ಕಡಿಮೆ ಷೇರುಸಂಪತ್ತು ಇರುವ ಸ್ಯಾಲ್ ಕ್ಯಾಪ್ ಕಂಪನಿಗಳ ಷೇರುಗಳ ಮೇಲೆ ಹೂಡಿಕೆ ಮಾಡುವುದು ಬಹಳ ರಿಸ್ಕಿ. ಆದರೆ ಬಹಳ ವೇಗವಾಗಿ ಬೆಳೆಯುವ ಸಾಧ್ಯತೆಯೂ ಇರುತ್ತದೆ ಎಂದು ಹೇಳಲಾಗುತ್ತದೆ. ಇಂತ ಪೆನ್ನಿ ಸ್ಟಾಕ್ ಅಥವಾ ಮಲ್ಟಿಬ್ಯಾಗರ್ ಸ್ಟಾಕ್ಗಳಲ್ಲಿ ಸರ್ವೋಟೆಕ್ ಪವರ್ (Servotech Power) ಕೂಡ ಒಂದು. ಒಂದು ವರ್ಷದಲ್ಲಿ ಇದು 14 ಪಟ್ಟು ಬೆಳೆದಿದೆ. 2022ರ ಆಗಸ್ಟ್ 12ರಂದು ಇದರ ಷೇರುಬೆಲೆ 6.03 ರೂ ಇತ್ತು. 2023ರ ಆಗಸ್ಟ್ 12ರಂದು ಇದರ ಬೆಲೆ 86 ರುಪಾಯಿಗೆ ಏರಿದೆ. ಒಂದೇ ವರ್ಷದಲ್ಲಿ ಹೂಡಿಕೆದಾರರ ಆದಾಯ 14 ಪಟ್ಟು ಹೆಚ್ಚಾಗಿರುವುದು ಗಮನಾರ್ಹ.
2021ರ ಸೆಪ್ಟೆಂಬರ್ ತಿಂಗಳಲ್ಲಿ ಐಪಿಒಗೆ ತೆರೆದುಕೊಂಡು ಷೇರುಪೇಟೆಯಲ್ಲಿ ಲಿಸ್ಟ್ ಆದ ಸರ್ವೋಟೆಕ್ ಪವರ್ ಸಂಸ್ಥೆಯ ಷೇರುಗಳ ಬೆಲೆ 2023ರ ಮಾರ್ಚ್ ಬಳಿಕ ಶರವೇಗದಲ್ಲಿ ಬೆಳೆದಿದೆ. ಇದರ ಅರಂಭಿಕ ಬೆಲೆ 2.52 ರೂ ಇತ್ತು.
ಸರ್ವೋಟೆಕ್ ಪವರ್ ಸಂಸ್ಥೆಯ ಷೇರಿನ ಆರಂಭಿಕ ಬೆಲೆ ಕೇವಲ 2.52 ರೂ ಇತ್ತು. ಆಗಿನಿಂದ ಇಲ್ಲಿಯವರೆಗೂ ಇದು ಶೇ. 3,412ರಷ್ಟು ಬೆಳೆದಿದೆ. ಅಂದರೆ ಎರಡು ವರ್ಷದಲ್ಲಿ ಇದರ ಷೇರು 34 ಪಟ್ಟು ಹೆಚ್ಚು ಬೆಲೆ ಗಳಿಸಿದೆ. ಒಂದು ವೇಳೆ 2021ರ ಸೆಪ್ಟೆಂಬರ್ನಲ್ಲಿ ಇದರ ಷೇರುಗಳ ಮೇಲೆ 1 ಲಕ್ಷ ರೂ ಹೂಡಿಕೆ ಮಾಡಿದ್ದರೆ ಇವತ್ತು ಅವರ ಷೇರುಸಂಪತ್ತು 34 ಲಕ್ಷ ರೂ ಆಗುತ್ತಿತ್ತು.
ಇದನ್ನೂ ಓದಿ: Multibagger: 10,000 ರೂ ಹೂಡಿಕೆ, 10 ವರ್ಷದಲ್ಲಿ 4 ಲಕ್ಷ ರೂ ಆದಾಯ; ಮಲ್ಟಿಬ್ಯಾಗರ್ ಆದ ಸೊನಾಟ ಸಾಫ್ಟ್ವೇರ್
ಸರ್ವೋಟೆಕ್ ಪವರ್ ಷೇರು 2021ರ ಸೆಪ್ಟೆಂಬರ್ನಲ್ಲಿ 2.52 ರೂ ಹೊಂದಿದ್ದರೂ ಅದು 2021ರ ನವೆಂಬರ್ 4ರಂದು 1.99 ರೂಗೆ ಇಳಿದಿತ್ತು. ಅದಾದ ಬಳಿಕ 4 ತಿಂಗಳಲ್ಲಿ ಅದರ ಬೆಲೆ 11 ರೂ ಆಸುಪಾಸಿಗೆ ಹೋಯತು. ನಂತರದ ಆರು ತಿಂಗಳಲ್ಲಿ ಅದರ ಷೇರುಬೆಲೆ ಅರ್ಧದಷ್ಟು ಕಡಿಮೆ ಆಯಿತು.
ಇದನ್ನೂ ಓದಿ: HAL Share: ಎಚ್ಎಎಲ್ ಸತ್ತೇಹೋಯಿತು ಎಂದವರಿಗೆ ಶಾಕ್; ಹೂಡಿಕೆದಾರರಿಗೆ ಸ್ವರ್ಗವಾಗಿದೆ ಎಚ್ಎಎಲ್ ಷೇರು
2022ರ ಆಗಸ್ಟ್ ಮೂರನೇ ವಾರದವರೆಗೂ ಇದರ ಷೇರುಬೆಲೆ 6.30 ರೂನಷ್ಟು ಇತ್ತು. ಅದಾಗಿ ಎರಡು ತಿಂಗಳು 3 ಪಟ್ಟು ಬೆಳೆಯಿತು. ಇದರ ಷೇರು ನಿಜವಾದ ವೇಗ ಪಡೆದುಕೊಂಡಿದ್ದು 2023ರ ಮಾರ್ಚ್ 31ರಿಂದ. ಆಗ 18 ರೂ ಇದ್ದ ಇದರ ಷೇರು ಬೆಲೆ ಐದು ತಿಂಗಳಲ್ಲಿ ಭರ್ಜರಿಯಾಗಿ ಬೆಳೆದು ಇವತ್ತು 86 ರೂಗೆ ಬಂದು ನಿಂತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ