SBI 3 in 1 Account: ಎಸ್​ಬಿಐ 3 ಇನ್ 1 ಖಾತೆ ವೈಶಿಷ್ಟ್ಯ, ಅನುಕೂಲ ಹಾಗೂ ಇತರ ಮಾಹಿತಿಗಳು ಇಲ್ಲಿವೆ

| Updated By: Srinivas Mata

Updated on: Dec 16, 2021 | 9:23 PM

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ 3 ಇನ್ 1 ಖಾತೆಯ ವೈಶಿಷ್ಟ್ಯ, ಅನುಕೂಲ ಮತ್ತು ಇತರ ವಿವರಗಳನ್ನು ಇಲ್ಲಿ ನೀಡಲಾಗಿದೆ. ಇದರಿಂದ ಗ್ರಾಹಕರಿಗೆ ಅನುಕೂಲ ಆಗಲಿದೆ.

SBI 3 in 1 Account: ಎಸ್​ಬಿಐ 3 ಇನ್ 1 ಖಾತೆ ವೈಶಿಷ್ಟ್ಯ, ಅನುಕೂಲ ಹಾಗೂ ಇತರ ಮಾಹಿತಿಗಳು ಇಲ್ಲಿವೆ
ಸಾಂದರ್ಭಿಕ ಚಿತ್ರ
Follow us on

ದೇಶದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 3-ಇನ್-1 ಖಾತೆಯನ್ನು ಒದಗಿಸುತ್ತದೆ. ಉಳಿತಾಯ ಬ್ಯಾಂಕ್ ಖಾತೆ, ಡಿಮ್ಯಾಟ್ ಖಾತೆ ಮತ್ತು ಆನ್‌ಲೈನ್ ಟ್ರೇಡಿಂಗ್ ಖಾತೆಯನ್ನು ಸಂಯೋಜಿಸಿ, ಸರಳ ಮತ್ತು ಕಾಗದರಹಿತ (ಪೇಪರ್​ಲೆಸ್) ವ್ಯವಹಾರದ ಅನುಭವವನ್ನು ಒದಗಿಸುತ್ತದೆ. ಆದ್ದರಿಂದ ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯು ಕಡ್ಡಾಯವಾಗಿದೆ. ಇ-ಮಾರ್ಜಿನ್ ಸೌಲಭ್ಯದೊಂದಿಗೆ 3 ಇನ್ 1 ಖಾತೆ ತೆರೆಯುವುದು ಹೇಗೆಂಬ ವಿವರ ಇಲ್ಲಿದೆ. ಉಳಿತಾಯ ಖಾತೆ, ಡಿಮ್ಯಾಟ್ ಖಾತೆ ಮತ್ತು ಟ್ರೇಡಿಂಗ್ ಖಾತೆಯ ಅನುಕೂಲಗಳನ್ನು ಒಂದೇ ಸೂರಿನಡಿ ಪಡೆಯಿರಿ ಎಂದು ಎಸ್‌ಬಿಐ ಹೇಳಿದೆ. “3-ಇನ್-1 ಶಕ್ತಿಯನ್ನು ಅನುಭವಿಸಿ! ಉಳಿತಾಯ ಖಾತೆ, ಡಿಮ್ಯಾಟ್ ಖಾತೆ ಮತ್ತು ಟ್ರೇಡಿಂಗ್ ಖಾತೆಯನ್ನು ಸಂಯೋಜಿಸುವ ಖಾತೆಯು ಸರಳ ಮತ್ತು ಪೇಪರ್‌ಲೆಸ್ ಟ್ರೇಡಿಂಗ್ ಅನುಭವವನ್ನು ಒದಗಿಸುತ್ತದೆ,” ಎಂದು ಎಸ್‌ಬಿಐ ಟ್ವೀಟ್‌ನಲ್ಲಿ ತಿಳಿಸಿದೆ.

SBI ಉಳಿತಾಯ ಬ್ಯಾಂಕ್ ಖಾತೆ: ಅಗತ್ಯ ದಾಖಲೆಗಳು
– ಪ್ಯಾನ್ ಅಥವಾ ಫಾರ್ಮ್ 60
– ಭಾವಚಿತ್ರ

ಕೆಳಗಿನಂತೆ ಅಧಿಕೃತವಾಗಿ ಮಾನ್ಯವಾದ ದಾಖಲೆಗಳಲ್ಲಿ (OVD) ಒಂದು:
– ಪಾಸ್​ಪೋರ್ಟ್
– ಆಧಾರ್ ಹೊಂದಿರುವ ಪುರಾವೆ
– ಚಾಲನಾ ಪರವಾನಗಿ
– ಮತದಾರರ ಗುರುತಿನ ಚೀಟಿ
– MNREGA ನೀಡಿದ ಜಾಬ್ ಕಾರ್ಡ್
– ಹೆಸರು ಮತ್ತು ವಿಳಾಸದ ವಿವರಗಳನ್ನು ಹೊಂದಿರುವ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯಿಂದ ಹೊರಡಿಸಲಾದ ಪತ್ರ.

SBI ಡಿಮ್ಯಾಟ್ ಮತ್ತು ವ್ಯಾಪಾರ ಖಾತೆ: ಅಗತ್ಯ ದಾಖಲೆಗಳು
– ಪಾಸ್​ಪೋರ್ಟ್ ಅಳತೆಯ ಭಾವಚಿತ್ರ (ಒಂದು)
– ಪ್ಯಾನ್ ಕಾರ್ಡ್ ನಕಲು
– ಆಧಾರ್ ಕಾರ್ಡ್ ನಕಲು
– ಒಂದು ರದ್ದಾದ (ಕ್ಯಾನ್ಸಲ್ಡ್) ಚೆಕ್ ಲೀಫ್/ಇತ್ತೀಚಿನ ಬ್ಯಾಂಕ್ ಸ್ಟೇಟ್‌ಮೆಂಟ್.

ಎಸ್‌ಬಿಐ ಪ್ರಕಾರ, ಡಿಮ್ಯಾಟ್ ಖಾತೆಯು ಭೌತಿಕ ಷೇರು ಪ್ರಮಾಣಪತ್ರವನ್ನು ಎಲೆಕ್ಟ್ರಾನಿಕ್ ಬ್ಯಾಲೆನ್ಸ್‌ಗಳಾಗಿ ಪರಿವರ್ತಿಸಲು ಅನುವು ಮಾಡಿಕೊಡುತ್ತದೆ. ಅಲ್ಲದೆ, ಇದು ಮಾರುಕಟ್ಟೆ/ ಆಫ್-ಮಾರುಕಟ್ಟೆ ವಹಿವಾಟುಗಳ ಪರಿಣಾಮವಾಗಿ ಎಲೆಕ್ಟ್ರಾನಿಕ್ ಬ್ಯಾಲೆನ್ಸ್‌ಗಳ ವಿತರಣೆ/ ರಶೀದಿಯನ್ನು ಸುಗಮಗೊಳಿಸುತ್ತದೆ ಎಂದು ಎಸ್‌ಬಿಐ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

ಇದನ್ನೂ ಓದಿ: Personal loan: ಎಸ್​ಬಿಐ ಗ್ರಾಹಕರಿಗೆ ಪ್ರೀ ಅಪ್ರೂವ್ಡ್ ವೈಯಕ್ತಿಕ ಸಾಲದ ಮೇಲೆ ವಿಶೇಷ ವಿನಾಯಿತಿ; ಪಡೆಯುವುದು ಹೇಗೆ?