Recharge Plans: ಜಿಯೋ, ಏರ್ಟೆಲ್, ವೊಡಾಫೋನ್, ಬಿಎಸ್ಸೆನ್ನೆಲ್​ನಲ್ಲಿ ಕಡಿಮೆ ಬೆಲೆಯ ವಾರ್ಷಿಕ ಪ್ಲಾನ್​ಗಳ ಪಟ್ಟಿ

Cheap Recharge Plans: ರಿಲಾಯನ್ಸ್ ಜಿಯೋ, ಏರ್ಟೆಲ್, ಬಿಸ್ಸೆನ್ನೆಲ್ ಮತ್ತು ವೊಡಾಫೋನ್ ಐಡಿಯಾ ಸಂಸ್ಥೆಗಳ ಕನಿಷ್ಠ ವಾರ್ಷಿಕ ರೀಚಾರ್ಜ್ ದರಗಳ ಬಗ್ಗೆ ಮಾಹಿತಿ ಇಲ್ಲಿದೆ. ಈ ವಾರ್ಷಿಕ ರೀಚಾರ್ಜ್ ಬಳಸಿ ಅದರ ಮೇಲೆ ಅಗತ್ಯಬಿದ್ದರೆ ಡಾಟಾ ಟಾಪಪ್ ಮಾಡಿಸಿಕೊಳ್ಳಬಹುದು.

Recharge Plans: ಜಿಯೋ, ಏರ್ಟೆಲ್, ವೊಡಾಫೋನ್, ಬಿಎಸ್ಸೆನ್ನೆಲ್​ನಲ್ಲಿ ಕಡಿಮೆ ಬೆಲೆಯ ವಾರ್ಷಿಕ ಪ್ಲಾನ್​ಗಳ ಪಟ್ಟಿ
ಡಾಟಾ ರೀಚಾರ್ಜ್ ಪ್ಲಾನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 10, 2023 | 5:46 PM

ಈಗ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಸಿಮ್ ಕಾರ್ಡ್​ಗಳನ್ನು (dual sim) ಇಟ್ಟುಕೊಳ್ಳುವುದು ಬಹಳ ಸಾಮಾನ್ಯವಾಗಿದೆ. ಕಚೇರಿ ಕೆಲಸಕ್ಕೊಂದು, ಖಾಸಗಿ ಬಳಕೆಗೆ ಇನ್ನೊಂದು ನಂಬರ್ ಇಟ್ಟುಕೊಂಡಿರುತ್ತಾರೆ. ಈಗ ಬಹುತೇಕ ಎಲ್ಲಾ ಫೋನ್​ಗಳಲ್ಲೂ ಡುಯಲ್ ಸಿಮ್ ಆಯ್ಕೆ ಇರುತ್ತದೆ. ಹೀಗಾಗಿ, ಎರಡು ಸಿಮ್​ಗಳ ನಿರ್ವಹಣೆ ಸುಲಭ ಹೌದು. ಹಾಗೆಯೇ, ಸ್ಮಾರ್ಟ್​ಫೋನ್ ಜೊತೆಗೆ ಬ್ಯಾಟರಿ ಬ್ಯಾಕಪ್ ಇರುವ ಫೀಚರ್ ಫೋನ್ ಇಟ್ಟುಕೊಳ್ಳುವವರು ಇದ್ದಾರೆ. ಅದೇನೇ ಆದರೂ ಇವತ್ತಿನ ದರಗಳಲ್ಲಿ ಒಂದಕ್ಕಿಂತ ಹೆಚ್ಚು ನಂಬರ್​ಗಳನ್ನು ಸಕ್ರಿಯವಾಗಿಟ್ಟುಕೊಳ್ಳುವುದು ತುಸು ದುಬಾರಿ ಆದೀತು. ಇವತ್ತಿನ ಸಂದರ್ಭದಲ್ಲಿ ಇದ್ದುದರಲ್ಲಿ ಅಗ್ಗದ ವಾರ್ಷಿಕ ರೀಚಾರ್ಜ್ ಪ್ಲಾನ್​ಗಳ (annual recharge plans) ವಿವರ ಇಲ್ಲಿದೆ.

ಏರ್ಟೆಲ್ ವಾರ್ಷಿಕ ರೀಚಾರ್ಜ್ ಪ್ಲಾನ್

ಭಾರ್ತಿ ಏರ್ಟೆಲ್ ಸಂಸ್ಥೆಯ 1,799 ರೂನ ರೀಚಾರ್ಜ್ ಪ್ಲಾನ್​ನಲ್ಲಿ 365 ದಿನಗಳ ವ್ಯಾಲಿಡಿಟಿ ಇದೆ. 24ಜಿಬಿಯಷ್ಟು 4ಜಿ ಡಾಟಾ ಸಿಗುತ್ತದೆ. ಅನ್​ಲಿಮಿಟೆಡ್ ಕರೆ ಸೌಲಭ್ಯ, 3600 ಎಸ್ಸೆಮ್ಮೆಸ್ ಸಿಗುತ್ತದೆ. ಇದರ ಜೊತೆಗೆ ವಿಂಕ್ ಮ್ಯೂಸಿಕ್ ಮತ್ತು ಹೆಲೋ ಟ್ಯೂನ್​ಗಳನ್ನು ಪಡೆಯಬಹುದು. ವರ್ಷಕ್ಕೆ 1,799 ರೂ ಎಂದರೆ ತಿಂಗಳಿಗೆ 150 ರೂ ಆಗುತ್ತದೆ.

ಇದನ್ನೂ ಓದಿ: Mobile Number: ನಿಮ್ಮ ನಂಬರ್​ಗೆ ರಿಚಾರ್ಜ್ ಮಾಡದಿದ್ರೆ ಎಷ್ಟು ದಿನಗಳಲ್ಲಿ ಆ ನಂಬರ್ ಬೇರೆಯವರಿಗೆ ನೀಡಲಾಗುತ್ತದೆ?

ಜಿಯೋ ವಾರ್ಷಿಕ ರೀಚಾರ್ಜ್ ಪ್ಲಾನ್

ರಿಲಾಯನ್ಸ್ ಜಿಯೋದಲ್ಲಿ ಇರುವ ಅತಿಕಡಿಮೆಯ ವಾರ್ಷಿಕ ರೀಚಾರ್ಜ್ ಪ್ಲಾನ್ 1,599 ರೂನದ್ದು. ಆದರೆ, ಇದು 336 ತಿಂಗಳ ವ್ಯಾಲಿಡಿಟಿಯದ್ದಾಗಿದೆ. ಅಂದರೆ 11 ತಿಂಗಳ ರೀಚಾರ್ಜ್ ಪ್ಲಾನ್ ಇದು. ಇದರಲ್ಲಿ 24 ಜಿಬಿ ಡಾಟಾ ಒಳಗೊಂಡಿರುತ್ತದೆ. ಅನ್​ಲಿಮಿಟೆಡ್ ಕರೆ ಮಾಡಬಹುದು. ದಿನಕ್ಕೆ ಗರಿಷ್ಠ 100ರಂತೆ ಒಟ್ಟು 3,600 ಎಸ್ಸೆಮ್ಮೆಸ್ ಲಭ್ಯ ಇದೆ. 5ಜಿ ಸೆಟ್ ಹೊಂದಿರುವವರು ಅನ್​ಲಿಮಿಟೆಡ್ ಡಾಟಾ ಬಳಸಬಹುದು. ಇದರಲ್ಲಿ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್ ಸೇವೆಗಳನ್ನು ಪಡೆಯಬಹುದು.

ವೊಡಾಫೋನ್ ಐಡಿಯಾ ರೀಚಾರ್ಜ್ ಪ್ಲಾನ್

ವೊಡಾಫೋನ್ ಐಡಿಯಾ ಸಂಸ್ಥೆ 365 ದಿನಗಳ ವ್ಯಾಲಿಡಿಟಿ ಹೊಂದಿರುವ 1,799 ರೂ ಪ್ಲಾನ್ ಹೊಂದಿದೆ. 24ಜಿಬಿಯಷ್ಟು 4ಜಿ ಡಾಟಾ, 3600 ಎಸ್ಸೆಮ್ಮೆಸ್, ಅನ್​ಲಿಮಿಟೆಡ್ ಕರೆ ಇತ್ಯಾದಿ ಸೌಲಭ್ಯ ಇದೆ. ಇದರ ಜೊತೆಗೆ ವಿಐ ಮೂವೀಸ್ ಮತ್ತು ಟಿವಿ ಸೌಲಭ್ಯವೂ ಸಿಗುತ್ತದೆ.

ಇದನ್ನೂ ಓದಿ: Tech Tips: ತಪ್ಪಿ ಬೇರೆಯವರ ನಂಬರ್​ಗೆ ರೀಚಾರ್ಜ್ ಮಾಡಿದರೆ ಹಣ ವಾಪಸ್ ಪಡೆಯುವುದು ಹೇಗೆ?

ಬಿಎಸ್ಸೆನ್ನೆಲ್ ರೀಚಾರ್ಜ್ ಪ್ಲಾನ್

ಸರ್ಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್​ನಲ್ಲಿ ವಾರ್ಷಿಕ ರೀಚಾರ್ಜ್ ಪ್ಲಾನ್ 1,251 ರೂನಿಂದ ಆರಂಭವಾಗುತ್ತದೆ. 365 ದಿನ ವ್ಯಾಲಿಡಿಟಿಯ ಈ ಪ್ಲಾನ್​ಲ್ಲಿ ತಿಂಗಳಿಗೆ 0.75ಜಿಬಿ, ಅಂದರೆ, 750 ಎಂಬಿಯಷ್ಟು ಡಾಟಾ ಸಿಗುತ್ತದೆ.

ಗ್ರಾಹಕರು ಈ ಕನಿಷ್ಠ ಮೊತ್ತದ ವಾರ್ಷಿಕ ರೀಚಾರ್ಜ್ ಪ್ಲಾನ್ ಖರೀದಿಸಿ, ಅದರ ಮೇಲೆ ಹೆಚ್ಚು ಡಾಟಾಗೆ ಟಾಪಪ್ ಹಾಕಿಸಿಕೊಳ್ಳಬಹುದು. ಈ ಮೂಲಕ ಅಗತ್ಯ ಇರುವಷ್ಟು ಡಾಟಾ ಬಳಕೆ ಮಾಡಿ ಹಣ ಉಳಿಸಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ