ರಿಲಯನ್ಸ್ ಜಿಯೋ 10,000 ರೂ ಪ್ರೀಪೇಯ್ಡ್ ಪ್ಲಾನ್; ಇದರ ವ್ಯಾಲಿಡಿಟಿ, ದೈನಂದಿನ ಡಾಟಾ, ಒಟಿಟಿ ಮತ್ತಿತರ ಸೇವೆಗಳ ವಿವರ

ರಿಲಯನ್ಸ್ ಜಿಯೋ 10,000 ರೂ ಬೆಲೆಯ ಹೊಸ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ಪರಿಚಯಿಸಿದೆ. ಮೂರು ವರ್ಷ ವ್ಯಾಲಿಡಿಟಿ ಇರುವ ಈ ಪ್ಲಾನ್​ನಲ್ಲಿ ದಿನಕ್ಕೆ 2.5 ಜಿಬಿ ಡಾಟಾ ಸಿಗುತ್ತದೆ. ವಿವಿಧ ಒಟಿಟಿ, ಕ್ಲೌಡ್ ಸ್ಟೋರೇಜ್, ಕ್ಯಾನ್ವಾ ಸಬ್​ಸ್ಕ್ರಿಪ್ಷನ್ ಇತ್ಯಾದಿ ಸೌಲಭ್ಯಗಳನ್ನು ಪಡೆಯಬಹುದು. ಈ ಪ್ಲಾನ್​ನಲ್ಲಿ ವ್ಯಾಲಿಡಿಟಿ, ಹೈ-ಸ್ಪೀಡ್ ಡೇಟಾ ಮತ್ತು ಇತ್ತೀಚಿನ ಪ್ರಯೋಜನಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ರಿಲಯನ್ಸ್ ಜಿಯೋ 10,000 ರೂ ಪ್ರೀಪೇಯ್ಡ್ ಪ್ಲಾನ್; ಇದರ ವ್ಯಾಲಿಡಿಟಿ, ದೈನಂದಿನ ಡಾಟಾ, ಒಟಿಟಿ ಮತ್ತಿತರ ಸೇವೆಗಳ ವಿವರ
ರಿಲಯನ್ಸ್ ಜಿಯೋ
Image Credit source: Getty Images

Updated on: Nov 10, 2026 | 1:07 PM

ನವದೆಹಲಿ, ನವೆಂಬರ್ 10: ಟೆಲಿಕಾಂ ವಲಯದಲ್ಲಿ ಹೊಸ ಸಂಚಲನ ಮೂಡಿಸಿರುವ ರಿಲಯನ್ಸ್ ಜಿಯೋ, ಗ್ರಾಹಕರಿಗಾಗಿ 10,000 ರೂ ಮೌಲ್ಯದ ಪ್ರೀಮಿಯಂ ಪ್ರಿಪೇಯ್ಡ್ ಪ್ಲಾನ್ ಅನ್ನು ಪರಿಚಯಿಸಿದೆ. ದೀರ್ಘಕಾಲೀನ ರೀಚಾರ್ಜ್ ಅಪ್​ಡೇಟ್‌ಗಳಿಂದ ಮುಕ್ತಿ ಪಡೆಯಲು ಬಯಸುವ ಬಳಕೆದಾರರನ್ನು ಇದು ಗುರಿಯಾಗಿಸಿದೆ.

ವ್ಯಾಲಿಡಿಟಿ ಮತ್ತು ಡೇಟಾ ಸೌಲಭ್ಯ: ಜಿಯೋದ 10,000 ರೂ ಪ್ಲಾನ್ ದೀರ್ಘಾವಧಿಯ ವ್ಯಾಲಿಡಿಟಿಯನ್ನು (Validity) ಹೊಂದಿದೆ. ಬಳಕೆದಾರರಿಗೆ ನಿರಂತರವಾಗಿ ಹೈ-ಸ್ಪೀಡ್ ಇಂಟರ್ನೆಟ್ ಡೇಟಾ ಮತ್ತು ಅನಿಯಮಿತ ಧ್ವನಿ ಕರೆಗಳ (Unlimited Voice Calls) ಪ್ರಯೋಜನವನ್ನು ಒದಗಿಸುತ್ತದೆ.

Loading...

ಹೆಚ್ಚುವರಿ ಪ್ರಯೋಜನಗಳು: ದೈನಂದಿನ ಡೇಟಾ ಕೋಟಾ, ಎಸ್‌ಎಂಎಸ್ (SMS) ಸೌಲಭ್ಯಗಳ ಜೊತೆಗೆ ಜಿಯೋದ ಅಧಿಕೃತ ಮನರಂಜನಾ ಆಪ್‌ಗಳಾದ ಜಿಯೋ ಸಿನಿಮಾ (JioCinema), ಜಿಯೋಟಿವಿ (JioTV) ಮುಂತಾದ ಸೇವೆಗಳಿಗೆ ಉಚಿತ ಚಂದಾದಾರಿಕೆ ಲಭ್ಯವಿರುತ್ತದೆ.

ಇದನ್ನೂ ಓದಿ: 6G India: ಭಾರತದಲ್ಲಿ 6G ಸೇವೆ ಯಾವಾಗ ಆರಂಭ? ಶೀಘ್ರದಲ್ಲೇ ಜಿಯೋದಿಂದ ಬಿಡುಗಡೆ

ರಿಲಯನ್ಸ್ ಜಿಯೋ 10,000 ರೂ ಪ್ಲಾನ್​ನ ಫೀಚರ್ಸ್

  • ವ್ಯಾಲಿಡಿಟಿ ಅವಧಿ ಮೂರು ವರ್ಷ (36 ತಿಂಗಳು)
  • ದಿನಕ್ಕೆ 2.5 ಜಿಬಿ ಡಾಟಾ
  • ದಿನಕ್ಕೆ 100 ಉಚಿತ ಎಸ್ಸೆಮ್ಮೆಸ್
  • ಜಿಯೋ ಹಾಟ್​ಸ್ಟಾರ್ ಮೊಬೈಲ್ ಸಬ್​ಸ್ಕ್ರಿಪ್ಷನ್
  • 12 ತಿಂಗಳು ಕ್ಯಾನ್ವಾ ಪ್ರೋ ಲೈಟ್
  • 50 ಜಿಬಿ ಜಿಯೋ ಎಐಕ್ಲೌಡ್ ಸ್ಟೋರೇಜ್

ಕ್ಯಾನ್ವಾ ಪ್ರೋ ಲೈಟ್​ನಲ್ಲಿ ಕ್ಯಾನ್ವಾದ ಡಿಸೈನ್ ಮತ್ತು ಕಂಟೆಂಟ್ ಕ್ರಿಯೇಶನ್ ಟೂಲ್​​ಗಳನ್ನು ಪಡೆಯಬಹುದು. ಇವು ಉತ್ಕೃಷ್ಟ ಗ್ರಾಫಿಕ್ಸ್ ಹಾಗೂ ವಿಡಿಯೋ ಕಂಟೆಂಟ್ ಸೃಷ್ಟಿಸಲು ಸಹಾಯವಾಗುತ್ತವೆ. ಇನ್ನು, ಕ್ಲೌಡ್ ಸ್ಟೋರೇಜ್​ನಲ್ಲಿ ನಿಮ್ಮ ಹಲವಾರು ಫೈಲ್​ಗಳು, ಫೋಟೋ, ವಿಡಿಯೋಗಳನ್ನು ಅನ್​ಲೈನ್​ನಲ್ಲಿ ಜೋಪಾನವಾಗಿ ಇಟ್ಟುಕೊಳ್ಳಬಹುದು.

ಇದನ್ನೂ ಓದಿ: ಅಮೆರಿಕದ ವಿಮಾನ ಕಂಪನಿ ಬೋಯಿಂಗ್​ನಿಂದ ಲೇ ಆಫ್ ನಿರ್ಧಾರ; ಶೇ. 5 ಉದ್ಯೋಗಿಗಳಿಗೆ ಕುತ್ತು

ಜಿಯೋ 10,000 ರೂ ಪ್ಲಾನ್ ಮೂರು ವರ್ಷ ವ್ಯಾಲಿಡಿಟಿ ಹೊಂದಿರುತ್ತದೆ. ಒಂದು ತಿಂಗಳಿಗೆ ಇದು 278 ರೂ ಆಗುತ್ತದೆ. ಪ್ರತೀ ದಿನ 2.5 ಜಿಬಿ ಡಾಟಾ ಸಿಗುತ್ತದೆ. ಜೊತೆಗೆ ಒಟಿಟಿ ಸಬ್​ಸ್ಕ್ರಿಪ್ಷನ್ ಕೂಡ ಇರುತ್ತದೆ. ಒಮ್ಮೆ ರೀಚಾರ್ಜ್ ಮಾಡಿದರೆ ಮೂರು ವರ್ಷ ತಲೆನೋವು ಇಲ್ಲದೇ ಇರಬಹುದು ಎನ್ನುವವರಿಗೆ ಇದು ಒಳ್ಳೆಯ ಪ್ಲಾನ್ ಎನಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us