
ನವದೆಹಲಿ, ಅಕ್ಟೋಬರ್ 21: ಭಾರತ ತಡವಾಗಿ ಎಐ ಟೆಕ್ನಾಲಜಿ ಕ್ಷೇತ್ರಕ್ಕೆ ಕಾಲಿಟ್ಟರೂ ಕ್ಷಿಪ್ರ ವೇಗದಲ್ಲಿ ಬೆಳೆಯುತ್ತಿದೆ. ವರ್ಷದ ಹಿಂದಷ್ಟೇ ಶುರುವಾದ ಸರ್ವಂ ಎಐ ಕಂಪನಿ ಇದೀಗ ಅಮೆರಿಕದ ಎಐ ಮಾಡಲ್ಗಳನ್ನು ಹೋಸ್ಟ್ ಮಾಡುವ ಫೌಂಡೇಶನಲ್ ಮಾಡಲ್ ಇನ್ಫ್ರಾಸ್ಟ್ರಕ್ಚರ್ ಸಾಮರ್ಥ್ಯ ರೂಪಿಸಿದೆ. ಬೆಂಗಳೂರು ಮೂಲದ ಸರ್ವಂ ಎಐ ಕಂಪನಿಯ ಸಹ-ಸಂಸ್ಥಾಪಕ ಪ್ರತ್ಯೂಶ್ ಕುಮಾರ್ ಅವರು ಈ ಮಾಹಿತಿ ನೀಡಿದ್ದಾರೆ.
ಮನಿಕಂಟ್ರೋಲ್ ಸ್ಟಾರ್ಟಪ್ ಕಾಂಕ್ಲೇವ್ 2026 ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಪ್ರತ್ಯೂಶ್ ಕುಮಾರ್, ಸರ್ವಂ ಎಐ ಇನ್ಫ್ರಾಸ್ಟ್ರಕ್ಚರ್ ಈಗ ತನ್ನದೇ ಸ್ವಂತ ಎಐ ಮಾಡಲ್ಗಳನ್ನು ಹೋಸ್ಟ್ ಮಾಡುವುದಷ್ಟೇ ಅಲ್ಲ, ಅಮೆರಿಕದವರದ್ದೂ ಸೇರಿ ಇತರೆ ಕಂಪನಿಗಳು ನಿರ್ಮಿಸಿದ ಎಐ ಮಾಡಲ್ಗಳನ್ನೂ ಹೋಸ್ಟ್ ಮಾಡಬಲ್ಲುದು ಎಂದಿದ್ದಾರೆ.
ಇದನ್ನೂ ಓದಿ: ಜಿಯೋ ಪ್ಲಾಟ್ಫಾರ್ಮ್ಸ್ ಐಪಿಒ; ಅತಿವೇಗದ ಸಬ್ಸ್ಕ್ರಿಪ್ಷನ್ ಸೇರಿ ಪ್ರಮುಖ ದಾಖಲೆಗಳು; ಹೊಸ ಇತಿಹಾಸ
ಸರ್ವಂ ಎಐ ಸಂಸ್ಥೆ ಕೆಲ ಫೌಂಡೇಶನ್ ಮಾಡಲ್ಗಳನ್ನು ನಿರ್ಮಿಸಿ ಸೈ ಎನಿಸಿದೆ. ಈಗ ಒಂದು ಹೆಜ್ಜೆ ಮುಂದೆ ಹೋಗಿ ಎಐ ಇನ್ಫ್ರಾಸ್ಟ್ರಕ್ಚರ್ ನಿರ್ಮಿಸುವ ಕೆಲಸ ಮಾಡುತ್ತಿದೆ. ಉದ್ದಿಮೆಗಳು ಸರ್ವಂನ ಎಐ ಮಾಡಲ್ಗಳನ್ನು ಬಳಸಬಹುದು. ಅಥವಾ ತಮ್ಮವೇ ಯಾವುದಾದರೂ ಎಐ ಮಾಡಲ್ಗಳಿದ್ದರೆ ಅವನ್ನು ಸರ್ವಂ ಇನ್ಫ್ರಾಸ್ಟ್ರಕ್ಚರ್ನಲ್ಲಿ ಬಳಸಬಹುದು ಎಂದು ಸರ್ವಂ ಸಹ-ಸಂಸ್ಥಾಪಕರು ಹೇಳಿದ್ದಾರೆ.
ತನ್ನ ಇನ್ಫ್ರಾಸ್ಟ್ರಚರ್ನಲ್ಲಿ ಉದ್ದಿಮೆಗಳು ಎಐ ಅಳವಡಿಕೆ ಸುಲಭಗೊಳಿಸಲು ಸರ್ವಂ ಸಂಸ್ಥೆ ತನ್ನದೇ ಎಂಜಿನಿಯರುಗಳನ್ನು ಕ್ಲೈಂಟ್ ಸ್ಥಳಕ್ಕೆ ಕಳುಹಿಸುತ್ತಿದೆ. ಕ್ಲೈಂಟ್ಗಳ ತಂಡಗಳ ಜೊತೆಗೆ ಸರ್ವಂನ ಎಂಜಿನಿಯರುಗಳೂ ಸೇರಿ ಎಐ ಇನ್ಫ್ರಾಸ್ಟ್ರಕ್ಚರ್ ನಿರ್ಮಿಸಲು ನೆರವಾಗುತ್ತಿದ್ದಾರೆ ಎನ್ನುವ ಮಾಹಿತಿಯನ್ನು ಪ್ರತ್ಯೂಶ್ ಕುಮಾರ್ ನೀಡಿದ್ದಾರೆ.
ಇದನ್ನೂ ಓದಿ: ಮಾರ್ಕೊ ರೂಬಿಯೋ-ಮುಕೇಶ್ ಅಂಬಾನಿ ಭೇಟಿ; ಅಮೆರಿಕದ ವಿದೇಶಾಂಗ ಸಚಿವನಿಗೆ ರಿಲಯನ್ಸ್ ದಿಗ್ಗಜನೊಂದಿಗೆ ಏನು ಕೆಲಸ? ಇಲ್ಲಿವೆ ಕಾರಣಗಳು
ಸರ್ಕಾರದ ಕಂಪ್ಯೂಟರ್ ಆರ್ ಅಂಡ್ ಡಿ ವಿಭಾಗವಾದ ಎನಿಸಿದ ಸಿ-ಡಾಕ್ ಜೊತೆ ಸರ್ವ ಒಪ್ಪಂದ ಮಾಡಿಕೊಂಡಿದೆ. ಸಿ-ಡಾಕ್ ಅಭಿವೃದ್ಧಿಪಡಿಸಿದ ಕಂಪ್ಯೂಟಿಂಗ್ ಸಿಸ್ಟಂಗಳಲ್ಲಿ ಸರ್ವಂನ ಮಾಡಲ್ಗಳು, ಅಪ್ಲಿಕೇಶನ್ಗಳು ರನ್ ಆಗಲಿವೆ.
ಐಬಿಎಂ, ಎಚ್ಪಿ, ಐಡಿಎಫ್ಸಿ ಫಸ್ಟ್ ಬ್ಯಾಂಕ್ ಇತ್ಯಾದಿ ಸಂಸ್ಥೆಗಳು ಸರ್ವಂ ಜೊತೆ ಸಹಭಾಗಿತ್ವ ಒಪ್ಪಂದ ಮಾಡಿಕೊಂಡಿರುವುದು ಗಮನಾರ್ಹ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ