Stock Market Opening Bell: ಜೂನ್ 7ರ ಆರಂಭದ ವಹಿವಾಟಿನಲ್ಲಿ ಭಾರೀ ಕುಸಿತ ಕಂಡ ಭಾರತ ಷೇರುಪೇಟೆ ಸೂಚ್ಯಂಕಗಳು

ಜೂನ್ 7ನೇ ತಾರೀಕಿನಂದು ಆರಂಭದ ವಹಿವಾಟಿನಲ್ಲಿ ಸೆನ್ಸೆಕ್ಸ್​ 500ಕ್ಕೂ ಹೆಚ್ಚು ಪಾಯಿಂಟ್ಸ್ ಹಾಗೂ ನಿಫ್ಟಿ 150 ಪಾಯಿಂಟ್ಸ್ ಇಳಿಕೆ ಕಂಡಿದೆ.

Stock Market Opening Bell: ಜೂನ್ 7ರ ಆರಂಭದ ವಹಿವಾಟಿನಲ್ಲಿ ಭಾರೀ ಕುಸಿತ ಕಂಡ ಭಾರತ ಷೇರುಪೇಟೆ ಸೂಚ್ಯಂಕಗಳು
ಸಾಂದರ್ಭಿಕ ಚಿತ್ರ
Edited By:

Updated on: Jun 07, 2022 | 10:49 AM

ಭಾರತದ ಷೇರು ಮಾರುಕಟ್ಟೆ (Stock Market) ಸೂಚ್ಯಂಕಗಳು ಜೂನ್ 7ನೇ ತಾರೀಕಿನ ಮಂಗಳವಾರದ ಆರಂಭದ ಸೆಷನ್​ನಲ್ಲಿ ಭಾರೀ ಪ್ರಮಾಣದಲ್ಲಿ ಕುಸಿತ ಕಂಡವು. ಇದರಲ್ಲಿ ಬಿಎಸ್‌ಇ ಸೆನ್ಸೆಕ್ಸ್ 600 ಪಾಯಿಂಟ್ಸ್​ನಷ್ಟು ಕುಸಿದು, 55,050 ಪಾಯಿಂಟ್ಸ್​ಗೆ ತಲುಪಿದರೆ, ಎನ್‌ಎಸ್‌ಇ ನಿಫ್ಟಿ 180 ಪಾಯಿಂಟ್ಸ್​ ಕಳೆದುಕೊಂಡು 16,400 ಪಾಯಿಂಟ್ಸ್​ ತಲುಪಿತು. ವಿಶಾಲವಾದ ಮಾರುಕಟ್ಟೆಗಳಲ್ಲಿ, ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಸಹ ನೆಗೆಟಿವ್ ಆಗಿದ್ದು, ಶೇಕಡಾ 1ರಷ್ಟು ಕಡಿಮೆಯಾಗಿತ್ತು. ವಲಯವಾರು ಗಮನಿಸುವುದಾದರೆ, ಗ್ರಾಹಕ ಬಳಕೆ ವಸ್ತುಗಳು, ಹಣಕಾಸು, ವಾಹನ, ರಿಯಾಲ್ಟಿ ಮತ್ತು ಬ್ಯಾಂಕ್‌ಗಳು ನಿಫ್ಟಿಯಲ್ಲಿ ನಷ್ಟಕ್ಕೆ ಕಾರಣವಾಗಿದ್ದು, ಶೇಕಡಾ 2ರಷ್ಟು ಕಡಿಮೆಯಾಗಿದೆ. ನಿಫ್ಟಿ ಐಟಿ, ಮತ್ತು ಎಫ್‌ಎಂಸಿಜಿ ವಲಯಗಳು ಸಹ ಗಮನಾರ್ಹವಾದ ಕುಸಿತ ಕಂಡವು.

ಷೇರುಗಳ ಪೈಕಿ ಪಾಲಿಸಿಬಜಾರ್ ಮಾಲೀಕ ಪಿಬಿ ಫಿನ್‌ಟೆಕ್ 235.74 ಕೋಟಿ ರೂಪಾಯಿ ಮೌಲ್ಯದ 38.34 ಲಕ್ಷ ಷೇರುಗಳು (ಶೇ 0.85 ಈಕ್ವಿಟಿ) ಕೈ ಬದಲಾದ ನಂತರ ಶೇಕಡಾ 8ರಷ್ಟು ಕಡಿಮೆಯಾಗಿದೆ. ಕಂಪೆನಿಯ ಅಧ್ಯಕ್ಷರು ಕಂಪೆನಿಯ 37 ಲಕ್ಷ ಷೇರುಗಳನ್ನು ಮಾರಾಟ ಮಾಡುತ್ತಾರೆ ಎಂದು ವರದಿಗಳು ತಿಳಿಸಿವೆ. ಈ ವರದಿ ಸಿದ್ಧ ಆಗುವ ಹೊತ್ತಿಗೆ ಸೆನ್ಸೆಕ್ಸ್ 528 ಪಾಯಿಂಟ್ಸ್ ಹಾಗೂ ನಿಫ್ಟಿ 150 ಪಾಯಿಂಟ್ಸ್ ಇಳಿಕೆಯಲ್ಲಿತ್ತು.

ನಿಫ್ಟಿಯಲ್ಲಿ ಏರಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ

ಒಎನ್​ಜಿಸಿ ಶೇ 5.52

ಕೋಲ್ ಇಂಡಿಯಾ ಶೇ 2.03

ಬಿಪಿಸಿಎಲ್​ ಶೇ 0.86

ಎನ್​ಟಿಪಿಸಿ ಶೇ 0.68

ರಿಲಯನ್ಸ್ ಶೇ 0.45

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ

ಟೈಟಾನ್ ಕಂಪೆನಿ ಶೇ -4.30

ಡಾ ರೆಡ್ಡೀಸ್ ಲ್ಯಾಬ್ಸ್ ಶೇ -4.24

ಎಚ್​ಯುಎಲ್ ಶೇ-2.78

ಏಷ್ಯನ್ ಪೇಂಟ್ಸ್ ಶೇ -2.65

ಅಲ್ಟ್ರಾಟೆಕ್ ಸಿಮೆಂಟ್ಸ್ ಶೇ -2.53

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Stock Market Investment Tips: ಷೇರು ಮಾರುಕಟ್ಟೆ ಹೂಡಿಕೆಯ ಆರಂಭ ಹಂತದಲ್ಲಿ ಇರುವವರಿಗೆ 5 ಟಿಪ್ಸ್

Published On - 10:49 am, Tue, 7 June 22

TV9 Web

TV9 Kannada

Read More
Loading...
Unable to load recommendations.
Follow Us