ಗುರಿ ಸಾಧನೆಗೆ ಹಣಕಾಸಿನ ಚಿಂತೆಯೇ? ಹಾಗಿದ್ದರೆ ಹಣಕಾಸಿನ ಯೋಜನೆ ರೂಪಿಸಿಕೊಳ್ಳಲು ನೆರವಾಗುವ ಈ ಅಂಶಗಳನ್ನು ಫಾಲೋ ಮಾಡಿ

| Updated By: Rakesh Nayak Manchi

Updated on: May 15, 2022 | 12:02 PM

ಹಣಕಾಸು ಯೋಜನೆಯನ್ನು ರೂಪಿಸಿಕೊಳ್ಳಲು ಅದಕ್ಕೆ ಬೇಕಾದ ಒಂದಷ್ಟು ದೃಢ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅವುಗಳು ನಿಮ್ಮ ಭವಿಷ್ಯದ ಜೀವನಕ್ಕೆ ಸಹಕಾರಿಯಾಗಲಿವೆ.

ಗುರಿ ಸಾಧನೆಗೆ ಹಣಕಾಸಿನ ಚಿಂತೆಯೇ? ಹಾಗಿದ್ದರೆ ಹಣಕಾಸಿನ ಯೋಜನೆ ರೂಪಿಸಿಕೊಳ್ಳಲು ನೆರವಾಗುವ ಈ ಅಂಶಗಳನ್ನು ಫಾಲೋ ಮಾಡಿ
ಸಾಂದರ್ಭಿಕ ಚಿತ್ರ
Follow us on

ಇಡೀ ದುನಿಯಾ ನಿಂತಿರುವುದೇ ಹಣ(Money)ದ ಮೇಲೆ. ದುಡ್ಡೇ ದೊಡ್ಡಪ್ಪ ಎಂಬಂತೆ ಹಣ ಇಲ್ಲದೇ ಏನೂ ನಡೆಯುವುದಿಲ್ಲ. ದುಂದುವೆಚ್ಚ ಮಾಡಿದರೆ ಜೀವನದಲ್ಲಿ ಬರ್ಬಾತ್ ಆಗಿ ಹೋಗುಬೇಕಾಗುತ್ತದೆ. ಖರ್ಚು ಮಾಡುವ ಪ್ರತಿಯೊಂದನ್ನೂ ಹತ್ತು ಬಾರಿ ಯೋಚಿಸಬೇಕು. ಮಾತ್ರವಲ್ಲದೆ, ನಿಮ್ಮ ಭವಿಷ್ಯದ ಜೀವನಕ್ಕೆ ಅಥವಾ ಭವಿಷ್ಯದ ಗುರಿಗಳ ಸಾಧನೆಗೆ ಸಹಕಾರಿಯಾಗಲು ಒಂದಷ್ಟು ಹಣಕಾಸಿನ(Financial) ಅವಶ್ಯಕತೆ ಇರುತ್ತದೆ. ಇದಕ್ಕೆ ಬೇಕಾದ ಕೆಲವೊಂದು ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ಅದಕ್ಕೆ ನೀವು ಈಗಿಂದ ಈಗಲೇ ದೃಢ ಸಂಕಲ್ಪದಿಂದ ತಯಾರಿ ನಡೆಸಬೇಕು. ಯೋಜನೆ(Planning) ರೂಪಿಸುವ ವಿಧಾನಗಳನ್ನು ಹೇಳುತ್ತೇವೆ, ಈ ಸ್ಟೋರಿಯನ್ನು ಸಂಪೂರ್ಣವಾಗಿ ಓದಿ.

ಆದಾಯದಿಂದ ಖರ್ಚು ಮತ್ತು ಉಳಿತಾಯ

ಆದಾಯದ ಒಂದು ಭಾಗ ಹಣವನ್ನು ಉಳಿತಾಯ ಮಾಡುವ ಸರಳ ವಿಧಾನಗಳಲ್ಲಿ ಇದು ಒಂದಾಗಿದೆ. ನೀವು ಈಗಾಗಲೇ ನಿಮ್ಮ ಭವಿಷ್ಯದ ಗುರಿಗಳನ್ನು ಹೊಂದಿದ್ದರೆ, ಹಣದ ಉಳಿತಾಯದ ವಿಧಾನವನ್ನು ಈಗಲೇ ಆರಂಭಿಸಿ. ಆದಾಯದಿಂದ ಖರ್ಚು ಮತ್ತು ಉಳಿತಾಯ ಎಂಬ ವಿಧಾನವನ್ನು ನೀವು ಆರಂಭಿಸಿದ್ದೇ ಆದ್ದಲ್ಲಿ ನಿವು ಕಟ್ಟಿಕೊಂಡಿರುವ ಭವಿಷ್ಯದ ಗುರಿಯನ್ನು ಸಾಧಿಸಲು ನೆರವಾಗಬಹುದು.

ಹೌದು, ನೀವು ಈಗ ಏನು ಸಂಪಾದಿಸುತ್ತೀರೋ ಅದರಲ್ಲಿ ಒಂದು ಭಾಗವನ್ನು ನಿಮ್ಮ ವೈಯಕ್ತಿಕ ಅಥವಾ ಮನೆಯ ಖರ್ಚಿಗಾಗಿ ವಿನಿಯೋಗಿಸಿಕೊಳ್ಳಿ. ಖರ್ಚು ಮಾಡುವಾಗ ವಿವೇಚನೆಯಿಂದ ಖರ್ಚು ಮಾಡಿ. ಈಗ ನಿಮ್ಮ ಆದಾಯದಲ್ಲಿ ಖರ್ಚಿನ ಹಣ ಮೈನಸ್ ಆಯ್ತು. ಇದೀಗ ಉಳಿದ ಹಣವನ್ನು ನಿಮ್ಮ ಭವಿಷ್ಯದ ಗುರಿ ಸಾಧನೆಗಾಗಿ ಬ್ಯಾಂಕ್ ಅಥವಾ ಇನ್ಯಾವುದೋ ರೂಪದಲ್ಲಿ ಉಳಿತಾಯ ಮಾಡಿಟ್ಟುಕೊಳ್ಳಿ. ಈ ರೀತಿ ನಿಯಮಿತವಾಗಿ ಹಣವನ್ನು ಕ್ರೂಡೀಕರಿಸಿ.

ಎಷ್ಟು ಉಳಿತಾಯ ಮಾಡಬೇಕು?

ಭವಿಷ್ಯಕ್ಕಾಗಿ ಉಳಿತಾಯವನ್ನು ಆರಂಭಿಸಬೇಕು, ಆದರೆ ಎಷ್ಟು ಎಂಬುದು ನಿಮಗೆ ಬಿಟ್ಟ ವಿಚಾರ. ನೀವು ಗಳಿಸುವ ವೇತನ ಅಥವಾ ನೀವು ನಡೆಸುತ್ತಿರುವ ವ್ಯಾಪಾರದಿಂದ ಬಂದ ಆದಾಯದ ಶೇ.5 ರಷ್ಟರಿಂದ ಉಳಿತಾಯವನ್ನು ಆರಂಭಿಸಬಹುದು. ಇದನ್ನು ಕಾಲಾಂತರದಲ್ಲಿ ಶೇ.10 ಅಥವಾ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಹೆಚ್ಚಿಸಬಹುದು. ವಯಸ್ಸಾದಂತೆ ನಿಮ್ಮ ಗುರಿಗಳು ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಹೀಗಾಗಿ ಮಧ್ಯ ವಯಸ್ಸಿನಲ್ಲಿ ನೀವು ಹೆಚ್ಚಿನ ಶೇಕಡಾವಾರು ಮೊತ್ತವನ್ನು ಉಳಿಸಿಕೊಳ್ಳಬೇಕಾಗುತ್ತದೆ.

ತುರ್ತು ನಿಧಿ ಉಳಿತಾಯ

ಮನುಷ್ಯ ಅಂದ ಮೇಲೆ ಒಂದಲ್ಲಾ ಒಂದು ಸಮಸ್ಯೆ ಕಟ್ಟಿಟ್ಟ ಬುತ್ತಿ. ಅದು ಉದ್ಯೋಗಕ್ಕೆ ಸಂಬಂಧಿಸಿದ್ದು ಆಗಿರಬಹುದು, ಆರೋಗ್ಯಕ್ಕೆ ಸಂಬಂಧಿಸಿದ್ದಾಗಿರಬಹುದು ಅಥವಾ ಇನ್ಯಾವುದೋ ತುರ್ತುಸ್ಥಿತಿಯಾಗಿರಬಹುದು. ಈಗ ನೀವು ಮಾಡಬೇಕಾಗಿರುವುದು ಏನು ಎಂದರೆ, ಇಂಥ ತುರ್ತು ಸ್ಥಿತಿ ಎದುರಿಸಲು ಹಣದ ಉಳಿತಾಯ ಮಾಡಬೇಕು. ಅದಕ್ಕಾಗಿ ಉಳಿತಾಯ ಖಾತೆ, ಅಲ್ಪಾವಧಿ ನಿಧಿಗಳ ಮಿಶ್ರಣದಲ್ಲಿ ಹೂಡಿಕೆಯನ್ನು ಕನಿಷ್ಠ 6 ತಿಂಗಳಿಗಾಗಿ ಮಾಡಿಟ್ಟುಕೊಳ್ಳಿ. ಇದು ಉದ್ಯೋಗ ನಷ್ಟ, ಮುಂಗಡ ನಗದು ಅಥವಾ ವೈದ್ಯಕೀಯ ತುರ್ತುಸ್ಥಿತಿಯಂತಹ ಹಣಕಾಸಿನ ಪರಿಸ್ಥಿತಿಗೆ ನೆರವಾಗಲಿದೆ.

ಹಿರಿ ಜೀವನಕ್ಕೆ ಎಷ್ಟು ಉಳಿತಾಯ ಮಾಡಬೇಕು?

ನೀವೀಗ ಯವ್ವೌನ ವಯಸ್ಸಿನಲ್ಲಿ ಇದ್ದರೆ ನಿಮ್ಮ ಹಿರಿ ಜೀವನಕ್ಕೆ ಅಂದರೆ ನಿವೃತ್ತ ಜೀವನಕ್ಕೆ ಒಂದಷ್ಟು ಹಣವನ್ನು ಉಳಿತಾಯ ಮಾಡಿಟ್ಟುಕೊಳ್ಳುವುದು ಅವಶ್ಯಕ. ಅದು ನಿಮ್ಮ ನಿವೃತ್ತ ಜೀವನವನ್ನು ಆರಾಮದಾಯಿಕವಾಗಿ ನಡೆಸಲು ಸಹಕಾರಿಯಾಗಲಿದೆ. ಈಗ ನಿಮ್ಮ ತಲೆಯಲ್ಲಿ ಪ್ರಶ್ನೆಯೊಂದು ಬರಬಹುದು, ಎಷ್ಟು ಉಳಿತಾಯ ಮಾಡಬೇಕು? ಎಂದು. ಇದಕ್ಕೆ ಯಾವುದೇ ನಿಯಮವಿಲ್ಲ, ಓರ್ವ ವ್ಯಕ್ತಿ ಆರಾಮದಾಯಿಕವಾಗಿ ನಿವೃತ್ತರಾಗಲು ಒಬ್ಬರ ವಾರ್ಷಿಕ ಆದಾಯದ 20-30 ಪಟ್ಟು ನಿವೃತ್ತಿ ಗುರಿ ಕಾರ್ಪಸ್ ಅನ್ನು ಗುರಿಯಾಗಿಸಬೇಕಾಗುತ್ತದೆ.

Published On - 10:12 am, Sun, 15 May 22