ಈಕೆ ವಿಶ್ವದ ಅತ್ಯಂತ ಶ್ರೀಮಂತ ಮಹಿಳೆ; ಅಂಬಾನಿ, ಅದಾನಿಯನ್ನೂ ಮೀರಿಸಿದ ಸಂಪತ್ತಿನ ಒಡತಿ ಮೆಯೆರ್ಸ್

World's Richest Woman: ಫ್ರಾನ್ಸ್ ದೇಶದ ಉದ್ಯಮಿ ಫ್ರಾಂಕಾಯಿಸ್ ಬೆಟನ್​ಕೋರ್ಟ್ ಮೆಯೆರ್ಸ್ ಅವರು ವಿಶ್ವದ ಅತ್ಯಂತ ಶ್ರೀಮಂತ ಮಹಿಳೆ ಎನಿಸಿದ್ದಾರೆ. ಬ್ಲೂಮ್​ಬರ್ಗ್ ಪಟ್ಟಿಯಲ್ಲಿ ಈಕೆ 13ನೇ ಸ್ಥಾನದಲ್ಲಿದ್ದಾರೆ. ಕೆಲ ದಿನಗಳ ಹಿಂದೆ ಇವರು ಮುಕೇಶ್ ಅಂಬಾನಿಗಿಂತಲೂ ಮುಂದಿದ್ದರು.

ಈಕೆ ವಿಶ್ವದ ಅತ್ಯಂತ ಶ್ರೀಮಂತ ಮಹಿಳೆ; ಅಂಬಾನಿ, ಅದಾನಿಯನ್ನೂ ಮೀರಿಸಿದ ಸಂಪತ್ತಿನ ಒಡತಿ ಮೆಯೆರ್ಸ್
ಫ್ರಾಂಕಾಯಿಸ್ ಬೆಟೆನ್​ಕೋರ್ಟ್ ಮೆಯೆರ್ಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 10, 2023 | 4:57 PM

ಜಾಗತಿಕ ಉದ್ದಿಮೆದಾರರಲ್ಲಿ ಹೆಚ್ಚಿನ ಮಹಿಳೆಯರು (Women Entrepreneurs) ಸಿಗುವುದು ಕಡಿಮೆ. ಅಂತಾರಾಷ್ಟ್ರೀಯ ಉದ್ಯಮ ಈಗಲೂ ಬಹುತೇಕ ಪುರುಷಪ್ರಾಬಲ್ಯದಲ್ಲೇ ಇದೆ. ಇಷ್ಟಾದರೂ ಬಹಳಷ್ಟು ಮಹಿಳೆಯರು ಅಲೆಗೆ ವಿರುದ್ಧವಾಗಿ ಈಜಿ, ವ್ಯವಹಾರದಲ್ಲಿ ಸೈ ಎನಿಸಿದ್ದಾರೆ. ಜಾಗತಿಕ ವ್ಯವಹಾರಗಳನ್ನು ನಿಭಾಯಿಸುವ ಕ್ಷಮತೆ ಹೊಂದಿರುವುವರೆಂದು ರುಜುವಾತು ಮಾಡಿ ತೋರಿಸಿದ್ದಾರೆ. ಕೆಲ ಮಹಿಳೆಯರು ಸ್ವಂತ ಬಲದಿಂದ ಉದ್ದಿಮೆ ಕಟ್ಟಿ ಬೆಳೆದವರಾದರೆ, ಇನ್ನೂ ಕೆಲವರು ಕೌಟುಂಬಿಕ ವ್ಯವಹಾರದಿಂದ ಬಳುವಳಿಯಾಗಿ ಸಂಪತ್ತು ಪಡೆದವರಿದ್ದಾರೆ. ಅದೇನೇ ಇರಲಿ, ಜಾಗತಿಕವಾಗಿ 50 ಅತಿಶ್ರೀಮಂತ ವ್ಯಕ್ತಿಗಳಲ್ಲಿ ನಾಲ್ಕೈದು ಮಹಿಳೆಯರೂ ಇದ್ದಾರೆ. ಈ ಪೈಕಿ ಫ್ರಾನ್ಸ್ ದೇಶದ ಫ್ರಾಂಕಾಯಿಸ್ ಬೆಟೆನ್​ಕೋರ್ಟ್ ಮೆಯೆರ್ಸ್ (Francoise Bettencourt Meyers) ಅತಿ ಶ್ರೀಮಂತ ಮಹಿಳೆ ಎನಿಸಿದ್ದಾರೆ.

ಫ್ರಾಂಕಾಯಿಸ್ ಬೆಟೆನ್​ಕೋರ್ಟ್ ಮೆಯೆರ್ಸ್ ಅವರು ವಿಶ್ವ ಪ್ರಸಿದ್ಧ ಪರ್ಫ್ಯೂಮ್ ಬ್ರ್ಯಾಂಡ್ ಲಾರಿಯಲ್​ನ (l’oréal) ಸಂಸ್ಥಾಪಕರ ಮೊಮ್ಮಗಳು. ಈಕೆ ಹತ್ತಿರಹತ್ತಿರ 90 ಬಿಲಿಯನ್ ಡಾಲರ್ ಮೌಲ್ಯದ ಸಂಪತ್ತು ಹೊಂದಿದ್ದಾರೆ. ಕೆಲ ದಿನಗಳ ಹಿಂದೆ ಈಕೆ ಶ್ರೀಮಂತಿಕೆಯಲ್ಲಿ ರಿಲಾಯನ್ಸ್ ಅಧಿಪತಿ ಮುಕೇಶ್ ಅಂಬಾನಿ, ಗೌತಮ್ ಅದಾನಿ ಅವರನ್ನೂ ಮೀರಿಸಿದ್ದರು.

ಇದನ್ನೂ ಓದಿ: ಪುಟ್ಟ ಮನೆ, ಕಾರು ಬಿಟ್ಟು ಸಾವಿರಾರು ಕೋಟಿ ಮೌಲ್ಯದ ಆಸ್ತಿ ದಾನ; ಕೈಯಲ್ಲಿ ಮೊಬೈಲ್ ಫೋನ್ ಕೂಡ ಇಲ್ಲ; ಇದು ಶ್ರೀರಾಮ್ ಗ್ರೂಪ್ ಸ್ಥಾಪಕರ ಕಥೆ

ಫ್ರೆಂಚ್ ಪರ್ಫ್ಯೂಮ್ ಕಂಪನಿ ಲಾರಿಯಲ್ಸ್​ನ ಆಸ್ತಿ ಮೂಲಕ ಮೆಯೆರ್ಸ್ ಬೆಟೆನ್​ಕೋರ್ಟ್ ಶ್ರೀಮಂತಿಕೆ ಪಡೆದಿದ್ದಾರೆ. 1997ರಿಂದಲೂ ಮೆಯೆರ್ಸ್ ಅವರು ಲಾರಿಯಲ್ ಕಂಪನಿಯ ಮಂಡಳಿಯಲ್ಲಿ ಇದ್ದಾರೆ. ಈಕೆಯ ತಾಯಿ ಲಿಲಿಯಾನೆ ಬೆಟೆನ್​ಕೋರ್ಟ್ ಈ ಹಿಂದೆ ಲಾರಿಯಲ್​ನ ಮುಖ್ಯಸ್ಥೆಯಾಗಿದ್ದರು. 2017ರಲ್ಲಿ ಅವರು ಮೃತಪಟ್ಟ ಬಳಿಕ ಏಕೈಕ ವಾರಸುದಾರೆಯಾಗಿ ಫ್ರಾಂಕಾಯಿಸ್ ಬೆಟೆನ್​ಕೋರ್ಟ್ ಮೆಯೆರ್ಸ್ ಅವರು ಆಡಳಿತ ಚುಕ್ಕಾಣಿ ಪಡೆದಿದ್ದಾರೆ.

ಲಾರಿಯಲ್ ಸಂಸ್ಥೆಯಲ್ಲಿ ಮೆಯೆರ್ಸ್ ಮತ್ತವರ ಕುಟುಂಬದ ಪಾಲು ಶೇ. 33ರಷ್ಟಿದೆ. ಇತ್ತೀಚಿನ ದಿನಗಳಲ್ಲಿ ಲಾರಿಯಲ್ ಸಂಸ್ಥೆಯ ಷೇರುಮೌಲ್ಯ ಭರಪೂರವಾಗಿ ಬೆಳೆದಿದೆ. 2009ರಲ್ಲಿ 50 ಯೂರೋ ಇದ್ದ ಲಾರಿಯಲ್ ಷೇರುಮೌಲ್ಯ ಇದೀಗ 412 ಯೂರೋಗಿಂತಲೂ ಹೆಚ್ಚಾಗಿದೆ. ಹೀಗಾಗಿ, ಫ್ರಾಂಕಾಯಿಸ್ ಬೆಟೆನ್​ಕೋರ್ಟ್ ಮೆಯೆರ್ಸ್ ಅವರ ಒಟ್ಟು ಆಸ್ತಿ ಬ್ಲೂಮ್​ಬರ್ಗ್ ಇಂಡೆಕ್ಸ್ ಪ್ರಕಾರ, 89.7 ಬಿಲಿಯನ್ ಡಾಲರ್ ಆಗಿದೆ. ವಿಶ್ವ ಶ್ರೀಮಂತಿಕೆಯಲ್ಲಿ ಇವರು 13ನೇ ಸ್ಥಾನದಲ್ಲಿದ್ದಾರೆ. ಕೆಲ ದಿನಗಳ ಹಿಂದೆ ಇವರಿಗಿಂತ ಕೆಳಗಿದ್ದ ಮುಕೇಶ್ ಅಂಬಾನಿ ಅವರ ಒಟ್ಟು ಆಸ್ತಿಮೌಲ್ಯ 95 ಬಿಲಿಯನ್ ಡಾಲರ್ ಗಡಿ ದಾಟಿದೆ.

ಇದನ್ನೂ ಓದಿ: Explainer: ಜಗತ್ತು ಹಣದುಬ್ಬರದಿಂದ ತತ್ತರಿಸಿದರೆ ಚೀನಾಗೆ ಹಣದುಬ್ಬರಕುಸಿತದ ತಲೆನೋವು; ಏನಿದು ಡೀಫ್ಲೇಶನ್? ಆರ್ಥಿಕತೆಯ ಮೇಲೇನು ಪರಿಣಾಮ?

ದೈವಭಕ್ತೆಯಾದ ಫ್ರಾಂಕಾಯಿಸ್ ಮೆಯೆರ್ಸ್

ಫ್ರಾಂಕಾಯಿಸ್ ಬೆಟೆನ್​ಕೋರ್ಟ್ ಮೆಯೆರ್ಸ್ ಅವರು ಕ್ಯಾಥೋಲಿಕ್ ಕ್ರೈಸ್ತರಾಗಿದ್ದು ಹಲವು ಬೈಬಲ್ ಕಾಮೆಂಟರಿಗಳನ್ನು ಬರೆದಿದ್ದಾರೆ. ಐದು ದೊಡ್ಡ ಪುಸ್ತಕಗಳನ್ನು ಬರೆದಿದ್ದಾರೆ. ಗಂಟೆಗಟ್ಟಲೆ ಅವರು ಪಿಯಾನೋ ನುಡಿಸಬಲ್ಲುರು.

ಪ್ರಚಾರದಿಂದ ತುಸು ದೂರವೇ ಉಳಿಯುವ ಫ್ರಾಂಕಾಯಿಸ್ ಮೆಯೆರ್ಸ್ ಅವರು ಜೀನ್ ಪಿಯೆರೆ ಮೆಯೆರ್ಸ್ ಅವರನ್ನು ವಿವಾಹವಾಗಿದ್ದು ಇಬ್ಬರು ಮಕ್ಕಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ