Multibagger: ಒಂದು ಲಕ್ಷ ಹೂಡಿಕೆಗೆ ಎರಡು ವರ್ಷದಲ್ಲಿ 34 ಲಕ್ಷ ರೂ ಲಾಭ; ಮಲ್ಟಿಬ್ಯಾಗರ್ ಆದ ಸರ್ವೋಟೆಕ್ ಪವರ್ ಷೇರು

Servotech Power Share: 1991ರಲ್ಲಿ ಸ್ಥಾಪನೆಯಾದ ಸರ್ವೋಟೆಕ್ ಪವರ್ ಕಂಪನಿ 2021ರ ಸೆಪ್ಟೆಂಬರ್​ನಲ್ಲಿ ಷೇರುಪೇಟೆಯಲ್ಲಿ 2.52 ರೂನಿಂದ ಪಯಣ ಆರಂಭಿಸಿ, ಇವತ್ತು ಅದರ ಬೆಲೆ 86 ರೂ ಆಗಿದೆ. ಕೇವಲ 2 ವರ್ಷದ ಒಳಗಾಗಿ ಅದರ ಷೇರುಬೆಲೆ 34 ಪಟ್ಟು ಹೆಚ್ಚು ಬೆಳೆದಿದೆ.

Multibagger: ಒಂದು ಲಕ್ಷ ಹೂಡಿಕೆಗೆ ಎರಡು ವರ್ಷದಲ್ಲಿ 34 ಲಕ್ಷ ರೂ ಲಾಭ; ಮಲ್ಟಿಬ್ಯಾಗರ್ ಆದ ಸರ್ವೋಟೆಕ್ ಪವರ್ ಷೇರು
ಮಲ್ಟಿಬ್ಯಾಗರ್ ಸ್ಟಾಕ್​
Follow us
|

Updated on: Aug 13, 2023 | 12:41 PM

ಕಡಿಮೆ ಷೇರುಸಂಪತ್ತು ಇರುವ ಸ್ಯಾಲ್ ಕ್ಯಾಪ್ ಕಂಪನಿಗಳ ಷೇರುಗಳ ಮೇಲೆ ಹೂಡಿಕೆ ಮಾಡುವುದು ಬಹಳ ರಿಸ್ಕಿ. ಆದರೆ ಬಹಳ ವೇಗವಾಗಿ ಬೆಳೆಯುವ ಸಾಧ್ಯತೆಯೂ ಇರುತ್ತದೆ ಎಂದು ಹೇಳಲಾಗುತ್ತದೆ. ಇಂತ ಪೆನ್ನಿ ಸ್ಟಾಕ್ ಅಥವಾ ಮಲ್ಟಿಬ್ಯಾಗರ್ ಸ್ಟಾಕ್​ಗಳಲ್ಲಿ ಸರ್ವೋಟೆಕ್ ಪವರ್ (Servotech Power) ಕೂಡ ಒಂದು. ಒಂದು ವರ್ಷದಲ್ಲಿ ಇದು 14 ಪಟ್ಟು ಬೆಳೆದಿದೆ. 2022ರ ಆಗಸ್ಟ್ 12ರಂದು ಇದರ ಷೇರುಬೆಲೆ 6.03 ರೂ ಇತ್ತು. 2023ರ ಆಗಸ್ಟ್ 12ರಂದು ಇದರ ಬೆಲೆ 86 ರುಪಾಯಿಗೆ ಏರಿದೆ. ಒಂದೇ ವರ್ಷದಲ್ಲಿ ಹೂಡಿಕೆದಾರರ ಆದಾಯ 14 ಪಟ್ಟು ಹೆಚ್ಚಾಗಿರುವುದು ಗಮನಾರ್ಹ.

2021ರ ಸೆಪ್ಟೆಂಬರ್ ತಿಂಗಳಲ್ಲಿ ಐಪಿಒಗೆ ತೆರೆದುಕೊಂಡು ಷೇರುಪೇಟೆಯಲ್ಲಿ ಲಿಸ್ಟ್ ಆದ ಸರ್ವೋಟೆಕ್ ಪವರ್ ಸಂಸ್ಥೆಯ ಷೇರುಗಳ ಬೆಲೆ 2023ರ ಮಾರ್ಚ್ ಬಳಿಕ ಶರವೇಗದಲ್ಲಿ ಬೆಳೆದಿದೆ. ಇದರ ಅರಂಭಿಕ ಬೆಲೆ 2.52 ರೂ ಇತ್ತು.

ಆರಂಭದಲ್ಲಿ ಇದರ ಮೇಲೆ 1 ಲಕ್ಷ ರೂ ಹೂಡಿಕೆ ಮಾಡಿದ್ದವರಿಗೆ ಇವತ್ತು ಎಷ್ಟು ಲಾಭ

ಸರ್ವೋಟೆಕ್ ಪವರ್ ಸಂಸ್ಥೆಯ ಷೇರಿನ ಆರಂಭಿಕ ಬೆಲೆ ಕೇವಲ 2.52 ರೂ ಇತ್ತು. ಆಗಿನಿಂದ ಇಲ್ಲಿಯವರೆಗೂ ಇದು ಶೇ. 3,412ರಷ್ಟು ಬೆಳೆದಿದೆ. ಅಂದರೆ ಎರಡು ವರ್ಷದಲ್ಲಿ ಇದರ ಷೇರು 34 ಪಟ್ಟು ಹೆಚ್ಚು ಬೆಲೆ ಗಳಿಸಿದೆ. ಒಂದು ವೇಳೆ 2021ರ ಸೆಪ್ಟೆಂಬರ್​ನಲ್ಲಿ ಇದರ ಷೇರುಗಳ ಮೇಲೆ 1 ಲಕ್ಷ ರೂ ಹೂಡಿಕೆ ಮಾಡಿದ್ದರೆ ಇವತ್ತು ಅವರ ಷೇರುಸಂಪತ್ತು 34 ಲಕ್ಷ ರೂ ಆಗುತ್ತಿತ್ತು.

ಇದನ್ನೂ ಓದಿ: Multibagger: 10,000 ರೂ ಹೂಡಿಕೆ, 10 ವರ್ಷದಲ್ಲಿ 4 ಲಕ್ಷ ರೂ ಆದಾಯ; ಮಲ್ಟಿಬ್ಯಾಗರ್ ಆದ ಸೊನಾಟ ಸಾಫ್ಟ್​ವೇರ್

ಸರ್ವೋಟೆಕ್ ಪವರ್ ಷೇರು: ಎರಡು ಹಂತದಲ್ಲಿ ವೇಗ ವೃದ್ಧಿ

ಸರ್ವೋಟೆಕ್ ಪವರ್ ಷೇರು 2021ರ ಸೆಪ್ಟೆಂಬರ್​ನಲ್ಲಿ 2.52 ರೂ ಹೊಂದಿದ್ದರೂ ಅದು 2021ರ ನವೆಂಬರ್ 4ರಂದು 1.99 ರೂಗೆ ಇಳಿದಿತ್ತು. ಅದಾದ ಬಳಿಕ 4 ತಿಂಗಳಲ್ಲಿ ಅದರ ಬೆಲೆ 11 ರೂ ಆಸುಪಾಸಿಗೆ ಹೋಯತು. ನಂತರದ ಆರು ತಿಂಗಳಲ್ಲಿ ಅದರ ಷೇರುಬೆಲೆ ಅರ್ಧದಷ್ಟು ಕಡಿಮೆ ಆಯಿತು.

ಇದನ್ನೂ ಓದಿ: HAL Share: ಎಚ್​ಎಎಲ್ ಸತ್ತೇಹೋಯಿತು ಎಂದವರಿಗೆ ಶಾಕ್; ಹೂಡಿಕೆದಾರರಿಗೆ ಸ್ವರ್ಗವಾಗಿದೆ ಎಚ್​ಎಎಲ್ ಷೇರು

2022ರ ಆಗಸ್ಟ್ ಮೂರನೇ ವಾರದವರೆಗೂ ಇದರ ಷೇರುಬೆಲೆ 6.30 ರೂನಷ್ಟು ಇತ್ತು. ಅದಾಗಿ ಎರಡು ತಿಂಗಳು 3 ಪಟ್ಟು ಬೆಳೆಯಿತು. ಇದರ ಷೇರು ನಿಜವಾದ ವೇಗ ಪಡೆದುಕೊಂಡಿದ್ದು 2023ರ ಮಾರ್ಚ್ 31ರಿಂದ. ಆಗ 18 ರೂ ಇದ್ದ ಇದರ ಷೇರು ಬೆಲೆ ಐದು ತಿಂಗಳಲ್ಲಿ ಭರ್ಜರಿಯಾಗಿ ಬೆಳೆದು ಇವತ್ತು 86 ರೂಗೆ ಬಂದು ನಿಂತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್