AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ತನ್ನ ಪತ್ನಿಗೆ ಕೊಟ್ಟ 12 ಕೋಟಿ ರೂ ಬೆಲೆಯ ಫ್ಯಾಂಟಂ ಕಾರು

Nita Ambani's Rolls Royce Phantom VIII car becomes talk of the town: ಅಂಬಾನಿ ಫ್ಯಾಮಿಲಿ ಹೊಂದಿರುವ ನೂರಕ್ಕೂ ಹೆಚ್ಚು ಕಾರುಗಳ ಕಲೆಕ್ಷನ್​ನಲ್ಲಿ ರೋಲ್ಸ್ ರಾಯ್ಸ್ ಕಾರು ಹೊಸ ಸೇರ್ಪಡೆಯಾಗಿದೆ. ಮುಕೇಶ್ ಅಂಬಾನಿ 2024ರಲ್ಲಿ ತಮ್ಮ ಪತ್ನಿ ನೀತಾಗೆ ರೋಲ್ಸ್ ರಾಯಲ್ಸ್ ಫ್ಯಾಂಟಂ-8 ಇಡಬ್ಲ್ಯುಬಿ ಕಾರನ್ನು ಗಿಫ್ಟ್ ಆಗಿ ನೀಡಿದ್ದಾರೆ. ರೋಲ್ಸ್ ರಾಯ್ಸ್​ನ ಇತರ ಮಾಡಲ್​ಗಳಿಗಿಂತ ಫಾಂಟಂ ಕಾರಿನ ಬಣ್ಣ ವಿಭಿನ್ನವಾಗಿದೆ, ಹೆಚ್ಚು ಆಕರ್ಷಕವಾಗಿದೆ.

ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ತನ್ನ ಪತ್ನಿಗೆ ಕೊಟ್ಟ 12 ಕೋಟಿ ರೂ ಬೆಲೆಯ ಫ್ಯಾಂಟಂ ಕಾರು
ರೋಲ್ಸ್ ರಾಯ್ಸ್ ಫ್ಯಾಂಟಂ ಕಾರು
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 05, 2025 | 5:34 PM

Share

ನವದೆಹಲಿ, ನವೆಂಬರ್ 5: ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿರುವ ಮುಕೇಶ್ ಅಂಬಾನಿ ವೈಯಕ್ತಿಕವಾಗಿ ಅದ್ಧೂರಿ ವೇಷಭೂಷಣ ಧರಿಸುವಂಥವರಲ್ಲ. ಆದರೆ, ಅವರ ಪತ್ನಿ ನೀತಾ ಅಂಬಾನಿ (Nita Ambani) ಅವರದ್ದು ಬಹಳ ಆಕರ್ಷಕ, ವೈಭವದ ಜೀವನಶೈಲಿ. ಉತ್ಕೃಷ್ಟ ಅಭಿರುಚಿಗೆ ಹೆಸರಾದವರು. ತಮ್ಮ ಕೊನೆಯ ಮಗನ ಮದುವೆಯಲ್ಲಿ ನೀತಾ ಅಂಬಾನಿ ಅವರು ಧರಿಸಿದ್ದ ಒಡವೆ ವಸ್ತ್ರಗಳು ಬೆರಗಾಗಿಸುವಂತಿದ್ದವು. ಇದೇ ವೇಳೆ, ನೀತಾ ಅಂಬಾನಿ ಅವರು ಹೊಂದಿರುವ ಕಾರುಗಳು ಎಲ್ಲರ ಕಣ್ಣು ಕುಕ್ಕುತ್ತಿವೆ. ಕಳೆದ ವರ್ಷ ನೀತಾ ಅಂಬಾನಿ ತಮ್ಮ ಪತಿಯಿಂದ ಗಿಫ್ಟ್ ಆಗಿ ಪಡೆದಿದ್ದ ಎರಡನೇ ರೋಲ್ಸ್ ರಾಯ್ಸ್ ಕಾರು ಈಗ ವೈರಲ್ ಆಗುತ್ತಿದೆ.

12 ಕೋಟಿ ರೂ ಬೆಲೆಯ ಫಾಂಟಂ ಕಾರು

ಮುಕೇಶ್ ಅಂಬಾನಿ ಅವರು ತಮ್ಮ ಪತ್ನಿ ನೀತಾ ಅವರಿಗೆ 2023ರ ದೀಪಾವಳಿಗೆ ರೋಲ್ಸ್ ರಾಯ್ಸ್ ಕಲಿನನ್ ಕಾರನ್ನು (Rolls Royce Cullinan) ಉಡುಗೊರೆಯಾಗಿ ಕೊಟ್ಟಿದ್ದರು. ಅದು ಎಲ್ಲರ ಗಮನ ಸೆಳೆದಿತ್ತು. ಈಗ ನೀತಾ ಅವರ ಬಳಿ ಹೊಸ ರೋಲ್ಸ್ ರಾಯ್ಸ್ ಫಾಂಟಂ-8 ಇಡಬ್ಲ್ಯುಬಿ (Rolls Royce Phantom VIII EWB- Extended Wheel Base) ಕಾರು ಇದೆ. ಇದನ್ನು ಮುಕೇಶ್ ಅಂಬಾನಿ 2024ರಲ್ಲಿ ನೀತಾಗೆ ಗಿಫ್ಟ್ ಆಗಿ ಕೊಟ್ಟಿರುವ ಕಾರು ಎನ್ನಲಾಗುತ್ತಿದೆ.

ಇದನ್ನೂ ಓದಿ: ಸ್ವರ್ಗಸ್ಥ ಅಮ್ಮನ ಆಸೆ ತೀರಿಸಿದ ಮಗ; ಊರಿನ ಎಲ್ಲ ರೈತರ ಸಾಲ ತೀರಿಸಿದ ಉದ್ಯಮಿ

ನೀತಾ ಅಂಬಾನಿ ಬಳಿ ಇರುವ ರೋಲ್ಸ್ ರಾಯ್ಸ್ ಫಾಂಟಂ-8 ಕಾರು ಬಹಳ ವಿಶೇಷ ಎನಿಸಿದೆ. ರೋಲ್ಸ್ ರಾಯ್ಸ್ ಬ್ರ್ಯಾಂಡ್​ನ ಕಾರುಗಳು ಸಾಮಾನ್ಯವಾಗಿ ಕಪ್ಪು ಮತ್ತು ಬಿಳಿ ಮಿಶ್ರಿತ ಬಣ್ಣದ್ದಾಗಿರುತ್ತವೆ. ಆದರೆ ಫಾಂಟಮ್-8 ಕಾರು ಪಿಂಕ್ ಶೇಡ್​ನ ಬಣ್ಣದ್ದಾಗಿದೆ. ಬಹಳ ಆಕರ್ಷಕವಾಗಿ ಕಾಣುತ್ತಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಜನರು ಮೆಚ್ಚಿಕೊಂಡಿದ್ದಾರೆ.

ರೋಲ್ಸ್ ರಾಯ್ಸ್ ಫಾಂಟಮ್-8 ಇಡಬ್ಲ್ಯುಬಿ ಕಾರಿನ ಎಂಜಿನ್ ಬರೋಬ್ಬರಿ 571 ಬಿಎಚ್​ಪಿ ಶಕ್ತಿ ಹೊಂದಿದೆ. ಈ ಪ್ರಬಲ ಎಂಜಿನ್ ಶಕ್ತಿಯಿಂದಾಗಿ ಗಾಡಿ ಬಹಳ ಅದ್ಭುತ ರೈಡಿಂಗ್ ಅನುಭವ ಕೊಡುತ್ತದೆ.

ಇದನ್ನೂ ಓದಿ: ಅನಿಲ್ ಅಂಬಾನಿಗೆ ಇನ್ನಷ್ಟು ಕುಣಿಕೆ ಬಿಗಿದ ಇಡಿ; 3,000 ಕೋಟಿ ರೂ ಮೌಲ್ಯದ ವಿವಿಧ ಆಸ್ತಿಗಳು ಮುಟ್ಟುಗೋಲು

ನೀತಾ ಅಂಬಾನಿ ಹೊಂದಿರುವ ಆಸ್ತಿಪಾಸ್ತಿ, ಒಡವೆ ವೈಡೂರ್ಯಗಳು…

ನೀತಾ ಅಂಬಾನಿ ಅವರು ಗೃಹಿಣಿ ಅಷ್ಟೇ ಅಲ್ಲ, ರಿಲಾಯನ್ಸ್ ಇಂಡಸ್ಟ್ರೀಸ್ ಉದ್ಯಮದಲ್ಲಿ ಬೇರೆ ಬೇರೆ ರೀತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಐಪಿಎಲ್ ಫ್ರಾಂಚೈಸಿ, ರಿಲಾಯನ್ಸ್ ಫೌಂಡೇಶನ್ ಇತ್ಯಾದಿಗಳ ಮುಖ್ಯಸ್ಥೆಯಾಗಿದ್ದಾರೆ. ಇವರ ಒಟ್ಟು ಆಸ್ತಿ ಮೌಲ್ಯ ಸುಮಾರು 2,500 ಕೋಟಿ ರೂ ಆಸುಪಾಸು ಇರಬಹುದು.

ಬಹಳಷ್ಟು ವಜ್ರ, ಚಿನ್ನ, ಬೆಳ್ಳಿ, ಪ್ಲಾಟಿನಂ ಆಭರಣಗಳನ್ನು ನೀತಾ ಅಂಬಾನಿ ಹೊಂದಿದ್ದಾರೆ. ತಮ್ಮ ಮಗ ಅನಂತ್ ಅಂಬಾನಿ ಮದುವೆಯಲ್ಲಿ ಇದರ ವೈಭವ ಕಾಣಸಿಕ್ಕಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದೆಹಲಿಯ ಆಸ್ಪತ್ರೆಗೆ ತೆರಳಿ ಸ್ಫೋಟದ ಗಾಯಾಳುಗಳನ್ನು ಭೇಟಿಯಾದ ಅಮಿತ್ ಶಾ
ದೆಹಲಿಯ ಆಸ್ಪತ್ರೆಗೆ ತೆರಳಿ ಸ್ಫೋಟದ ಗಾಯಾಳುಗಳನ್ನು ಭೇಟಿಯಾದ ಅಮಿತ್ ಶಾ
ದೆಹಲಿ ಸ್ಫೋಟ: ಸಾವಿನ ಸಂಖ್ಯೆ 10ಕ್ಕೆ ಏರಿಕೆ, ಓರ್ವ ಶಂಕಿತ ಪೊಲೀಸ್ ವಶಕ್ಕೆ
ದೆಹಲಿ ಸ್ಫೋಟ: ಸಾವಿನ ಸಂಖ್ಯೆ 10ಕ್ಕೆ ಏರಿಕೆ, ಓರ್ವ ಶಂಕಿತ ಪೊಲೀಸ್ ವಶಕ್ಕೆ
ಕೆಂಪುಕೋಟೆ ಬಳಿಯೇ ಸ್ಫೋಟ: ಒಂದೊಂದು ದೃಶ್ಯವೂ ಭಯಾನಕ!
ಕೆಂಪುಕೋಟೆ ಬಳಿಯೇ ಸ್ಫೋಟ: ಒಂದೊಂದು ದೃಶ್ಯವೂ ಭಯಾನಕ!
ಬ್ರ್ಯಾಟ್ ಸಿನಿಮಾ ನೋಡಿ ಸಿಕ್ಕಾಪಟ್ಟೆ ಮೆಚ್ಚಿಕೊಂಡ ರಿಯಲ್ ಸ್ಟಾರ್ ಉಪೇಂದ್ರ
ಬ್ರ್ಯಾಟ್ ಸಿನಿಮಾ ನೋಡಿ ಸಿಕ್ಕಾಪಟ್ಟೆ ಮೆಚ್ಚಿಕೊಂಡ ರಿಯಲ್ ಸ್ಟಾರ್ ಉಪೇಂದ್ರ
ದಿಲ್ಲಿ ಕೆಂಪುಕೋಟೆ ಬಳಿ ಸ್ಫೋಟ: ಕನಿಷ್ಠ 9 ಜನ ಸಾವು, ಎಲ್ಲೆಡೆ ಹೈಅಲರ್ಟ್​
ದಿಲ್ಲಿ ಕೆಂಪುಕೋಟೆ ಬಳಿ ಸ್ಫೋಟ: ಕನಿಷ್ಠ 9 ಜನ ಸಾವು, ಎಲ್ಲೆಡೆ ಹೈಅಲರ್ಟ್​
ದೆಹಲಿಯಲ್ಲಿ ಕಾರು ಸ್ಫೋಟ; ಧಗಧಗನೆ ಹೊತ್ತಿ ಉರಿದ ವಾಹನಗಳು
ದೆಹಲಿಯಲ್ಲಿ ಕಾರು ಸ್ಫೋಟ; ಧಗಧಗನೆ ಹೊತ್ತಿ ಉರಿದ ವಾಹನಗಳು
ರಕ್ಷಿತಾ ಶೆಟ್ಟಿಗೆ ಕನ್ನಡ ಬರಲ್ಲ ಅನ್ನೋದು ನಾಟಕನಾ? ಉತ್ತರಿಸಿದ ಚಂದ್ರಪ್ರಭ
ರಕ್ಷಿತಾ ಶೆಟ್ಟಿಗೆ ಕನ್ನಡ ಬರಲ್ಲ ಅನ್ನೋದು ನಾಟಕನಾ? ಉತ್ತರಿಸಿದ ಚಂದ್ರಪ್ರಭ
ಜೆಡಿಎಸ್​​ನಿಂದ ರಾಜ್ಯಾದ್ಯಂತ ಬೆಳ್ಳಿ ಹಬ್ಬ ಆಚರಣೆ: HDK ಹೇಳಿದ್ದಿಷ್ಟು
ಜೆಡಿಎಸ್​​ನಿಂದ ರಾಜ್ಯಾದ್ಯಂತ ಬೆಳ್ಳಿ ಹಬ್ಬ ಆಚರಣೆ: HDK ಹೇಳಿದ್ದಿಷ್ಟು
ಹೆಣ್ಮಕ್ಕಳ ಬಗ್ಗೆ ಬೇರೆ ರೀತಿ ಮಾತಾಡಿದ ಧ್ರುವಂತ್: ಗ್ರಹಚಾರ ಬಿಡಿಸಿದ ಕಾವ್ಯ
ಹೆಣ್ಮಕ್ಕಳ ಬಗ್ಗೆ ಬೇರೆ ರೀತಿ ಮಾತಾಡಿದ ಧ್ರುವಂತ್: ಗ್ರಹಚಾರ ಬಿಡಿಸಿದ ಕಾವ್ಯ
ರೋಗಿ ಬಯಸಿದ್ದು, ಡಾಕ್ಟರ್ ಹೇಳಿದ್ದು ಹಾಲು: ಲಕ್ಷ್ಮಣ ಸವದಿ ಖುಷ್
ರೋಗಿ ಬಯಸಿದ್ದು, ಡಾಕ್ಟರ್ ಹೇಳಿದ್ದು ಹಾಲು: ಲಕ್ಷ್ಮಣ ಸವದಿ ಖುಷ್