Viral: ಗೆಳತಿಯನ್ನು ಮೆಚ್ಚಿಸಲು ಸಿಂಹದ ಬೋನಿಗೆ ಹೋಗಿ ವಿಡಿಯೋ ಮಾಡಿದ ಪ್ರೇಮಿ; ಮುಂದೇನಾಯ್ತು ನೋಡಿ…

ತಾವು ಪ್ರೀತಿಸಿದ ಜೀವವನ್ನು ಖುಷಿ ಪಡಿಸಲು ಅಥವಾ ಮೆಚ್ಚಿಸಲು ಹೆಚ್ಚಿನವರು ಸರ್‌ಪ್ರೈಸ್‌ ಗಿಫ್ಟ್‌ ಎಲ್ಲಾ ನೀಡ್ತಾರೆ. ಆದ್ರೆ ಇಲ್ಲೊಬ್ಬ ಆಸಾಮಿ ತನ್ನ ಗೆಳತಿಯನ್ನು ಮೆಚ್ಚಿಸಲು ಸಿಂಹದ ಬೋನಿನೊಳಗೆ ನುಗ್ಗಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಹೌದು ಮೃಗಾಲದಯಲ್ಲಿ ಕೆಲಸ ಮಾಡುತ್ತಿದ್ದ ಆತ ಮುಂಜಾನೆಯ ವೇಳೆಗೆ ಬೋನಿನೊಳಗೆ ನುಗ್ಗಿ ಸಿಂಹದೊಂದಿಗೆ ವಿಡಿಯೋ ಮಾಡಲು ಹೋಗಿದ್ದಾರೆ. ಆದರೆ ದುರಾದೃಷ್ಟವಾಶ್‌ ಆಫ್ರಿಕನ್‌ ಸಿಂಹಗಳು ಅಟ್ಯಾಕ್‌ ಮಾಡಿ ಆತನನ್ನು ಬಾಗಶಃ ತಿಂದು ಹಾಕಿವೆ. ಈ ವಿಡಿಯೋ ಇದೀಗ ಭಾರೀ ವೈರಲ್‌ ಆಗುತ್ತಿದೆ.

Viral: ಗೆಳತಿಯನ್ನು ಮೆಚ್ಚಿಸಲು ಸಿಂಹದ ಬೋನಿಗೆ ಹೋಗಿ ವಿಡಿಯೋ ಮಾಡಿದ ಪ್ರೇಮಿ; ಮುಂದೇನಾಯ್ತು ನೋಡಿ…
ವೈರಲ್​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Jan 04, 2025 | 2:41 PM

ವಿಶೇಷವಾಗಿ ಹುಡುಗರು ತಮ್ಮ ಗೆಳತಿಯನ್ನು ಮೆಚ್ಚಿಸಲು ಹಲವು ರೀತಿಯ ಸರ್ಕಸ್‌ಗಳನ್ನು ಮಾಡುತ್ತಾರೆ. ಹೆಚ್ಚಾಗಿ ದುಬಾರಿ ಉಡುಗೊರೆ, ಸರ್‌ಪ್ರೈಸ್‌ ಗಿಫ್ಟ್‌ಗಳನ್ನು ನೀಡುವ ಮೂಲಕ ತಮ್ಮ ಗರ್ಲ್‌ಫ್ರೆಂಡ್‌ ಅನ್ನು ಮೆಚ್ಚಿಸುತ್ತಾರೆ. ಆದ್ರೆ ಇಲ್ಲೊಬ್ಬ ಆಸಾಮಿ ತನ್ನ ಗೆಳತಿಯನ್ನು ಮೆಚ್ಚಿಸಲು ದೊಡ್ಡದೊಂದು ಸಾಹಸಕ್ಕೆ ಕೈ ಹಾಕಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಹೌದು ಆತ ಗರ್ಲ್‌ಫ್ರೆಂಡ್‌ ಅನ್ನು ಇಂಪ್ರೆಸ್‌ ಮಾಡುವ ಸಲುವಾಗಿ ಆಫ್ರಿಕನ್‌ ಸಿಂಹಗಳಿದ್ದ ಬೋನಿನೊಳಗೆ ಪ್ರವೇಶಿಸಿ ವಿಡಿಯೋ ಮಾಡಿದ್ದಾನೆ. ಆದರೆ ದುರಾದೃಷ್ಟವಾಶ್‌ ಸಿಂಹಗಳು ಆತನ ಮೇಲೆ ಅಟ್ಯಾಕ್‌ ಮಾಡಿವೆ. ಈ ವಿಡಿಯೋ ಇದೀಗ ಭಾರೀ ವೈರಲ್‌ ಆಗುತ್ತಿದೆ.

ಡೈಲಿ ಮೇಲ್‌ ವರದಿಯ ಪ್ರಕಾರ, ಉಜ್ಬೇಕಿಸ್ತಾನದ ಪಾರ್ಕೆಂಟ್‌ನಲ್ಲಿ ಡಿಸೆಂಬರ್‌ 17 ರಂದು ಈ ಘಟನೆ ನಡೆದಿದ್ದು, ಸಿಂಹದ ಬೋನಿನೊಳಗೆ ನುಗ್ಗಿದ ವ್ಯಕ್ತಿಯೊಬ್ಬ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಮೃಗಾಲಯದಲ್ಲಿ ಕೆಲಸ ಮಾಡುತ್ತಿದ್ದ ಎಫ್‌ ಇರಿಸ್ಕುಲೋವ್‌ ಎಂಬ 44 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ತನ್ನ ಗೆಳತಿಯನ್ನು ಇಂಪ್ರೆಸ್‌ ಮಾಡುವ ಸಲುವಾಗಿ ಮುಂಜಾನೆ 5 ಗಂಟೆಯ ಸುಮಾರಿಗೆ ಆಫ್ರಿಕನ್‌ ಸಿಂಹಗಳಿದ್ದ ಬೋನಿಗೆ ಪ್ರವೇಶಿಸಿ ವಿಡಿಯೋ ಮಾಡಲು ಮುಂದಾಗಿದ್ದಾನೆ. ಹೀಗೆ ವಿಡಿಯೋ ಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಆತನ ಮೇಲೆ ಸಿಂಹಗಳು ದಾಳಿ ಮಾಡಿ ಆತನನ್ನು ಬಾಗಶಃ ತಿಂದು ಹಾಕಿವೆ. RebelwoaReason ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಮೃಗಾಲಯದ ಸಿಬ್ಬಂದಿ ವಿಡಿಯೋ ಮಾಡುತ್ತಲೇ ಸಿಂಹದ ಬೋನಿನ ಬೀಗ ತೆಗೆದು ಸಿಂಬಾ ಸಿಂಬಾ… ಎನ್ನುತ್ತಾ ಪ್ರವೇಶಿಸುತ್ತಿರುವ ದೃಶ್ಯವನ್ನು ಕಾಣಬಹುದು. ನಂತರ ಸಿಂಹಗಳು ಇದ್ದಕ್ಕಿದ್ದಂತೆ ಆತನ ಮೇಲೆರಗಿವೆ.

ಇದನ್ನೂ ಓದಿ: ಹಣದ ವಿಚಾರವಾಗಿ ಭಾರತೀಯ ಮಹಿಳೆಯರು ತಮ್ಮ ಗಂಡಂದಿರನ್ನು ನಂಬಲ್ಲವಂತೆ; ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು?

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಡಿಸೆಂಬರ್‌ 31 ರಂದು ಹಂಚಿಕೊಳ್ಳಲಾದ ಈ ವಿಡಿಯೋ 21 ಸಾವಿರ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಹುಚ್ಚುತನದ ಪರಮಾವಧಿʼ ಎಂದು ಕಾಮೆಂಟ್‌ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಯಾಕೆ ಪ್ರಾಣಿಗಳ ತಂಟೆಗೆ ಆತ ಹೋಗಿದ್ದುʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಯಾವುದೇ ಕಾಡು ಪ್ರಾಣಿಗಳನ್ನು ಲಘವಾಗಿ ತೆಗೆದುಕೊಳ್ಳಬಾರದುʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಈ ದೃಶ್ಯವನ್ನು ಕಂಡು ಫುಲ್‌ ಶಾಕ್‌ ಆಗಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 2:35 pm, Sat, 4 January 25

ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ