ಏಪ್ರಿಲ್​ನಿಂದ ಸೆಪ್ಟೆಂಬರ್​ವರೆಗೆ ಭಾರತದಿಂದ ವಾಹನಗಳ ರಫ್ತು ಶೇ. 14ರಷ್ಟು ಹೆಚ್ಚಳ; ಜಾಗತಿಕವಾಗಿ ಮಿಂಚುತ್ತಿರುವ ಮೇಡ್ ಇನ್ ಇಂಡಿಯಾ ವಾಹನಗಳು

Vehicle exports from India rises: ಭಾರತದಲ್ಲಿ ತಯಾರಾಗಿ ವಿದೇಶಗಳಿಗೆ ರಫ್ತಾಗುತ್ತಿರುವ ವಾಹನಗಳ ಪ್ರಮಾಣ ಏರುತ್ತಿದೆ. ಈ ಹಣಕಾಸು ವರ್ಷದ ಮೊದಲಾರ್ಧದಲ್ಲಿ (ಏಪ್ರಿಲ್​ನಿಂದ ಸೆಪ್ಟೆಂಬರ್) 25 ಲಕ್ಷಕ್ಕೂ ಹೆಚ್ಚು ವಾಹನಗಳು ಭಾರತದಿಂದ ಹೊರದೇಶಗಳಿಗೆ ರಫ್ತಾಗಿವೆ. ಮಾರುತಿ ಸುಜುಕಿ ಸಂಸ್ಥೆಯ ವಾಹನಗಳೇ ಅತಿ ಹೆಚ್ಚು ರಫ್ತಾಗಿರುವುದು.

ಏಪ್ರಿಲ್​ನಿಂದ ಸೆಪ್ಟೆಂಬರ್​ವರೆಗೆ ಭಾರತದಿಂದ ವಾಹನಗಳ ರಫ್ತು ಶೇ. 14ರಷ್ಟು ಹೆಚ್ಚಳ; ಜಾಗತಿಕವಾಗಿ ಮಿಂಚುತ್ತಿರುವ ಮೇಡ್ ಇನ್ ಇಂಡಿಯಾ ವಾಹನಗಳು
ವಾಹನಗಳ ರಫ್ತು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 20, 2024 | 7:04 PM

ನವದೆಹಲಿ, ಅಕ್ಟೋಬರ್ 20: ಜಾಗತಿಕವಾಗಿ ಮೇಡ್ ಇನ್ ಇಂಡಿಯಾ ವಾಹನಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಈ ಹಣಕಾಸು ವರ್ಷದ ಮೊದಲಾರ್ಧವಾದ ಏಪ್ರಿಲ್​ನಿಂದ ಸೆಪ್ಟೆಂಬರ್​ವರೆಗಿನ ಆರು ತಿಂಗಳ ಅವಧಿಯಲ್ಲಿ 25,28,248 ವಾಹನಗಳು ಹೊರ ದೇಶಗಳಿಗೆ ರಫ್ತಾಗಿವೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ರಫ್ತಾದ ವಾಹನಗಳ ಸಂಖ್ಯೆ 22,11,457 ಇತ್ತು. ಈ ಬಾರಿ ಶೇ 14ರಷ್ಟು ಹೆಚ್ಚು ವಾಹನಗಳು ರಫ್ತಾಗಿವೆ.

ಪ್ರಯಾಣಿಕ ವಾಹನಗಳು ಅಥವಾ ಪ್ಯಾಸೆಂಜರ್ ವಾಹನಗಳು ರಫ್ತಾಗಿರುವುದು 3,76,679. ರಫ್ತಿನಲ್ಲಿ ಶೇ. 12ರಷ್ಟು ಹೆಚ್ಚಳವಾಗಿದೆ. ಈ ವಿಭಾಗದಲ್ಲಿ ಪ್ಯಾಸೆಂಜರ್ ಕಾರು ಮತ್ತು ವ್ಯಾನ್​ಗಳ ರಫ್ತು ಇಳಿಮುಖವಾದರೂ, ಯುಟಿಲಿಟಿ ವಾಹನಗಳ ರಫ್ತಿನಲ್ಲಿ ಶೇ. 43ರಷ್ಟು ಏರಿಕೆ ಆಗಿದೆ.

ಮಧ್ಯಮ ಮತ್ತು ಭಾರೀ ತೂಕದ ಕಮರ್ಷಿಯಲ್ ವಾಹನಗಳ ರಫ್ತಿನಲ್ಲೂ ಶೇ. 13ರಷ್ಟು ಹೆಚ್ಚಳವಾಗಿದೆ. ಈ ವಿಭಾಗದ ಪ್ಯಾಸೆಂಜರ್ ವಾಹನಗಳ ರಫ್ತು ಶೇ. 9ರಷ್ಟು ಇಳಿಮುಖವಾಗಿದೆ. ಆದರೆ, ಸರಕು ಸಾಗಣೆ ವಾಹನಗಳು ಶೇ. 45ರಷ್ಟು ಹೆಚ್ಚು ರಫ್ತಾಗಿವೆ.

ಇದನ್ನೂ ಓದಿ: ಕಳೆದ ಮೂರು ತಿಂಗಳಲ್ಲಿ ಭಾರತದಲ್ಲಿ ಮಾರಾಟವಾದ ಸ್ಮಾರ್ಟ್​ಫೋನ್​ಗಳ ಸಂಖ್ಯೆ 5 ಕೋಟಿ ಸಮೀಪ

ಇನ್ನು, ಹಗುರ ತೂಕದ ಕಮರ್ಷಿಯಲ್ ವಾಹನಗಳ (ಎಲ್​ಸಿವಿ) ವಿಬಾಗದಲ್ಲಿ ಒಟ್ಟಾರೆ ಶೇ. 12ರಷ್ಟು ರಫ್ತು ಹೆಚ್ಚಳವಾಗಿದೆ. ಈ ವಿಭಾಗದ ಪ್ಯಾಸೆಂಜರ್ ವಾಹನಗಳ ರಫ್ತಂತೂ ಶೇ. 65ರಷ್ಟು ಏರಿಕೆ ಆಗಿದೆ. ಒಟ್ಟಾರೆ ಮಧ್ಯಮ ಮತ್ತು ಭಾರೀ ಕಮರ್ಷಿಯಲ್ ವಾಹನಗಳ ವಿಭಾಗದಲ್ಲಿ 9,576 ವಾಹನಗಳ ರಫ್ತಾಗಿದೆ. ಒಟ್ಟಾರೆ ಕಮರ್ಷಿಯಲ್ ವಾಹನಗಳ ರಫ್ತು 35,731 ಆಗಿದೆ.

ತ್ರಿಚಕ್ರ ವಾಹನಗಳ ರಫ್ತು ಶೇ. 1ರಷ್ಟು ಇಳಿಮುಖವಾಗಿ 1,53,199 ಸಂಖ್ಯೆಯಾಗಿದೆ. ದ್ವಿಚಕ್ರ ವಾಹನಗ ರಫ್ತು ಶೇ. 16ರಷ್ಟು ಹೆಚ್ಚಳವಾಗಿದೆ. ಏಪ್ರಿಲ್​ನಿಂದ ಸೆಪ್ಟೆಂಬರ್​​ವರೆಗಿನ ಆರು ತಿಂಗಳ ಅವಧಿಯಲ್ಲಿ ರಫ್ತುಗೊಂಡ ದ್ವಿಚಕ್ರ ವಾಹನಗಳ ಸಂಖ್ಯೆ 19,59,145 ಆಗಿದೆ.

ಇದನ್ನೂ ಓದಿ: ಭಾರತದಲ್ಲಿ ಸ್ಟಾರ್ಟಪ್​ಗಳಿಗೆ ಮತ್ತೆ ಫಂಡಿಂಗ್ ಸುಗ್ಗಿ; ಒಂದೇ ವಾರದಲ್ಲಿ ಮೂರು ಪಟ್ಟು ಬಂಡವಾಳ ಹೆಚ್ಚಳ

ಮಾರುತಿ ಸುಜುಕಿ ನಂಬರ್ ಒನ್

ದೇಶೀಯ ವಾಹನ ಮಾರುಕಟ್ಟೆಯಲ್ಲಿ ಕಿಂಗ್ ಎನಿಸಿರುವ ಮಾರುತಿ ಸುಜುಕಿ, ವಾಹನಗಳ ರಫ್ತಿನಲ್ಲೂ ನಂಬರ್ ಒನ್ ಆಗಿದೆ. ಹಣಕಾಸು ವರ್ಷದ ಮೊದಲಾರ್ಧದಲ್ಲಿ ಮಾರುತಿ ಸುಜುಕಿ ಸಂಸ್ಥೆ 1,47,063 ವಾಹನಗಳನ್ನು ರಫ್ತು ಮಾಡಿದೆ. ಎರಡನೇ ಸ್ಥಾನದಲ್ಲಿರುವ ಹ್ಯುಂಡೈ ಸಂಸ್ಥೆ ರಫ್ತು ಮಾಡಿದ ವಾಹನಗಳ ಸಂಖ್ಯೆ 84,900. ವೋಲ್ಸ್​ವಾಗನ್, ನಿಸ್ಸಾನ್ ಮೋಟಾರ್ಸ್ ಮತ್ತು ಹೊಂಡಾ ಕಾರ್ಸ್ ಸಂಸ್ಥೆಗಳು ಟಾಪ್-5ನಲ್ಲಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರೋದು ಒಂದು ಯು-ಟರ್ನ್ ಸರ್ಕಾರ: ಬೊಮ್ಮಾಯಿ
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರೋದು ಒಂದು ಯು-ಟರ್ನ್ ಸರ್ಕಾರ: ಬೊಮ್ಮಾಯಿ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
6,6,6,6,6,6,6,6: ಸಿಕ್ಸರ್​ಗಳ ಸುರಿಮಳೆ, 8 ಎಸೆತಗಳಲ್ಲಿ 8 ಸಿಕ್ಸ್​
6,6,6,6,6,6,6,6: ಸಿಕ್ಸರ್​ಗಳ ಸುರಿಮಳೆ, 8 ಎಸೆತಗಳಲ್ಲಿ 8 ಸಿಕ್ಸ್​
ಬೈಂದೂರಲ್ಲಿ ಲ್ಯಾಂಡ್ ಆದ ಬಳಿಕ ಶಿವಕುಮಾರ್​ಗೆ ಶೆಡ್ಯೂಲ್ ಮರೆತುಹೋಯಿತೇ?
ಬೈಂದೂರಲ್ಲಿ ಲ್ಯಾಂಡ್ ಆದ ಬಳಿಕ ಶಿವಕುಮಾರ್​ಗೆ ಶೆಡ್ಯೂಲ್ ಮರೆತುಹೋಯಿತೇ?
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಕೇವಲ 2 ತಿಂಗಳು ಹಿಂದೆ ಚಿಕ್ಕಬಳ್ಳಾಪುರದಿಂದ ಟ್ರಾನ್ಸ್​ಫರ್ ಆಗಿರುವ ಅಧಿಕಾರಿ
ಕೇವಲ 2 ತಿಂಗಳು ಹಿಂದೆ ಚಿಕ್ಕಬಳ್ಳಾಪುರದಿಂದ ಟ್ರಾನ್ಸ್​ಫರ್ ಆಗಿರುವ ಅಧಿಕಾರಿ
ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ
ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ
ಕೇವಲ 27 ದಿನಗಳಲ್ಲೇ ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಕೇವಲ 27 ದಿನಗಳಲ್ಲೇ ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಪ್ರಧಾನಿ ಮೋದಿಗೆ ಗಾಯಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಪ್ರಧಾನಿ ಮೋದಿಗೆ ಗಾಯಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ