
ಚೆನ್ನೈ, ನವೆಂಬರ್ 6: ವಿಶ್ವದಲ್ಲೇ ಅತ್ಯಂತ ಹಗುರ ಸೆಟಿಲೈಟ್ ಎನಿಸಿದ ಕಲಾಮ್ಸ್ಯಾಟ್ (KalamSat) ಅನ್ನು ನಿರ್ಮಿಸಿದ ಸ್ಪೇಸ್ ಕಿಡ್ಸ್ (Space Kidz India) ಎನ್ನುವ ಕಂಪನಿ ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಎಲೆಕ್ಟ್ರಿಕ್ ರಾಕೆಟ್ ಆವಿಷ್ಕರಿಸಿದೆ. ಬಯೋಪ್ಲಾಸ್ಟಿಕ್, ಕಾರ್ಬನ್ ಫೈಬರ್ನಿಂದ ಕೂಡಿದ ಈ ರಾಕೆಟ್ ಅನ್ನು 3ಡಿ ಪ್ರಿಂಟಿಂಗ್ ಟೆಕ್ನಾಲಜಿಯಿಂದ (3-D printing) ನಿರ್ಮಿಸಲಾಗಿದೆ. ಪರಿಸರಸ್ನೇಹಿಯಾದ ಈ ಎಲೆಕ್ಟ್ರಿಕ್ ರಾಕೆಟ್ ಅನ್ನು ಮರುಬಳಕೆ (Reusable electric rocket) ಕೂಡ ಮಾಡಬಹುದು.
ಈ ಸ್ಪೇಸ್ ಕಿಡ್ಸ್ ಕಂಪನಿಯ ಹಿಂದಿನ ಶಕ್ತಿ ಡಾ. ಶ್ರೀಮತಿ ಕೇಶನ್ (Dr Srimathi Kesan). ಬಹಳ ಚಿಕ್ಕ ವಯಸ್ಸಿನ ಉದ್ಯೋಗಿಗಳ ಪಡೆ ಇವರೆ ಕಂಪನಿಯಲ್ಲಿದೆ. ಬಹಳ ನಾವೀನ್ಯತಾ ಆಲೋಚನೆಯ ಹುಡುಗರು ತಮ್ಮಲ್ಲಿದ್ದಾರೆ ಎಂದು ಶ್ರೀಮತಿ ಹೇಳುತ್ತಾರೆ. ಇವರ ಕಂಪನಿ ಆವಿಷ್ಕರಿಸಿದ ರಾಕೆಟ್ ಬಹಳ ಕಡಿಮೆ ವೆಚ್ಚದಲ್ಲಿ ಪೇಲೋಡ್ಗಳನ್ನು ಆಕಾಶಕ್ಕೆ ತೆಗೆದುಕೊಂಡು ಹೋಗಬಲ್ಲುದು.
ಇದನ್ನೂ ಓದಿ: ಜನವರಿಯಲ್ಲಿ ಭಾರತದ ಗಗನಯಾನ ಮಿಷನ್; ಮಾನವ ಬದಲು ವ್ಯೋಮಿತ್ರ ಪ್ರಯಾಣ
‘ಈ ಒಂದು ಉದ್ಯಮವು ಭಾರತವನ್ನು ಸೂಪರ್ಪವರ್ ಮಾಡಬಲ್ಲುದು’ ಎಂದು ಶ್ರೀಮತಿ ಕೇಸನ್ ಹೇಳುತ್ತಾರೆ.
ಸ್ಪೇಸ್ ಕಿಡ್ಸ್ ಆವಿಷ್ಕರಿಸಿದ ರಾಕೆಟ್ನಲ್ಲಿ 4-5 ಕಿಮೀ ಎತ್ತರದಲ್ಲಿ ಸಣ್ಣ ಪೇಲೋಡ್ಗಳನ್ನು ಸಾಗಿಸಬಹುದು. ಈ ರಾಕೆಟ್ನಿಂದ ಪೇಲೋಡ್ ಕಳುಹಿಸಲು ಕೇವಲ 30 ರೂ ಮಾತ್ರವೇ ವೆಚ್ಚವಾಗುತ್ತದೆ. ಹೀಗಾಗಿ, ವಿದ್ಯಾರ್ಥಿಗಳ ಸಂಶೋಧನೆಗೆ ಇದು ಬಹಳ ವರದಾನವಾಗುತ್ತದೆ ಎನ್ನಲಾಗಿದೆ. ಅಂದಹಾಗೆ ಈ ರಾಕೆಟ್ನ ಹೆಸರನ್ನು ವಾಯುಪುತ್ರ ಎಂದಿಡಲಾಗಿದೆ.
ಇದನ್ನೂ ಓದಿ: ಈ ಊಬರ್ ಡ್ರೈವರ್ ವಯಸ್ಸು 86, ಆಗರ್ಭ ಶ್ರೀಮಂತ, ದೊಡ್ಡ ಉದ್ಯಮಿ; ಆದರೆ ಡ್ರೈವಿಂಗ್ ಕೆಲಸ ಯಾಕೆ ಗೊತ್ತಾ?
ವಿದ್ಯಾರ್ಥಿಗಳು ಬಾಹ್ಯಾಕಾಶ ಕ್ಷೇತ್ರದಲ್ಲಿ ಪ್ರಯೋಗಗಳನ್ನು ನಡೆಸಲು ನಿರ್ಮಿಸುವ ಈ ರಾಕೆಟ್ ಅನ್ನು ಬಳಸಿಕೊಳ್ಳಬಹುದು. ಏರ್ ಕ್ವಾಲಿಟಿ ಸೆನ್ಸಾರ್ಗಳು, ಗಾಳಿ ಚಲನೆ ಸಂವೇದಕಗಳು, ಮಾಲಿನ್ಯ ಅಧ್ಯಯನ ಇತ್ಯಾದಿ ಕಾರ್ಯಗಳಿಗೆ ಸೀಮಿತವಾದ ಪುಟ್ಟ ಯಂತ್ರಗಳನ್ನು ಪೇಲೋಡ್ಗಳಾಗಿ ಕಳುಹಿಸಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ