ಜಿಯೋದ ಈ ಪ್ರೀಪೇಡ್ ಪ್ಲಾನ್​ನಲ್ಲಿ ವ್ಯಾಲಿಡಿಟಿ ಹೆಚ್ಚಳ; ಹೆಚ್ಚುವರಿ ಅವಧಿಗೆ ಡಾಟಾ ಕೂಡ ವಿಸ್ತರಣೆ

|

Updated on: Dec 27, 2023 | 11:32 AM

Jio Prepaid Plan: ರಿಲಾಯನ್ಸ್ ಜಿಯೋ ಹ್ಯಾಪಿ ನ್ಯೂ ಇಯರ್ ಆಫರ್ 2024 ಯೋಜನೆ ಅಡಿಯಲ್ಲಿ 2,999 ರೂಗಳ ಪ್ರೀಪೇಡ್ ಗ್ರಾಹಕರಿಗೆ ಕೊಡುಗೆ ನೀಡಿದೆ. 365 ದಿನಗಳ ಈ ಪ್ಲಾನ್​ನಲ್ಲಿ ವ್ಯಾಲಿಡಿಟಿ ಅವಧಿಯನ್ನು 24 ದಿನ ಹೆಚ್ಚಿಸಲಾಗಿದೆ. ಈ ಪ್ಲಾನ್ ಖರೀದಿಸಿದಾಗ ವ್ಯಾಲಿಡಿಟಿ ಅವಧಿ 365 ದಿನವೇ ಇರುತ್ತದೆ. ಆದರೆ, 24 ದಿನದ ವೋಚರ್ ಅನ್ನು ಕೊಡಲಾಗುತ್ತದೆ. ಅದನ್ನು ಬಳಸಿದಾಗ ವ್ಯಾಲಿಡಿಟಿ ಅವಧಿ ವಿಸ್ತರಣೆ ಆಗುತ್ತದೆ.

ಜಿಯೋದ ಈ ಪ್ರೀಪೇಡ್ ಪ್ಲಾನ್​ನಲ್ಲಿ ವ್ಯಾಲಿಡಿಟಿ ಹೆಚ್ಚಳ; ಹೆಚ್ಚುವರಿ ಅವಧಿಗೆ ಡಾಟಾ ಕೂಡ ವಿಸ್ತರಣೆ
ರಿಲಾಯನ್ಸ್ ಜಿಯೋ
Follow us on

ಭಾರತದ ಅಗ್ರಗಣ್ಯ ಟೆಲಿಕಾಂ ಕಂಪನಿ ರಿಲಾಯನ್ಸ್ ಜಿಯೋ ಹೊಸ ವರ್ಷಕ್ಕೆ ತನ್ನ ಗ್ರಾಹಕರಿಗೆ ಭರ್ಜರಿ ಕೊಡುಗೆ ಕೊಡುತ್ತಿದೆ. ಪ್ರೀಪೇಡ್ ಗ್ರಾಹಕರಿಗೆ (jio pre paid customers) ಸಾಕಷ್ಟು ಲಾಭಗಳನ್ನು ಘೋಷಿಸಿದೆ. ‘ಹ್ಯಾಪಿ ನ್ಯೂ ಇಯರ್ ಆಫರ್ 2024’ ನಲ್ಲಿ ಅದರ ಕೆಲ ಪ್ಲಾನ್​ಗಳಲ್ಲಿ ಹೆಚ್ಚಿನ ವ್ಯಾಲಿಟಿಡಿ ಅವಧಿ, ಹೆಚ್ಚು ಡಾಟಾಗಳನ್ನು ನೀಡುತ್ತದೆ. ಹೊಸ ವರ್ಷದ ಕೊಡುಗೆ ಹೆಚ್ಚಾಗಿ ಪ್ರೀಪೇಡ್ ಗ್ರಾಹಕರನ್ನು ಗುರಿ ಮಾಡಲಾಗಿದೆ. ಅದರಲ್ಲೂ 2,999 ರೂಗಳ ವಾರ್ಷಿಕ ಪ್ಲಾನ್​ನಲ್ಲಿ ಈ ಕೊಡುಗೆಗಳಿವೆ.

ಜಿಯೋದ 2,999 ರೂ ಪ್ರೀಪೇಯ್ಡ್ ಪ್ಲಾನ್​ನಲ್ಲಿ ಈ ಮೊದಲು 365 ದಿನಗಳ ವ್ಯಾಲಿಡಿಟಿ ಇತ್ತು. ಅದರ ಅವಧಿಯನ್ನು 24 ದಿನ ಹೆಚ್ಚಿಸಲಾಗಿದೆ. ಈ ಪ್ಲಾನ್ ಖರೀದಿಸಿದಾಗ ಒಂದು ವೋಚರ್ ನೀಡಲಾಗುತ್ತದೆ. ಇದು 24 ದಿನದ ವ್ಯಾಲಿಡಿಟಿ ಕೊಡುವ ವೋಚರ್. 365 ದಿನದ ವ್ಯಾಲಿಡಿಟಿ ಮುಗಿದಾಗ ಈ ವೋಚರ್ ಅನ್ನು ಬಳಸಿದರೆ ವ್ಯಾಲಿಡಿಟಿ ಅವಧಿ 24 ದಿನಗಳಷ್ಟು ಹೆಚ್ಚಾಗುತ್ತದೆ.

ಇದನ್ನೂ ಓದಿ: 84 ದಿನಗಳ ವ್ಯಾಲಿಡಿಟಿ, ಅನ್ಲಿಮಿಟೆಡ್ 5G ಡೇಟಾ: ಜಿಯೋದಿಂದ ಹೊಚ್ಚಹೊಸ ಯೋಜನೆ ಬಿಡುಗಡೆ

ಈ ಹೆಚ್ಚುವರಿ 24 ದಿನಗಳಲ್ಲಿ ರೆಗ್ಯುಲರ್ ಪ್ಲಾನ್ ಅವಧಿಯ ಎಲ್ಲಾ ಪ್ರಯೋಜನಗಳು, ಸೌಲಭ್ಯಗಳು ಮುಂದುವರಿಯುತ್ತವೆ. ದಿನಕ್ಕೆ 2.5 ಜಿಬಿಯಂತೆ, ಅಷ್ಟೂ ದಿನವೂ ಡಾಟಾ ಮುಂದುವರಿಯುತ್ತದೆ. ರೆಗ್ಯುಲರ್ ಅವಧಿಯಲ್ಲಿರುವ ಅನ್​ಲಿಮಿಟೆಡ್ ಕರೆ, ದಿನಕ್ಕೆ ಉಚಿತ 100 ಎಸ್ಸೆಮ್ಮೆಸ್ ಇವೆಲ್ಲವೂ ಮುಂದುವರಿಯುತ್ತದೆ. 5ಜಿ ಡಾಟಾ ಕೂಡ ಸಿಗುತ್ತದೆ.

2,999 ರೂಗಳ ಪ್ರೀಪೇಡ್ ಪ್ಲಾನ್​ನ ರೆಗ್ಯುಲರ್ ಅವಧಿಯಲ್ಲಿ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್ ಸರ್ವಿಸ್​ಗಳನ್ನು ಉಚಿತವಾಗಿ ಬಳಸಬಹುದು. ಇದು ಹೆಚ್ಚುವರಿ 24 ದಿನಗಳಲ್ಲೂ ಲಭ್ಯ ಇರುತ್ತದೆ.

ಇದನ್ನೂ ಓದಿ: Recharge Plans: ಜಿಯೋ, ಏರ್ಟೆಲ್, ವೊಡಾಫೋನ್, ಬಿಎಸ್ಸೆನ್ನೆಲ್​ನಲ್ಲಿ ಕಡಿಮೆ ಬೆಲೆಯ ವಾರ್ಷಿಕ ಪ್ಲಾನ್​ಗಳ ಪಟ್ಟಿ

ಜಿಯೋ ಸಿನಿಮಾದ ಪ್ರೀಮಿಯಮ್ ಸಬ್​ಸ್ಕ್ರಿಪ್ಷನ್ ಬೇಕಾದರೆ ಪ್ರತ್ಯೇಕವಾಗಿ 1,499 ರೂಗಳ ಪ್ಲಾನ್ ಖರೀದಿಸಬೇಕಾಗುತ್ತದೆ. ಈ ಜಿಯೋ ಟಿವಿ ಪ್ರೀಮಿಯಮ್ ಸಬ್​ಸ್ಕ್ರಿಪ್ಷನ್ ಪಡೆದರೆ 14 ಬೇರೆ ಬೇರೆ ಒಟಿಟಿ ಆ್ಯಪ್​ಗಳ ಸಬ್​ಸ್ಕ್ರಿಪ್ಷನ್ ಸಿಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ