Stock Market: ಅಕ್ಟೋಬರ್ ತಿಂಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ದೊಡ್ಡ ಲಾಭ

| Updated By: Rakesh Nayak Manchi

Updated on: Oct 01, 2022 | 3:32 PM

ಷೇರು ಮಾರುಕಟ್ಟೆಯ ಐತಿಹಾಸಿಕ ಡೇಟಾಗಳನ್ನು ಗಮನಿಸಿದಾಗ ಸೆಪ್ಟೆಂಬರ್ ತಿಂಗಳಿಗಿಂತ ಅಕ್ಟೋಬರ್ ತಿಂಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ದೊಡ್ಡ ಮಟ್ಟದ ಲಾಭಗಳಿಸಬಹುದು ಎಂಬುದನ್ನು ಕಂಡುಕೊಳ್ಳಬಹುದು.

Stock Market: ಅಕ್ಟೋಬರ್ ತಿಂಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ದೊಡ್ಡ ಲಾಭ
ಅಕ್ಟೋಬರ್ ತಿಂಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ದೊಡ್ಡ ಲಾಭ
Follow us on

ಸೆಪ್ಟೆಂಬರ್ ಮುಗಿದು ಅಕ್ಟೋಬರ್ ತಿಂಗಳು ಆರಂಭವಾಗಿದೆ. ಈ ಎರಡು ತಿಂಗಳಲ್ಲಿ ಷೇರು ಮಾರುಕಟ್ಟೆಯಲ್ಲಿ (Stock Market) ಹೂಡಿಕೆ (Investment) ಮಾಡಲು ಅಕ್ಟೋಬರ್ ತಿಂಗಳು ಉತ್ತಮವಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಹೂಡಿಕೆಗೆ ಹೆಚ್ಚು ಉತ್ತೇಜನಕಾರಿಯಾಗಿರಲಿಲ್ಲ. ಆ ತಿಂಗಳಲ್ಲಿ ಸೆನ್ಸೆಕ್ಸ್ (Sensex) 2000 ಅಂಕಗಳ ಕುಸಿತ ಕಂಡಿತ್ತು. ಅದೇ ಸಮಯದಲ್ಲಿ ನಿಫ್ಟಿ (Nifty) ಸಹ ಪ್ರಮುಖ ಪ್ರತಿರೋಧದ ಮಟ್ಟಕ್ಕಿಂತ ಕಡಿಮೆಯಾಯಿತು. ನಾವು ಐತಿಹಾಸಿಕ ಡೇಟಾವನ್ನು ನೋಡಿದಾಗ ದೊಡ್ಡಮಟ್ಟದಲ್ಲಿ ಲಾಭ ತಂದುಕೊಡುವ ತಿಂಗಳೆಂದರೆ ಅದು ಅಕ್ಟೋಬರ್. ಸಾಲುಸಾಲು ಹಬ್ಬಹರಿದಿನಗಳು ಇರುವುದರಿಂದ ಈ ತಿಂಗಳಲ್ಲಿ ಕಂಪನಿಗಳು ಹೆಚ್ಚಿನ ಲಾಭ ಗಳಿಸುತ್ತವೆ. ಹೀಗಾಗಿ ಅಕ್ಟೋಬರ್​ನಲ್ಲಿ ನೀವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹಬ್ಬದ ಸೀಸನ್‌ ನಿಮ್ಮ ಪಾಲಿಗೆ ವರದಾನವಾಗಿದೆ.

ಅಕ್ಟೋಬರ್ ತಿಂಗಳಲ್ಲಿ ಭಾರತದಲ್ಲಿ ಅನೇಕ ಹಬ್ಬಗಳನ್ನು ಆಚರಿಸಲಾಗುತ್ತಿವುದರಿಂದ ಈ ತಿಂಗಳನ್ನು ಹಬ್ಬದ ಸೀಸನ್ ಎಂದು ಪರಿಗಣಿಸಲಾಗುತ್ತದೆ. ಹಬ್ಬದ ಸಂದರ್ಭದಲ್ಲಿ ಹೇಳಬೇಕೇ ಜನರು ಬಟ್ಟೆ ಸೇರಿದಂತೆ ಇತ್ಯಾದಿಗಳನ್ನು ಹೆಚ್ಚಾಗಿ ಖರೀದಿ ಮಾಡುತ್ತಾರೆ. ಈ ಎಲ್ಲದರ ಜೊತೆಗೆ ಐತಿಹಾಸಿಕ ಡೇಟಾವನ್ನು ನೋಡಿದರೆ ಅಕ್ಟೋಬರ್ ತಿಂಗಳು ಈಕ್ವಿಟಿ ಮಾರುಕಟ್ಟೆಗೆ ಬಹಳ ಉತ್ತೇಜನಕಾರಿಯಾಗಿದೆ ಎಂದು ಸಾಬೀತುಪಡಿಸುತ್ತದೆ. ಕಳೆದ 11 ವರ್ಷಗಳಲ್ಲಿ ಸೂಚ್ಯಂಕವು ಅಕ್ಟೋಬರ್‌ನಲ್ಲಿ ಶೇಕಡಾ 9.2 ರಷ್ಟು ಆದಾಯವನ್ನು ನೀಡಿದೆ ಮತ್ತು 2013 ಮತ್ತು 2011 ಅತ್ಯುತ್ತಮ ಪ್ರದರ್ಶನಗಳನ್ನು ನೀಡಿದೆ. ನಾವು ಕಳೆದ ಮೂರು ವರ್ಷಗಳ ಬಗ್ಗೆ ಮಾತನಾಡಿದರೆ ಸೂಚ್ಯಂಕವು ಕ್ರಮವಾಗಿ 3.78 ಶೇಕಡಾ, 4 ಶೇಕಡಾ ಮತ್ತು 0.3 ಶೇಕಡಾ ಆದಾಯವನ್ನು ನೀಡಿದೆ. 2012 ಮತ್ತು 2018ರ ಅಕ್ಟೋಬರ್ ತಿಂಗಳಲ್ಲಿ ಸೂಚ್ಯಂಕವು ಕ್ರಮವಾಗಿ 1.37 ಶೇಕಡಾ ಮತ್ತು 4.9 ಶೇಕಡಾ ಋಣಾತ್ಮಕ ಆದಾಯವನ್ನು ನೀಡಿದೆ. ಹೂಡಿಕೆ ಮಾಡುವ ಮುನ್ನ ಪರಿಣಿತರೊಂದಿಗೆ ಚರ್ಚಿಸಿ ಮುಂದಿನ ಹೆಚ್ಚೆ ಇಡುವುದು ಅವಶ್ಯಕ. ಇಲ್ಲವಾದರೆ ನಷ್ಟ ಅನುಭವಿಸಬೇಕಾಗಬಹುದು.

ಹೂಡಿಕೆದಾರರಿಗೆ ಸೆಪ್ಟೆಂಬರ್ ಉತ್ತಮ ತಿಂಗಳಲ್ಲ

ಅಕ್ಟೋಬರ್ ತಿಂಗಳು ಈಕ್ವಿಟಿ ಹೂಡಿಕೆದಾರರಿಗೆ ಉತ್ತಮವಾಗಿದೆ ಎಂದು ಸಾಬೀತಾಗಿದೆ. ಅದೇ ಸಮಯದಲ್ಲಿ ಸೆಪ್ಟೆಂಬರ್ ತಿಂಗಳು ಹೂಡಿಕೆದಾರರಿಗೆ ತುಂಬಾ ಕೆಟ್ಟದಾಗಿದೆ ಎಂದು ಸಾಬೀತಾಗಿದೆ. ಸೂಚ್ಯಂಕವು ಕೇವಲ ನಾಲ್ಕು ಸಂದರ್ಭಗಳಲ್ಲಿ ಧನಾತ್ಮಕ ಆದಾಯವನ್ನು ನೀಡಿರುವುದು ಇದಕ್ಕೆ ಕಾರಣ. ಮಾಸಿಕ ಆದಾಯದ ತುಲನಾತ್ಮಕ ವಿಶ್ಲೇಷಣೆಯು 2011 ರಿಂದ ಇಲ್ಲಿಯವರೆಗೆ ಅಕ್ಟೋಬರ್‌ನಲ್ಲಿ ಧನಾತ್ಮಕ ಆದಾಯವನ್ನು ನೀಡುವ ಸಾಧ್ಯತೆಗಳು ಹೆಚ್ಚು ಎಂದು ತಿಳಿಸುತ್ತದೆ.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:32 pm, Sat, 1 October 22