ನವದೆಹಲಿ, ಅಕ್ಟೋಬರ್ 1: ಸೆಪ್ಟೆಂಬರ್ ತಿಂಗಳ ಜಿಎಸ್ಟಿ ಸಂಗ್ರಹದ ಮಾಹಿತಿ ಹೊರಬಂದಿದೆ. ಒಟ್ಟು ಜಿಎಸ್ಟಿ ಸಂಗ್ರಹ (gross GST collection) 1,62,712 ಕೋಟಿ ರೂ ಇರುವುದು ಹಣಕಾಸು ಸಚಿವಾಲಯ ಬಿಡುಗಡೆ ಮಾಡಿದ ದತ್ತಾಂಶದಿಂದ ತಿಳಿದುಬಂದಿದೆ. ಈ ಹಣಕಾಸು ವರ್ಷದಲ್ಲಿ (2023-24ರಲ್ಲಿ), ಏಪ್ರಿಲ್ನಿಂದ ಈಚೆ ಮಾಸಿಕ ಜಿಎಸ್ಟಿ ಸಂಗ್ರಹ 1.60 ಲಕ್ಷ ಕೋಟಿ ರೂ ದಾಟಿದ್ದು ಇದು ನಾಲ್ಕನೇ ಬಾರಿ. ಕಳೆದ ಆರು ತಿಂಗಳಲ್ಲಿ ನಾಲ್ಕು ಬಾರಿ ಜಿಎಸ್ಟಿ ಸಂಗ್ರಹ 1.6 ಲಕ್ಷ ಕೋಟಿ ರೂ ಗಡಿ ಮುಟ್ಟಿದೆ. ಈ ಆರು ತಿಂಗಳಲ್ಲಿ ಒಟ್ಟು ತೆರಿಗೆ ಸಂಗ್ರಹ 9,92,508 ಕೋಟಿ ರೂ ಇದೆ. ಹೆಚ್ಚೂಕಡಿಮೆ 10 ಲಕ್ಷ ಕೋಟಿ ರೂನಷ್ಟು ಜಿಎಸ್ಟಿ ಸಂಗ್ರಹ ಸರ್ಕಾರಕ್ಕೆ ಸಿಕ್ಕಿದೆ.
ಇದನ್ನೂ ಓದಿ: ಬೆಂಗಳೂರು ಗುಲಾಬಿ ಈರುಳ್ಳಿ ರಫ್ತಿಗೆ ನಿರ್ಬಂಧ ರದ್ದು; ಸೆ. 29ರಿಂದಲೇ ಅನುಮತಿ; ಆದರೆ ಷರತ್ತುಗಳಿವೆ
ಈ ಪೈಕಿ ಐಜಿಎಸ್ಟಿಯ ಮೊತ್ತದಲ್ಲಿ ಕೇಂದ್ರಕ್ಕೆ 33,736 ಕೋಟಿ ರೂ ಸಿಕ್ಕರೆ, ರಾಜ್ಯ ಸರ್ಕಾರಗಳಿಗೆ 27,578 ಕೋಟಿ ರೂ ಸಿಕ್ಕಿದೆ. ಇದರೊಂದಿಗೆ ಒಟ್ಟಾರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಜಿಎಸ್ಟಿ ಪಾಲು ಸಿಕ್ಕಿರುವುದು ಹೀಗಿದೆ:
ಕೇಂದ್ರಕ್ಕೆ ಸಿಕ್ಕ ಜಿಎಸ್ಟಿ ಪಾಲು: 63,555 ಕೋಟಿ ರೂ
ರಾಜ್ಯಗಳಿಗೆ ಸಿಕ್ಕ ಜಿಎಸ್ಟಿ ಪಾಲು: 65,235 ಕೋಟಿ ರೂ
ಅತಿ ಹೆಚ್ಚು ಜಿಎಸ್ಟಿ ಸಂಗ್ರಹ ಕಂಡ ರಾಜ್ಯಗಳಲ್ಲಿ ಈ ಬಾರಿಯೂ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳೇ ಮುಂದಿವೆ. ತಮಿಳುನಾಡು, ಗುಜರಾತ್ ರಾಜ್ಯಗಳೂ ಕೂಡ ಸಮೀಪದಲ್ಲಿವೆ. ಅತಿ ಹೆಚ್ಚು ಜಿಎಸ್ಟಿ ಸಂಗ್ರಹ ಕಂಡ 10 ರಾಜ್ಯಗಳ ಪಟ್ಟಿ:
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ