ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಡಿಸೆಂಬರ್ 15ನೇ ತಾರೀಕಿನ ಬುಧವಾರ ಇಳಿಕೆ ದಾಖಲಿಸಿದೆ. ನಿಫ್ಟಿ-50 ಸೂಚ್ಯಂಕವು 17,300 ಪಾಯಿಂಟ್ಸ್ಗಿಂತ ಕೆಳಗೆ ಇಳಿದಿದೆ. ಬುಧವಾರದ ದಿನಾಂತ್ಯಕ್ಕೆ ಸೆನ್ಸೆಕ್ಸ್ 329.06 ಪಾಯಿಂಟ್ಸ್ ಅಥವಾ ಶೇ 0.57ರಷ್ಟು ಇಳಿಕೆಯಾಗಿ 57,788.03 ಪಾಯಿಂಟ್ಸ್ನೊಂದಿಗೆ ವ್ಯವಹಾರ ಮುಗಿಸಿದೆ. ಇನ್ನು ನಿಫ್ಟಿ 103.50 ಪಾಯಿಂಟ್ಸ್ ಅಥವಾ ಶೇ 0.60ರಷ್ಟು ಕುಸಿತವಾಗಿ 17,221.40 ಪಾಯಿಂಟ್ಸ್ನೊಂದಿಗೆ ವಹಿವಾಟು ಚುಕ್ತಾ ಆಗಿದೆ. ಇಂದಿನ ವಹಿವಾಟಿನಲ್ಲಿ 1546 ಕಂಪೆನಿಗಳ ಷೇರು ಏರಿಕೆಯನ್ನು ದಾಖಲಿಸಿದರೆ, 1574 ಕಂಪೆನಿಗಳ ಷೇರು ಇಳಿಕೆಯನ್ನು ಕಂಡವು. ಮತ್ತು 90 ಕಂಪೆನಿಗಳ ಷೇರಿನ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ.
ಇನ್ನು ವಾಹನ ವಲಯವೊಂದನ್ನು ಹೊರತುಪಡಿಸಿದರೆ ಉಳಿದ ವಲಯಗಳು ಇಳಿಯಲ್ಲೇ ದಿನದ ವ್ಯವಹಾರವನ್ನು ಮುಗಿಸಿದವು. ಮಾಹಿತಿ ತಂತ್ರಜ್ಞಾನ, ಲೋಹ, ರಿಯಾಲ್ಟಿ ಮತ್ತು ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಸೂಚ್ಯಂಕಗಳು ತಲಾ ಶೇ 1ರಷ್ಟು ಕುಸಿತ ಕಂಡವು. ಬಿಎಸ್ಇ ಮಿಡ್ಕ್ಯಾಪ್ ಸೂಚ್ಯಂಕ ಶೇ 0.6ರಷ್ಟು ಇಳಿದರೆ, ಸ್ಮಾಲ್ಕ್ಯಾಪ್ ಸೂಚ್ಯಂಕವು ಶೇ 0.35ರಷ್ಟು ಕುಸಿಯಿತು.
ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ
ಸನ್ ಫಾರ್ಮಾ ಶೇ 2.52
ಕೊಟಕ್ ಮಹೀಂದ್ರಾ ಶೇ 1.47
ಮಹೀಂದ್ರಾ ಅಂಡ್ ಮಹೀಂದ್ರಾ ಶೇ 1.12
ಮಾರುತಿ ಸುಜುಕಿ ಶೇ 1.00
ಹೀರೋ ಮೋಟೋಕಾರ್ಪ್ ಶೇ 0.94
ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ
ಬಜಾಜ್ ಫೈನಾನ್ಸ್ ಶೇ -3.09
ಬಜಾಜ್ ಫಿನ್ಸರ್ವ್ ಶೇ -2.70
ಅದಾನಿ ಪೋರ್ಟ್ಸ್ ಶೇ -2.38
ಒಎನ್ಜಿಸಿ ಶೇ -2.01
ಐಟಿಸಿ ಶೇ -1.99
ಇದನ್ನೂ ಓದಿ: Multibagger Stocks: ಈ ಕಂಪೆನಿ ಷೇರುಗಳ ಮೇಲೆ ಮಾಡಿದ ರೂ. 1 ಲಕ್ಷದ ಹೂಡಿಕೆ 3 ವರ್ಷದಲ್ಲಿ 5.67 ಕೋಟಿ ರೂಪಾಯಿ