ಕಳೆದ ಮೂರು ತಿಂಗಳಲ್ಲಿ ಭಾರತದಲ್ಲಿ ಮಾರಾಟವಾದ ಸ್ಮಾರ್ಟ್​ಫೋನ್​ಗಳ ಸಂಖ್ಯೆ 5 ಕೋಟಿ ಸಮೀಪ

|

Updated on: Oct 20, 2024 | 5:27 PM

Smartphone shipments rose on 2nd quarter: ಜುಲೈನಿಂದ ಸೆಪ್ಟೆಂಬರ್​ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಭಾರತದ ಮಾರುಕಟ್ಟೆ ಪ್ರವೇಶಿಸಿರುವ ಸ್ಮಾರ್ಟ್​ಫೋನ್ ಸಂಖ್ಯೆ 4.71 ಕೋಟಿ ಆಗಿದೆ. ಕೆನಲಿಸ್ ವರದಿ ಪ್ರಕಾರ ಶಿಪ್ಪಿಂಗ್ ಆದ ಸ್ಮಾರ್ಟ್​ಫೋನ್​ನಲ್ಲಿ ಶೇ. 9ರಷ್ಟು ಹೆಚ್ಚಳವಾಗಿದೆ. ವಿವೋ ಭಾರತದಲ್ಲಿ ಮೊದಲ ಬಾರಿಗೆ ವಿವೋ ಮೊದಲ ಸ್ಥಾನ ಪಡೆದಿದೆ. ಶಿಯೋಮಿ, ಸ್ಯಾಮ್ಸುಂಗ್, ಓಪ್ಪೋ ಮತ್ತು ರಿಯಲ್ಮಿ ಕಂಪನಿಗಳು ಟಾಪ್-5ನಲ್ಲಿವೆ.

ಕಳೆದ ಮೂರು ತಿಂಗಳಲ್ಲಿ ಭಾರತದಲ್ಲಿ ಮಾರಾಟವಾದ ಸ್ಮಾರ್ಟ್​ಫೋನ್​ಗಳ ಸಂಖ್ಯೆ 5 ಕೋಟಿ ಸಮೀಪ
ಸ್ಮಾರ್ಟ್​ಫೋನ್
Follow us on

ನವದೆಹಲಿ, ಅಕ್ಟೋಬರ್ 20: ಈ ಹಣಕಾಸು ವರ್ಷದ ಎರಡನೇ ಕ್ವಾರ್ಟರ್ ಆದ ಜುಲೈನಿಂದ ಸೆಪ್ಟೆಂಬರ್​ವರೆಗಿನ ಅವಧಿಯಲ್ಲಿ ಭಾರತದಲ್ಲಿ ಸ್ಮಾರ್ಟ್​ಫೋನ್ ಮಾರಾಟದಲ್ಲಿ ಭರ್ಜರಿ ಹೆಚ್ಚಳವಾಗಿದೆ. ಕೆನಲಿಸ್ ಎನ್ನುವ ಮಾರ್ಕೆಟ್ ರಿಸರ್ಚ್ ಕಂಪನಿ ನಿನ್ನೆ ಬಿಡುಗಡೆ ಮಾಡಿದ ವರದಿ ಪ್ರಕಾರ ಸೆಪ್ಟೆಂಬರ್ ಅಂತ್ಯದ ತ್ರೈಮಾಸಿಕ ಅವಧಿಯಲ್ಲಿ ಭಾರತದಲ್ಲಿ ಬಿಕರಿಯಾದ ಸ್ಮಾರ್ಟ್​ಫೋನ್​ಗಳ ಸಂಖ್ಯೆ 47.1 ಮಿಲಿಯನ್ (4.71 ಕೋಟಿ). ಕಳೆದ ವರ್ಷದ ಇದೇ ಕ್ವಾರ್ಟರ್​ಗೆ ಹೋಲಿಸಿದರೆ ಸ್ಮಾರ್ಟ್​ಫೋನ್ ಮಾರಾಟದಲ್ಲಿ ಶೇ. 9ರಷ್ಟು ಏರಿಕೆ ಆಗಿದೆ.

ವಿವೋ ನಂಬರ್ ಒನ್

ಚೀನಾ ಮೂಲದ ಕಂಪನಿಗಳೇ ಭಾರತದ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಮುಂದುವರಿಸಿವೆ. ವಿವೋ ಕಂಪನಿ ಈಗ ಮೊದಲ ಬಾರಿಗೆ ಅಗ್ರಪಟ್ಟ ಗಿಟ್ಟಿಸಿದೆ. ಸ್ಮಾರ್ಟ್​ಫೋನ್ ಮಾರಾಟದಲ್ಲಿ ಶಿಯೋಮಿಯನ್ನು ವಿವೋ ಹಿಂದಿಕ್ಕಿದೆ. ಕೆನಲಿಸ್ ವರದಿ ಪ್ರಕಾರ ವಿವೋದ 91 ಲಕ್ಷ ಯೂನಿಟ್​​ಗಳು ಈ ಮೂರು ತಿಂಗಳಲ್ಲಿ ಬಿಕರಿಯಾಗಿವೆ. ಒಟ್ಟಾರೆ ಮಾರುಕಟ್ಟೆಯಲ್ಲಿ ಅದು ಶೇ. 19ರಷ್ಟು ಪಾಲು ಹೊಂದಿದೆ.

ಇದನ್ನೂ ಓದಿ: ಭಾರತದಲ್ಲಿ ಸ್ಟಾರ್ಟಪ್​ಗಳಿಗೆ ಮತ್ತೆ ಫಂಡಿಂಗ್ ಸುಗ್ಗಿ; ಒಂದೇ ವಾರದಲ್ಲಿ ಮೂರು ಪಟ್ಟು ಬಂಡವಾಳ ಹೆಚ್ಚಳ

ವಿವೋ, ಶಿಯೋಮಿ, ಸ್ಯಾಮ್ಸುಂಗ್, ಓಪ್ಪೋ ಮತ್ತು ರಿಯಲ್ಮಿ ಕಂಪನಿಗಳು ಸ್ಮಾರ್ಟ್​ಫೋನ್ ಮಾರಾಟದಲ್ಲಿ ಕ್ರಮವಾಗಿ ಒಂದರಿಂದ ಐದು ಸ್ಥಾನಗಳನ್ನು ಪಡೆದಿವೆ. ಆ್ಯಪಲ್ ಕಂಪನಿಯ ಐಫೋನ್15 ಸ್ಮಾರ್ಟ್​ಫೋನ್​ಗೆ ಒಳ್ಳೆಯ ಬೇಡಿಕೆ ಇದೆ. ಸಣ್ಣ ನಗರಗಳಿಂದಲೂ ಈ ಹೊಸ ಐಫೋನ್ ಮಾಡಲ್​ಗೆ ಬೇಡಿಕೆ ಇದೆ. ಮೊಟರೋಲ, ಗೂಗಲ್, ನಥಿಂಗ್ ಇತ್ಯಾದಿ ಬ್ರ್ಯಾಂಡ್​ಗಳ ಸ್ಮಾರ್ಟ್​ಫೋನ್​ಗಳ ಮಾರಾಟವೂ ಹೆಚ್ಚಳ ಕಂಡಿದೆ.

ಜುಲೈನಿಂದ ಸೆಪ್ಟೆಂಬರ್ ಅವಧಿಯಲ್ಲಿ ಟಾಪ್-5 ಕಂಪನಿಗಳು ಮತ್ತು ಮಾರಾಟ ಪ್ರಮಾಣ

ಬಿಕರಿಯಾದ ಒಟ್ಟು ಸ್ಮಾರ್ಟ್​ಫೋನ್​ಗಳು: 4.71 ಕೋಟಿ

  1. ವಿವೋ: 91 ಲಕ್ಷ ಯೂನಿಟ್
  2. ಶಿಯೋಮಿ: 78 ಲಕ್ಷ ಯೂನಿಟ್
  3. ಸ್ಯಾಮ್ಸುಂಗ್: 75 ಲಕ್ಷ ಯೂನಿಟ್
  4. ಓಪ್ಪೋ: 63 ಲಕ್ಷ ಯೂನಿಟ್
  5. ರಿಯಲ್ಮಿ: 53 ಲಕ್ಷ ಯೂನಿಟ್

ಇಲ್ಲಿ ಓಪ್ಪೋ ಸ್ಮಾರ್ಟ್​ಫೋನ್ ಮಾರಾಟದಲ್ಲಿ ಒನ್​ಪ್ಲಸ್ ಫೋನ್​ಗಳನ್ನು ಒಳಗೊಳ್ಳಲಾಗಿಲ್ಲ.

ಇದನ್ನೂ ಓದಿ: ಅಂಬಾನಿ ವರ್ಸಸ್ ಮಸ್ಕ್; ಭಾರತೀಯ ಸೆಟಿಲೈಟ್ ಇಂಟರ್ನೆಟ್ ಯುದ್ಧದಲ್ಲಿ ಗೆಲ್ಲೋದ್ಯಾರು?

ಸ್ಮಾರ್ಟ್​ಫೋನ್ ಮಾರಾಟ ಹೆಚ್ಚಳವಾದರೂ ಕಂಪನಿಗಳು ನಿರೀಕ್ಷಿಸಿದಷ್ಟಿಲ್ಲ…

ಈ ಬಾರಿ ಹಬ್ಬದ ಸೀಸನ್​ಗೆ ವಿವಿಧ ಸ್ಮಾರ್ಟ್​ಫೋನ್ ಕಂಪನಿಗಳು ಭರ್ಜರಿ ಡಿಸ್ಕೌಂಟ್ ಸೇಲ್ ಕೈಗೊಂಡಿದ್ದವು. ಸಾಕಷ್ಟು ಸ್ಮಾರ್ಟ್​ಫೋನ್​ಗಳ ದಾಸ್ತಾನು ಉಳಿದಿದ್ದು ಅವನ್ನು ಖಾಲಿ ಮಾಡುವ ಉಮೇದಿನಲ್ಲಿ ಆನ್ಲೈನ್ ಸೇಲ್​ನಲ್ಲಿ ಒಳ್ಳೆಯ ಡಿಸ್ಕೌಂಟ್ ನೀಡಲಾಗಿತ್ತು. ಎಲ್ಲಾ ದಾಸ್ತಾನು ಖಾಲಿ ಮಾಡುವ ನಿರೀಕ್ಷೆಯಲ್ಲಿದ್ದ ಕಂಪನಿಗಳಿಗೆ, ನಿರೀಕ್ಷಿಸಿದಷ್ಟು ಮಾರಾಟ ಆಗದೇ ನಿರಾಸೆಯಾಗಿದೆ. ಇನ್ನೂ ಬಹಳಷ್ಟು ಸ್ಟಾಕ್​ಗಳಿದ್ದು, ಇಯರ್ ಎಂಡ್ ಸೇಲ್​ನಲ್ಲಿ ಅವನ್ನು ಮಾರಿ ಮುಗಿಸುವ ಆಲೋಚನೆಯಲ್ಲಿವೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್​ವರೆಗೂ ವಿವಿಧ ಸ್ಮಾರ್ಟ್​ಫೋನ್​ಗಳನ್ನು ಭರ್ಜರಿ ಡಿಸ್ಕೌಂಟ್ ದರದಲ್ಲಿ ಖರೀದಿಸುವ ಅವಕಾಶ ಸಿಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ