AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಊಬರ್ ಡ್ರೈವರ್ ವಯಸ್ಸು 86, ಆಗರ್ಭ ಶ್ರೀಮಂತ, ದೊಡ್ಡ ಉದ್ಯಮಿ; ಆದರೆ ಡ್ರೈವಿಂಗ್ ಕೆಲಸ ಯಾಕೆ ಗೊತ್ತಾ?

86 year old man runs big business at day, drives Uber cab at night: ಗುಜರಾತ್ ಮೂಲದ ಉದ್ಯಮಿಯೊಬ್ಬರು ತಮ್ಮ ಫಿಜಿ ಪ್ರವಾಸದ ವೇಳೆ ಎದುರಾದ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ. ತಾನು ಪ್ರಯಾಣಿಸುತ್ತಿದ್ದ ಊಬರ್ ಕ್ಯಾಬ್​ನ ಚಾಲಕನ ಕಥೆ ಕೇಳಿ ತಾನು ಮೂಕವಿಸ್ಮಿತಗೊಂಡಿದ್ದನ್ನು ವಿವರಿಸಿದ್ದಾರೆ. 86 ವರ್ಷದ ಆ ಕ್ಯಾಬ್ ಚಾಲಕ ಫಿಜಿ ದೇಶದ ದೊಡ್ಡ ಉದ್ಯಮಿ. ಆದರೆ, ಊಬರ್ ಡ್ರೈವ್ ಮಾಡಲು ಬೇರೆಯೇ ಕಾರಣ ಇದೆ.

ಈ ಊಬರ್ ಡ್ರೈವರ್ ವಯಸ್ಸು 86, ಆಗರ್ಭ ಶ್ರೀಮಂತ, ದೊಡ್ಡ ಉದ್ಯಮಿ; ಆದರೆ ಡ್ರೈವಿಂಗ್ ಕೆಲಸ ಯಾಕೆ ಗೊತ್ತಾ?
ಊಬರ್ ಚಾಲಕ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Nov 05, 2025 | 6:59 PM

Share

ಹಿರಿಯ ನಟ ದಿವಂಗತ ಕೆಎಸ್ ಅಶ್ವಥ್ ಅವರ ಮಗ ಹಾಗು ಹೆಸರಾಂತ ನಟರೂ ಆಗಿರುವ ಶಂಕರ್ ಅಶ್ವಥ್ ಅವರು ಬದುಕಿನ ನಿರ್ವಹಣೆಗೆ ಕ್ಯಾಬ್ ಚಾಲಕರಾಗಿ ಕೆಲಸ ಮಾಡುತ್ತಿದ್ದ ಸುದ್ದಿ ಈ ಹಿಂದೆ ವೈರಲ್ ಆಗಿತ್ತು. ಅಂಥ ಅನೇಕ ಪ್ರಸಂಗಗಗಳು ಸಮಾಜದ ವಿವಿಧ ಸ್ತರಗಳಲ್ಲಿ ಕಾಣಸಿಗುತ್ತಲೇ ಇರುತ್ತವೆ. ಬಹಳ ಸಿನಿಮೀಯ ರೀತಿಯಲ್ಲಿ ಶಾಕಿಂಗ್ ಕೊಡುವ ಪ್ರಸಂಗವೊಂದನ್ನು ಭಾರತೀಯ ಉದ್ಯಮಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಫಿಜಿ (Fiji) ದೇಶದ ಬಹಳ ದೊಡ್ಡ ಉದ್ಯಮಿಯೊಬ್ಬರು ಊಬರ್ ಡ್ರೈವರ್ ಆಗಿ ಕೆಲಸ ಮಾಡುತ್ತಿರುವ ಘಟನೆಯನ್ನು ಹಂಚಿಕೊಂಡಿದ್ದಾರೆ. ರೋಚಕ ಸಿನಿಮಾ ಸ್ಟೋರಿಯಾಗಬಲ್ಲಂತಹ ಪ್ರಸಂಗವದು.

ನವ್ ಷಾ ಎನ್ನುವ ಗುಜರಾತಿ ಉದ್ಯಮಿ ಫಿಜಿಗೆ ಹೋದಾಗ ಅವರ ಊಬರ್ ಚಾಲಕರಾಗಿದ್ದುದು 86 ವರ್ಷದ ವ್ಯಕ್ತಿ. ಹಾಗೇ ಮಾತನಾಡುತ್ತಾ ಇರುವಾಗ, ಕ್ಯಾಬ್ ಚಾಲಕರಾಗಿ ಬರುವ ಆದಾಯದಲ್ಲಿ ಖರ್ಚು ವೆಚ್ಚವನ್ನು ಹೇಗೆ ನಿಭಾಯಿಸುತ್ತೀರಿ ಎಂದು ಆ ಅಜ್ಜನಿಗೆ ಕೇಳಿದ್ಧಾರೆ. ಅದಕ್ಕೆ ಬಂದ ಉತ್ತರ ನಿಜಕ್ಕೂ ಶಾಕಿಂಗ್ ಎನಿಸುವಂಥದ್ದು.

ಇದನ್ನೂ ಓದಿ: ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ತನ್ನ ಪತ್ನಿಗೆ ಕೊಟ್ಟ 12 ಕೋಟಿ ರೂ ಬೆಲೆಯ ಫ್ಯಾಂಟಂ ಕಾರು

ಈ ಅಜ್ಜನ ಬ್ಯುಸಿನೆಸ್​ಗಳು ಎಷ್ಟಿವೆ ನೋಡಿ..!

86 ವರ್ಷದ ಈ ಅಜ್ಜ ಹಲವು ಬ್ಯುಸಿನೆಸ್​ಗಳನ್ನು ಹೊಂದಿರುವ ಉದ್ಯಮಿ. ಭಾರತ ಮೂಲದವರು. ಇವರ ತಂದೆ ಗುಜರಾತ್​ನಿಂದ ಫಿಜಿಗೆ ಬಂದು ಬ್ಯುಸಿನೆಸ್ ಬೆಳೆಸಿದವರಂತೆ. ಫಿಜಿಯಲ್ಲಿ 13 ಆಭರಣ ಮಳಿಗೆಗಳು, 6 ರೆಸ್ಟೋರೆಂಟ್​ಗಳು, 4 ಸೂಪರ್ ಮಾರ್ಕೆಟ್​ಗಳು, ಹೋಲ್​ಸೇಲ್ ರೀಟೇಲ್ ಪರ್ಫ್ಯೂಮ್ ಉದ್ಯಮ, ಒಂದು ದಿನಪತ್ರಿಕೆ ಹೀಗೆ ಹಲವು ಬ್ಯುಸಿನೆಸ್​ಗಳನ್ನು ಇವರು ಹೊಂದಿದ್ದಾರೆ. ಇವರೇ ಹೇಳಿಕೊಂಡಂತೆ ಇವರದ್ದು 175 ಮಿಲಿಯನ್ ಡಾಲರ್ ಉದ್ಯಮ ಸಾಮ್ರಾಜ್ಯ. ಸುಮಾರು 1,500 ಕೋಟಿ ರೂ ಮೌಲ್ಯ ಇರುವ ಬ್ಯುಸಿನೆಸ್​​ಮ್ಯಾನ್ ಅವರು.

ನವ್ ಷಾ ಅವರ ಇನ್​ಸ್ಟಾ ಪೋಸ್ಟ್

View this post on Instagram

A post shared by Nav Shah (@financewithnav)

ಊಬರ್ ಡ್ರೈವರ್ ಆಗಿರುವುದು ಯಾಕೆ?

ಇಷ್ಟೆಲ್ಲಾ ಶ್ರೀಮಂತಿಕೆ ಹಾಗೂ ಬ್ಯುಸಿನೆಸ್ ಇದ್ದರೂ ಈ ವ್ಯಕ್ತಿ ಊಬರ್ ಡ್ರೈವರ್ ಕೆಲಸ ಯಾಕೆ ಮಾಡುತ್ತಿದ್ದಾರೆ ಎಂದು ಯಾರಿಗಾದರೂ ಅನಿಸಬಹುದು. ಇನ್ಸ್​ಟಾಗ್ರಾಮ್​ನಲ್ಲಿ ನವ್ ಷಾ ಹಂಚಿಕೊಂಡಿರುವ ವಿಡಿಯೋದಲ್ಲಿ ಈ ಅಜ್ಜ ಹೇಳಿರುವ ಪ್ರಕಾರ ಹೆಣ್ಮಕ್ಕಳನ್ನು ಓದಿಸಲು ಈ ಕೆಲಸ ಮಾಡುತ್ತಿದ್ದಾರಂತೆ. ಊಬರ್ ಡ್ರೈವಿಂಗ್​ನಲ್ಲಿ ಬಂದ ಸಂಪಾದನೆಯಲ್ಲಿ ಇವರು ಭಾರತದಲ್ಲಿ 24 ಹೆಣ್ಮಕ್ಕಳನ್ನು ಓದಿಸುತ್ತಿದ್ದಾರಂತೆ. ಇದು ಇವತ್ತು ನಿನ್ನೆಯದಲ್ಲ, ಕಳೆದ 10ಕ್ಕೂ ಹೆಚ್ಚು ವರ್ಷಗಳಿಂದ ಈ ಕಾಯಕ ಮಾಡುತ್ತಿದ್ದಾರೆ.

ಇದನ್ನೂ ಓದಿ: ಸ್ವರ್ಗಸ್ಥ ಅಮ್ಮನ ಆಸೆ ತೀರಿಸಿದ ಮಗ; ಊರಿನ ಎಲ್ಲ ರೈತರ ಸಾಲ ತೀರಿಸಿದ ಉದ್ಯಮಿ

ಯಾರು ಈ ಊಬರ್ ಡ್ರೈಬರ್? ಮೋಟಿಭಾಯ್ ಗ್ರೂಪ್​ನ ಮುಖ್ಯಸ್ಥರಾ?

ಆ ವಿಡಿಯೋದಲ್ಲಿ ಈ ಅಜ್ಜ ತನ್ನ ಬಳಿ ಇರುವ ಬ್ಯುಸಿನೆಸ್​ಗಳಲ್ಲಿ ಫಿಜಿ ಟೈಮ್ಸ್ ದಿನಪತ್ರಿಕೆಯ ಹೆಸರನ್ನೂ ಹೇಳಿದ್ದಾರೆ. ಫಿಜಿ ಟೈಮ್ಸ್ ಪತ್ರಿಕೆಯು ಫಿಜಿ ದೇಶದ ಪ್ರಖ್ಯಾತ ಉದ್ಯಮ ಸಮೂಹವೆನಿಸಿದ ಮೋತಿಭಾಯ್ ಗ್ರೂಪ್​ಗೆ ಸೇರಿದ್ದಾಗಿದೆ.

1929ರಲ್ಲಿ ಭಾರತದಿಂದ ಮೋತಿಭಾಯ್ ಪಟೇಲ್ ಅವರು 24ನೇ ವಯಸ್ಸಿನಲ್ಲಿ ಫಿಜಿಗೆ ಬಂದು ಬ್ಯುಸಿನೆಸ್ ಶುರು ಮಾಡಿದ್ದರು. ದಿನಸಿ ಅಂಗಡಿಯಿಂದ ಶುರುವಾದ ಬ್ಯುಸಿನೆಸ್ ಇವತ್ತು ದೊಡ್ಡ ಉದ್ಯಮ ಸಮೂಹವಾಗಿದೆ. ಊಬರ್ ಡ್ರೈವರ್ ಆಗಿರುವ 86 ವರ್ಷದ ಅಜ್ಜ ನೀಡಿದ ವಿವರವು ಈ ಮಾಹಿತಿಗೆ ಹೋಲಿಕೆ ಆಗುತ್ತದೆ. ಮೋತಿಭಾಯ್ ಪಟೇಲ್ ಅವರ ಮಗನಾಗಿರಬಹುದಾ ಈ ಊಬರ್ ಡ್ರೈವರ್?

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:56 pm, Wed, 5 November 25