿಗೆ ಬರುತ್ತವೆ. ಈ ಯೋಜನೆಗಳು ಕ್ರಮವಾಗಿ 23 ದಿನ, 28 ದಿನ, 56 ದಿನ, 84 ದಿನ ಮತ್ತು 365 ದಿನಗಳ ಮಾನ್ಯತೆ ನೀಡುತ್ತವೆ. ಎಲ್ಲ ಯೋಜನೆಗಳು ದಿನಕ್ಕೆ 100 ಎಸ್ಸೆಮ್ಮೆಸ್, ಅನಿಯಮಿತ ಕರೆಗಳು ಮತ್ತು ಜಿಯೋ ಅಪ್ಲಿಕೇಷನ್‌ಗಳಿಗೆ ಸಂಪರ್ಕವನ್ನು ನೀಡುತ್ತವೆ.

3GB ದೈನಂದಿನ ಡೇಟಾ ಯೋಜನೆಗಳು ಜಿಯೋದಿಂದ 3GB ದೈನಂದಿನ ಡೇಟಾ ಪ್ಲಾನ್‌ಗಳಿವೆ. ಪ್ರಿಪೇಯ್ಡ್ ಯೋಜನೆಗಳು ರೂ. 419 ಮತ್ತು ರೂ. 601ರದಾಗಿದೆ. ಈ ಯೋಜನೆಗಳು ಪ್ರತಿ 28 ದಿನಗಳವರೆಗೆ 3GB ದೈನಂದಿನ ಡೇಟಾವನ್ನು ನೀಡುತ್ತವೆ. ರೂ. 601ರ ಯೋಜನೆಯು ಡಿಸ್ನಿ + ಹಾಟ್‌ಸ್ಟಾರ್‌ಗೆ ಸಂಪರ್ಕ ನೀಡುತ್ತದೆ. ಎರಡೂ ಯೋಜನೆಗಳು ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 ಎಸ್ಸೆಮ್ಮೆಸ್ ನೀಡುತ್ತವೆ.

ಡಿಸ್ನಿ+ ಹಾಟ್‌ಸ್ಟಾರ್ ಬೆನಿಫಿಟ್​ನೊಂದಿಗೆ ಜಿಯೋ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳು ಜಿಯೋ ರೂ. 799, ರೂ. 1066 ಮತ್ತು ರೂ. 3119 ಬೆಲೆಯ ತನ್ನ ಪ್ರಿಪೇಯ್ಡ್ ಯೋಜನೆಗಳೊಂದಿಗೆ ಡಿಸ್ನಿ+ ಹಾಟ್‌ಸ್ಟಾರ್ ಬೆನಿಫಿಟ್ ಸಹ ಸೇರಿಸಿದೆ. ಜಿಯೋದಿಂದ ರೂ. 3119 ಪ್ಲಾನ್ ವಾರ್ಷಿಕ ಯೋಜನೆಯಾಗಿದೆ ಮತ್ತು 365 ದಿನಗಳ ಮಾನ್ಯತೆ, ಹೆಚ್ಚುವರಿ 10GB ಡೇಟಾದೊಂದಿಗೆ 2GB ದೈನಂದಿನ ಡೇಟಾವನ್ನು ನೀಡುತ್ತದೆ. ಇದು ಅನಿಯಮಿತ ಧ್ವನಿ ಕರೆಗಳು, ದಿನಕ್ಕೆ 100 ಎಸ್ಸೆಮ್ಮೆಸ್ ಮತ್ತು ಜಿಯೋ ಅಪ್ಲಿಕೇಷನ್‌ಗಳನ್ನು ಸಹ ನೀಡುತ್ತದೆ.

ರೂ.799 ಮತ್ತು ರೂ.1066 ಬೆಲೆಯ ಪ್ರಿಪೇಯ್ಡ್ ಯೋಜನೆಗಳು 2GB ದೈನಂದಿನ ಡೇಟಾ ಪ್ಲಾನ್‌ಗಳು ಕ್ರಮವಾಗಿ 56 ದಿನಗಳು ಮತ್ತು 84 ದಿನಗಳ ಮಾನ್ಯತೆ ಹೊಂದಿವೆ. ಎರಡೂ ಯೋಜನೆಗಳು 2GB ದೈನಂದಿನ ಡೇಟಾ, ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 ಎಸ್ಸೆಮ್ಮೆಸ್ ಆಫರ್ ಮಾಡುತ್ತದೆ. ಎರಡೂ ಯೋಜನೆಗಳು ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ ಬೆನಿಫಿಟ್​ ನೀಡುತ್ತವೆ. ರೂ. 1066ರ ಯೋಜನೆಯು ಜಿಯೋ ಅಪ್ಲಿಕೇಷನ್‌ಗಳಿಗೆ ಸಂಪರ್ಕದೊಂದಿಗೆ ಹೆಚ್ಚುವರಿ 5GB ಡೇಟಾವನ್ನು ನೀಡುತ್ತದೆ. ಹೆಚ್ಚುವರಿಯಾಗಿ, ಜಿಯೋ ತನ್ನ ರೂ. 659ರ ಪ್ರಿಪೇಯ್ಡ್ ಯೋಜನೆಯೊಂದಿಗೆ ಡಿಸ್ನಿ + ಹಾಟ್‌ಸ್ಟಾರ್ ಬೆನಿಫಿಟ್ ಸಹ ನೀಡುತ್ತದೆ. ಅದು 56 ದಿನಗಳವರೆಗೆ 1.5GB ಡೇಟಾವನ್ನು ನೀಡುತ್ತದೆ.

ವಾರ್ಷಿಕ ಬೆನಿಫಿಟ್​ನೊಂದಿಗೆ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳು ಮೂರು ಖಾಸಗಿ ಟೆಲಿಕಾಂ ಆಪರೇಟರ್‌ಗಳಲ್ಲಿ ಜಿಯೋ ಅತ್ಯಂತ ದುಬಾರಿ ವಾರ್ಷಿಕ ಪ್ರಿಪೇಯ್ಡ್ ಯೋಜನೆಯನ್ನು ಹೊಂದಿದೆ. ಇದರ ಬೆಲೆ ರೂ 4199 ಮತ್ತು 3GB ದೈನಂದಿನ ಡೇಟಾ ಮತ್ತು 365 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಇದು ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 ಎಸ್ಸೆಮ್ಮೆಸ್ ನೀಡುತ್ತದೆ. ಇದು ಜಿಯೋ ಅಪ್ಲಿಕೇಷನ್‌ಗಳಿಗೆ ಸಂಪರ್ಕ ಸಹ ನೀಡುತ್ತದೆ.

ಜಿಯೋ ವಾರ್ಷಿಕ ಪ್ಲಾನ್ ಅನ್ನು ಸಹ ಹೊಂದಿದ್ದು, ಇದು 2GB ದೈನಂದಿನ ಡೇಟಾವನ್ನು ನೀಡುವ 2879 ರೂಪಾಯಿಯದಾಗಿದೆ. ಇದು 365 ದಿನಗಳಿಗೆ, ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 ಎಸ್ಸೆಮ್ಮೆಸ್ ನೀಡುವ ವಾರ್ಷಿಕ ಯೋಜನೆಯಾಗಿದೆ. ಜಿಯೋ ದೀರ್ಘಾವಧಿಯ ಪ್ರಿಪೇಯ್ಡ್ ಯೋಜನೆಯನ್ನು ಸಹ ನೀಡುತ್ತದೆ. ಅದು ರೂ. 2545ರ 1.5GB ದೈನಂದಿನ ಡೇಟಾವನ್ನು ನೀಡುತ್ತದೆ ಮತ್ತು 336 ದಿನಗಳ ಮಾನ್ಯತೆಯನ್ನು ಹೊಂದಿದೆ. ಈ ಯೋಜನೆಯು ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 ಎಸ್ಸೆಮ್ಮೆಸ್ ನೀಡುತ್ತದೆ. ಈ ಯೋಜನೆಯ ಹೆಚ್ಚುವರಿ ಬೆನಿಫಿಟ್​ಗಳಾಗಿ JioTV, JioCinema, Jio ಸೆಕ್ಯೂರಿಟಿ ಮತ್ತು Jio ಕ್ಲೌಡ್ ಅನ್ನು ಒಳಗೊಂಡಿರುವ Jio ಅಪ್ಲಿಕೇಷನ್‌ಗಳಿಗೆ ಸಂಪರ್ಕವನ್ನು ಒಳಗೊಂಡಿರುತ್ತದೆ.

ಇದನ್ನೂ ಓದಿ: BSNL: ಜಿಯೋ ಏರ್ಟೆಲ್ ಯಾವುದರಲ್ಲೂ ಇಲ್ಲ: ಬಿಎಸ್​ಎನ್​ಎಲ್​ನಿಂದ ಹೊಸ ಬಂಪರ್ ಪ್ಲಾನ್ ಘೋಷಣೆ

ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ