Gold Rate: ಆಭರಣ ಪ್ರಿಯರಿಗೆ ಶಾಕ್! ಚಿನ್ನ, ಬೆಳ್ಳಿ ದರ ಏರಿಕೆ

Gold Silver Price Today: ಇಂದು ಚಿನ್ನದ ದರದಲ್ಲಿ (Gold Price) ಏರಿಕೆ ಕಂಡಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 45,150 ರೂ. ಇದೆ. ಇದೇ ಚಿನ್ನ 100 ಗ್ರಾಂಗೆ 4,51,500 ರೂ. ನಿಗದಿಯಾಗಿದೆ. ನಿನ್ನೆ 22 ಕ್ಯಾರೆಟ್ 10 ಗ್ರಾಂಗೆ 44,900 ರೂಪಾಯಿ ಇತ್ತು.

Gold Rate: ಆಭರಣ ಪ್ರಿಯರಿಗೆ ಶಾಕ್! ಚಿನ್ನ, ಬೆಳ್ಳಿ ದರ ಏರಿಕೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: sandhya thejappa

Updated on: Jan 06, 2022 | 8:43 AM

ಕರ್ನಾಟಕ ರಾಜ್ಯದಲ್ಲಿ ಕೊರೊನಾ (Coronavirus) ಮೂರನೇ ಅಲೆ ಆತಂಕದ ಹಿನ್ನೆಲೆ ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನ ಜಾರಿಗೆ ತಂದಿದೆ. ನಾಳೆ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆ ವರೆಗೆ ವೀಕೆಂಡ್ ಕರ್ಫ್ಯೂ ಜಾರಿ ಇರುತ್ತದೆ. ಹೀಗಾಗಿ ಆಭರಣ ಕೊಳ್ಳುವವರು ಇಂದೇ ಖರೀದಿಸಬೇಕು. ಆಭರಣ ಪ್ರಿಯರಿಗೆ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರ ನೋಡುವ ಅಭ್ಯಾಸ ಇರುತ್ತದೆ. ಅದರಲ್ಲೂ ಸದ್ಯ ಕೊರೊನಾ ಕಾರಣದಿಂದ ಆಭರಣದ ಬೆಲೆ ಕಡಿಮೆಯಾಗಿದೆಯಾ ಎಂಬ ಕುತೂಹಲ ಕೂಡಾ ಇರುತ್ತದೆ. ಇಂದು (ಜ.6) ಆಭರಣದ ಬೆಲೆ ಎಷ್ಟಿದೆ? ನಿನ್ನೆಗಿಂತ ದರ ಏರಿಕೆಯಾಗಿದೆಯಾ? ಅಥವಾ ಇಳಿಕೆಯಾಗಿದೆಯಾ? ಅಂತ ಇಲ್ಲಿ ತಿಳಿಸಿದ್ದೇವೆ ಗಮನಿಸಿ.

ಬೆಂಗಳೂರಿನಲ್ಲಿ ಆಭರಣದ ದರ ಹೀಗಿದೆ (Bangalore Gold Price) ಇಂದು ಚಿನ್ನದ ದರದಲ್ಲಿ (Gold Price) ಏರಿಕೆ ಕಂಡಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 45,150 ರೂ. ಇದೆ. ಇದೇ ಚಿನ್ನ 100 ಗ್ರಾಂಗೆ 4,51,500 ರೂ. ನಿಗದಿಯಾಗಿದೆ. ನಿನ್ನೆ 22 ಕ್ಯಾರೆಟ್ 10 ಗ್ರಾಂಗೆ 44,900 ರೂಪಾಯಿ ಇತ್ತು. ನಿನ್ನೆ ದರ ಗಮನಿಸಿದಾಗ 10 ಗ್ರಾಂ ಗೆ ಇಂದು ಸುಮಾರು 250 ರೂಪಾಯಿ ಹೆಚ್ಚಾಗಿದೆ. ಇನ್ನು 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ ಇಂದು 49,250 ರೂ. ಮತ್ತು 100 ಗ್ರಾಂಗೆ 4,92,500 ರೂಪಾಯಿ ದರ ನಿಗದಿಯಾಗಿದೆ. ನಿನ್ನೆ ಇದೇ ಚಿನ್ನ 10 ಗ್ರಾಂಗೆ 48,990 ರೂಪಾಯಿ ಇತ್ತು. ಇಂದು 24 ಕ್ಯಾರೆಟ್ ಪ್ರತಿ 10 ಗ್ರಾಂಗೆ ಚಿನ್ನಕ್ಕೆ 260 ರೂಪಾಯಿ ಏರಿಕೆಯಾಗಿದೆ. ಬೆಳ್ಳಿ ಖರೀದಿಸುವವರಿಗೂ ಶಾಕ್ ಎದುರಾಗಿದ್ದು, 1 ಕೆಜಿ ಬೆಳ್ಳಿಗೆ (Silver Price) 600 ರೂ. ಹೆಚ್ಚಾಗಿದೆ. ಪ್ರತಿ ಒಂದು ಕೆಜಿ ಬೆಳ್ಳಿಗೆ ಇಂದು 62,300 ರೂಪಾಯಿ ಇದೆ.

ದೆಹಲಿಯಲ್ಲಿ ಆಭರಣದ ದರ ಎಷ್ಟಿದೆ? (Delhi Gold Price) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 47,300 ರೂ. ಇದ್ದರೆ, ಇದೇ 100 ಗ್ರಾಂ ಚಿನ್ನಕ್ಕೆ 4,73,000 ರೂ. ಇದೆ. ಇನ್ನು ದೆಹಲಿಯಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 51,580 ರೂ. ಇದೆ. 100 ಗ್ರಾಂ ಗೆ 5,15,800 ರೂ. ಇದೆ. ನಗರದಲ್ಲಿ ನಿನ್ನೆಗಿಂತ ಪ್ರತಿ 10 ಗ್ರಾಂಗೆ 250 ರೂ. ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿಗೆ 62,300 ರೂಪಾಯಿ ಇದೆ.

ಮುಂಬೈನಲ್ಲಿ ಆಭರಣದ ಬೆಲೆ ಎಷ್ಟಿದೆ ನೋಡಿ (Mumbai Gold Price) ಮುಂಬೈನಲ್ಲಿ ನಿನ್ನೆಗಿಂತ ಚಿನ್ನದ ಬೆಲೆ ಕಡಿಮೆಯಾಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 47,080 ರೂ. ಇದೆ. 100 ಗ್ರಾಂಗೆ 4,70,800 ರೂ. ಇದೆ. ನಿನ್ನೆ ಇದೇ 10 ಗ್ರಾಂ ಚಿನ್ನಕ್ಕೆ 47,260 ರೂ. ಇತ್ತು. ಅಂದರೆ ಇಂದು ಪ್ರತಿ 10 ಗ್ರಾಂಗೆ 180 ರೂ ಇಳಿಕೆಯಾಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 49,080 ರೂ. ಮತ್ತು 100 ಗ್ರಾಂಗೆ 49,90,800 ರೂ. ನಿಗದಿಯಾಗಿದೆ. ಮುಂಬೈನಲ್ಲಿ 1 ಕೆಜಿ ಬೆಳ್ಳಿಗೆ 62,300 ಇದೆ. ನಿನ್ನೆ 61,700 ರೂ. ಇತ್ತು. ಆದರೆ ಇಂದು ಪ್ರತಿ ಕೆಜಿ ಮೇಲೆ 600 ರೂ. ಏರಿಕೆಯಾಗಿದೆ.

ಇದನ್ನೂ ಓದಿ

ಆಮದು ಸುಂಕ ವಂಚನೆ ಆರೋಪ; 653 ಕೋಟಿ ರೂಪಾಯಿ ಪಾವತಿಗೆ ಶಿಯೋಮಿ ಇಂಡಿಯಾ ಘಟಕಕ್ಕೆ ನೋಟಿಸ್

Pro Kabaddi: ಪ್ರೊ ಕಬಡ್ಡಿಯಲ್ಲಿ ಮತ್ತೊಂದು ರೋಚಕ ಕದನ: 36-35 ಅಂಕಗಳಿಂದ ಗೆದ್ದ ದಬಂಗ್ ಡೆಲ್ಲಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್