Saudi Aramco: ಸೌದಿ ರಾಜಕುಮಾರನ ಕನಸು ನನಸು ಮಾಡಿದ ಅರಾಮ್ಕೊ; ಮಾರುಕಟ್ಟೆ ಮೌಲ್ಯ 2 ಲಕ್ಷ ಕೋಟಿ ಡಾಲರ್​ಗೆ

| Updated By: Srinivas Mata

Updated on: Oct 06, 2021 | 11:50 PM

ಸೌದಿ ಅರೇಬಿಯಾದ ತೈಲ ಕಂಪೆನಿಯಾದ ಅರಾಮ್ಕೊ ಮಾರುಕಟ್ಟೆ ಬಂಡವಾಳವು ಬುಧವಾರದಂದು ದಾಖಲೆಯ 2 ಲಕ್ಷ ಕೋಟಿ ಡಾಲರ್ ತಲುಪಿ, ವಿಶ್ವದ ಅಗ್ರಮಾನ್ಯ ಕಂಪೆನಿಗಳ ಸಾಲಿನಲ್ಲಿ ನಿಂತಿದೆ.

Saudi Aramco: ಸೌದಿ ರಾಜಕುಮಾರನ ಕನಸು ನನಸು ಮಾಡಿದ ಅರಾಮ್ಕೊ; ಮಾರುಕಟ್ಟೆ ಮೌಲ್ಯ 2 ಲಕ್ಷ ಕೋಟಿ ಡಾಲರ್​ಗೆ
ಪ್ರಾತಿನಿಧಿಕ ಚಿತ್ರ
Follow us on

ಸೌದಿ ಅರೇಬಿಯಾದ ತೈಲ ಕಂಪೆನಿ ಅರಾಮ್ಕೊ 2 ಟ್ರಿಲಿಯನ್ ಡಾಲರ್ (ಭಾರತದ ರೂಪಾಯಿ ಲೆಕ್ಕದಲ್ಲಿ 149.65 ಲಕ್ಷ ಕೋಟಿ) ಮಾರುಕಟ್ಟೆ ಮೌಲ್ಯವನ್ನು ತಲುಪಿದೆ. ಏಕೆಂದರೆ ಕಂಪೆನಿಯ ಷೇರು ಬುಧವಾರ ವಹಿವಾಟು ನಡೆಸುವ ವೇಳೆಯಲ್ಲಿ ದಾಖಲೆ ಮಟ್ಟವನ್ನು ತಲುಪಿತು. ಮಾರುಕಟ್ಟೆ ಬಂಡವಾಳ ಮೌಲ್ಯವು 2 ಲಕ್ಷ ಕೋಟಿ ಡಾಲರ್ ಆಗುವ ಮೂಲಕವಾಗಿ ಸೌದಿ ಅರಾಮ್ಕೊ ಕಂಪೆನಿಯನ್ನು ಮೈಕ್ರೋಸಾಫ್ಟ್ ಮತ್ತು ಆಪಲ್​ನಂಥ ವಿಶ್ವದ ಅತ್ಯಮೂಲ್ಯ ಕಂಪೆನಿಯ ನಂತರದ ಸಾಲಿನಲ್ಲಿ ನಿಲ್ಲಿಸಿತು. ಕಚ್ಚಾ ತೈಲ ಬೆಲೆಗಳು ಬ್ಯಾರೆಲ್‌ಗೆ 82 ಡಾಲರ್‌ಗಳಿಗೆ ಏರಿದ್ದು, ಏಳು ವರ್ಷಗಳಲ್ಲಿ ಗರಿಷ್ಠ ಎತ್ತರಕ್ಕೆ ತಲುಪಿದೆ. ಈ ಹಿನ್ನೆಲೆಯಲ್ಲಿ ಕಂಪೆನಿಯ ಷೇರು ಬೆಲೆ ಕೂಡ ಮೇಲೇರಿ, ಮಾರುಕಟ್ಟೆ ಬಂಡವಾಳ ಮೌಲ್ಯ ದಾಖಲೆಯನ್ನು ಬರೆದಿದೆ. ಕೊರೊನಾ ವೈರಸ್ ಸಾಂಕ್ರಾಮಿಕದ ಪ್ರಮಾಣ ಸ್ವಲ್ಪ ಮಟ್ಟಿಗೆ ಪ್ರವಾಸ ಮತ್ತು ಇತರ ವಲಯಗಳ ಮೇಲೆ ಬೀಳುತ್ತಿದ್ದರೂ ಇಂಧನದ ಬೇಡಿಕೆ ಹೆಚ್ಚುತ್ತಿದೆ.

ಅರಾಮ್ಕೊ ಕಂಪೆನಿಯ ಬಹುಪಾಲು ಷೇರನ್ನು ಸೌದಿ ಅರೇಬಿಯಾ ಸರ್ಕಾರವು ಹೊಂದಿದೆ. ಕೇವಲ ಶೇ 2ಕ್ಕಿಂತ ಕಡಿಮೆ ಪ್ರಮಾಣದ ಷೇರು ಸೌದಿಯ ತಡಾವುಲ್ ಷೇರು ವಿನಿಮಯ ಕೇಂದ್ರದಲ್ಲಿ ಸಾರ್ವಜನಿಕವಾಗಿ ಲಿಸ್ಟೆಡ್ ಆಗಿದೆ. ಅರಾಮ್ಕೊ ಷೇರು ಸುಮಾರು ತಲಾ 37.6 ರಿಯಾಲ್​ನಂತೆ ವಹಿವಾಟು ನಡೆಸುತ್ತಿತ್ತು ಅಥವಾ 10 ಯುಎಸ್​ಡಿಗಿಂತ ಸ್ವಲ್ಪ ಹೆಚ್ಚು ಸೆಂಟ್ಸ್ ದರದಲ್ಲಿ ವಹಿವಾಟು ನಡೆಸುತ್ತಿತ್ತು. ಬುಧವಾರ ಮಧ್ಯಾಹ್ನದ ವೇಳೆಗೆ ಪ್ರತಿ ಷೇರಿಗೆ 37.2 ರಿಯಾಲ್ ಅಥವಾ ಸುಮಾರು 9.92 ಡಾಲರ್​ಗೆ ಇಳಿಯಿತು. ವಹಿವಾಟು ಮುಗಿಯುವ ತನಕ ಇದೇ ಏರಿಕೆ ಹಾದಿ ಮುಂದುವರಿಯುವುದೇ ಎಂಬ ಪ್ರಶ್ನೆ ಇದ್ದೇ ಇದೆ.

2019ರ ಕೊನೆಯಲ್ಲಿ ಅರಾಮ್ಕೋ ಕಂಪೆನಿಯನ್ನು ಸಾರ್ವಜನಿಕವಾಗಿ ಲಿಸ್ಟಿಂಗ್​ ಮಾಡುವುದರಲ್ಲಿ ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಮುಖ್ಯ ಪಾತ್ರ ವಹಿಸಿದ್ದರು. ಇದು ದೇಶದ ಸವರನ್ ಸಂಪತ್ತು ನಿಧಿಗೆ ಬಂಡವಾಳವನ್ನು ಸಂಗ್ರಹಿಸುವ ಮಾರ್ಗವಾಗಿತ್ತು. ಆ ನಂತರ ದೇಶಾದ್ಯಂತ ಹೊಸ ನಗರಗಳು ಮತ್ತು ಬೃಹತ್ ಯೋಜನೆಗಳನ್ನು ಅಭಿವೃದ್ಧಿಪಡಿಸುವ ಉದ್ದೇಶ ಇತ್ತು. ಆ ಮೂಲಕ ಸೌದಿಯ ಯುವಜನರಿಗೆ ಅಗತ್ಯವಿರುವ ಖಾಸಗಿ ವಲಯದ ಉದ್ಯೋಗಗಳನ್ನು ಸೃಷ್ಟಿಸುವ ಮಾರ್ಗವಾಗಿ ಕಂಡುಕೊಂಡರು. ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಅರಾಮ್ಕೊದ ಮಾರುಕಟ್ಟೆ ಮೌಲ್ಯ 2 ಲಕ್ಷ ಕೋಟಿ ಡಾಲರ್​ ಆಗುವುದನ್ನು ಬಹಳ ಹಿಂದಿನಿಂದಲೂ ಎದುರು ನೋಡುತ್ತಿದ್ದರು. ಅರಾಮ್ಕೊದ ವಾರ್ಷಿಕ ಗಳಿಕೆಯಲ್ಲಿ ಏರಿಳಿತಗಳ ಹೊರತಾಗಿಯೂ ಕಂಪನಿಯು 2024ರವರೆಗೆ 75 ಬಿಲಿಯನ್ ಅಮೆರಿಕನ್ ಡಾಲರ್ ವಾರ್ಷಿಕ ಲಾಭಾಂಶವನ್ನು ಷೇರುದಾರರಿಗೆ ನೀಡುವ ಭರವಸೆ ನೀಡಿದೆ. ಆ ಪೈಕಿ ಅತಿ ದೊಡ್ಡದು ಸರ್ಕಾರ. ಅರಾಮ್ಕೊದಿಂದ ಸೌದಿಯ ವಿಶಾಲ ತೈಲ ಮತ್ತು ಅನಿಲ ಉತ್ಪನ್ನಗಳನ್ನು ಉತ್ಪಾದಿಸಲಾಗುತ್ತದೆ. ಪ್ರತಿ ತಿಂಗಳು ಪೂರೈಕೆ ಉತ್ಪಾದನೆಯ ನಿರ್ದೇಶನಗಳನ್ನು OPECನ ಲಿಂಚ್‌ಪಿನ್ ರಾಷ್ಟ್ರಗಳು, ಸೌದಿ ಅರೇಬಿಯಾದ ಇಂಧನ ಸಚಿವಾಲಯದಿಂದ ಪಡೆಯುತ್ತದೆ.

ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಕಡಿತಗೊಳಿಸಿದ್ದ ಉತ್ಪಾದನಾ ಮಟ್ಟವನ್ನು ಪುನಃಸ್ಥಾಪಿಸಲು ನಿಧಾನ ಗತಿಯನ್ನು ಅನುಸರಿಸುತ್ತಿರುವ ತೈಲ ಕಾರ್ಟರ್ ಮತ್ತು ಇತರ ಮಿತ್ರ ಪ್ರಮುಖ ತೈಲ ಉತ್ಪಾದಕರು, ನವೆಂಬರ್‌ನಲ್ಲಿ ದಿನಕ್ಕೆ 4,00,000 ಬ್ಯಾರೆಲ್‌ಗಳನ್ನು ಮಾತ್ರ ಸೇರಿಸಲು ಈ ವಾರ ಒಪ್ಪಿಕೊಂಡಿದ್ದಾರೆ. ತೈಲದ ಬೇಡಿಕೆಯು ವರ್ಷಾಂತ್ಯದ ವೇಳೆಗೆ ದಿನಕ್ಕೆ 99 ದಶಲಕ್ಷ ಬ್ಯಾರೆಲ್‌ಗಳಿಗೆ ತಲುಪುತ್ತದೆ ಮತ್ತು ಮುಂದಿನ ವರ್ಷ 100 ಮಿಲಿಯನ್‌ಗಿಂತ ಸ್ವಲ್ಪ ಹೆಚ್ಚಾಗುತ್ತದೆ. ಅರಾಮ್ಕೊ 2021ರ ಮೊದಲಾರ್ಧದಲ್ಲಿ ಸುಮಾರು 47 ಬಿಲಿಯನ್ ಯುಎಸ್​ಡಿ ನಿವ್ವಳ ಆದಾಯವನ್ನು ಗಳಿಸಿತು. ಕಳೆದ ವರ್ಷ ಇದೇ ಅವಧಿಯಲ್ಲಿ ಗಳಿಸಿದ ಆದಾಯಕ್ಕಿಂತ ಇದು ದ್ವಿಗುಣಗೊಂಡಿದೆ. ಆ ಸಂದರ್ಭದಲ್ಲಿ ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಪ್ರಯಾಣ ಸಂಪೂರ್ಣ ನಿಂತುಹೋಗಿತ್ತು. ಮತ್ತೆ ಈಗ ತೈಲಕ್ಕಾಗಿ ಜಾಗತಿಕ ಬೇಡಿಕೆ ಹೆಚ್ಚಾಗಿದೆ. ಆ ಕಾರಣದಿಂದ ಅರಾಮ್ಕೋ ಈ ಹಿಂದಿನ ಗಳಿಕೆ ಸ್ಥಿತಿಗೆ ಮರಳಿದೆ.

ಇದನ್ನೂ ಓದಿ: ಸೌದಿ ಅರಾಮ್ಕೋಗೆ ರಿಲಯನ್ಸ್ ಆಯಿಲ್-ಟು-ಕೆಮಿಕಲ್ಸ್ ಷೇರಿನ ಪಾಲು ಮಾರಾಟ ಮಾತುಕತೆಗೆ ಮತ್ತೆ ಚಾಲನೆ