ಪ್ರಮುಖ ರಫ್ತುದಾರ ದೇಶ ಸೌದಿ ಅರೇಬಿಯಾದಿಂದ ಅಚ್ಚರಿ ಬೆಳವಣಿಗೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಡೀಸೆಲ್ ಖರೀದಿ​

ಅಪರೂಪದ ಬೆಳವಣಿಗೆಯೊಂದರಲ್ಲಿ ಸೌದಿ ಅರೇಬಿಯಾವು ಡೀಸೆಲ್ ಖರೀದಿಗೆ ಮುಂದಾಗಿದೆ. ಈ ಬಗ್ಗೆ ಆಸಕ್ತಿಕರವಾದ ಸಂಗತಿಗಳನ್ನು ಇಲ್ಲಿ ನೀಡಲಾಗಿದೆ.

ಪ್ರಮುಖ ರಫ್ತುದಾರ ದೇಶ ಸೌದಿ ಅರೇಬಿಯಾದಿಂದ ಅಚ್ಚರಿ ಬೆಳವಣಿಗೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಡೀಸೆಲ್ ಖರೀದಿ​
ಸಾಂದರ್ಭಿಕ ಚಿತ್ರ
Updated By: Srinivas Mata

Updated on: Mar 10, 2022 | 2:18 PM

ಪ್ರಮುಖ ತೈಲ ಉತ್ಪಾದಕ ದೇಶವಾದ ಸೌದಿ ಅರೇಬಿಯಾವು (Saudi Arabia) ಇಡೀ ವಿಶ್ವ ಅಚ್ಚರಿ ಪಡುವ ರೀತಿಯಲ್ಲಿ ದೊಡ್ಡ ಪ್ರಮಾಣದ ಡೀಸೆಲ್ ಖರೀದಿಗೆ ಪ್ರಯತ್ನಿಸುತ್ತಿದೆ. ಅಂದ ಹಾಗೆ ಈಗಾಗಲೇ ಡೀಸೆಲ್ ಮಾರುಕಟ್ಟೆಯಲ್ಲಿ ಕೊರತೆ ಇದ್ದು, ಇಂಥ ಸಂದರ್ಭದಲ್ಲಿ ರಫ್ತುದಾರ ದೇಶವೇ ಆದ ಸೌದಿ ಅರೇಬಿಯಾ ದೊಡ್ಡ ಪ್ರಮಾಣದ ಡೀಸೆಲ್ ಖರೀದಿಸಲು ಪ್ರಯತ್ನಿಸುತ್ತಿದೆ. ಅರಾಮ್ಕೊ ಟ್ರೇಡಿಂಗ್ 1.2 ಮಿಲಿಯನ್ ನಿಂದ 4.6 ಮಿಲಿಯನ್ ಬ್ಯಾರೆಲ್​ನಷ್ಟು ಕಡಿಮೆ ಸಲ್ಫರ್ ಡೀಸೆಲ್ ಅನ್ನು ಸೌದಿ ಅರೇಬಿಯಾದ ಹಲವಾರು ಬಂದರುಗಳಿಗೆ ಟೆಂಡರ್ ಮೂಲಕ ಮಾರ್ಚ್ ಮಧ್ಯದಿಂದ ಏಪ್ರಿಲ್‌ನೊಳಗೆ ತಲುಪಿಸಲು ಕೋರಿದೆ ಎಂದು ಈ ಬೆಳವಣಿಗೆ ಬಗ್ಗೆ ಮಾಹಿತಿ ಇರುವ ವರ್ತಕರು ಹೇಳಿದ್ದಾರೆ. ಆದರೆ ತಮ್ಮ ಹೆಸರನ್ನು ಬಹಿರಂಗ ಮಾಡಬಾರದು ಎಂಬ ಷರತ್ತು ವಿಧಿಸಿದ್ದಾರೆ. ಇದು ಸೌದಿ ಅರೇಬಿಯಾ ದೇಶದಿಂದ ಅಪರೂಪದ ಕ್ರಮವಾಗಿದ್ದು, ಸಾಮಾನ್ಯವಾಗಿ ಆ ದೇಶವು ಡೀಸೆಲ್‌ನ ನಿವ್ವಳ ರಫ್ತುದಾರ, ಎನ್ನುತ್ತಾರೆ ವರ್ತಕರು.

ಈ ಸಂಬಂಧವಾಗಿ ಸೌದಿ ಅರಾಮ್ಕೊಗೆ ಕಳುಹಿಸಲಾದ ಇಮೇಲ್ ಪ್ರಶ್ನೆಗೆ ನಿಯಮಿತ ಕೆಲಸದ ಸಮಯದ ಹೊರಗೆ ತಕ್ಷಣವೇ ಉತ್ತರಿಸಲಾಗಿಲ್ಲ ಎಂದು “ಮಿಂಟ್​” ವರದಿ ಮಾಡಿದೆ. ಕಡಿಮೆ ಸಮಯದಲ್ಲಿ ಇಷ್ಟು ದೊಡ್ಡ ಪ್ರಮಾಣದ ಇಂಧನವನ್ನು ಕಂಡುಕೊಳ್ಳುವುದು ತುಂಬ ಕಷ್ಟಕರ ಆಗಿದೆ ಎನ್ನುತ್ತಾರೆ ವರ್ತಕರು. ಡೀಸೆಲ್ ಮಾರುಕಟ್ಟೆಗಳು ತೀವ್ರವಾಗಿ ಹಿಂಜರಿತ ಅನುಭವಿಸುತ್ತಿರುವ ಸಮಯದಲ್ಲಿ ಈ ಬೇಡಿಕೆ ಬಂದಿದೆ. ಈ ರಚನೆಯ ಕಾರಣಕ್ಕೆ ಅಲ್ಪಾವಧಿಯಲ್ಲಿ ವಿತರಣೆಗಾಗಿ ಸರಕುಗಳು ಮತ್ತಷ್ಟು ದುಬಾರಿಯಾಗಿದೆ.

ರಷ್ಯಾದ ಡೀಸೆಲ್ ನಷ್ಟದ ನಿರೀಕ್ಷೆಯೊಂದಿಗೆ ಖರೀದಿದಾರರು ಹಿಡಿತ ಸಾಧಿಸುತ್ತಿದ್ದು, ಇದು ದೇಶದ ಬಹುಪಾಲು ರಫ್ತುಗಳಿಗೆ ನೆಲೆ ಆಗಿರುವ ಯುರೋಪಿಯನ್ ಮಾರುಕಟ್ಟೆಗಳಿಗೆ ಪ್ರಮುಖ ಪರಿಣಾಮ ಬೀರುತ್ತದೆ. ಹಲವಾರು ಯುರೋಪಿಯನ್ ಖರೀದಿದಾರರು ಏಷ್ಯಾ ಮತ್ತು ಮಧ್ಯಪ್ರಾಚ್ಯದಿಂದ ಸರಕುಗಳನ್ನು ಹುಡುಕಿದ್ದಾರೆ ಮತ್ತು ಇಂಧನದ ಸಂಗ್ರಹವು ಪ್ರಪಂಚದಾದ್ಯಂತ ಕಡಿಮೆಯಾಗಿದೆ. ಏಷ್ಯಾದ ಪ್ರಾಂಪ್ಟ್ ಡೀಸೆಲ್ ಟೈಮ್​ಸ್ಪ್ರೆಡ್ ಮಧ್ಯಾಹ್ನ ಸಿಂಗಾಪೂರದ ಸಮಯದಲ್ಲಿ ಬ್ಯಾರೆಲ್‌ಗೆ 9.70 ಯುಎಸ್​ಡಿಗೆ ಪ್ರೀಮಿಯಂ ದರದಲ್ಲಿ ಇತ್ತು. ಫೆಬ್ರವರಿ ಆರಂಭದಲ್ಲಿ 2 ಡಾಲರ್​ಗಿಂತ ಕಡಿಮೆ ಇತ್ತು. ಏಷ್ಯಾದಲ್ಲಿ ಕಚ್ಚಾ ತೈಲವನ್ನು ಡೀಸೆಲ್ ಆಗಿ ಪರಿವರ್ತಿಸುವ ಲಾಭವು ಯುರೋಪಿನ ಹೆಜ್ಜೆಗಳನ್ನು ಅನುಸರಿಸಿ ಅಸ್ಥಿರವಾಗಿದೆ, ಹಿಂದಿನ ದಿನದಿಂದ ಗುರುವಾರ ಬ್ಯಾರೆಲ್‌ಗೆ ಯುಎಸ್​ಡಿ 15 ರಷ್ಟು ಕಡಿಮೆಯಾಗಿದೆ.

ಇದನ್ನೂ ಓದಿ: Reliance Industries O2C: ಪ್ರಸ್ತಾವಿತ O2C ಮಾರಾಟ ಮರು ಮೌಲ್ಯಮಾಪನಕ್ಕೆ ರಿಲಯನ್ಸ್, ಸೌದಿ ಅರಾಮ್ಕೊ ನಿರ್ಧಾರ​