Jio Offer: ರಿಲಾಯನ್ಸ್ ಜಿಯೋ ಸ್ವಾತಂತ್ರ್ಯೋತ್ಸವ ದಿನದ ಕೊಡುಗೆ; ರೀಚಾರ್ಜ್ ಪ್ಲಾನ್ನಲ್ಲಿ ಹಲವು ಲಾಭಗಳು
Reliance Jio Independence Day Offer: ರಿಲಾಯನ್ಸ್ ಜಿಯೋ ಆಗಸ್ಟ್ 15ಕ್ಕೆ ಇಂಡಿಪೆಂಡೆನ್ಸ್ ಡೇ ಆಫರ್ನಲ್ಲಿ ಅದರ ವಾರ್ಷಿಕ ರೀಚಾರ್ಜ್ ಪ್ಲಾನ್ಗೆ ಹಲವು ಕೊಡುಗೆಗಳನ್ನು ಘೋಷಿಸಿದೆ. 5ಜಿ ಡಾಟಾ ಬಳಸುವ ಜಿಯೋ ಗ್ರಾಹಕರ 2,999 ರೂನ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್ಗೆ ಈ ಆಫರ್ ಸಿಗುತ್ತದೆ.
ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟಿಂಗ್ ಕಂಪನಿ ರಿಲಾಯನ್ಸ್ ಜಿಯೋ (Reliance Jio) ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ ತನ್ನ ಗ್ರಾಹಕರಿಗೆ ಕೊಡುಗೆ ನೀಡಿದೆ. ಆಗಸ್ಟ್ 15ಕ್ಕೆ ಇಂಡಿಪೆಂಡೆನ್ಸ್ ಡೇ 2023 ಆಫರ್ (Independence Day Offer) ಅನ್ನು ಜಿಯೋ ಪ್ರಕಟಿಸಿದೆ. 5ಜಿ ಬಳಸುವ ಜಿಯೋ ಗ್ರಾಹಕರಿಗೆಂದು 2,999 ರೂ ರೀಚಾರ್ಜ್ ಪ್ಲಾನ್ ಘೋಷಿಸಿದೆ. ಇದು ವಾರ್ಷಿಕ ಪ್ಲಾನ್ ಆಗಿದ್ದು, ಡೇಟಾ, ಉಚಿತ ಕರೆ ಸೌಲಭ್ಯವನ್ನು ಮಾಮೂಲಿಯಾಗಿ ಒಳಗೊಳ್ಳಲಾಗಿದೆ. ಜೊತೆಗೆ ಫೂಡ್ ಡೆಲಿವರಿ, ಪ್ರಯಾಣ, ಆನ್ಲೈನ್ ಶಾಪಿಂಗ್ ಇತ್ಯಾದಿ ವಹಿವಾಟುಗಳಲ್ಲಿ ಜಿಯೋ ಈ ಪ್ಲಾನ್ ಮೂಲಕ ಭರ್ಜರಿ ಡಿಸ್ಕೌಂಟ್ ಪಡೆಯುವ ಅವಕಾಶ ಕಲ್ಪಿಸಿದೆ.
ರಿಲಾಯನ್ಸ್ ಜಿಯೋ ಇಂಡಿಪೆಂಡೆನ್ಸ್ ಡೇ 2023 ಆಫರ್
ಇದು ಪ್ರೀಪೇಯ್ಡ್ ಬಳಕೆದಾರರಿಗೆ ಲಭ್ಯ ಇರುವ ಪ್ಲಾನ್. ವರ್ಷಕ್ಕೆ 2,999 ರೂ ರೀಚಾರ್ಜ್ ಪ್ಲಾನ್ ಹೊಂದಿರುವವರಿಗೆ ಮತ್ತು 5ಜಿ ಡಾಟಾ ಬಳಸುವವರಿಗೆ ಜಿಯೋದ ಸ್ವಾತಂತ್ರ್ಯೋತ್ಸವದ ಕೊಡುಗೆ ಅನ್ವಯ ಆಗುತ್ತದೆ. ದಿನವೊಂದಕ್ಕೆ 2.5 ಜಿಬಿ ಡಾಟಾ ಇಡೀ ವರ್ಷ ಸಿಗುತ್ತದೆ. ಧ್ವನಿ ಕರೆ ಅನ್ಲಿಮಿಟೆಡ್ ಇದೆ. ದಿನಕ್ಕೆ 100 ಎಸ್ಸೆಮ್ಮೆಸ್ ಸಿಗುತ್ತದೆ. ಜಿಯೋ ಸಿನಿಮಾ, ಜಿಯೋ ಟಿವಿ ಮತ್ತು ಜಿಯೋಕ್ಲೌಡ್ ಸೇವೆಯನ್ನ ಉಚಿತವಾಗಿ ಪಡೆಯಬಹುದು.
ಜಿಯೋ ಇಂಡಿಪೆಂಡೆನ್ಸ್ ಡೇ ಆಫರ್ನಲ್ಲಿ ಸಿಗುವ ಡಿಸ್ಕೌಂಟ್ಗಳು
ಸ್ವಿಗ್ಗಿ ಪ್ಲಾಟ್ಫಾರ್ಮ್ನಲ್ಲಿ ನೀವು 249 ರೂಗಿಂತ ಹೆಚ್ಚು ಮೌಲ್ಯದ ಆರ್ಡರ್ ಮಾಡಿದರೆ 100 ರೂ ರಿಯಾಯಿತಿ ಸಿಗುತ್ತದೆ. ಯಾತ್ರಾ ಪ್ಲಾಟ್ಫಾರ್ಮ್ನಲ್ಲಿ ಫ್ಲೈಟ್ ಬುಕ್ ಮಾಡಿದರೆ 1,500 ರೂವರೆಗೂ ಡಿಸ್ಕೌಂಟ್ ಸಿಗುತ್ತದೆ. ಇದೇ ಯಾತ್ರಾ ಅ್ಯಪ್ ಮೂಲಕ ಭಾರತದೊಳಗೆ ಯಾವುದಾದರೂ ಹೋಟೆಲ್ ಬುಕ್ ಮಾಡಿದರೆ ಶೇ 15 ಅಥವಾ 4,000 ರೂವರೆಗೂ ರಿಯಾಯಿತಿ ಸಿಗುತ್ತದೆ.
ಇದನ್ನೂ ಓದಿ: ಈಕೆ ವಿಶ್ವದ ಅತ್ಯಂತ ಶ್ರೀಮಂತ ಮಹಿಳೆ; ಅಂಬಾನಿ, ಅದಾನಿಯನ್ನೂ ಮೀರಿಸಿದ ಸಂಪತ್ತಿನ ಒಡತಿ ಮೆಯೆರ್ಸ್
ಆಜಿಯೋದಲ್ಲಿ 999 ರೂಗಿಂತ ಹೆಚ್ಚು ಮೊತ್ತದ ಉಡುಗೆಗಳನ್ನು ಖರೀದಿಸಿದರೆ 200 ರೂ ಡಿಸ್ಕೌಂಟ್ ಸಿಗುತ್ತದೆ. ಆದರೆ, ಇದು ಆಯ್ಕ ಉತ್ಪನ್ನಗಳಿಗೆ ಮಾತ್ರ ಅನ್ವಯ ಆಗುವ ಆಫರ್. ನೆಟ್ಮೆಡ್ಸ್ನಲ್ಲಿ ಹೆಚ್ಚುವರಿ ಎನ್ಎಂಎಸ್ ಸೂಪರ್ಕ್ಯಾಷ್ ಕೂಡ ಸಿಗುತ್ತದೆ. ಹಾಗೆಯೇ, ರಿಲಾಯನ್ಸ್ ಜಿಡಿಟಲ್ನಲ್ಲಿ ಕೆಲ ನಿರ್ದಿಷ್ಟ ಆಡಿಯೋ ಉತ್ಪನ್ನಗಳು ಹಾಗೂ ಗೃಹಬಳಕೆ ಉಪಕರಣಗಳನ್ನು ಖರೀದಿಸಿದರೆ ಶೇ 10ರಷ್ಟು ರಿಯಾಯಿತಿ ದೊರೆಯುತ್ತದೆ.
ಆಗಸ್ಟ್ 28ಕ್ಕೆ ಹೊಸ ಜಿಯೋ 5ಜಿ ಪ್ಲಾನ್ಗಳು ಪ್ರಕಟ
ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ಈ ವರ್ಷ ಆಗಸ್ಟ್ 28ರಂದು ರಿಲಾಯನ್ಸ್ ವಾರ್ಷಿಕ ಸಾಮಾನ್ಯ ಸಭೆ ನಡೆಸಲಿದೆ. ಅಂದಿನ ಆರ್ಐಎಲ್ ಎಜಿಎಂನಲ್ಲಿ ಹೊಸ ಜಿಯೋ 5ಜಿ ಪ್ಲಾನ್ಗಳನ್ನು ಪ್ರಕಟಿಸುವ ನಿರೀಕ್ಷೆ ಇದೆ. ಸದ್ಯ 4ಜಿ ಪ್ಲಾನ್ಗಳಲ್ಲಿ 5ಜಿ ಸೇವೆ ನೀಡಲಾಗುತ್ತದೆ. ಆಗಸ್ಟ್ 28ರಿಂದ 5ಜಿಗೆ ಪ್ರತ್ಯೇಕಪ್ಲಾನ್ಗಳು ಲಭ್ಯ ಇರಲಿವೆ.
ಇದನ್ನೂ ಓದಿ: ಸ್ಥಿರತೆ ಮತ್ತು ಲಾಭ, ಎರಡೂ ಕೊಡಬಲ್ಲುದು ಕನ್ಸರ್ವೇಟಿವ್ ಹೈಬ್ರಿಡ್ ಫಂಡ್; ಟ್ರೆಂಡ್ನಲ್ಲಿರುವ ಈ ಫಂಡ್ ಬಗ್ಗೆ ತಿಳಿಯಿರಿ
ಜಿಯೋ 5ಜಿ ಸ್ಮಾರ್ಟ್ಫೋನ್
ರಿಲಾಯನ್ಸ್ ಜಿಯೋ ಸಂಸ್ಥೆಯ ಮೊದಲ 5ಜಿ ಸ್ಮಾರ್ಟ್ಫೋನ್ ಆಗಸ್ಟ್ 28ರಂದು ಲೋಕಾರ್ಪಣೆಗೊಳ್ಳಬಹುದು. ಇದರ ಬೆಲೆ 10-12 ಸಾವಿರ ರೂ ಇರಬಹುದು ಎಂದು ನಿರೀಕ್ಷಿಸಲಾಗಿದೆ. ಆಂಡ್ರಾಯ್ಡ್ 12 ತಂತ್ರಾಂಶ ಹೊಂದಿರುವ ಈ ಮೊಬೈಲ್ಗೆ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 480+ ಚಿಪ್ಸೆಟ್, 4ಜಿಬಿ RAM ಶಕ್ತಿ ಇದೆ. ಇದರ ಬ್ಯಾಟರಿ ಶಕ್ತಿ 5,000 ಎಂಎಎಚ್ ಇರುತ್ತದೆ.
ಹಾಗೆಯೇ, ರಿಲಾಯನ್ಸ್ ಎಜಿಎಂನಲ್ಲಿ ಏರ್ ಫೈಬರ್ 5ಜಿ ಅನ್ನು ಬಿಡುಗಡೆ ಮಾಡುವ ನಿರೀಕ್ಷೆಯೂ ಇದೆ. ಇದು 5ಜಿ ಹಾಟ್ಸ್ಪಾಟ್ ಸಾಧನವಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ