Sign In

By signing in or creating an account, you agree with Associated Broadcasting Company's Terms & Conditions and Privacy Policy.

Upcoming smartphones of 2022: 2022 ರಲ್ಲಿ ಧೂಳೆಬ್ಬಿಸಲು ತಯಾರಾಗಿದೆ ಬಹುನಿರೀಕ್ಷೆಯ ಈ ಸ್ಮಾರ್ಟ್​ಫೋನ್​ಗಳು

Smartphones 2022: ಮುಂದಿನ 2022ನೇ ವರ್ಷ ಕೂಡ ಹಲವು ಜನಪ್ರಿಯ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಲು ಸಿದ್ಧತೆ ನಡೆಸಿವೆ. ಈಗಾಗಲೇ ಅನೇಕ ಫೋನ್‌ಗಳು ಬಿಡುಗಡೆ ದಿನಾಂಕವನ್ನು ಘೊಷಣೆ ಮಾಡಿದೆ. ಹಾಗಾದ್ರೆ 2022ರಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡುವ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ನೋಡೋಣ.

Upcoming smartphones of 2022: 2022 ರಲ್ಲಿ ಧೂಳೆಬ್ಬಿಸಲು ತಯಾರಾಗಿದೆ ಬಹುನಿರೀಕ್ಷೆಯ ಈ ಸ್ಮಾರ್ಟ್​ಫೋನ್​ಗಳು
Upcoming smartphones of 2022
Follow us
TV9 Web
| Updated By: shivaprasad.hs

Updated on: Dec 22, 2021 | 8:28 AM

ಹೊಸ ವರ್ಷಕ್ಕೆ (New Year 2022) ಇನ್ನೇನು ಕೆಲವೇ ದಿನಗಳಷ್ಟೆ ಬಾಕಿಯಿದೆ. ವರ್ಷಾಂತ್ಯಕ್ಕೆ ಪ್ರಸಿದ್ಧ ಇ ಕಾಮರ್ಸ್​ ತಾಣ, ರಿಟೇಲ್ ಸ್ಟೋರ್​ಗಳಲ್ಲಿ ಭರ್ಜರಿ ಆಫರ್​ಗಳಿಗೆ ಸ್ಮಾರ್ಟ್​ಫೋನ್​ಗಳು (Smartphone) ಸಿಗುತ್ತಿವೆ. ವರ್ಷಾಂತ್ಯಕ್ಕೂ ಕೆಲವು ಮೊಬೈಲ್​ಗಳು ಬಿಡುಗಡೆಗೆ ತಯಾರಿ ನಡೆಸಿವೆ. ಮುಂದಿನ 2022ನೇ ವರ್ಷ ಕೂಡ ಹಲವು ಜನಪ್ರಿಯ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಎಂಟ್ರಿ ನೀಡಲು ಸಿದ್ಧತೆ ನಡೆಸಿವೆ. ಈಗಾಗಲೇ ಅನೇಕ ಫೋನ್‌ಗಳು ಬಿಡುಗಡೆ ದಿನಾಂಕವನ್ನು ಘೊಷಣೆ ಮಾಡಿದ್ದು, ಸ್ಮಾರ್ಟ್‌ಫೋನ್‌ ಪ್ರಿಯರ ಕುತೂಹಲವನ್ನು ಕೆರಳಿಸಿವೆ. ಇವು ಮೊಬೈಲ್ (Mobile) ಮಾರುಕಟ್ಟೆಯಲ್ಲಿ ಧೂಳೆಬ್ಬಿಸುವುದು ಖಚಿತ. ಅದರಲ್ಲೂ ಇತ್ತೀಚಿಗೆ ಬಿಡುಗಡೆಯಾದ ಹೊಸ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 Gen 1 ಒಳಗೊಂಡ ಸ್ಮಾರ್ಟ್‌ಫೋನ್‌ಗಳು ಮುಂದಿನ ವರ್ಷವೇ ಅಪ್ಪಳಿಸಲಿದೆ. ಹಾಗಾದ್ರೆ 2022ರಲ್ಲಿ (Smartphone 2022) ಮಾರುಕಟ್ಟೆಗೆ ಎಂಟ್ರಿ ನೀಡುವ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ನೋಡೋಣ.

ಒನ್‌ಪ್ಲಸ್‌ 10 ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಈಗಾಗಲೇ ಸಾಕಷ್ಟು ನಿರೀಕ್ಷೆ ಸೃಷ್ಟಿಸಿದೆ. ಈ ಫೋನ್ ಕೂಡ ಸ್ನಾಪ್‌ಡ್ರಾಗನ್ 8 ಜನ್ 1 ಚಿಪ್ ಹೊಂದಿರುವ ಸಾದ್ಯತೆ ಇದೆ. ಇನ್ನು ಈ ಫೋನ್‌ OnePlus ನ OxygenOS ಸ್ಕಿನ್‌ಗಳನ್ನು ಏಕೀಕರಿಸುವ ಮೊದಲ ಫೋನ್ ಎಂದು ಹೊಂದಿಸಲಾಗಿದೆ. ಹೊಸ ಸ್ಕಿನ್ ನಂತರ ಇನ್ನೂ ಅಪ್‌ಡೇಟ್ ವೇಳಾಪಟ್ಟಿಯಲ್ಲಿರುವ ಎಲ್ಲಾ ಇತರ OnePlus ಫೋನ್‌ಗಳಿಗೆ ಬರುತ್ತದೆ ಎನ್ನಲಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ S22 ಸ್ಮಾರ್ಟ್‌ಫೋನ್‌ ದೈತ್ಯ ಸ್ಯಾಮ್‌ಸಂಗ್ ಕಂಪನಿ ತನ್ನ ಗ್ಯಾಲಕ್ಸಿ ಎಸ್-ಸರಣಿಯಲ್ಲಿ ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಸಿದ್ದತೆ ನಡೆಸಿದೆ. ಇದರಲ್ಲಿ ಬಹುನಿರೀಕ್ಷಿತ ಗ್ಯಾಲಕ್ಸಿ S22 ಸ್ಮಾರ್ಟ್‌ಫೋನ್‌ ಮುಂದಿನ ವರ್ಷ ಬಿಡುಗಡೆ ಆಗುಬುದು ಖಚಿತವಾಗಿದೆ. ಜನವರಿ ಅಂತ್ಯದಲ್ಲಿ ಅಥವಾ ಫೆಬ್ರವರಿ ಆರಂಭದಲ್ಲಿ ಇದು ಮಾರುಕಟ್ಟೆಯಲ್ಲಿ ದೂಳೆಬ್ಬಿಸಲು ಬರಲಿದೆ. ಈ ಸ್ಮಾರ್ಟ್‌ಫೋನ್‌ ಸರಣಿ ಗ್ಯಾಲಕ್ಸಿ S22, S22 Plus ಮತ್ತು Uಅಲ್ಟ್ರಾ ರೂಪಾಂತರಗಳೊಂದಿಗೆ ಬರುವ ಸಾಧ್ಯತೆ ಇದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ 120hz ರಿಪ್ರೇಶ್‌ ರೇಟ್‌ ಬೆಂಬಲಿಸುವ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಅಲ್ಲದೆ ಕ್ವಾಡ್-ರಿಯರ್ ಕ್ಯಾಮೆರಾ ಸೆಟಪ್‌ ಹೊಂದಿರಲಿದೆ ಎನ್ನಲಾಗಿದೆ.

ಇನ್ನು ಈ ವರ್ಷ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಭರ್ಜರಿ ಸದ್ದು ಮಾಡಿದ್ದ ಮೊಟೊರೊಲಾ ಎಡ್ಜ್‌ 20ಯ ಮಂದಿನ ಆವೃತ್ತಿ ಎಡ್ಜ್‌ 30 ಅಲ್ಟ್ರಾ ಸ್ಮಾರ್ಟ್‌ಫೋನ್‌ ಕೂಡ ಮುಂದಿನ ವರ್ಷ ಬಿಡುಗಡೆ ಆಗಲಿರುವ ಬಹು ನಿರೀಕ್ಷಿತ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ. ಈ ಸ್ಮಾರ್ಟ್‌ಫೋನ್‌ ಸರಣಿಯ ಅತ್ಯುನ್ನತ ರೂಪಾಂತರವಾಗಿದೆ ಎಂದು ನಿರೀಕ್ಷಿಸಲಾಗಿದೆ. ವಿಶೇಷ ಎಂದರೆ ಇದು ಸ್ನಾಪ್‌ಡ್ರಾಗನ್‌ 8 Gen 1 ಚಿಪ್‌ನಿಂದ ಚಾಲಿತವಾಗಲಿದೆ. ಇದಲ್ಲದೆ ಈ ಫೋನ್ ಪಂಚ್-ಹೋಲ್ ಫ್ರಂಟ್ ಕ್ಯಾಮೆರಾ, ಸೇರಿದಂತೆ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಕೂಡ ಪಡೆದಿದೆ. ಇದು 144Hz ರಿಫ್ರೆಶ್ ರೇಟ್ ಬೆಂಬಲಿಸುವ 6.6-ಇಂಚಿನ OLED ಡಿಸ್‌ಪ್ಲೇ ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ.

ಶವೋಮಿ ಕಂಪನಿ ಮುಂದಿನ ವರ್ಷ ಶವೋಮಿ 12 ಹೊಸ ಸ್ನಾಪ್‌ಡ್ರಾಗನ್‌ 8 Gen 1 ಪ್ರೊಸೆಸರ್‌ ಹೊಂದಿರುವ ಮೊದಲ ಫೋನ್‌ಗಳಲ್ಲಿ ಒಂದಾಗಿದೆ. ಈ ಸರಣಿಯು ಬಹು ಶೇಖರಣಾ ರೂಪಾಂತರಗಳನ್ನು ಒಳಗೊಂಡಿರುತ್ತದೆ. ಇದು ಬಿಗ್‌ ಬ್ಯಾಟರಿ ಸಾಮರ್ಥ್ಯ ಪಡೆದಿದ್ದು, 100W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ ಎನ್ನಲಾಗಿದೆ. ಈ ಫೋನ್‌ ಕ್ವಾಡ್-ರಿಯರ್ ಕ್ಯಾಮೆರಾ ಮತ್ತು ಅಂಡರ್-ಡಿಸ್ಪ್ಲೇ ಫ್ರಂಟ್ ಕ್ಯಾಮೆರಾ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.

ಇನ್ನು ಮುಂದಿನ ವರ್ಷ ಬಿಡುಗಡೆ ಆಗುವ ಜನಪ್ರಿಯ ಸ್ಮಾರ್ಟ್‌ಫೋನ್‌ಗಳಲ್ಲಿ iQOO 9 ಕೂಡ ಸೇರಿದೆ. ಈ ಸ್ಮಾರ್ಟ್‌ಫೋನ್‌ ಸರಣಿಯು ಉನ್ನತ-ಮಟ್ಟದ ಪ್ರೊ ರೂಪಾಂತರವನ್ನು ಒಳಗೊಂಡಂತೆ ಎರಡು ರೂಪಾಂತರಗಳಲ್ಲಿ ಬರಬಹುದು ಎಂದು ನಿರೀಕ್ಷಿಸಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 120Hz ರಿಫ್ರೆಶ್‌ ರೇಟ್‌ ಸಾಮರ್ಥ್ಯದ ಡಿಸ್‌ಪ್ಲೇ, ಹೊಸ ಶಾಖ ಪ್ರಸರಣ ವ್ಯವಸ್ಥೆ, ಮೈಕ್ರೋ-ಹೆಡ್ ಗಿಂಬಲ್ ಸ್ಟೆಬಿಲೈಸೇಶನ್ ಸಿಸ್ಟಮ್ ಹೊಂದಿರಲಿದೆ ಎನ್ನಲಾಗಿದೆ. ಜೊತೆಗೆ ಡ್ಯುಯಲ್ ಸ್ಪೀಕರ್‌ಗಳು ಮತ್ತು ಸ್ಪರ್ಧಾತ್ಮಕ ಗೇಮಿಂಗ್‌ಗಾಗಿ ಪ್ರೆಶರ್ ಸೆನ್ಸಿಟಿವ್ ಶೋಲ್ಡರ್ ಬಟನ್‌ಗಳನ್ನು ಕೂಡ ಹೊಂದಿರುವ ಸಾದ್ಯತೆ ಇದೆ.

Infinix Note 11S: 50MP ಕ್ಯಾಮೆರಾ, 5000mAh ಬ್ಯಾಟರಿಯ ಈ ಸ್ಮಾರ್ಟ್​ಫೋನ್ ಮಾರಾಟ ಆರಂಭ: ಬೆಲೆ ಕೇವಲ 12,999 ರೂ.

Flipkart Big Saving Days sale: ಅತಿ ಕಡಿಮೆ ಬೆಲೆ ಸ್ಮಾರ್ಟ್​ಫೋನ್ ಖರೀದಿಸಲು ಇಂದು ಕೊನೇ ದಿನ: ಈ ಆಫರ್ ಮಿಸ್ ಮಾಡಲೇ ಬೇಡಿ

(Best Smartphone Here is the Upcoming Smartphones that point to a much more exciting 2022)

ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ