AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮೆರಿಕದ ವಿಮಾನ ಕಂಪನಿ ಬೋಯಿಂಗ್​ನಿಂದ ಲೇ ಆಫ್ ನಿರ್ಧಾರ; ಶೇ. 5 ಉದ್ಯೋಗಿಗಳಿಗೆ ಕುತ್ತು

ವಿಶ್ವದ ಅತಿದೊಡ್ಡ ವಿಮಾನ ಸಂಸ್ಥೆಗಳಲ್ಲೊಂದಾದ ಬೋಯಿಂಗ್ ತನ್ನ ಶೇ. 5ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲು ನಿರ್ಧರಿಸಿದೆ. ಕಮರ್ಷಿಯಲ್ ಏರ್​ಲೈನ್ ವಿಭಾಗದ ಉದ್ಯೋಗಿಗಳನ್ನು ಗುರಿ ಮಾಡಲಾಗಿದೆ. ಡಿಸೆಂಬರ್​ನಲ್ಲಿ 60 ದಿನಗಳ ನೋಟೀಸ್ ನೀಡಲಾಗುತ್ತದೆ ಎಂದು ಆ ವಿಭಾಗದ ಮುಖ್ಯಸ್ಥೆ ಸ್ಟೆಫಾನೀ ಪೋಪ್ ಹೇಳಿದ್ದಾರೆ. ಬೋಯಿಂಗ್ ಸಂಸ್ಥೆಯಲ್ಲಿ ಒಟ್ಟು 1.82 ಲಕ್ಷ ಮಂದಿ ಉದ್ಯೋಗಿಗಳಿದ್ದಾರೆ.

ಅಮೆರಿಕದ ವಿಮಾನ ಕಂಪನಿ ಬೋಯಿಂಗ್​ನಿಂದ ಲೇ ಆಫ್ ನಿರ್ಧಾರ; ಶೇ. 5 ಉದ್ಯೋಗಿಗಳಿಗೆ ಕುತ್ತು
ಬೋಯಿಂಗ್ ವಿಮಾನImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 10, 2026 | 10:26 AM

Share

ವಾಷಿಂಗ್ಟನ್, ನವೆಂಬರ್ 10: ಅಮೆರಿಕದ ಏರೋಸ್ಪೇಸ್ ಕಂಪನಿಯಾದ ಬೋಯಿಂಗ್ ಲೇ ಆಫ್ ಕ್ರಮಕ್ಕೆ ಮುಂದಾಗಿದೆ. ತನ್ನ ಕಮರ್ಷಿಯಲ್ ಏರ್​ಕ್ರಾಫ್ಟ್ ವಿಭಾಗದಲ್ಲಿ ಶೇ. 5ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವ ಯೋಜನೆಯನ್ನು ಬೋಯಿಂಗ್ ಪ್ರಕಟಿಸಿದೆ. ವಿಮಾನಗಳ ತಯಾರಿಕೆಯು ನಿರೀಕ್ಷಿತ ರೀತಿಯಲ್ಲಿ ಸಾಗುತ್ತಿಲ್ಲ ಎಂಬುದು ಸಂಸ್ಥೆ ನೀಡಿರುವ ಕಾರಣವಾಗಿದೆ.

ರಾಯ್ಟರ್ಸ್ ಸುದ್ದಿಸಂಸ್ಥೆ ವರದಿ ಪ್ರಕಾರ, ಬೋಯಿಂಗ್​ನ ಕಮರ್ಷಿಯಲ್ ಏರ್​ಪ್ಲೇನ್ಸ್ ವಿಭಾಗದ ಮುಖ್ಯಸ್ಥೆ ಸ್ಟೆಫಾನೀ ಪೋಪ್ ಅವರು ಸಂಸ್ಥೆಯ ಇಂಟರ್ನಲ್ ಮೆಮೋದಲ್ಲಿ ಉದ್ಯೋಗಿಗಳಿಗೆ ಈ ನಿರ್ಧಾರದ ಬಗ್ಗೆ ಮಾಹಿತಿ ನೀಡಿದ್ದಾರೆ. ಮುಂದಿನ ತಿಂಗಳು ಲೇ ಆಫ್ ಆಗಲಿರುವ ಉದ್ಯೋಗಿಗಳಿಗೆ ನೋಟೀಸ್ ನೀಡಲಾಗುತ್ತದೆ ಎನ್ನಲಾಗಿದೆ.

ಬೋಯಿಂಗ್ ಸಂಸ್ಥೆ ತನ್ನ ಕಮರ್ಷಿಯಲ್ ವಿಮಾನಗಳ ಉತ್ಪಾದನಾ ಗುರಿಯನ್ನು ಮುಟ್ಟಲು ಕಷ್ಟಪಡುತ್ತಿರುವ ಹೊತ್ತಲ್ಲೇ ಈ ಲೇ ಆಫ್ ಕ್ರಮ ಜಾರಿಯಾಗುತ್ತಿರುವುದು ಕುತೂಹಲ ಮೂಡಿಸಿದೆ. ಬೋಯಿಂಗ್​ನ ಬಹುಬೇಡಿಕೆಯ 737 ಏರ್​ಲೈನರ್ ವಿಮಾನಗಳನ್ನು ತಯಾರಿಸಿ ಗ್ರಾಹಕರಿಗೆ ನಿಗದಿತ ಅವಧಿಯೊಳಗೆ ಒಪ್ಪಿಸಲು ಸಾಧ್ಯವಾಗುತ್ತಿಲ್ಲ. ಬೋಯಿಂಗ್ ಸಿಇಒ ಕೆಲ್ಲಿ ಆರ್ಟ್​ಬಬರ್ಗ್ ಅವರೂ ಕೂಡ ಕಳೆದ ತಿಂಗಳು ಇದನ್ನು ಒಪ್ಪಿಕೊಂಡಿದ್ದಿದೆ.

ಇದನ್ನೂ ಓದಿ: ಇದು ಹಾಲಿವುಡ್ ಸ್ಪೈ ಥ್ರಿಲ್ಲರ್​ನಂಥ ಕಥೆ; ಅಮೆರಿಕದ ಕಾರ್ಪೊರೇಟ್ ದಂತಕಥೆಯ ಬೆನ್ನಿಗೆ ಅಂಟಿದ ಚೀನೀ ಗೂಢಚಾರಿಣಿ

ಈಗ ಉದ್ಯೋಗಿಗಳ ಸಂಖ್ಯೆ ಮೊಟಕುಗೊಳಿಸುವ ಉದ್ದೇಶದಿಂದ ಬೋಯಿಂಗ್ ಸಂಸ್ಥೆ ತನ್ನ ಪ್ರೊಡಕ್ಷನ್ ಲೈನ್ ಅನ್ನು ಕಡಿಮೆ ಮಾಡಿಕೊಂಡಿದ್ದಿರಬಹುದು.

ಅಮೆರಿಕದ ಹಲವು ರಾಜ್ಯಗಳಲ್ಲಿ ಬೋಯಿಂಗ್​ನ ಮ್ಯಾನುಫ್ಯಾಕ್ಚರಿಂಗ್ ಘಟಕಗಳಿವೆ. ಎಲ್ಲೆಡೆಯೂ ಉದ್ಯೋಗಿಗಳ ಸಂಖ್ಯೆಗೆ ಕತ್ತರಿ ಹಾಕಲಾಗುತ್ತಿದೆ. ಲೇ ಆಫ್ ಆಗುವ ಉದ್ಯೋಗಿಗೆ ಡಿಸೆಂಬರ್​ನಲ್ಲಿ ನೋಟೀಸ್ ಸಲ್ಲಿಸಲಾಗುತ್ತದೆ. 60 ದಿನಗಳ ನೋಟೀಸ್ ಪೀರಿಯಡ್ ಇರುತ್ತದೆ ಎನ್ನಲಾಗಿದೆ.

ಬೋಯಿಂಗ್​ನ 7,000 ಉದ್ಯೋಗಿಗಳಿಗೆ ಸಂಕಷ್ಟ?

ವಿಶ್ವದ ಅತಿದೊಡ್ಡ ಏರ್​ಲೈನ್​ಗಳಲ್ಲಿ ಒಂದೆನಿಸಿರುವ ಬೋಯಿಂಗ್​ನಲ್ಲಿ 1.80 ಲಕ್ಷಕ್ಕೂ ಅಧಿಕ ಸಂಖ್ಯೆಯ ಉದ್ಯೋಗಿಗಳಿದ್ದಾರೆ. ಇದರಲ್ಲಿ ಶೇ. 85ರಷ್ಟು ಉದ್ಯೋಗಿಗಳು ಅಮೆರಿಕದಲ್ಲೇ ಇದ್ದಾರೆ. ಶೇ. 5 ಉದ್ಯೋಗಿಗಳೆಂದರೆ 7,000-8,000 ಮಂದಿಗೆ ಕೆಲಸ ಹೋಗುವ ಸಾಧ್ಯತೆ ಇದೆ.

ಇದನ್ನೂ ಓದಿ: ನಿಮ್ಮ ಆಲೋಚನಾ ಶಕ್ತಿಯನ್ನು ಎಐಗೆ ಒಪ್ಪಿಸಬೇಡಿ: ಯುವಜನರಿಗೆ ಮಾಜಿ ಐಎಂಎಫ್ ಅಧಿಕಾರಿ ಗೀತಾ ಗೋಪಿನಾಥ್ ಸಲಹೆ

ಬೋಯಿಂಗ್ ಸಂಸ್ಥೆ ನಾಗರಿಕ ಮತ್ತು ಮಿಲಿಟರಿ ಎರಡು ವಿಭಾಗದ ವಿಮಾನಗಳನ್ನು ತಯಾರಿಸುತ್ತದೆ. ಸದ್ಯ, ಮಿಲಿಟರಿ ವಿಮಾನಗಳನ್ನು ತಯಾರಿಸುವ ಘಟಕದಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳನ್ನು ಮುಟ್ಟಲಾಗುತ್ತಿಲ್ಲ. ಎರಡು ವರ್ಷದ ಹಿಂದೆ ಬೋಯಿಂಗ್ ಸಂಸ್ಥೆ 17,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದಿತ್ತು. ಅದಾದ ಬಳಿಕ ಅದು ಕೈಗೊಳ್ಳುತ್ತಿರುವ ಪ್ರಮುಖ ಲೇ ಆಫ್ ಕ್ರಮ ಇದಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More