AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಾಲರ್ ಎದುರು ರುಪಾಯಿ 39 ಪೈಸೆ ವೃದ್ಧಿ; ಭಾರತದ ಕರೆನ್ಸಿಗೆ ಬಲ ಸಿಕ್ಕಿದ್ದು ಹೇಗೆ?

Rupee gains against US dollar: ನಿನ್ನೆ ಗುರುವಾರ ಡಾಲರ್ ಎದುರು 19 ಪೈಸೆ ಹೆಚ್ಚಿದ್ದ ರುಪಾಯಿ, ಇವತ್ತು ಶುಕ್ರವಾರ 39 ಪೈಸೆ ವೃದ್ಧಿಸಿದೆ. ಮತ್ತೊಮ್ಮೆ 93ರ ಮಟ್ಟಕ್ಕಿಂತ ಕೆಳಗೆ ಬಂದಿದೆ. ಪಶ್ಚಿಮ ಏಷ್ಯಾದಲ್ಲಿ ಯುದ್ಧ ಭೀತಿ ಕಡಿಮೆ ಆಗಿರುವುದು ರುಪಾಯಿಗೆ ಪುಷ್ಟಿ ಸಿಗಲು ಪ್ರಮುಖ ಕಾರಣ. ಹಾಗೆಯೇ, ಕಚ್ಚಾ ತೈಲ ಬೆಲೆ ಇಳಿದಿರುವುದು, ಎಫ್​ಐಐಗಳ ಒಳಹರಿವು ಹೆಚ್ಚಿರುವುದೂ ಕೂಡ ಮತ್ತಷ್ಟು ಕಾರಣಗಳಾಗಿವೆ.

ಡಾಲರ್ ಎದುರು ರುಪಾಯಿ 39 ಪೈಸೆ ವೃದ್ಧಿ; ಭಾರತದ ಕರೆನ್ಸಿಗೆ ಬಲ ಸಿಕ್ಕಿದ್ದು ಹೇಗೆ?
ಡಾಲರ್ ಎದುರು ರುಪಾಯಿImage Credit source: Shutterstock
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 17, 2026 | 11:41 AM

Share

ನವದೆಹಲಿ, ಏಪ್ರಿಲ್ 17: ಇರಾನ್ ಯುದ್ಧ ಭೀತಿ ಸ್ವಲ್ಪ ತಗ್ಗುತ್ತಿದ್ದಂತೆಯೇ ವಿವಿಧ ಮಾರುಕಟ್ಟೆಗಳು ಸಮಾಧಾನದ ಉಸಿರು ಬಿಡುತ್ತಿವೆ. ಡಾಲರ್ ಎದುರು ಉಸಿರುಗಟ್ಟುತ್ತಿದ್ದ ರುಪಾಯಿಗೆ ಸ್ವಲ್ಪ ಜೀವ ಸಿಕ್ಕಿದೆ. ಶುಕ್ರವಾರದ ಬೆಳಗಿನ ಟ್ರೇಡಿಂಗ್​ನಲ್ಲಿ ಡಾಲರ್ ಎದುರು ರುಪಾಯಿ 39 ಪೈಸೆ ಹೆಚ್ಚಿದೆ. ಟ್ರೇಡಿಂಗ್​ನ ಒಂದು ಹಂತದಲ್ಲಿ ರುಪಾಯಿ ಮೌಲ್ಯ 92.75 ಮಟ್ಟದಲ್ಲಿತ್ತು.

ಅಂತರಬ್ಯಾಂಕ್ ವಿದೇಶೀ ವಿನಿಮಯ ಮಾರುಕಟ್ಟೆಯಲ್ಲಿ ನಿನ್ನೆ ಗುರುವಾರ ಒಂದು ಡಾಲರ್​ಗೆ ರುಪಾಯಿ 93ಕ್ಕಿಂತ ಹೆಚ್ಚು ಇತ್ತು. ಇವತ್ತು 92.91ರಲ್ಲಿ ವಹಿವಾಟು ಆರಂಭ ಕಂಡ ರುಪಾಯಿ 92.75ರವರೆಗೆ ಏರಿದೆ. ಡಾಲರ್ ಎದುರು ರುಪಾಯಿ ಸತತ ಎರಡನೇ ದಿನ ಏರಿಕೆ ಕಂಡಿರುವುದು ವಿಶೇಷ. ನಿನ್ನೆ 19 ಪೈಸೆ ಹೆಚ್ಚಿದರೆ ಇವತ್ತು 39 ಪೈಸೆಯಷ್ಟು ಬಲಪಡೆದಿದೆ.

ಇದನ್ನೂ ಓದಿ: ಗುಜರಾತ್​ನಲ್ಲಿ ಟಾಟಾದ ಚಿಪ್ ಘಟಕಕ್ಕೆ ಸರ್ಕಾರದ ಅನುಮೋದನೆ; 91,000 ಕೋಟಿ ರೂ ಹೂಡಿಕೆಗೆ ಯೋಜನೆ

ಡಾಲರ್ ಎದುರು ರುಪಾಯಿ ಮೌಲ್ಯ ಹೆಚ್ಚಲು ಏನು ಕಾರಣ?

ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ಯುದ್ಧ ಭೀತಿ ಕಡಿಮೆ ಆಗಿ ಶಾಂತಿ ಮರಳುವ ಸಾಧ್ಯತೆ ಕಾಣುತ್ತಿದೆ. ಇದು ರುಪಾಯಿ ವೃದ್ಧಿಗೆ ಪ್​ರಮುಖ ಕಾರಣವಿರಬಹುದು ಎಂದು ಭಾವಿಸಲಾಗಿದೆ.

ಇಸ್ರೇಲ್ ಮತ್ತು ಲೆಬನಾನ್ ಮಧ್ಯೆ 10 ದಿನದ ಕದನ ವಿರಾಮ ಏರ್ಪಟ್ಟಿರುವುದು; ಇರಾನ್ ಮತ್ತು ಅಮೆರಿಕದ ಮಧ್ಯೆ ಮಾತುಕತೆ ಪುನಾರಂಭಗೊಳ್ಳುವುದು ಸೇರಿದಂತೆ ವಿವಿಧ ಪೂರಕ ವಿದ್ಯಮಾನಗಳು ಮಾರುಕಟ್ಟೆ ಅಪಾಯವನ್ನು ಕಡಿಮೆಗೊಳಿಸಿವೆ. ಭಾರತ ಸೇರಿದಂತೆ ಹಲವು ದೇಶಗಳಿಗೆ ತಲೆನೋವಾಗಿದ್ದ ಹಾರ್ಮುಜ್ ಜಲಸಂಧಿ ತಡೆಯೂ ನಿವಾರಣೆಯಾಗುವ ಆಶಯ ಇದೆ. ಹಾರ್ಮುಜ್​ನಲ್ಲಿ ಹಡಗುಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಇರಾನ್​ಗೆ ಚೀನಾ ಮನವಿ ಮಾಡಿಕೊಂಡಿರುವುದು ದೊಡ್ಡ ವಿಚಾರವಾಗಿದೆ.

ಇದನ್ನೂ ಓದಿ: ಎನ್​ಬಿಎಫ್​ಸಿಗಳಿಗೆ ಆರ್​ಬಿಐ ನಿಯಮಗಳು ಸಡಿಲ; ಪೂರ್ವಾನುಮತಿ ಇಲ್ಲದೇ ಹೊಸ ಶಾಖೆಗಳ ಸ್ಥಾಪನೆಗೆ ಅವಕಾಶ

ಕಚ್ಚಾ ತೈಲ ಬೆಲೆ ಮತ್ತು ಎಫ್​ಐಐ ಒಳಹರಿವು

ಕಚ್ಚಾ ತೈಲ ಬೆಲೆ ಬ್ಯಾರಲ್​ಗೆ 100 ಡಾಲರ್​ಗಿಂತ ಕೆಳಗೆ ಇಳಿದಿದೆ. ತೈಲ ಬೆಲೆ ಕಡಿಮೆ ಆದರೆ ಭಾರತದ ಆಮದು ವೆಚ್ಚವೂ ಕಡಿಮೆ ಆಗುತ್ತದೆ. ಇನ್ನೊಂದು ಸಂಗತಿ ಎಫ್​​ಐಐಗಳದ್ದು. ಈ ವಿದೇಶೀ ಸಾಂಸ್ಥಿಕ ಹೂಡಿಕೆಗಳ ಒಳಹರಿವು ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚಿರುವುದು ಕೂಡ ರುಪಾಯಿ ಕರೆನ್ಸಿಗೆ ಬಲ ಸಿಗಲು ಕಾರಣವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ರಸ್ತೆ ಬದಿ ನಿಂತಲ್ಲೇ ನಿಂತ ವಾಹನಗಳಿಗೆ ಎಷ್ಟು ದಂಡ ಗೊತ್ತಾ?
ರಸ್ತೆ ಬದಿ ನಿಂತಲ್ಲೇ ನಿಂತ ವಾಹನಗಳಿಗೆ ಎಷ್ಟು ದಂಡ ಗೊತ್ತಾ?
‘ದರ್ಶನ್ ಅಭಿಮಾನಿಗಳು ತಪ್ಪು ಮಾಡಲ್ಲ, ಅದು ಕಿಡಿಗೇಡಿಗಳ ಕೆಲಸ’
‘ದರ್ಶನ್ ಅಭಿಮಾನಿಗಳು ತಪ್ಪು ಮಾಡಲ್ಲ, ಅದು ಕಿಡಿಗೇಡಿಗಳ ಕೆಲಸ’
ಬೆಂಗಳೂರಲ್ಲಿ ಡಿಸಿಪಿ ಅಕ್ಷಯ್ ಮಚೀಂದ್ರ ನೇತೃತ್ವದಲ್ಲಿ ಮಿಡ್‌ನೈಟ್ ಆಪರೇಷನ್
ಬೆಂಗಳೂರಲ್ಲಿ ಡಿಸಿಪಿ ಅಕ್ಷಯ್ ಮಚೀಂದ್ರ ನೇತೃತ್ವದಲ್ಲಿ ಮಿಡ್‌ನೈಟ್ ಆಪರೇಷನ್
ಬ್ಯಾಡರಹಳ್ಳಿ ಜನರಿಗೆ ಎದುರಾಯ್ತು ಚಿರತೆ ಭಯ!
ಬ್ಯಾಡರಹಳ್ಳಿ ಜನರಿಗೆ ಎದುರಾಯ್ತು ಚಿರತೆ ಭಯ!
ವಯನಾಡು: ಸುರಂಗ ನಿರ್ಮಾಣ ಸ್ಥಳದಲ್ಲಿ ದುರ್ಘಟನೆ ಸಂಭವಿಸಿದ್ದೇಕೆ?
ವಯನಾಡು: ಸುರಂಗ ನಿರ್ಮಾಣ ಸ್ಥಳದಲ್ಲಿ ದುರ್ಘಟನೆ ಸಂಭವಿಸಿದ್ದೇಕೆ?
1.79 ಕೋಟಿ ಹಣವಿದ್ದ ಎಟಿಎಂ ವಾಹನ ಅಡ್ಡಗಟ್ಟಿ ಕೀ ಎಗರಿಸಿದ ಕಿಡಿಗೇಡಿಗಳು
1.79 ಕೋಟಿ ಹಣವಿದ್ದ ಎಟಿಎಂ ವಾಹನ ಅಡ್ಡಗಟ್ಟಿ ಕೀ ಎಗರಿಸಿದ ಕಿಡಿಗೇಡಿಗಳು
ಹುಂಡಿ ಎಣಿಕೆ ವೇಳೆ 1.98 ಲಕ್ಷ ರೂ. ಜಾಕೆಟ್ ಒಳಗೆ ಇಳಿಸಿ ಎಗರಿಸಿದ ಆಸಾಮಿ!
ಹುಂಡಿ ಎಣಿಕೆ ವೇಳೆ 1.98 ಲಕ್ಷ ರೂ. ಜಾಕೆಟ್ ಒಳಗೆ ಇಳಿಸಿ ಎಗರಿಸಿದ ಆಸಾಮಿ!
ಇಂದು ಯೋಗಿನಿ ಏಕಾದಶಿ, ಬುಧ ಜಯಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಯೋಗಿನಿ ಏಕಾದಶಿ, ಬುಧ ಜಯಂತಿ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಪ್ರವಾಹದಲ್ಲಿ ಕೊಚ್ಚಿಹೋದ 3,000 ಎಲ್‌ಪಿಜಿ ಸಿಲಿಂಡರ್‌ಗಳು; ವಿಡಿಯೋ ವೈರಲ್!
ಪ್ರವಾಹದಲ್ಲಿ ಕೊಚ್ಚಿಹೋದ 3,000 ಎಲ್‌ಪಿಜಿ ಸಿಲಿಂಡರ್‌ಗಳು; ವಿಡಿಯೋ ವೈರಲ್!
‘ದೇವಿ’ ಸಿನಿಮಾದ ನಟ, ಯುವ ರೈತ ಚೇತನ್​ಗೆ 10 ನಿರ್ದೇಶಕರಿಂದ ಮೋಸ
‘ದೇವಿ’ ಸಿನಿಮಾದ ನಟ, ಯುವ ರೈತ ಚೇತನ್​ಗೆ 10 ನಿರ್ದೇಶಕರಿಂದ ಮೋಸ