ಷೇರುಪೇಟೆಯಲ್ಲಿ ಒಮಿಕ್ರಾನ್ ಭೀತಿ; 800ಕ್ಕೂ ಹೆಚ್ಚು ಪಾಯಿಂಟ್ಸ್ ಕುಸಿದ ಸೆನ್ಸೆಕ್ಸ್, ನಿಫ್ಟಿ 230 ಪಾಯಿಂಟ್ಸ್ ಇಳಿಕೆ

ಷೇರುಪೇಟೆಯಲ್ಲಿ ಒಮಿಕ್ರಾನ್ ಭೀತಿ; 800ಕ್ಕೂ ಹೆಚ್ಚು ಪಾಯಿಂಟ್ಸ್ ಕುಸಿದ ಸೆನ್ಸೆಕ್ಸ್, ನಿಫ್ಟಿ 230 ಪಾಯಿಂಟ್ಸ್ ಇಳಿಕೆ
ಸಾಂದರ್ಭಿಕ ಚಿತ್ರ

ಒಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳು ಗುರುವಾರ ಆರಂಭದ ವಹಿವಾಟಿನಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆ ದಾಖಲಿಸಿವೆ.

TV9kannada Web Team

| Edited By: Srinivas Mata

Jan 06, 2022 | 10:56 AM

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕವು ಜನವರಿ 6ನೇ ತಾರೀಕಿನ ಗುರುವಾರ ಬೆಳಗ್ಗೆ ವಹಿವಾಟಿನಲ್ಲಿ ಭಾರೀ ಪ್ರಮಾಣದ ಇಳಿಕೆ ದಾಖಲಿಸಿದೆ. ಹೆಚ್ಚುತ್ತಿರುವ ಒಮಿಕ್ರಾನ್ ಪ್ರಕರಣಗಳು ಹಾಗೂ ಜಾಗತಿಕ ಮಾರುಕಟ್ಟೆಯ ಪ್ರಭಾವ ದೇಶೀಯ ಮಾರುಕಟ್ಟೆ ಮೇಲೆ ಬೀರಿತು. ಬೆಳಗ್ಗೆ 10 ಗಂಟೆ ಹೊತ್ತಿಗೆ ಬಿಎಸ್​ಇ ಸೆನ್ಸೆಕ್ಸ್ ಸೂಚ್ಯಂಕವು 709.80 ಪಾಯಿಂಟ್ಸ್ ಅಥವಾ ಶೇ 1.18ರಷ್ಟು ನೆಲ ಕಚ್ಚಿ 59,513.35 ಪಾಯಿಂಟ್ಸ್​​ನಲ್ಲಿದ್ದರೆ, ನಿಫ್ಟಿ 200 ಪಾಯಿಂಟ್ಸ್ ಅಥವಾ ಶೇ 1.12ರಷ್ಟು ಇಳಿಕೆ ಕಂಡು 17,725.30 ಪಾಯಿಂಟ್ಸ್​ನಲ್ಲಿ ವಹಿವಾಟು ನಡೆಸುತ್ತಿತ್ತು. 1283 ಕಂಪೆನಿಯ ಷೇರುಗಳು ಏರಿಕೆಯನ್ನು ದಾಖಲಿಸಿದ್ದರೆ, 1683 ಕಂಪೆನಿಯ ಷೇರುಗಳು ಇಳಿಕೆ ಕಂಡವು ಮತ್ತು 71 ಕಂಪೆನಿಗಳ ಷೇರಿನಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ. ಕೊರೊನಾದ ಮೂರನೇ ಅಲೆಯಿಂದ ನಾಲ್ಕನೇ ತ್ರೈಮಾಸಿಕದ ಜಿಡಿಪಿಯ 40 ಬಿಪಿಎಸ್​ ಕಡಿಮೆ ಆಗಬಹುದು ಮತ್ತು ಜಿಡಿಪಿ ಬೆಳವಣಿಗೆ ಶೇ 4.5- 5 ಇರಲಿದೆ ಎಂದು ICRA ರೇಟಿಂಗ್ಸ್ ಎಚ್ಚರಿಕೆ ನೀಡಿದೆ.

ಗುರುವಾರದಂದು ಅಮೆರಿಕ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 12 ಪೈಸೆ ಇಳಿಕೆಯೊಂದಿಗೆ ಆರಂಭವಾಯಿತು. ಬುಧವಾರ ದಿನಾಂತ್ಯಕ್ಕೆ 74.36ರಷ್ಟಿದ್ದದ್ದು ಗುರುವಾರ ಬೆಳಗ್ಗೆ 74.48ರೊಂದಿಗೆ ಶುರುವಾಯಿತು. ಜನವರಿ 27ರಂದು ಮೆಚ್ಯೂರ್ ಆಗುವ ರೂಪಾಯಿ ಫ್ಯೂಚರ್ ದುರ್ಬಲ ಡಾಲರ್ ವಿರುದ್ಧ ಶೇ 0.29ರಷ್ಟು ಏರಿಕೆ ಕಂಡಿತು. ದೇಶೀಯ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಅಪಾಯ ಮತ್ತು ಎಫ್​ಐಐ ಒಳಹರಿವಿನ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಆಯಿತು ಎಂದು ಅಭಿಪ್ರಾಯ ಪಡಲಾಗಿದೆ.

ಈ ವರದಿ ಸಿದ್ಧವಾಗುವ ಹೊತ್ತಿಗೆ ಸೆನ್ಸೆಕ್ಸ್ 817.65 ಪಾಯಿಂಟ್ಸ್, ನಿಫ್ಟಿ 50 230.45 ಪಾಯಿಂಟ್ಸ್ ಹಾಗೂ ಬ್ಯಾಂಕ್ ನಿಫ್ಟಿ 483.60 ಪಾಯಿಂಟ್ಸ್ ನೆಲ ಕಚ್ಚಿದೆ.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ ಯುಪಿಎಲ್ ಶೇ 2.05 ಹಿಂಡಾಲ್ಕೋ ಶೇ 1.33 ಮಾರುತಿ ಸುಜುಕಿ ಶೇ 0.79 ಬಜಾಜ್ ಆಟೋ ಶೇ 0.70 ಭಾರ್ತಿ ಏರ್​ಟೆಲ್ ಶೇ 0.64

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ ಅದಾನಿ ಪೋರ್ಟ್ಸ್ ಶೇ -2.77 ಎಚ್​ಡಿಎಫ್​ಸಿ ಶೇ -2.03 ಜೆಎಸ್​ಡಬ್ಲ್ಯು ಸ್ಟೀಲ್ ಶೇ -2.02 ಕೊಟಕ್ ಮಹೀಂದ್ರಾ ಶೇ -1.96 ಎಚ್​ಡಿಎಫ್​ಸಿ ಬ್ಯಾಂಕ್ ಶೇ -1.91

ಇದನ್ನೂ ಓದಿ: Multibagger Stocks: ಏನಿದು ಮಲ್ಟಿಬ್ಯಾಗರ್ ಸ್ಟಾಕ್? ಇದನ್ನು ಗುರುತಿಸುವುದು ಹೇಗೆ ತಿಳಿಯಿರಿ

Follow us on

Related Stories

Most Read Stories

Click on your DTH Provider to Add TV9 Kannada