ಮಂಗಳವಾರದಂದು ಸ್ಟಾಕ್ ಮಾರ್ಕೆಟ್ ಏರಿಕೆಯನ್ನು ಕಂಡಿದ್ದು, ಆರಂಭದಲ್ಲೇ ಸೆನ್ಸೆಕ್ಸ್ 1,000 ಏರಿಕೆ ಕಂಡಿದೆ, ನಿಫ್ಟಿ ಸುಮಾರು 17,200 ಹೆಚ್ಚಾಗಿದೆ. ಷೇರುಪೇಟೆ ಮಾರುಕಟ್ಟೆನಲ್ಲಿ ಇದೊಂದು ಲಾಭದ ಹಂತವಾದರೂ, ಕೆಲವೊಂದು ಸೆನ್ಸೆಕ್ಸ್ಗಳು ದೀರ್ಘವಧಿಯ ವೈಹಿವಾಟುಗಳನ್ನು ಕಂಡಿಲ್ಲ. ಸೋಮವಾರದಂದು (ಅ.3) ಸೆನ್ಸೆಕ್ಸ್ 700ರಷ್ಟು ಏರಿಕೆಯನ್ನು ಕಂಡಿತು, ಇಂದು 1,000 ಏರಿಕೆಯನ್ನು ಕಂಡಿದೆ. ಇದೀಗ ನಿಫ್ಟಿ ಪಿಎಸ್‌ಯು ಬ್ಯಾಂಕ್ ಮತ್ತು ನಿಫ್ಟಿ ಬ್ಯಾಂಕ್‌ನಂತಹ ವಲಯಗಳ ಸೂಚ್ಯಂಕಗಳು ಹೆಚ್ಚು ವಹಿವಾಟು ನಡೆಸುತ್ತಿವೆ. ಹಿಂಡಾಲ್ಕೊ ಇಂಡಸ್ಟ್ರೀಸ್, ಇಂಡಸ್‌ಇಂಡ್ ಬ್ಯಾಂಕ್, ಅದಾನಿ ಎಂಟರ್‌ಪ್ರೈಸಸ್, ಅದಾನಿ ಪೋರ್ಟ್ಸ್ ಮತ್ತು ಎಲ್ & ಟಿ ಕಂಪನಿಗಳು ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿದೆ. ಇದೀಗ ಸೆನ್ಸೆಕ್ಸ್ 1,000 ಏರಿಕೆ ಕಂಡಿದ್ದು , ನಿಫ್ಟಿ ಸುಮಾರು 17,200 ಹೆಚ್ಚಾಗಿದೆ. ಎಲ್ಲಾ ವಲಯಗಳಲ್ಲೂ ಹೆಚ್ಚು ಗ್ರೇಸ್ನ್ನು ಪಡೆದುಕೊಂಡಿದೆ.
ಎನ್‌ಎಸ್‌ಇ ನಿಫ್ಟಿ 50 300 ಪಾಯಿಂಟ್‌ಗಳಿಗಿಂತ ಹೆಚ್ಚು ಏರಿಕೆ ಕಂಡು 17,200 ಮಟ್ಟಗಳಿಗಿಂತ ಹೆಚ್ಚು ವಹಿವಾಟು ನಡೆಸಿತು ಮತ್ತು ಎಸ್ & ಪಿ ಬಿಎಸ್‌ಇ ಸೆನ್ಸೆಕ್ಸ್ 1000 ಪಾಯಿಂಟ್‌ಗಳ ಏರಿಕೆಯೊಂದಿಗೆ 57,915 ಮಟ್ಟದಲ್ಲಿ ವಹಿವಾಟು ನಡೆಸಿತು.
Published On - 10:41 am, Tue, 4 October 22