ಪಿತ್ರಾರ್ಜಿತ ಆಸ್ತಿ ಮಾರಾಟದ ವಿಚಾರಕ್ಕೆ ಬರುವ ಮುನ್ನ ನಾವು ಪಿತ್ರಾರ್ಜಿತ(Inheritance) ಎಂದರೇನು ಎಂದು ತಿಳಿದುಕೊಳ್ಳಬೇಕು. ತಂದೆ, ತಂದೆ ಕಡೆಯ ತಾತ ಹಾಗೂ ಮುತ್ತಾತನಿಂದ ಆನುವಂಶಿಕವಾಗಿ ಬಂದಿರುವುದನ್ನು ಪಿತ್ರಾರ್ಜಿತ ಎನ್ನುತ್ತೇವೆ. ತಾಯಿಯ ಕಡೆಯಿಂದ ಬಂದ ಆಸ್ತಿ(Property) ಈ ವಿಭಾಗಕ್ಕೆ ಬರುವುದಿಲ್ಲ. ಪಿತ್ರಾರ್ಜಿತ ಆಸ್ತಿಯನ್ನು ಮಾರಾಟ ಮಾಡಿದ ನಂತರ ತೆರಿಗೆ ಕಟ್ಟಬೇಕೇ? ಎಂಬ ಪ್ರಶ್ನೆ ಹುಟ್ಟಿಕೊಳ್ಳುವುದು ಸಹಜ. ಆದರೆ, ನೀವು ಆನುವಂಶಿಕವಾಗಿ ಪಡೆಯುವ ಆಸ್ತಿಯನ್ನು ಮಾರಾಟ ಮಾಡಲು ನಿರ್ಧಾರ ಮಾಡುವವರೆಗೂ ತೆರಿಗೆ ಪಾವತಿಸಬೇಕಿರುವುದಿಲ್ಲ. ಅಕ್ಷಯ್ ಎಂಬ ವ್ಯಕ್ತಿ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಅವರು ಮುಂಬೈನ ತಮ್ಮ ಮನೆಯನ್ನು ಮಾರಾಟ ಮಾಡಲು ಮುಂದಾಗುತ್ತಾರೆ. ಈ ಆಸ್ತಿ ಅಕ್ಷಯ್ ಅವರ ತಾತ 2001ರಲ್ಲಿ 10 ಲಕ್ಷ ಕೊಟ್ಟು ಖರೀದಿಸಿದ್ದರು. ಈಗ ಅಕ್ಷಯ್, ಇದು ಪಿತ್ರಾರ್ಜಿತ ಆಸ್ತಿಯೇ? ಕಾನೂನು(Law) ತೊಡಕು ಉಂಟಾಗದಂತೆ ಹೇಗೆ ಮಾರಾಟ ಮಾಡುವುದು? ಈ ಮನೆ ಮಾರಾಟ ಮಾಡಿದ ನಂತರ ತೆರಿಗೆ ಕಟ್ಟಬೇಕಾ? ಬೇಡ್ವಾ ಎಂಬ ಗೊಂದಲಕ್ಕೆ ಸಿಲುಕುತ್ತಾನೆ. ಇದೆಲ್ಲ ಗೊಂದಲಕ್ಕೆ ಉತ್ತರ ಇಲ್ಲಿದೆ ನೋಡಿ.
ಆದಾಯ ತೆರಿಗೆ ಕಾಯ್ದೆ ಪ್ರಕಾರ ಪಿತ್ರಾರ್ಜಿತ ಆಸ್ತಿ ಎಂದರೆ, ತಂದೆ, ತಂದೆ ಕಡೆಯ ತಾತ ಹಾಗೂ ಮುತ್ತಾತನಿಂದ ಆನುವಂಶಿಕವಾಗಿ ಬಂದಿರುವುದು. ಈ ಆಸ್ತಿಯಿಂದ ಗಳಿಸಿದ ಆದಾಯವನ್ನು ಆದಾಯ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಅದು ಕ್ಯಾಪಿಟಲ್ ಗೇನ್ಸ್ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಈ ಆಸ್ತಿಯನ್ನು ಮಾರಾಟ ಮಾಡುತ್ತಿದ್ದರೆ ನೀವು ತೆರಿಗೆ ಪಾವತಿಸಲೇಬೇಕಾಗುತ್ತದೆ. ಆದರೆ ಎಷ್ಟು ಕಟ್ಟಬೇಕು?
ಪಿತ್ರಾರ್ಜಿತ ಆಸ್ತಿಯನ್ನು ಮಾರಾಟ ಮಾಡಿದ ನಂತರ ಕಟ್ಟಬೇಕಾದ ತೆರಿಗೆ, ನೀವು ಎಷ್ಟು ಕಾಲ ಅದರ ಮಾಲೀಕರಾಗಿದ್ರಿ? ಎಷ್ಟು ವರ್ಷ ನಿಮ್ಮ ಬಳಿ ಒಡೆತನ ಇತ್ತು? ಎಂಬುದರ ಮೇಲೆ ಅವಲಂಬಿಸಿರುತ್ತದೆ. ಉದಾಹರಣೆಗೆ ನೀವು 2ವರ್ಷಗಳಿಗೂ ಅಧಿಕ ಕಾಲ ಆಸ್ತಿಯನ್ನು ನಿಮ್ಮ ಒಡೆತನದಲ್ಲಿರಿಸಿಕೊಂಡಿದ್ದರೆ ಶೇ.20.ರಷ್ಟು ಪ್ರಮಾಣದ ದೀರ್ಘಕಾಲೀನ ಕ್ಯಾಪಿಟಲ್ ಗೇನ್ಸ್ ಪಾವತಿಸಬೇಕು. 2 ವರ್ಷಗಳಿಗಿಂತ ಕಡಿಮೆ ಒಡೆತನ ಇದ್ದರೆ ಅಲ್ಪಾವಧಿ ಕ್ಯಾಪಿಟಲ್ ಗೇನ್ಸ್ ತೆರಿಗೆ ಅನ್ವಯವಾಗುತ್ತದೆ.
ತೆರಿಗೆ ಹಾಗೂ ಹೂಡಿಕೆ ತಜ್ಞ ಬಲವಂತ್ ಜೈನ್ ಹೇಳುವಂತೆ, ಪಿತ್ರಾರ್ಜಿತ ಆಸ್ತಿ ನಿಮ್ಮ ಒಡೆತನದಲ್ಲಿ ಇದ್ದ ಅವಧಿ ಆಧಾರದ ಮೇಲೆ ಲೆಕ್ಕಾಚಾರ ಹಾಕಲಾಗುತ್ತದೆ. ಮುಖ್ಯವಾಗಿ ಇಲ್ಲಿ ನಿಮ್ಮ ಒಡೆತನ ಅಂದರೆ ಮೂಲ ಮಾಲೀಕರು ಖರೀದಿಸಿ ನಿಮ್ಮ ಕುಟುಂಬದ ವ್ಯಾಪ್ತಿಗೆ ಬಂದ ದಿನದಿಂದಲೇ ಲೆಕ್ಕ ಹಾಕಲಾಗುತ್ತದೆ.
ಸೂಚ್ಯಂಕದಲ್ಲಿ ಪಾವತಿಸಬೇಕಾದ ತೆರಿಗೆಯನ್ನು ಲೆಕ್ಕಾಚಾರ ಮಾಡುವುದಾದರೆ, 2001ರಲ್ಲಿ ಈ ಸೂಚ್ಯಂಕ 100 ಇತ್ತು. 2003ರಲ್ಲಿ ಅದು 109 ಆಯಿತು. ಮನೆಯನ್ನು 10 ಲಕ್ಷ ರೂ.ಗೆ ಖರೀದಿಸಿದ್ದು, ಇದನ್ನು ಈಗಿನ ಸೂಚ್ಯಂಕದಿಂದ ಗುಣಿಸಿ 2003ರ ಸೂಚ್ಯಂಕದಿಂದ ಭಾಗಿಸಿದಾಗ ಆಸ್ತಿಯ ಈಗಿನ ಬೆಲೆ 29.08 ಲಕ್ಷ ರೂಪಾಯಿ ಎಂದು ನಿರ್ಧಾರವಾಗುತ್ತದೆ. ಈಗಿನ ಬೆಲೆಯಾದ 29.08 ಲಕ್ಷ ರೂ.ನಿಂದ ಖರೀದಿ ದರ 10 ಲಕ್ಷ ರೂ. ಕಳೆಯಬೇಕು. ಆಗ ಕ್ಯಾಪಿಟಲ್ ಗೇನ್ಸ್ 19.08 ಲಕ್ಷ ರೂಪಾಯಿ ಆಗುತ್ತದೆ. ಇದರ ಮೇಲೆ ತೆರಿಗೆ ಶೇ.20.8ರಂತೆ 3.96 ಲಕ್ಷ ರೂ. ಪಾವತಿಸಬೇಕಾಗುತ್ತದೆ.