Pro Kabaddi: ಪ್ರೊ ಕಬಡ್ಡಿಯಲ್ಲಿ ಮತ್ತೊಂದು ರೋಚಕ ಕದನ: 36-35 ಅಂಕಗಳಿಂದ ಗೆದ್ದ ದಬಂಗ್ ಡೆಲ್ಲಿ

PKL 8: ಎರಡನೇ ಪಂದ್ಯದಲ್ಲಿ ಅಂತಿಮ ಕ್ಷಣದ ಒತ್ತಡವನ್ನು ಸಮರ್ಥವಾಗಿ ನಿರ್ವಹಿಸಿದ ದಬಾಂಗ್‌ ಡೆಲ್ಲಿ ತಂಡ ಲೀಗ್‌ನ 35ನೇ ಪಂದ್ಯದಲ್ಲಿ 36-35 ಅಂಕಗಳ ಅಂತರದಿಂದ ತೆಲುಗು ಟೈಟನ್ಸ್‌ ತಂಡವನ್ನು ಸೋಲಿಸಿ ಟೂರ್ನಿಯಲ್ಲಿ ಮೂರನೇ ಜಯ ದಾಖಲಿಸಿತು.

Pro Kabaddi: ಪ್ರೊ ಕಬಡ್ಡಿಯಲ್ಲಿ ಮತ್ತೊಂದು ರೋಚಕ ಕದನ: 36-35 ಅಂಕಗಳಿಂದ ಗೆದ್ದ ದಬಂಗ್ ಡೆಲ್ಲಿ
Dabang Delhi vs Telugu Titans
Follow us
TV9 Web
| Updated By: Vinay Bhat

Updated on: Jan 06, 2022 | 8:23 AM

ಎಂಟನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್​ನ (Pro Kabaddi League) ಪ್ರತಿಯೊಂದು ಪಂದ್ಯ ರೋಚಕತೆ ಸೃಷ್ಟಿಸುತ್ತಿದೆ. ಬುಧವಾರ ನಡೆದ ದಬಂಗ್ ಡೆಲ್ಲಿ ಮತ್ತು ತೆಲುಗು ಟೈಟಾನ್ಸ್ ನಡುವಣ ಪಂದ್ಯ ಕೂಡ ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸಿತು. ಕೊನೇ ಹಂತದ ವರೆಗೂ ಗೆಲುವು ಯಾರಿಗೆಂದು ಊಹಿಸಲು ಸಾಧ್ಯವಿರಲಿಲ್ಲ. ಅಂತಿಮವಾಗಿ ದಬಂಗ್ ಡೆಲ್ಲಿ (Dabang Delhi) 36-35 ಅಂಕಗಳಿಂದ ರೋಚಕ ಗೆಲುವು ಪಡೆಯಿತು. ಈ ಮೂಲಕ ದಬಂಗ್ ಡೆಲ್ಲಿ 4ನೇ ಜಯದೊಂದಿಗೆ ಮುನ್ನುಗ್ಗಿದೆ. ಇನ್ನೂ ಗೆಲುವಿನ ಮುಖ ಕಾಣದ ತೆಲುಗು ಟೈಟಾನ್ಸ್‌ಗೆ (Telugu Titans) ಎದುರಾದ 4ನೇ ಸೋಲು ಇದಾಗಿದೆ. ಮತ್ತೊಂದು ಪಂದ್ಯದಲ್ಲಿ ಪುನೇರಿ ಪಲ್ಟಾನ್‌ (Puneri Paltan) 33-26 ಅಂತರದಿಂದ ಗುಜರಾತ್‌ ಜೈಂಟ್ಸ್‌ಗೆ (Gujarat Giants) ಸೋಲುಣಿಸಿತು.

ವೈಟ್‌ಫೀಲ್ಡ್‌ನ ಶೆರ್ಟಾನ್‌ ಗ್ರ್ಯಾಂಡ್‌ ಹೋಟೆಲ್‌ ಆವರಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಪುಣೇರಿ ತಂಡ ಗುಜರಾತ್‌ ತಂಡಕ್ಕೆ ಸೋಲುಣಿಸಿತು. ಮೊದಲ ಅವಧಿಯ ಅಂತ್ಯಕ್ಕೆ 19-13ರಲ್ಲಿ ಮುನ್ನಡೆ ಕಾಯ್ದುಕೊಂಡ ವಿಶಾಲ್‌ ಭಾರದ್ವಾಜ್‌ ಬಳಗ ಎರಡನೇ ಅವಧಿಯಲ್ಲೂ ಸ್ಥಿರ ಪ್ರದರ್ಶನ ಕಾಯ್ದುಕೊಂಡಿತು. ಭಾರತ ತಂಡದ ಮಾಜಿ ಆಟಗಾರ ಅನೂಪ್‌ ಕುಮಾರ್‌ ಅವರ ಗರಡಿಯಲ್ಲಿ ಪಳಗಿರುವ ಪಲ್ಟನ್‌ ತಂಡದ 2ನೇ ಗೆಲುವಿನಲ್ಲಿ ರೋಹಿತ್‌ ಮತ್ತು ಅಸ್ಲಾಮ್‌ ನಿರ್ಣಾಯಕ ಪಾತ್ರವಹಿಸಿದರು.

ಪುಣೇರಿ ತಂಡದ ಗೆಲುವಿನಲ್ಲಿ ರೇಡರ್ಸ್ ಮೋಹಿತ್ ಗೋಯತ್ (10 ಅಂಕ) ಮತ್ತು ಅಸ್ಲಮ್ ಇನಾಮ್ದಾರ್ (8 ಅಂಕ) ಪ್ರಮುಖ ಪಾ್ರ ವಹಿಸಿದರು. ಗುಜರಾತ್ ತಂಡದ ಪರ ಅಜಯ್ ಕುಮಾರ್ ಮತ್ತು ರಾಕೇಶ್ ಉತ್ತಮ ಪ್ರದರ್ಶನ ನೀಡಿದರು. ಇದು ಈ ಸೀಸನ್​ನಲ್ಲಿ ಪುಣೇರಿಗೆ ಸಿಕ್ಕ ಎರಡನೇ ಗೆಲುವಾಗಿದೆ. ಆದರೂ ಪುಣೇರಿ ತಂಡ ಅಂಕಪಟ್ಟಿಯಲ್ಲಿ ತಳದಲ್ಲೇ ಇದೆ. ಒಂದೂ ಗೆಲುವು ಕಾಣದ ತೆಲುಗು ಟೈಟಾನ್ಸ್ ಪುಣೇರಿಗಿಂತ ಒಂದು ಸ್ಥಾನ ಮೇಲಿದೆ.

ಇನ್ನು ಎರಡನೇ ಪಂದ್ಯದಲ್ಲಿ ಅಂತಿಮ ಕ್ಷಣದ ಒತ್ತಡವನ್ನು ಸಮರ್ಥವಾಗಿ ನಿರ್ವಹಿಸಿದ ದಬಾಂಗ್‌ ಡೆಲ್ಲಿ ತಂಡ ಲೀಗ್‌ನ 35ನೇ ಪಂದ್ಯದಲ್ಲಿ 36-35 ಅಂಕಗಳ ಅಂತರದಿಂದ ತೆಲುಗು ಟೈಟನ್ಸ್‌ ತಂಡವನ್ನು ಸೋಲಿಸಿ ಟೂರ್ನಿಯಲ್ಲಿ ಮೂರನೇ ಜಯ ದಾಖಲಿಸಿತು. ಕಳೆದ ಮೂರು ಪಂದ್ಯಗಳಲ್ಲಿ ನವೀನ್ ಕುಮಾರ್ 20ಕ್ಕೂ ಹೆಚ್ಚು ಅಂಕ ಗಳಿಸಿದ್ದಾರೆ. ಇವತ್ತು ಡೆಲ್ಲಿ ಗಳಿಸಿದ 36 ಅಂಕಗಳಲ್ಲಿ ನವೀನ್ ಅವರೊಬ್ಬರೇ 25 ಅಂಕ ಗಳಿಸಿದರು. ನವೀನ್​ಗೆ ಸರಿಸಾಟಿ ಎನ್ನುವಂತ ಪ್ರದರ್ಶನವನ್ನ ತೆಲುಗು ಟೈಟಾನ್ಸ್ ತಂಡದ ರೇಡರ್ ರಜನೀಶ್ ನೀಡಿದರು. ಗಾಯಾಳು ಬಾಹುಬಲಿ ಸಿದ್ಧಾರ್ಥ್ ದೇಸಾಯಿ ಅನುಪಸ್ಥಿತಿಯಲ್ಲಿ ಆಡುತ್ತಿರುವ ತೆಲುಗು ಟೈಟಾನ್ಸ್ ತಂಡ ಈ ಪಂದ್ಯದಲ್ಲಿ ವೀರೋಚಿತ ಹೋರಾಟ ತೋರಿದರೂ ಗೆಲುವು ದಕ್ಕಲಿಲ್ಲ.

ಈ ಗೆಲುವಿನೊಂದಿಗೆ ಒಟ್ಟು 26 ಅಂಕ ಕಲೆಹಾಕಿದ ದಬಾಂಗ್‌, ಬೆಂಗಳೂರು ಬುಲ್ಸ್‌ (23 ಅಂಕ) ತಂಡವನ್ನು ದ್ವಿತೀಯ ಸ್ಥಾನಕ್ಕೆ ದೂಡಿ ಮತ್ತೆ ಅಗ್ರಸ್ಥಾನಕ್ಕೇರಿತು.

South Africa vs India: ಇಂದೇ ನಿರ್ಧಾರವಾಗಲಿದೆ 2ನೇ ಟೆಸ್ಟ್ ಭವಿಷ್ಯ: ಯಾರಿಗೆ ಒಲಿಯಲಿದೆ ವಿಜಯಲಕ್ಷ್ಮಿ