AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಸತಿ ಯೋಜನೆಯಲ್ಲಿ 55% ಬೆಲೆ ಏರಿಕೆ, ಮುಂಬರುವ ದುಬಾರಿ ಮನೆಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಎರಡನೇ ಸ್ಥಾನ ಸಿಗಲಿದೆ; ವರದಿ

2024 ರ ದ್ವಿತೀಯಾರ್ಧದಲ್ಲಿ ಬೆಂಗಳೂರು ಸರಾಸರಿ ಬಾಡಿಗೆ ಮೌಲ್ಯದಲ್ಲಿ ಶೇಕಡಾ 10 ರಷ್ಟು ಹೆಚ್ಚಳವನ್ನು ಕಂಡಿದ್ದು, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ನಿರ್ಮಾಣ ಹಂತದಲ್ಲಿರುವ ವಸತಿ ಯೋಜನೆಗಳು 55% ಬೆಲೆ ಏರಿಕೆಯನ್ನು ದಾಖಲಿಸಿವೆ. ಇದು ಧನಾತ್ಮಕ ಬದಲಾವಣೆಗಳನ್ನು ತಂದಿವೆ ಎಂದು ಆಸ್ತಿ ಸಲಹಾ ಸಂಸ್ಥೆ ಸ್ಯಾವಿಲ್ಸ್‌ ಇಂಡಿಯಾದ ವರದಿ ಹೇಳಿದೆ.

ವಸತಿ ಯೋಜನೆಯಲ್ಲಿ 55% ಬೆಲೆ ಏರಿಕೆ, ಮುಂಬರುವ ದುಬಾರಿ ಮನೆಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಎರಡನೇ ಸ್ಥಾನ ಸಿಗಲಿದೆ; ವರದಿ
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Edited By: |

Updated on: Jan 04, 2025 | 2:23 PM

Share

ಭಾರತದ ವಸತಿ ಮಾರುಕಟ್ಟೆಯು ಸಾಕಷ್ಟು ಅಭಿವೃದ್ಧಿಯನ್ನು ಹೊಂದಿದ್ದು, 2024 ರ ಕೊನೆಯಲ್ಲಿ 3.05 ಲಕ್ಷ ಅಪಾರ್ಟ್‌ಮೆಂಟ್‌ಗಳು ಮಾರಾಟವಾಗುವ ಮೂಲಕ ಹೌಸಿಂಗ್‌ ಮಾರ್ಕೆಟ್‌ ಹೊಸ ದಾಖಲೆಯನ್ನು ಬರೆದಿತ್ತು. ಅದರಂತೆ ಈ ಬಾರಿಯೂ ವಸತಿ ಮಾರುಕಟ್ಟೆಯಲ್ಲಿ ಧನಾತ್ಮಕ ಬದಲಾವಣೆಗಳು ಕಂಡು ಬಂದಿದ್ದು, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ನಿರ್ಮಾಣ ಹಂತದಲ್ಲಿರುವ ವಸತಿ ಯೋಜನೆಗಳು 55% ಬೆಲೆ ಏರಿಕೆಯನ್ನು ದಾಖಲಿಸಿವೆ. ಮುಂಬರುವ ದಿನಗಳಲ್ಲಿ ದುಬಾರಿ ಮನೆಗಳು ಸೇಲ್‌ ಆಗುವ ಪಟ್ಟಿಯಲ್ಲಿ ಬೆಂಗಳೂರಿಗೆ ಎರಡನೇ ಸ್ಥಾನ ಲಭಿಸಲಿದೆ ಎಂದು ಆಸ್ತಿ ಸಲಹಾ ಸಂಸ್ಥೆ ಸ್ಯಾವಿಲ್ಸ್‌ ಇಂಡಿಯಾದ ವರದಿ ಹೇಳಿದೆ.

ಸ್ಯಾವಿಲ್ಸ್‌ ಇಂಡಿಯಾದ ಜನವರಿ 3 ರ ವರದಿಯ ಪ್ರಕಾರ, “ನಿರ್ಮಾಣ ಹಂತದಲ್ಲಿರುವ ಪ್ರಾಪರ್ಟಿಗಳು ಕಳೆದ ಒಂದು ವರ್ಷದಲ್ಲಿ ಸುಮಾರು 55% ರಷ್ಟು ಬೆಲೆ ಏರಿಕೆಯನ್ನು ದಾಖಲಿಸಿವೆ. ಭಾರತದ ಪ್ರಮುಖ ನಗರಗಳಾದ ದೆಹಲಿ, ಬೆಂಗಳೂರು, ಮುಂಬೈನಲ್ಲಿ ನಿರ್ಮಾಣ ಹಂತದಲ್ಲಿರುವ ಪ್ರೀಮಿಯಂ ವಸತಿ ಯೋಜನೆಗಳು ಸಹ 55% ವರೆಗೆ ಬೆಲೆ ಏರಿಕೆಯನ್ನು ಕಂಡಿವೆ . ಗುರುಗ್ರಾಮ 55% ಮತ್ತು ಮುಂಬೈ 10% ಹೆಚ್ಚಳದೊಂದಿಗೆ ನಿರ್ಮಾಣ ಹಂತದಲ್ಲಿರುವ ಆಸ್ತಿ ಮೌಲ್ಯಗಳಲ್ಲಿ ಏರಿಕೆಯನ್ನು ಕಂಡಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಬೆಂಗಳೂರು 25% ಮತ್ತು ಉತ್ತರ ಗೋವಾ 16% ರಷ್ಟು ಲಾಭವನ್ನು ಕಂಡಿವೆ.” ಉನ್ನತ ಮಟ್ಟದ ಸೌಕರ್ಯಗಳು, ಹೊಸ ಹೊಸ ಯೋಜನೆಗಳು ಇವೆಲ್ಲವೂ ಹೂಡಿಕೆ ಮಾಡಲು ಖರೀದಿದಾರರನ್ನು ಪ್ರೋತ್ಸಾಹಿಸಿತು ಎಂಬುದನ್ನು ಕೂಡಾ ಹೇಳಿದೆ.

ಇದನ್ನೂ ಓದಿ: ಹಣದ ವಿಚಾರವಾಗಿ ಭಾರತೀಯ ಮಹಿಳೆಯರು ತಮ್ಮ ಗಂಡಂದಿರನ್ನು ನಂಬಲ್ಲವಂತೆ; ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು?

ಬೆಂಗಳೂರಿನ ಪ್ರೀಮಿಯಂ ವಸತಿ ಮಾರುಕಟ್ಟೆಯು ನಿರ್ಮಾಣ ಹಂತದಲ್ಲಿರುವ ಪ್ರಾಜೆಕ್ಟ್‌ಗಳಲ್ಲಿ ಸರಾಸರಿ 25% YOY ಬೆಳವಣಿಗೆಯನ್ನು ಕಂಡಿದೆ, ಪೂರ್ಣಗೊಂಡ ಯೋಜನೆಗಳಲ್ಲಿ ಸುಮಾರು 19% YOY ಏರಿಕೆಯಾಗಿದೆ. ಅಲ್ಲದೆ 2024 ರ ದ್ವಿತೀಯಾರ್ಧದಲ್ಲಿ ಬೆಂಗಳೂರು ಸರಾಸರಿ ಬಾಡಿಗೆ ಮೌಲ್ಯದಲ್ಲಿ ಶೇ 10% ರಷ್ಟು ಹೆಚ್ಚಳವನ್ನು ಕಂಡಿದೆ. ಜೊತೆಗೆ ರೆಡಿ-ಟು-ಮೂವ್-ಇನ್ ಪ್ರಾಪರ್ಟಿಗಳಿಗೆ ಬಲವಾದ ಆದ್ಯತೆ ಇದೆ. ಇವೆಲ್ಲಾ ಅಂಶಗಳು . ಮುಂಬರುವ ದಿನಗಳಲ್ಲಿ ದುಬಾರಿ ಮನೆಗಳು ಸೇಲ್‌ ಆಗುವ ಪಟ್ಟಿಯಲ್ಲಿ ಬೆಂಗಳೂರಿಗೆ ಎರಡನೇ ಸ್ಥಾನ ಲಭಿಸಲಿದೆ ಎಂದು ಆಸ್ತಿ ಸಲಹಾ ಸಂಸ್ಥೆ ಸ್ಯಾವಿಲ್ಸ್‌ ಇಂಡಿಯಾದ ವರದಿ ಹೇಳಿದೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ