Reliance Industries: ಯುಎಸ್​ ಡಾಲರ್ ಬಾಂಡ್‌ಗಳಲ್ಲಿ 4 ಶತಕೋಟಿ ಡಾಲರ್ ಸಂಗ್ರಹಿಸಿದ ರಿಲಯನ್ಸ್ ಹೊಸ ದಾಖಲೆ

TV9 Digital Desk

| Edited By: Srinivas Mata

Updated on: Jan 06, 2022 | 1:53 PM

ರಿಲಯನ್ಸ್ ಇಂಡಸ್ಟ್ರೀಸ್​ನಿಂದ ಅಮೆರಿಕದ ಬಾಂಡ್​ ವಿತರಣೆ ಮೂಲಕ 4 ಬಿಲಿಯನ್ ಯುಎಸ್​ಡಿ ಸಂಗ್ರಹ ಮಾಡಲಾಗಿದೆ. ಭಾರತದ ಕಂಪೆನಿಯೊಂದು ದೇಶದ ಹೊರಗೆ ಸಂಗ್ರಹಿಸಿರುವ ಅತಿ ದೊಡ್ಡ ಮೊತ್ತ ಇದಾಗಿದೆ.

Reliance Industries: ಯುಎಸ್​ ಡಾಲರ್ ಬಾಂಡ್‌ಗಳಲ್ಲಿ 4 ಶತಕೋಟಿ ಡಾಲರ್ ಸಂಗ್ರಹಿಸಿದ ರಿಲಯನ್ಸ್ ಹೊಸ ದಾಖಲೆ
ಮುಕೇಶ್ ಅಂಬಾನಿ (ಸಂಗ್ರಹ ಚಿತ್ರ)

ಭಾರತದಿಂದ ಅತಿದೊಡ್ಡ ವಿದೇಶಿ ಕರೆನ್ಸಿ ಬಾಂಡ್ ವಿತರಣೆ ಮಾಡುವ ಮೂಲಕ ರಿಲಯನ್ಸ್ ಇಂಡಸ್ಟ್ರೀಸ್ 4 ಬಿಲಿಯನ್ ಡಾಲರ್ ಸಂಗ್ರಹಿಸಿದೆ. ವಿತರಣೆಗಿಂತ ಇದು ಮೂರು ಪಟ್ಟು ಹೆಚ್ಚು ಸಬ್​ಸ್ಕ್ರೈಬ್ ಆಗಿತ್ತು. ಅಮೆರಿಕದ ಡಾಲರ್ ಬಾಂಡ್‌ಗಳ ಒಕ್ಕೂಟ ವಿತರಣೆಯನ್ನು ಮೂರು ಹಂತಗಳಲ್ಲಿ ಮಾಡಿದೆ – 10 ವರ್ಷಗಳವರೆಗೆ 1.5 ಶತಕೋಟಿ ಯುಎಸ್​ಡಿ ಶೇ 2.875, 1.75 ಶತಕೋಟಿ ಯುಎಸ್​ಡಿ 30 ವರ್ಷಗಳವರೆಗೆ ಶೇ 3.625 ಮತ್ತು 750 ಮಿಲಿಯನ್ ಡಾಲರ್ 40 ವರ್ಷಗಳ ಅವಧಿಗೆ ಮತ್ತು ಶೇ 3.750 ಕೂಪನ್ ದರ. ಆದಾಯವನ್ನು ಮುಖ್ಯವಾಗಿ ಸದ್ಯಕ್ಕೆ ಇರುವ ಸಾಲಗಳ ಮರು ಫೈನಾನ್ಸ್​ಗಾಗಿ ಬಳಸಲಾಗುತ್ತದೆ. ರಿಲಯನ್ಸ್​ನ ಜಂಟಿ ಮುಖ್ಯ ಹಣಕಾಸು ಅಧಿಕಾರಿ ಶ್ರೀಕಾಂತ್ ವೆಂಕಟಾಚಾರಿ ಹೇಳಿಕೆಯಲ್ಲಿ ತಿಳಿಸಿರುವಂತೆ, ಈ ವಿತರಣೆಯು ಕಂಪೆನಿಯ ಅತಿದೊಡ್ಡ ಸಾಲ ಬಂಡವಾಳ ಮಾರುಕಟ್ಟೆ ವಹಿವಾಟಾಗಿದೆ ಮತ್ತು “ಭಾರತದ ಯಾವುದೇ ಕಾರ್ಪೊರೇಟ್‌ ಹೊಂದಿರುವ ದೀರ್ಘಾವಧಿಯ ಪ್ರತಿ ಅವಧಿಯ ಬಿಗಿಯಾದ ಸಾಲ ಇದಾಗಿದೆ,” ಎಂದು ಹೇಳಿದ್ದಾರೆ.

“ಎನರ್ಜಿ, ಗ್ರಾಹಕ ಮತ್ತು ತಂತ್ರಜ್ಞಾನದಾದ್ಯಂತ ನಮ್ಮ ಆಧಾರವಾಗಿರುವ ವ್ಯವಹಾರಗಳ ಬಲವನ್ನು ಮಾರ್ಕ್ಯೂ ಅಂತರಾಷ್ಟ್ರೀಯ ಬಂಡವಾಳ ಮಾರುಕಟ್ಟೆ ಹೂಡಿಕೆದಾರರಿಂದ ಪಡೆದ ಬೆಂಬಲವು ಪ್ರತಿಬಿಂಬಿಸುತ್ತದೆ ಮತ್ತು ನಮ್ಮ ಬ್ಯಾಲೆನ್ಸ್ ಶೀಟ್‌ನ ದೃಢತೆಯನ್ನು ಪ್ರತಿಬಿಂಬಿಸುತ್ತದೆ. ಈ ಇಶ್ಯೂ ಬಂಡವಾಳ ರಚನೆಯಾದ್ಯಂತ ರಿಲಯನ್ಸ್ ಅತ್ಯಾಧುನಿಕ ಮತ್ತು ನವೀನ ವಿತರಕರ ಸಂಪ್ರದಾಯವನ್ನು ಮುಂದುವರೆಸಿದೆ,” ಎಂದು ಅವರು ಹೇಳಿದ್ದಾರೆ. ನೋಟ್​ಗಳನ್ನು 120 ಬೇಸಿಸ್ ಪಾಯಿಂಟ್‌ಗಳು, 160 ಬೇಸಿಸ್ ಪಾಯಿಂಟ್‌ಗಳು ಮತ್ತು 170 ಬೇಸಿಸ್ ಪಾಯಿಂಟ್‌ಗಳಲ್ಲಿ ಆಯಾ ಯುಎಸ್​ ಟ್ರೆಷರಿಗಳ ಮಾನದಂಡಕ್ಕಿಂತ ಸ್ಪರ್ಧಾತ್ಮಕವಾಗಿ ಬೆಲೆ ನಿಗದಿಪಡಿಸಲಾಗಿದೆ. ಈ ಇಶ್ಯೂ ಬೆಂಚ್‌ಮಾರ್ಕ್ 30-ವರ್ಷ ಮತ್ತು 40-ವರ್ಷಗಳ ವಿತರಣೆಗಳಿಗಾಗಿ ಸಾಧಿಸಿದ ಅತ್ಯಂತ ಕಡಿಮೆ ಕೂಪನ್ ಅನ್ನು ಹೊಂದಿದೆ ಮತ್ತು ಜಪಾನ್ ಹೊರತುಪಡಿಸಿ ಏಷ್ಯಾದಿಂದ ‘BBB’ ರೇಟ್ ಪಡೆದ ಖಾಸಗಿ ವಲಯದ ಕಾರ್ಪೊರೇಟ್‌ನಿಂದ ಇದು ಮೊದಲ 40 ವರ್ಷಗಳ ಅವಧಿಯಾಗಿದೆ.

ಏಷ್ಯಾ, ಯುರೋಪ್ ಮತ್ತು ಯುನೈಟೆಡ್ ಸ್ಟೇಟ್ಸ್‌ನ 200ಕ್ಕೂ ಹೆಚ್ಚು ಖಾತೆಗಳಿಂದ ನೋಟ್​ಗಳು ಆರ್ಡರ್ ಪಡೆದಿವೆ ಎಂದು ರಿಲಯನ್ಸ್ ಹೇಳಿದೆ. “ನೋಟ್​ಗಳನ್ನು ಉತ್ತಮ ಗುಣಮಟ್ಟದ ಸ್ಥಿರ ಆದಾಯದ ಖಾತೆಗಳಿಗೆ ವಿತರಿಸಲಾಗಿದೆ: ಶೇ 69 ನಿಧಿ ವ್ಯವಸ್ಥಾಪಕರಿಗೆ, ಶೇ 24 ವಿಮಾ ಕಂಪೆನಿಗಳಿಗೆ, ಶೇ 5 ಬ್ಯಾಂಕ್‌ಗಳಿಗೆ ಮತ್ತು ಶೇ 2ರಷ್ಟು ಸಾರ್ವಜನಿಕ ಸಂಸ್ಥೆಗಳಿಗೆ,” ಎಂದು ಕಂಪೆನಿ ಹೇಳಿದೆ. ರೇಟಿಂಗ್ ಏಜೆನ್ಸಿ ಮೂಡೀಸ್ ಬಾಂಡ್ ಅನ್ನು ‘Baa2’ ಎಂದು ರೇಟ್ ಮಾಡಿದ್ದರೆ, S&P ಗ್ಲೋಬಲ್ ರೇಟಿಂಗ್ ಅದಕ್ಕೆ ‘BBB+’ ನೀಡಿತು; ಇಬ್ಬರೂ ಬಾಂಡ್‌ಗಳ ಮೇಲೆ ‘ಸ್ಥಿರ’ ದೃಷ್ಟಿಕೋನವನ್ನು ಹೊಂದಿದ್ದರು. ನೋಟ್​ಗಳ ಮೇಲಿನ ಬಡ್ಡಿಯನ್ನು ಅರ್ಧ ವಾರ್ಷಿಕವಾಗಿ ಬಾಕಿಯಲ್ಲಿ ಪಾವತಿಸಲಾಗುವುದು ಮತ್ತು ನೋಟ್​ಗಳು ರಿಲಯನ್ಸ್​ನ ಎಲ್ಲ ಇತರ ಅಸುರಕ್ಷಿತ ಮತ್ತು ಅಧೀನವಲ್ಲದ ಬಾಧ್ಯತೆಗಳಿಗೆ ಸಮನಾಗಿರುತ್ತದೆ.

BoFA ಸೆಕ್ಯೂರಿಟೀಸ್, ಸಿಟಿಗ್ರೂಪ್ ಮತ್ತು HSBC ಈ ಇಶ್ಯೂನ ಜಂಟಿ ಜಾಗತಿಕ ಸಂಯೋಜಕವಾಗಿತ್ತು. BofA ಸೆಕ್ಯೂರಿಟೀಸ್, ಸಿಟಿಗ್ರೂಪ್, ಎಚ್​ಎಸ್​ಬಿಸಿ, ಬಾರ್​ಕ್ಲೇಸ್, ಜೆ.ಪಿ. ಮೋರ್ಗನ್ ಮತ್ತು MUFG ಜಂಟಿ ಸಕ್ರಿಯ ಬುಕ್‌ರನ್ನರ್‌ಗಳಾಗಿ ಕಾರ್ಯ ನಿರ್ವಹಿಸಿದವು. ANZ, BNP ಪರಿಬಾಸ್, ಕ್ರೆಡಿಟ್ ಅಗ್ರಿಕೋಲ್ CIB, ಡಿಬಿಎಸ್ ಬ್ಯಾಂಕ್, ಮಿಝುಹೊ ಸೆಕ್ಯುರಿಟೀಸ್, SMBC ನಿಕ್ಕೊ, ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಲಂಡನ್ ಶಾಖೆ ಜಂಟಿ ಪ್ಯಾಸಿವ್ ಬುಕ್‌ರನ್ನರ್‌ಗಳಾಗಿದ್ದವು.

ಇದನ್ನೂ ಓದಿ: Most Valuable Companies Of India: ಭಾರತದ ಅತ್ಯಂತ ಮೌಲ್ಯಯುತ ಕಂಪೆನಿಗಳ ಪಟ್ಟಿಯ ಮೊದಲ ಸ್ಥಾನದಲ್ಲಿ ರಿಲಯನ್ಸ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada