ಭಾರತದಲ್ಲಿ ಸ್ಟಾರ್ಟಪ್​ಗಳಿಗೆ ಮತ್ತೆ ಫಂಡಿಂಗ್ ಸುಗ್ಗಿ; ಒಂದೇ ವಾರದಲ್ಲಿ ಮೂರು ಪಟ್ಟು ಬಂಡವಾಳ ಹೆಚ್ಚಳ

Funding for Indian startups increase: ಈ ವಾರ ಭಾರತೀಯ ಸ್ಟಾರ್ಟಪ್​ಗಳಿಗೆ ಉತ್ತಮ ಫಂಡಿಂಗ್ ಸಿಕ್ಕಿದೆ. ಹಿಂದಿನ ವಾರಕ್ಕೆ ಹೋಲಿಸಿದರೆ ಸ್ಟಾರ್ಟಪ್​ಗಳಿಗೆ ಸಿಕ್ಕ ಫಂಡಿಂಗ್​ನಲ್ಲಿ ಹತ್ತಿರಹತ್ತಿರ ಮೂರು ಪಟ್ಟಿ ಏರಿದೆ. ಈ ವಾರ 39 ಸ್ಟಾರ್ಟಪ್​ಗಳು 449 ಮಿಲಿಯನ್ ಡಾಲರ್​ನಷ್ಟು ಫಂಡಿಂಗ್ ಪಡೆದಿರುವುದು ಗೊತ್ತಾಗಿದೆ.

ಭಾರತದಲ್ಲಿ ಸ್ಟಾರ್ಟಪ್​ಗಳಿಗೆ ಮತ್ತೆ ಫಂಡಿಂಗ್ ಸುಗ್ಗಿ; ಒಂದೇ ವಾರದಲ್ಲಿ ಮೂರು ಪಟ್ಟು ಬಂಡವಾಳ ಹೆಚ್ಚಳ
ಸ್ಟಾರ್ಟಪ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 20, 2024 | 4:34 PM

ನವದೆಹಲಿ, ಅಕ್ಟೋಬರ್ 20: ಭಾರತದ ಸ್ಟಾರ್ಟಪ್ ಜಗತ್ತಿಗೆ ಈ ವಾರ ಒಳ್ಳೆಯ ಸುಗ್ಗಿ ಕಾಲ ಎನಿಸಿದೆ. 39 ಸ್ಟಾರ್ಟಪ್​ಗಳು ಒಟ್ಟಾರೆ 449 ಮಿಲಿಯನ್ ಡಾಲರ್​ನಷ್ಟು ಬಂಡವಾಳ ಪಡೆಯಲು ಯಶಸ್ವಿಯಾಗಿವೆ. ಹಿಂದಿನ ವಾರದಲ್ಲಿ ಸ್ಟಾರ್ಟಪ್​ಗಳು ಸಂಗ್ರಹಿಸಿದ ಫಂಡಿಂಗ್ ಮೊತ್ತ 135 ಮಿಲಿಯನ್ ಮಾತ್ರ. ಅದಕ್ಕೆ ಹೋಲಿಸಿದರೆ ಈ ವಾರ ಮೂರು ಪಟ್ಟು ಹೆಚ್ಚು ಫಂಡಿಂಗ್ ಗಿಟ್ಟಿಸಿವೆ.

ಇಲ್ಲಿ ಸೀಡ್ ಫಂಡಿಂಗ್ ಅಥವಾ ಆರಂಭಿಕ ಬಂಡವಾಳ ಸಂಗ್ರಹ ಈ ವಾರ 26.5 ಮಿಲಿಯನ್ ಡಾಲರ್ ಇದೆ. ಹಿಂದಿನ ವಾರ ಗಳಿಸಿದ 17.8 ಮಿಲಿಯನ್ ಡಾಲರ್​ಗೆ ಹೋಲಿಸಿದರೆ ಸೀಡ್ ಫಂಡಿಂಗ್​ನಲ್ಲಿ ಶೇ. 48.8ರಷ್ಟು ಹೆಚ್ಚಳ ಆಗಿದೆ. ಭಾರತದಲ್ಲಿ ಸ್ಟಾರ್ಟಪ್ ಇಕೋಸಿಸ್ಟಂನಲ್ಲಿ ಹೂಡಿಕೆ ಚುರುಕುಗೊಂಡಿರುವ ದ್ಯೋತಕ ಇದಾಗಿದೆ.

ಇದನ್ನೂ ಓದಿ: ಅಂಬಾನಿ ವರ್ಸಸ್ ಮಸ್ಕ್; ಭಾರತೀಯ ಸೆಟಿಲೈಟ್ ಇಂಟರ್ನೆಟ್ ಯುದ್ಧದಲ್ಲಿ ಗೆಲ್ಲೋದ್ಯಾರು?

ಶಿಕ್ಷಣ ತಂತ್ರಜ್ಞಾನದ ಕಂಪನಿಯಾದ ಎರುಡಿಟಸ್ 150 ಮಿಲಿಯನ್ ಡಾಲರ್ ಫಂಡಿಂಗ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದೆ. ಟಿಪಿಜಿ, ಸಾಫ್ಟ್​​ಬ್ಯಾಂಕ್, ಲೀಡ್ಸ್ ಇಲ್ಲೂಮಿನೇಟ್, ಆಕ್ಸಲ್, ಸಿಪಿಪಿ ಇನ್ವೆಸ್ಟ್​ಮೆಂಟ್ಸ್, ಚಾನ್ ಜುಕರ್ಬರ್ಗ್ ಅವರು ಭಾರತದ ಎರುಡಿಟಸ್ ಸ್ಟಾರ್ಟಪ್​ಗೆ ಫಂಡಿಂಗ್ ಒದಗಿಸಿವೆ.

ಪರ್ಫ್ಯೂಮ್, ಸ್ಕಿನ್​ಕೇರ್ ಇತ್ಯಾದಿ ಸೌಂದರ್ಯವರ್ಧಕಗಳ ಪ್ಲಾಟ್​ಫಾರ್ಮ್ ಆಗಿರುವ ಪರ್ಪಲ್ (Purplle) ಕಂಪನಿ 500 ಕೋಟಿ ರೂ ಫಂಡಿಂಗ್ ಪಡೆದಿದೆ. ಇದರೊಂದಿಗೆ ಅದರ ಒಟ್ಟಾರೆ ಬಂಡವಾಳ ಸಂಗ್ರಹ 1,500 ಕೋಟಿ ರೂ ಆದಂತಾಗಿದೆ. ಅಬುಭಾದಿ ಇನ್ವೆಸ್ಟ್​​ಮೆಂಟ್ ಅಥಾರಿಟಿ, ಪ್ರೇಮ್​ಜಿ ಇನ್ವೆಸ್ಟ್, ಬ್ಲೂಮ್ ವೆಂಚರ್ಸ್ ಕಂಪನಿಗಳು ಪರ್ಪಲ್​​ಗೆ ಫಂಡಿಂಗ್ ನೀಡಿವೆ.

ಜಿವಾ ಜ್ಯೂವೆಲರಿ, ಸಾಸ್ ಮೊದಲಾದ ಸ್ಟಾರ್ಟಪ್​ಗಳು ವಿವಿಧೆಡೆಯಿಂದ ಫಂಡಿಂಗ್ ಪಡೆದಿವೆ.

ಇದನ್ನೂ ಓದಿ: ಇನ್ಷೂರೆನ್ಸ್ ಪ್ರೀಮಿಯಮ್​ಗಳಿಗೆ ತೆರಿಗೆ ವಿನಾಯಿತಿ; ಸೈಕಲ್, ನೋಟ್​ಬುಕ್​ಗೆ ಜಿಎಸ್​ಟಿ ಇಳಿಕೆ; ದುಬಾರಿ ವಾಚು, ಶೂಗಳಿಗೆ ತೆರಿಗೆ ಹೆಚ್ಚಳಕ್ಕೆ ಪ್ರಸ್ತಾಪ

ಜುಲೈನಿಂದ ಸೆಪ್ಟೆಂಬರ್ ಅವಧಿಯಲ್ಲಿ ಫಿನ್​ಟೆಕ್ ಸ್ಟಾರ್ಟಪ್​ಗಳು 778 ಮಿಲಿಯನ್ ಡಾಲರ್ ಮೊತ್ತದ ಫಂಡಿಂಗ್ ಪಡೆದಿವೆ. ಅಮೆರಿಕ ಬಿಟ್ಟರೆ ಭಾರತದ ಫಿನ್​ಟೆಕ್ ಕಂಪನಿಗಳೇ ಈ ಅವಧಿಯಲ್ಲಿ ಅತಿಹೆಚ್ಚು ಬಂಡವಾಳ ಕಲೆಹಾಕಿರುವುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ